For Quick Alerts
ALLOW NOTIFICATIONS  
For Daily Alerts

ಜನ್ಮದಿನಾಂಕದ ಭವಿಷ್ಯ: ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ರೆ ಒಳ್ಳೆಯದು!

By
|

ಓರ್ವ ವ್ಯಕ್ತಿಯ ಅದೃಷ್ಟ ಹಲವು ವಿಷಯಗಳನ್ನು ಅನುಸರಿಸಿರುತ್ತದೆ. ಆತ ಸುತ್ತ ಇರುವ ವಸ್ತು, ಜೀವ ಅಥವಾ ಚಿರಾಸ್ತಿ ಆತನ ಅದೃಷ್ಟವನ್ನು ಹೆಚ್ಚಿಸಬಹುದು ಅಥವಾ ಕಡಿಮೆಗೊಳಿಸಬಹುದು. ಇಂದಿನ ಲೇಖನದಲ್ಲಿ ವ್ಯಕ್ತಿ ತನ್ನ ಜನ್ಮದಿನಕ್ಕನುಸಾರವಾಗಿ ಯಾವ ವಸ್ತುಗಳನ್ನು ತನ್ನ ಬಳಿ ಇರಿಸುವುದರಿಂದ ಅದೃಷ್ಟಕರ ಎಂಬ ಮಹತ್ವದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ನಿಮ್ಮ ಹುಟ್ಟಿದ ದಿನಾಂಕದ ಒಂದೇ ಅಂಕೆಯನ್ನು ಯನ್ನು ಪರಿಗಣಿಸಿ ಒಂದರಿಂದ ಒಂಬತ್ತರವರೆಗೆ ಈ ಕೋಷ್ಟಕವನ್ನು ತಯಾರಿಸಲಾಗಿದೆ. ಒಂದು ವೇಳೆ ಹುಟ್ಟಿದ ದಿನಾಂಕ ಹತ್ತು ಅಥವಾ ಅದರ ನಂತರದ ದಿನಾಂಕಗಳಾಗಿದ್ದರೆ ಈ ಎರಡೂ ಅಂಕೆಗಳನ್ನು ಕೂಡಿದಾಗ ಬರುವ ಒಂದೇ ಅಂಕೆಯನ್ನು ಪರಿಗಣಿಸಬೇಕು.

ಜನ್ಮದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ...!

ಉದಾಹರಣೆ 17ನೇ ತಾರೀಖಿನಂದು ಹುಟ್ಟಿದವರಿಗೆ 1+7=8 ಅಂಕೆಯನ್ನು ಪರಿಗಣಿಸಬೇಕು. ಈ ಅಂಕೆಯನ್ನು ಸೂರ್ಯನ ಅಂಕೆಗಳು (sun date) ಎಂದು ಕರೆಯಲಾಗುತ್ತದೆ...

1ನೇ ಅಂಕೆ

1ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಕೊಳಲೊಂದನ್ನು ಇರಿಸುವ ಮೂಲಕ ಅದೃಷ್ಟವನ್ನು ಪಡೆಯಬಹುದು. ಆದರೆ ಈ ಕೊಳಲು ಮರದಿಂದ ಮಾಡಿದ್ದುದಾಗಿರಬೇಕು.

2ನೇ ಅಂಕೆ

2ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಬಿಳಿಯ ಬಣ್ಣದ ಅಲಂಕಾರಿಕಾ ಚಿತ್ರವೊಂದನ್ನಿರಿಸಬೇಕು. ಈ ಅಲಂಕಾರಿಕಾ ಚಿತ್ರದಲ್ಲಿ ಧನಾತ್ಮಕ ವಿಷಯವಿರುವುದು ಕಡ್ಡಾಯವಾಗಿದೆ. ಅಲ್ಲದೇ ಈ ಚಿತ್ರದಲ್ಲಿ ಯುದ್ದ, ರಕ್ತ, ಖಿನ್ನತೆ, ಅಳು ಮೊದಲಾದ ಋಣಾತ್ಮಕಾ ಭಾವ ಸರ್ವಥಾ ಇರಕೂಡದು.

ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

3ನೇ ಅಂಕೆ

3ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ರುದ್ರಾಕ್ಷಿಯೊಂದನ್ನಿರಿಸಬೇಕು. ಇದರಿಂದ ಮನೆಯಲ್ಲಿ ಅದೃಷ್ಟ ಆಗಮಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ತೂತಿಲ್ಲದ ರುದ್ರಾಕ್ಷಿಯನ್ನು ಬಳಸಬೇಕು. ಇದು ಲಭ್ಯವಾಗದಿದ್ದ ಪಕ್ಷದಲ್ಲಿ ಮಾತ್ರ ಸರದಂತೆ ಪೋಣಿಸಿದ ರುದ್ರಾಕ್ಷಿ ಮಾಲೆಯನ್ನು ಇರಿಸಬಹುದು.

4ನೇ ಅಂಕೆ

4ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿ ಗಾಜಿನ ಕೆಲವು ತುಂಡುಗಳನ್ನಿರಿಸಬೇಕು. ಇದರಿಂದ ಮನೆಗೆ ಅದೃಷ್ಟ ಆಗಮಿಸುತ್ತದೆ.

5ನೇ ಅಂಕೆ

5ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಕುಬೇರ ಅಥವಾ ಲಕ್ಷ್ಮಿದೇವಿಯ ಪಟವನ್ನಿರಿಸಬೇಕು. ಮನೆಯಲ್ಲಿ ಲಕ್ಷ್ಮಿ ಮತ್ತು ಕುಬೇರರ ಪಟಗಳಿದ್ದರೆ ಮನೆಗೆ ಐಶ್ವರ್ಯ ಆಗಮಿಸುತ್ತದೆ ಎಂಬುದು ಬಹಳ ಪುರಾತನವಾದ ನಂಬಿಕೆಯಾಗಿದೆ.

6ನೇ ಅಂಕೆ

6ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ಆಗ್ನೇಯ ಭಾಗದಲ್ಲಿ ನವಿಲುಗರಿಯೊಂದನ್ನು ಇರಿಸಬೇಕು. ಈ ಗರಿ ಮನೆಯಲ್ಲಿ ಅಪರಿಮಿತ ಸಂತೋಷ ಮತ್ತು ಸಮೃದ್ದಿಯನ್ನು ತರುತ್ತದೆ ಎಂದು ನಂಬಲಾಗಿದೆ.

7ನೇ ಅಂಕೆ

7ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ಆಗ್ನೇಯ ಭಾಗದಲ್ಲಿ ರುದ್ರಾಕ್ಷಿಯೊಂದನ್ನು ಇರಿಸಬೇಕು. ಅಲ್ಲದೇ ಈ ರುದ್ರಾಕ್ಷಿ ಗಾಢವಾದ ಕಂದು ಬಣ್ಣದ್ದೇ ಆಗಿರಬೇಕು.

ರುದ್ರಾಕ್ಷಿಯ ಬಗೆಗಿನ ಆಸಕ್ತಿಕರ ಅಂಶಗಳು

8ನೇ ಅಂಕೆ

8ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ದಕ್ಷಿಣ ಭಾಗದಲ್ಲಿ ಅಪ್ಪಟ ಕಪ್ಪು ಸ್ಫಟಿಕ ಅಥವಾ ಹರಳೊಂದನ್ನಿರಿಸಬೇಕು. ಇದರಿಂದ ಮನೆಯಲ್ಲಿರುವ ಎಲ್ಲಾ ಋಣಾತ್ಮಕ ಶಕ್ತಿಯನ್ನು ಈ ಹರಳು ಹೀರಿಕೊಳ್ಳುತ್ತದೆ ಹಾಗೂ ಧನಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ.

ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ?

9ನೇ ಅಂಕೆ

9ನೇ ಅಂಕೆ

ಈ ಅಂಕೆ ಹುಟ್ಟಿದ ದಿನಾಂಕವಾಗಿರುವ ವ್ಯಕ್ತಿಗಳು ತಮ್ಮ ಮನೆಯ ದಕ್ಷಿಣ ಭಾಗದಲ್ಲಿ ಪಿರಮಿಡ್ಡೊಂದನ್ನು ಇರಿಸಬೇಕು. ಇದರಿಂದ ಆ ವ್ಯಕ್ತಿಗೆ ಹೆಚ್ಚಿನ ಅದೃಷ್ಟ ಪಡೆಯಲು ನೆರವಾಗುತ್ತದೆ.

English summary

Things That Are Lucky For You According To Your Date Of Birth

Here, the sun date of the person (a single digit) should be taken into account while deriving the date. This list also holds good for those whose birthday date falls between the dates of 1 and 9. Now, check out on the things that will increase a person's luck and fate by just having these things around them, which are based on the sun date of the person.
X
Desktop Bottom Promotion