For Quick Alerts
ALLOW NOTIFICATIONS  
For Daily Alerts

ಇಂತಹ ಜನರೂ ಜಗತ್ತಿನಲ್ಲಿ ಇದ್ದಾರೆಯೇ? ಅಚ್ಚರಿಯಾಗುತ್ತಿದೆ!!

ದಕ್ಷಿಣ ಅಮೇರಿಕಾದ ಅಮೆಜಾನ್ ಮಳೆಕಾಡುಗಳಲ್ಲಿ ಇಂದಿಗೂ ಉಳಿದುಬಂದಿರುವ ಯನೋಮಾಮಿ ಎಂಬ ಹೆಸರಿನ ಇಂಡಿಯನ್ ಬುಡಕಟ್ಟು ಜನಾಂಗದಲ್ಲಿ ಇರುವ ಪದ್ಧತಿಗಳು ಇಂದಿನ ನಾಗರಿಕತೆ ಅಸಹ್ಯಪಡುವ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ....

By Manu
|

ವಿಶ್ವದಲ್ಲಿ ಈಗಲೂ ಕೆಲವಾರು ಬುಡಕಟ್ಟು ಜನಾಂಗ ಉಳಿದುಬಂದಿದ್ದು ಇವರು ಅನುಸರಿಸಿಕೊಂಡು ಬರುತ್ತಿರುವ ವಿಧಿ ವಿಧಾನಗಳು ವಿಚಿತ್ರ ಹಾಗೂ ಅಸಹ್ಯವೂ ಆಗಿದೆ. ಉದಾಹರಣೆಗೆ ನಮ್ಮ ಕರ್ನಾಟಕದಲ್ಲಿರುವ ಒಂದು ಬುಡಕಟ್ಟು ಜನರು ವರ್ಷಕ್ಕೊಮ್ಮೆ ಸ್ನಾನ ಮಾಡುತ್ತಾರೆ. ಇವರೆಷ್ಟೋ ಪರವಾಗಿಲ್ಲ. ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!

ದಕ್ಷಿಣ ಅಮೇರಿಕಾದ ಅಮೆಜಾನ್ ಮಳೆಕಾಡುಗಳಲ್ಲಿ ಇಂದಿಗೂ ಉಳಿದುಬಂದಿರುವ ಯನೋಮಾಮಿ ಎಂಬ ಹೆಸರಿನ ಇಂಡಿಯನ್ ಬುಡಕಟ್ಟು ಜನಾಂಗದಲ್ಲಿ ಇರುವ ಪದ್ದತಿಗಳು ಇಂದಿನ ನಾಗರಿಕತೆ ಅಸಹ್ಯಪಡುವ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿದ್ದು ಇದಕ್ಕೆ ಅವರು ತಮ್ಮದೇ ಸಮರ್ಥನೆಯನ್ನು ನೀಡುತ್ತಾರೆ. ಈ ಗ್ರಾಮದಲ್ಲಿದೆ ವಿಚಿತ್ರ ಕಾಯಿಲೆ-ಇಲ್ಲಿನ ಜನ ವಾರಗಟ್ಟಲೇ ಮಲಗಿರುತ್ತಾರೆ!!

ಇವರು ಆಚರಿಸಿಕೊಂಡು ಬರುತ್ತಿರುವ ಅತಿ ಬೀಭತ್ಸವಾದ ಪದ್ಧತಿ ಎಂದರೆ ತಮ್ಮಲ್ಲೊಬ್ಬರಾರಾದರೂ ಮರಣ ಹೊಂದಿದರೆ ಅವರ ಪಾರ್ಥವ ಶರೀರವನ್ನು ಸುಟ್ಟು ಅದರ ಬೂದಿಯನ್ನು ಸೂಪ್ ಮಾಡಿಕೊಂಡು ಎಲ್ಲರೂ ಜೊತೆಗೂಡಿ ಕುಡಿಯುವುದು. ಇದರಿಂದ ಮೃತರ ಆತ್ಮ ಸದಾ ಸೇವಿಸಿದರವ ಶರೀರದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎಂದು ಅವರು ನಂಬುತ್ತಾರೆ. ಬನ್ನಿ, ಇಂದಿನ ಲೇಖನದಲ್ಲಿ ಈ ಜನಾಂಗದ ಪದ್ಧತಿಗಳ ಬಗ್ಗೆ ಅರಿಯೋಣ....

ಇವರಾರು?

ಇವರಾರು?

ಯನೋಮಾಮಿ ಎಂಬ ಹೆಸರಿನ ಈ ಬುಡಕಟ್ಟು ಜನಾಂಗ ಅಮೇಜಾನ್ ಅರಣ್ಯದ ನಡುವೆ ಇರುವ ಸುಮಾರು 200-250 ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇತರ ಪದ್ದತಿಗಳಲ್ಲಿ ಉಳಿದ ಬುಡಕಟ್ಟು ಜನಾಂಗದಂತೆ ಜೀವಿಸುವ ಇವರು ಮರಣಾನಂತರ ಮೃತರ ಶರೀರದ ಬೂದಿಯನ್ನು ಸೇವಿಸುವ ಪದ್ಧತಿಯಿಂದ ವಿಶಿಷ್ಟರಾಗಿದ್ದಾರೆ. ಮೃತ ವ್ಯಕ್ತಿ ಸಂಬಂಧಿಕನೇ ಆಗಬೇಕೆಂದಿಲ್ಲ, ಊರಿನಲ್ಲಿ ಯಾರು ಸತ್ತರೂ ಉಳಿದವರಿಗೆಲ್ಲಾ ಸೂಪ್ ಹಬ್ಬ!

ಇವರ ನಂಬಿಕೆ ಏನು?

ಇವರ ನಂಬಿಕೆ ಏನು?

ಈ ಜನಾಂಗದವರು ಸಾವನ್ನು ನಂಬುವುದಿಲ್ಲ. ಬದಲಿಗೆ ವೈರಿಗುಂಪಿನವರು ಪ್ರೇತಾತ್ಮವೊಂದನ್ನು ಈ ಗುಂಪಿನಲ್ಲಿ ಯಾರನ್ನಾದರೂ ಕೊಲ್ಲಲು ಕಳುಹಿಸಿದ್ದಾರೆ ಎಂದು ನಂಬುತ್ತಾರೆ. ಅಂದರೆ ಸಾವಿಗೆ ಎದುರಾಳಿ ಪಡೆಯ ಪ್ರೇತಾತ್ಮವೇ ಕಾರಣ. ಇದಕ್ಕೆ ಪರಿಹಾರವೆಂದರೆ ಮೃತನಾದ ತಕ್ಷಣ ಮೃತದೇಹವನ್ನು ಸುಟ್ಟುಬಿಡುವುದು.

ಹಾಗಾದರೆ ಬೂದಿಯನ್ನು ಸೇವಿಸುವುದೇಕೆ?

ಹಾಗಾದರೆ ಬೂದಿಯನ್ನು ಸೇವಿಸುವುದೇಕೆ?

ಬೂದಿಯನ್ನು ಸೇವಿಸುವ ಮೂಲಕ ಮೃತರ ಆತ್ಮ ಕುಡಿದವರ ಶರೀರದಲ್ಲಿ ಅಹವಾನೆಗೊಂಡು ಜನಾಂಗದಲ್ಲಿ ಈಗ ಜೀವಂತರಿರುವ ಹಾಗೂ ಅವರಿಗೆ ಹುಟ್ಟುವ ಮುಂದಿನ ಪೀಳಿಗೆಗೆ ಶುಭವಾಗುತ್ತದೆ.

ಬೂದಿಯ ಸೂಪ್ ಹೇಗೆ ಮಾಡಲಾಗುತ್ತದೆ?

ಬೂದಿಯ ಸೂಪ್ ಹೇಗೆ ಮಾಡಲಾಗುತ್ತದೆ?

ಮೃತ ವ್ಯಕ್ತಿಯ ಮರಣದ ಸಮಯಕ್ಕನುಸಾರವಾಗಿ ಎರಡು ಬಗೆಯಲ್ಲಿ ಈ ವಿಧಿ ಆಚರಿಸಲಾಗುತ್ತದೆ. ಇವರ ವಿಶೇಷ ಹಬ್ಬ ಹತ್ತಿರವಿದ್ದರೆ ದೇಹವನ್ನು ಸುಮಾರು ನಲವತ್ತೈದು ದಿನ ಎಲೆಗಳ ಅಡಿ ಕೊಳೆಯಲು ಬಿಟ್ಟು ಬಳಿಕ ಕೊಳೆತ ಈ ದೇಹವನ್ನು ಸುಟ್ಟು ಬೂದಿಯನ್ನು ಕೊಳೆಸಿದ ಬಾಳೆಯಹಣ್ಣಿನ ತಿರುಳಿನ ಜೊತೆಗೆ ಹಬ್ಬದ ದಿನ ಎಲ್ಲರೂ ಜೊತೆಗೂಡಿ ಸೇವಿಸುತ್ತಾರೆ ಜೊತೆಗೆ ಮೂಳೆಯನ್ನೂ ತಂದು ಅಂಟಿದ್ದ ಮಾಂಸವನ್ನೂ ತಿನ್ನುತ್ತಾರೆ. ಇತರ ವೇಳೆಯಲ್ಲಿ ಮೃತ ವ್ಯಕ್ತಿಯ ಶರೀರವನ್ನು ಸುಟ್ಟು ಮೂಳೆಗಳನ್ನು ಹಾಗೇ ಬಿಟ್ಟು ಬೂದಿಯನ್ನು ಮಾತ್ರ ಸೇವಿಸುತ್ತಾರೆ.

ಈ ಸೇವನೆಗೆ ಇಡಿಯ ಹಳ್ಳಿಯೇ ಆಗಮಿಸುತ್ತದೆ

ಈ ಸೇವನೆಗೆ ಇಡಿಯ ಹಳ್ಳಿಯೇ ಆಗಮಿಸುತ್ತದೆ

ಈ ವಿಧಿಯನ್ನು ಒಂದು ಪವಿತ್ರ ವಿಧಿಯಂತೆ ಆಚರಿಸುವ ಈ ಜನರು ಈ ಸಮಯದಲ್ಲಿ ಇಡಿಯ ಹಳ್ಳಿಯ ಒಬ್ಬರನ್ನೂ ಬಿಡದಂತೆ ಸ್ಥಳಕ್ಕೆ ಆಗಮಿಸಿ ಪಾಲ್ಗೊಳ್ಳುತ್ತಾರೆ. ಅಲ್ಲದೇ ಈ ಬೂದಿಯ ಸೂಪ್ ಅನ್ನು ನಾಳೆಗೆ ಬಿಡುವಂತಿಲ್ಲ, ಅಂದೇ ಪೂರ್ಣವಾಗಿ ಖಾಲಿ ಮಾಡಬೇಕಾದುದು ಅಗತ್ಯ.

English summary

The story of yanomami tribal people who drink human soup

There are many tribes around the world that still practice hard-to-believe rituals and this “Yanomami Tribe” is no different, as they are known to drink human soup!
X
Desktop Bottom Promotion