For Quick Alerts
ALLOW NOTIFICATIONS  
For Daily Alerts

ಈ ಭಾಷೆಗಳನ್ನು ಕಲಿಯುವುದೆಂದರೆ ಅಬ್ಬಾ! ಅಸಾಧ್ಯವಾದ ಕೆಲಸ

ಈ ಜಗತ್ತಿನಲ್ಲಿ ಸುಮಾರು 6,500 ಭಾಷೆಗಳಿವೆ. ಇವುಗಳಲ್ಲಿ ಕೆಲವು ಭಾಷೆಗಳು ಇತರರಿಗೆ ಉಚ್ಛರಿಸಲು ಬಹಳ ಕಷ್ಟವಾಗಿದ್ದು ಇದನ್ನು ಕಲಿಯಲು ಬಹಳ ಹೆಚ್ಚಿನ ಶ್ರಮ ಹಾಗೂ ಸಮಯ ತೆಗೆದುಕೊಳ್ಳುತ್ತದೆ. ಇವುಗಳ ಲಿಪಿ ಇನ್ನೂ ಕಷ್ಟ...

By Manu
|

ಯಾವುದೇ ಭಾಷೆ ಕಲಿಯಬೇಕಾದರೆ ಆ ಭಾಷೆ ಕಲಿಯುವ ಅನಿವಾರ್ಯತೆ ಅಥವಾ ಆ ಭಾಷೆಯ ಮೇಲೆ ಇರುವ ಅಭಿಮಾನ ಪ್ರಮುಖ ಕಾರಣವಾಗಿವೆ. ಆದರೆ ಇವೆರಡೂ ಇಲ್ಲದಿರುವುದರಿಂದಲೇ ಇಂದಿಗೂ ಬೆಂಗಳೂರಿನಲ್ಲಿ ಹೊರರಾಜ್ಯದವರು ಕನ್ನಡ ಕಲಿಯುವ ಗೋಜಿಗೇ ಹೋಗಿಲ್ಲ. ಕನ್ನಡ ಕಲಿಯಲು ಕಷ್ಟವಾಗುವ ಭಾಷೆ ಅಲ್ಲವೇ ಅಲ್ಲ! ವಿಶ್ವದ ಅತಿ ಪುರಾತನ ಇತಿಹಾಸ ಹೊಂದಿರುವ ಭಾಷೆಗಳು

ಆದರೆ ಈ ಜಗತ್ತಿನಲ್ಲಿ ಕಲಿಯಲು ಬಹಳವೇ ಕಷ್ಟವಿರುವ ಭಾಷೆಗಳಿವೆ. ಕೆಲವು ಅಕ್ಷರಳಂತೂ ಉಚ್ಛರಿಸಲೂ ಸಾಧ್ಯವಿಲ್ಲದಷ್ಟು ಕಷ್ಟವಾಗಿವೆ. ಉದಾಹರಣೆಗೆ ಮಲಯಾಳಂ ನಲ್ಲಿ ಬಾಳೆಹಣ್ಣಿಗೆ ಪಯ್ಳಂ (ಈ ಅಕ್ಷರ 'ಳ' ಮತ್ತು 'ಯ' ದ ನಡುವೆ ಇದೆ) ಎಂದು ಕರೆಯುತ್ತಾರೆ. ಕನ್ನಡ ಭಾಷೆ ಮಾತನಾಡುವವರಿಗೆ ಈ ಅಕ್ಷರ ಉಚ್ಛರಿಸಲು ಅಸಾಧ್ಯವೆನಿಸುವಷ್ಟು ಕಷ್ಟ. ಅಂತೆಯೇ ಹಿಂದಿ ಮಾತನಾಡುವವರಿಗೆ ಕನ್ನಡದ ಳ ಉಚ್ಛರಿಸುವುದು ಬಹಳ ಕಷ್ಟ. ಇಂಗ್ಲೀಷ್ ಮಾತನಾಡುವ ಟಾಪ್ 10 ರಾಷ್ಟ್ರಗಳು

ಈ ಜಗತ್ತಿನಲ್ಲಿ ಸುಮಾರು 6,500 ಭಾಷೆಗಳಿವೆ. ಇವುಗಳಲ್ಲಿ ಕೆಲವು ಭಾಷೆಗಳು ಇತರರಿಗೆ ಉಚ್ಛರಿಸಲು ಬಹಳ ಕಷ್ಟವಾಗಿದ್ದು ಇದನ್ನು ಕಲಿಯಲು ಬಹಳ ಹೆಚ್ಚಿನ ಶ್ರಮ ಹಾಗೂ ಸಮಯ ತೆಗೆದುಕೊಳ್ಳುತ್ತದೆ. ಇವುಗಳ ಲಿಪಿ ಇನ್ನೂ ಕಷ್ಟ. ಕೆಲವು ಭಾಷೆಗಳ ಹೆಸರನ್ನೂ ನಾವು ಕೇಳಿಲ್ಲ. ಬನ್ನಿ ಇವು ಯಾವುವು ಎಂಬುದನ್ನು ನೋಡೋಣ...

ತಗಲಾಗ್

ತಗಲಾಗ್

ಫಿಲಿಪ್ಪೀನ್ಸ್ ದೇಶದ ರಾಷ್ಟ್ರಭಾಷೆಯಾಗಿರುವ ತಗಲಾಗ್ ಮೂಲತಃ ಆಸ್ಟ್ರೋನೇಶಿಯನ್ ಅಂದರೆ ಆಸ್ಟ್ರೇಲಿಯಾ ಏಷಿಯಾ ಮೂಲದ ಪುರಾತನ ಭಾಷೆಯಾಗಿದೆ. ಈ ಭಾಷೆಯನ್ನು ಫಿಲಿಪ್ಪೀನ್ಸ್ ನ ಕಾಲು ಭಾಗದಷ್ಟು ಜನರು ಮಾತ್ರ ಮಾತನಾಡುತ್ತಾರೆ. ಉಳಿದವರು ಕೊಂಚ ಸುಲಭವಾದ ಫಿಲಿಪಿನೋ ಭಾಷೆ ಮಾತನಾಡುತ್ತಾರೆ.

ನಾರ್ವೇಯಿಯನ್

ನಾರ್ವೇಯಿಯನ್

ಉತ್ತರ ಜರ್ಮನಿಯಾದ್ಯಂತ ಮಾತನಾಡುವ ಈ ಭಾಷೆ ನಾರ್ವೆ ದೇಶದ ರಾಷ್ಟ್ರಭಾಷೆಯೂ ಹೌದು ಹಾಗೂ ನಾರ್ಡಿಕ್ ಕೌಂಸಿಲ್‌ನ ಆಡುಭಾಷೆಯೂ ಹೌದು. ಆದರೆ ಈ ಭಾಷೆಯೂ ವಿಶ್ವದ ಅತಿ ಕಷ್ಟಕರ ಭಾಷೆಯಲ್ಲೊಂದಾಗಿದೆ.

ಪರ್ಶಿಯನ್

ಪರ್ಶಿಯನ್

ಇಂಡೋ ಯೋರೋಪಿನ ಭಾಷೆಗಳಲ್ಲಿ ಇಂಡೋ ಇರಾನಿ ಭಾಷೆಗಳಲ್ಲೊಂದಾದ ಪರ್ಶಿಯನ್ ಅಫ್ಘಾನಿಸ್ತಾನ ಮತ್ತು ಇರಾನ್ ನಲ್ಲಿ ಆಡಲಾಗುತ್ತದೆ. ಪ್ರಸ್ತುತ ವಿಶ್ವದಲ್ಲಿ ಸುಮಾರು ೧.೧ ಕೋಟಿ ಜನರು ಈ ಭಾಷೆ ಮಾತನಾಡುತ್ತಾರೆ.

ಇಂಡೋನೇಶಿಯನ್

ಇಂಡೋನೇಶಿಯನ್

ಲಿಂಗುವಾ ಫ್ರಾಂಕಾ ಹಾಗೂ ಪೂರ್ಣ ಇಂಡೋನೇಶಿಯಾದ್ಯಂತ ಈ ಭಾಷೆಯನ್ನು ಆಡಲಾಗುತ್ತದೆ. ವಿಶ್ವದ ಒಂದು ಪ್ರಮುಖ ಭಾಷೆಯಾಗಿರುವ ಇಂಡೋನೇಶಿಯನ್ ಕಲಿಯಲು ಸುಲಭವೇನೂ ಅಲ್ಲ. ಇದನ್ನು ಕಲಿಯಲು ಹೋದವರಿಗೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಸಮಯ ಹಿಡಿಯುವುದು ಸಾಮಾನ್ಯ.

ಸ್ಲೋವೇನಿಯನ್

ಸ್ಲೋವೇನಿಯನ್

ದಕ್ಷಿಣ ಸ್ಲಾವಿಕ್ ಭಾಷೆಗಳಲ್ಲಿ ಒಂದಾದ ಸ್ಲೋವೇನಿಯನ್ ಭಾಷೆಯನ್ನು ವಿಶ್ವದ 25 ಲಕ್ಷ ಜನರು ಮಾತನಾಡುತ್ತಾರೆ. ಅಲ್ಲದೇ ಯೂರೋಪಿಯನ್ ಯೂನಿಯನ್ ರಾಷ್ಟಗಳಲ್ಲಿ ಮಾನ್ಯತೆ ಪಡೆದ 24 ಭಾಷೆಗಳಲ್ಲಿ ಒಂದಾಗಿದೆ.ಒಂದು ವೇಳೆ ಈ ಪಟ್ಟಿಯಲ್ಲಿ ಇರದ, ಇನ್ನೂ ಕಷ್ಟದ ಭಾಷೆಯನ್ನು ನೀವು ಬಲ್ಲಿರಾದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

English summary

Most Difficult Languages To Learn In The World

Wondering which are the really tough languages? Then check the list below, as we are sure most of us would not have even heard of the names of these languages as well. Take a look.
X
Desktop Bottom Promotion