ಅಳಿವಿನಂಚಿನಲ್ಲಿರುವ ಬಲು ಅಪರೂಪದ ಈ ಕಪ್ಪು ಪ್ರಾಣಿಗಳು!

ಮಾಂಸಕ್ಕಾಗಿ ಬೇಟೆಯಾಡುವುದರಿಂದ ಹಲವಾರು ಪ್ರಾಣಿಗಳ ಸಂತತಿಯೇ ನಾಶವಾಗಿದೆ ಮತ್ತು ಇನ್ನು ಕೆಲವು ಈಗಲೂ ಅಳಿವಿನಂಚಿನಲ್ಲಿದೆ.

By: hemanth
Subscribe to Boldsky

ಚಿರತೆ, ಹುಲಿ, ಆನೆಗಳ ಹಿಂಡು ನಾಡಿಗೆ ನುಗ್ಗಿ ಪ್ರಾಣ ಹಾನಿ ಮಾಡುತ್ತಿವೆ ಎಂದು ಭಾರೀ ಸುದ್ದಿಯಾಗುತ್ತದೆ. ಆದರೆ ಇದಕ್ಕೆ ಕಾರಣ ನಾವೇ. ಕಾಡುಗಳನ್ನು ಕಡಿದು ಕಟ್ಟಡಗಳನ್ನು ನಿರ್ಮಿಸುತ್ತಾ ಇದ್ದೇವೆ.ಅಚ್ಚರಿ ಜಗತ್ತು: ನಿದ್ದೆ ಮಾಡುವುದರಲ್ಲಿ ಈ ಪ್ರಾಣಿಗಳು ನಂ.1...

ಮನೆ ಕಳೆದುಕೊಂಡರೆ ಮನುಷ್ಯರು ರಸ್ತೆಗೆ ಬರುವಂತೆ ಪ್ರಾಣಿಗಳು ಕೂಡ ಕಾಡುಗಳು ಇಲ್ಲದೆ ನಾಡಿಗೆ ಬರುವುದು ಸಹಜವಾಗಿದೆ. ಹಲವಾರು ಪ್ರಾಣಿಗಳ ಸಂತತಿಯೇ ಅಳಿದು ಹೋಗಿದೆ. ಮನುಷ್ಯನ ಸ್ವಾರ್ಥ ಮತ್ತು ಆಸೆ ಇದಕ್ಕೆ ಕಾರಣವಾಗಿದೆ. ಅತೀ ಬುದ್ಧಿವಂತ ಪ್ರಾಣಿಗಳಿವು!

ಮಾಂಸಕ್ಕಾಗಿ ಬೇಟೆಯಾಡುವುದರಿಂದ ಹಲವಾರು ಪ್ರಾಣಿಗಳ ಸಂತತಿಯೇ ನಾಶವಾಗಿದೆ ಮತ್ತು ಇನ್ನು ಕೆಲವು ಈಗಲೂ ಅಳಿವಿನಂಚಿನಲ್ಲಿದೆ. ಅದರಲ್ಲೂ ಕಪ್ಪು ಬಣ್ಣದ ಪ್ರಾಣಿಗಳು ಬಣ್ಣ ಪರಿವರ್ತನೆಯಾಗುತ್ತ ಇದೆ. ಇದರಿಂದ ಗಾಢ ಬಣ್ಣದ ಪ್ರಾಣಿಗಳ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ. ಯಾವ ಗಾಢ ಬಣ್ಣದ ಪ್ರಾಣಿಗಳು ಅಳಿವಿನಂಚಿನಲ್ಲಿ ಇದೆ ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳುವ...

ಕಪ್ಪು ಝಿಬ್ರಾ

ಕಪ್ಪು ಝಿಬ್ರಾ

ಬದುಕಿ ಉಳಿದಿರುವ ಅತೀ ಅಪರೂಪದ ಝಿಬ್ರಾಗಳು ಇದಾಗಿವೆ ಮತ್ತು ಮುಂದಿನ ದಿನಗಳಲ್ಲಿ ಇವುಗಳ ಸಂತಾನವು ನಶಿಸುವುದರಲ್ಲಿ ಸಂಶಯವಿಲ್ಲ!

ಕಪ್ಪು ಝಿಬ್ರಾ

ಕಪ್ಪು ಝಿಬ್ರಾ

ಕಪ್ಪು ಅಳಿಲುಗಳು ಕಾಡಿಗೆ ಆಗಾಗ ಬೆಂಕಿ ಬೀಳುತ್ತಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಕಪ್ಪು ಸೀಲ್

ಕಪ್ಪು ಸೀಲ್

ಸಮುದ್ರಗಳಲ್ಲಿ ಕಂಡುಬರುವ ಸಸ್ತನಿಗಳಲ್ಲಿ ಇವುಗಳು ಒಂದಾಗಿದೆ. ಇವುಗಳು ಕೂಡ ಅಳಿವಿನ ಅಂಚಿನಲ್ಲಿದೆ.

ಕಪ್ಪು ಹಲ್ಲಿಗಳು

ಕಪ್ಪು ಹಲ್ಲಿಗಳು

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಈ ಕಪ್ಪು ಹಲ್ಲಿಗಳು ಕಂಡುಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆಯು ಕಡಿಮೆಯಾಗುತ್ತಾ ಇದೆ.

ಕಪ್ಪು ಕೆಂಪುನರಿ

ಕಪ್ಪು ಕೆಂಪುನರಿ

ಈ ನರಿಗಳ ಬಣ್ಣದಲ್ಲಿ ಹಲವಾರು ರೀತಿಯ ವೈವಿಧ್ಯಗಳಿವೆ. ಇವುಗಳಲ್ಲಿ ಕೆಲವೊಂದು ನರಿಗಳು ಸಂಪೂರ್ಣ ಕಪ್ಪು ಬಣ್ಣದಾಗಿದ್ದರೆ ಇನ್ನು ಕೆಲವು ನೀಲಿಕಪ್ಪು ಬಣ್ಣವನ್ನು ಹೊಂದಿವೆ.

ಬ್ಲ್ಯಾಕ್ ಕಿಂಗ್ ಪೆಂಗ್ವಿನ್

ಬ್ಲ್ಯಾಕ್ ಕಿಂಗ್ ಪೆಂಗ್ವಿನ್

ಅಂಟಾರ್ಟಿಕ ಪ್ರದೇಶದಲ್ಲಿ ಈ ಬ್ಲ್ಯಾಕ್ ಕಿಂಗ್ ಪೆಂಗ್ವಿನ್ ಗಳು ವಾಸಿಸುತ್ತವೆ. ಇವುಗಳು ಬಣ್ಣ ಪರಿವರ್ತನೆಯಾದ ಅತಿ ಅಪರೂಪದ ಸಂತತಿಗಳಲ್ಲಿ ಒಂದಾಗಿದೆ.

ಕಪ್ಪು ತೋಳ

ಕಪ್ಪು ತೋಳ

ಬಿಳಿ ತೋಳಗಳ ಮತ್ತೊಂದು ವಿಧವೇ ಕಪ್ಪು ತೋಳಗಳು. ಬಣ್ಣವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇದ್ದರೆ ಇವು ಎರಡು ಸಾಮಾನ್ಯವಾಗಿದೆ.

ಕಪ್ಪು ಜಿಂಕೆ

ಕಪ್ಪು ಜಿಂಕೆ

ಇವುಗಳು ಅಪರೂಪದಲ್ಲಿ ಅಪರೂಪದ ಕಪ್ಪು ಪ್ರಾಣಿಗಳಾಗಿವೆ. ಇದು ಆಸ್ಟ್ರಿಯಾ ಮತ್ತು ಟೆಕ್ಸಾಸ್ ನಲ್ಲಿ ಕಂಡುಬರುತ್ತವೆ.

ಕಪ್ಪು ಇಲಿಹಾವು

ಕಪ್ಪು ಇಲಿಹಾವು

ಈ ಕಪ್ಪು ಇಲಿಹಾಗಳು ದಕ್ಷಿಣ ಅಮೆರಿಕಾದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳ ಯಾವುದೇ ಉಪಜಾತಿಗಳು ಕಂಡುಬಂದಿಲ್ಲ. ಇದರಿಂದ ಇವುಗಳನ್ನು ಅಳಿವಿನಂಚಿನಲ್ಲಿರುವ ಹಾವುಗಳು ಎಂದು ಪರಿಗಣಿಸಲಾಗಿದೆ.

ಕಪ್ಪು ಚಿರತೆ

ಕಪ್ಪು ಚಿರತೆ

ಚಿರತೆಗಳಲ್ಲಿ ಚುಕ್ಕೆ ಚಿರತೆಯನ್ನು ನಾವು ನೋಡಿದ್ದೇವೆ. ಆದರೆ ಕಪ್ಪು ಚಿರತೆಗಳು ತುಂಬಾ ಅಪರೂಪದ್ದಾಗಿದೆ. ಲ್ಯಾಟಿನ್ ಅಮೆರಿಕಾದಲ್ಲಿ ಇವುಗಳನ್ನು ಜಾಗೂರ್ ಎಂದು ಕರೆಯಲಾಗುತ್ತದೆ. ದಕ್ಷಿಣ ಆಫ್ರಿಕಾ ಮತ್ತು ಏಶ್ಯಾದ ಕೆಲವೊಂದು ಭಾಗಗಳಲ್ಲಿ ಈ ಚಿರತೆಗಳು ಪತ್ತೆಯಾಗಿವೆ.

Story first published: Tuesday, April 18, 2017, 11:41 [IST]
English summary

These Are The Incredibly Rare Black Animals

Mankind has taken mother nature for granted and this has lead to the extinction of various kinds of animals and reptiles. From the only white male hippopotamus to the rare blue whales, these animals and reptiles are slowly getting extinct. Here is a list of the incredible black animals that are also on the verge of disappearing sooner.
Please Wait while comments are loading...
Subscribe Newsletter