For Quick Alerts
ALLOW NOTIFICATIONS  
For Daily Alerts

ಜನನದ ಕ್ರಮಸಂಖ್ಯೆಯೇ ನಿಮ್ಮ ವ್ಯಕ್ತಿತ್ವ-ಸ್ವಭಾವಕ್ಕೆ ವೇದಿಕೆ...

ತಂದೆತಾಯಿಯರಿಗೆ ಪ್ರತಿ ಮಗುವೂ ಅಮೂಲ್ಯವಾಗಿದೆ. ದೊಡ್ಡವನು, ನಡುವವನು, ಚಿಕ್ಕವನು, ಒಬ್ಬನೇ ಮಗ ಎಂಬೆಲ್ಲಾ ವ್ಯತ್ಯಾಸವನ್ನು ಮಾಡುವುದಿಲ್ಲ...ಆದರೆ ಮಗು ಎಷ್ಟನೆಯದು ಎಂಬ ಮಾಹಿತಿ ಆ ಮಗುವಿನ ವ್ಯಕ್ತಿತ್ವದ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ.

By Arshad
|

ತಂದೆತಾಯಿಯರಿಗೆ ಪ್ರತಿ ಮಗುವೂ ಅಮೂಲ್ಯವಾಗಿದೆ. ದೊಡ್ಡವನು, ನಡುವವನು, ಚಿಕ್ಕವನು, ಒಬ್ಬನೇ ಮಗ ಎಂಬೆಲ್ಲಾ ವ್ಯತ್ಯಾಸವನ್ನು ಮಾಡಲು ತಂದೆ ತಾಯಿಯರಿಗೆ ಮಾಡಲು ಸಾಧ್ಯವೇ ಇಲ್ಲ. ಆದರೆ ಮಗು ಎಷ್ಟನೆಯದು ಎಂಬ ಮಾಹಿತಿ ಆ ಮಗುವಿನ ವ್ಯಕ್ತಿತ್ವದ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ. ಮೊದಲ ಮಗುವಿನ ಲಾಲನೆ ಪಾಲನೆಗೂ ಅದರ ಬಳಿಕದ ಮಕ್ಕಳ ಹಾಗೂ ಕೊನೆಯ ಮಗುವಿನ ಲಾಲನೆ ಪಾಲನೆಗೂ ವ್ಯತ್ಯಾಸವಿರುತ್ತದೆ. ಹುಟ್ಟಿದ ದಿನ ನೋಡಿ, ವ್ಯಕ್ತಿಯ ಗುಣ-ನಡತೆ ತಿಳಿಯಿರಿ!

ಪ್ರಥಮ ಮಗುವಿಗೆ ತಂದೆ ತಾಯಿಯರು ಹೆಚ್ಚಿನ ಪ್ರಾಮುಖ್ಯತೆ ಹಾಗೂ ಸಮಯವನ್ನು ನೀಡುತ್ತಾರೆ. ಆದರೆ ಎರಡನೆಯ ಮಗು ಬಂದಾಗ ಈ ಸಮಯ ಇಬ್ಬರಲ್ಲಿಯೂ ಹಂಚಿಹೋಗುತ್ತದೆ. ಇದೇ ರೀತಿಯಾಗಿ ಮುಂದಿನ ಮಕ್ಕಳಲ್ಲಿಯೂ ಸಮಯ ಹಾಗೂ ಗಮನ ಹಂಚಿಹೋಗುತ್ತದೆ. ಮೂರನೆಯ ಅಥವಾ ನಾಲ್ಕನೆಯ ಮಗುವಿಗೆ ಮೊದಲ ಮಗುವೇ ಕಾಳಜಿ ವಹಿಸಿಕೊಳ್ಳುವ ಪಾತ್ರ ವಹಿಸುವ ಕಾರಣ ಈ ಮಗುವಿನ ಪಾಲನೆಯೂ ಕೊಂಚ ಭಿನ್ನವಾಗಿರುತ್ತದೆ. ಈ ಮಗುವಿನ ಪ್ರತಿ ಪಾಲಕರು ಹೇಗೂ ಮೊದಲ ಮಗು ಈ ಮಗುವಿನ ಕಾಳಜಿ ವಹಿಸುತ್ತಿದ್ದಾನೆ/ಳೆ ಎಂದು ನಿರಾಳರಾಗಿ ಈ ಮಗುವಿಗೆ ಗಮನ ನೀಡುವುದನ್ನು ಕೊಂಚ ಕಡಿಮೆ ಮಾಡುತ್ತಾರೆ.

ಇದರಿಂದಾಗಿ ಎರಡನೆಯ ಮತ್ತು ನಂತರದ ಮಕ್ಕಳು ತಮ್ಮನ್ನು ಪಾಲಕರು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳುತ್ತವೆ. ತಂದೆ ತಾಯಿಯರಿಗೆ ಒಂದೇ ಆಗಿರುವ ಮಗು ಹೆಚ್ಚು ಜವಾಬ್ದಾರಿಗಳನ್ನು ಹೊಂದಿದ್ದರೂ ತಂದೆ ತಾಯಿಯರಿಬ್ಬರ ಅತಿ ಹೆಚ್ಚಿನ ಗಮನ ಮತ್ತು ಕಾಳಜಿಯನ್ನು ಪಡೆಯುತ್ತದೆ. ಆದರೆ ಕಡೆಯ ಮಗುವಿಗೆ ತಾಯಿಯ ಜೊತೆಗೇ ತನ್ನ ಹಿರಿಯ ಸಹೋದರ ಸಹೋದರಿಯರ ಆರೈಕೆಯೂ ಸಿಕ್ಕುವ ಹಾಗೂ ಮನೆಯ ಅತಿ ಕಿರಿಯ ಸದಸ್ಯನೆಂಬ ಹೆಚ್ಚುವರಿ ಪ್ರೀತಿಯೂ ದೊರಕುವ ಮೂಲಕ ಈ ಮಗುವಿನ ಮನಃಸ್ಥಿತಿಯೂ ಬದಲಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....

ಮೊದಲ ಮಗು

ಮೊದಲ ಮಗು

ತಂದೆ ತಾಯಿಯರಿಗೆ ಮೊದಲ ಮಗುವಾಗಿ ಹುಟ್ಟಿದ ವ್ಯಕ್ತಿಗಳು ಸಾಮಾನ್ಯವಾಗಿ ಯಜಮಾನಿಕೆಯನ್ನು ಇಷ್ಟಪಡುವವರಾಗಿದ್ದು ತಮ್ಮ ಕೆಲಸದಲ್ಲಿ ಶ್ರೇಷ್ಠತೆಯನ್ನು ಬಯಸುತ್ತಾರೆ. ಇವರು ತಮ್ಮ ಮಕ್ಕಳಿಗೆ ಅತಿ ಹೆಚ್ಚಿನ ಕಾಳಜಿಯನ್ನು ಪ್ರಕಟಿಸಿ ಇವರ ಬಗ್ಗೆ ಹೆಚ್ಚು ಜವಾಬ್ದಾರಿಯುತರಾಗಿರುತ್ತಾರೆ. ಆದರೆ ಇವರು ತಮ್ಮ ವಸ್ತುಗಳ ಮತ್ತು ವಿಷಯಗಳ ಬಗ್ಗೆ ಅತಿ ಹೆಚ್ಚು ಎಚ್ಚರಿಕೆ ವಹಿಸುವವರಾಗಿದ್ದು ಈ ಬಗ್ಗೆ ಹೆಚ್ಚು ಚಿಂತಿಸುವವರೂ ಆಗಿರುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಬಹಳಷ್ಟನ್ನು ಸಾಧಿಸುವವರಾಗಿದ್ದು ತಮ್ಮ ನಿಯಂತ್ರಣವಿರಬೇಕು ಎಂದು ಬಯಸುತ್ತಾರೆ. ಇವರು ಶ್ರಮಜೀವಿಗಳಾಗಿದ್ದು ಪ್ರತಿ ವಿಷಯದಲ್ಲಿಯೂ ಹೆಚ್ಚಿನ ನೈಪುಣ್ಯವನ್ನು ಸಾಧಿಸುತ್ತಾರೆ.

ನಡುವಣ ಮಕ್ಕಳು

ನಡುವಣ ಮಕ್ಕಳು

ಮೊದಲ ಮಗುವಿನ ಬಳಿಕ ಹುಟ್ಟುವ ಮಕ್ಕಳು ಸಾಮಾನ್ಯವಾಗಿ ಸ್ವತಂತ್ರರಾಗಿದ್ದು ಹೆಚ್ಚು ಸಂಘಜೀವಿಗಳಾಗಿರುತ್ತಾರೆ. ಕೆಲವೊಮ್ಮೆ ಇವರು ಕ್ರಾಂತಿಕಾರಿಗಳಾಗಿಯೂ ಕೆಲವೊಮ್ಮೆ ಒಬ್ಬಂಟಿಯಾಗಿಯೂ ಉಳಿದುಬಿಡುತ್ತಾರೆ. ಇವರು ಸದಾ ತಮ್ಮ ಕುಟುಂಬ ಮತ್ತು ಸ್ನೇಹಿತವರ್ಗದಿಂದ ಗುರುತಿಸಲ್ಪಡಲು ಇಚ್ಛಿಸುತ್ತಾರೆ, ಇವರು ಸಾಮಾನ್ಯವಾಗಿ ಇತರರ ಅವಗಣನೆಗೆ ಒಳಗಾಗಿದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ.

ಕಡೆಯದಾಗಿ ಹುಟ್ಟಿದ ಮಕ್ಕಳು

ಕಡೆಯದಾಗಿ ಹುಟ್ಟಿದ ಮಕ್ಕಳು

ಇವರು ಸಾಮಾನ್ಯವಾಗಿ ಅತಿ ಹೆಚ್ಚು ಸಂಘಜೀವಿಗಳಾಗಿದ್ದು ಮನೆಯಲ್ಲಿಯೇ ಇರಲು ಇಷ್ಟಪಡದೇ ತಿರುಗಾಡುತ್ತಾ ಇರುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ವಿಷಯಗಳು ಸರಳವಾಗಿದ್ದಷ್ಟೂ ಉತ್ತಮವಾಗಿದ್ದು ವಿಷಯಗಳು ಗೋಜಲಾಗುವುದನ್ನು ಸಹಿಸಲಾರರು. ಇವರಿಗೆ ತಮಾಷೆ ವಿನೋದ ಹಾಸ್ಯಗಳೆಂದರೆ ಇಷ್ಟವಾಗಿದ್ದು ಸಂದರ್ಭಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುವಲ್ಲಿ ನಿಷ್ಣಾತರೂ ಆಗಿರುತ್ತಾರೆ.

ಕಡೆಯದಾಗಿ ಹುಟ್ಟಿದ ಮಕ್ಕಳು

ಕಡೆಯದಾಗಿ ಹುಟ್ಟಿದ ಮಕ್ಕಳು

ಆದರೆ ಇವರು ತಮ್ಮನ್ನೇ ಕೇಂದ್ರೀಕರಿಸಿಕೊಂಡು ಉಳಿದವರು ತಮ್ಮತ್ತ ಗಮನ ನೀಡಬೇಕೆಂದು ಬಯಸುತ್ತಾರೆ. ಮನೆಯಲ್ಲಿ ಚಿಕ್ಕವರಿದ್ದಾಗಿನಿಂದಲೂ ಎಲ್ಲರ ಮುದ್ದನ್ನು ಪಡೆದು ಬೆಳೆದ ಕಾರಣ ಇವರು ಹಿರಿಯರಾದ ಬಳಿಕವೂ ಎಲ್ಲರಿಂದ ಪ್ರೀತಿಯನ್ನೇ ಬಯಸಿ ಪ್ರೀತಿಯನ್ನೇ ನೀಡುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಸಾಹಸ ಪ್ರವೃತ್ತಿಯನ್ನು ಹೆಚ್ಚು ಇಷ್ಟಪಡುವ ವ್ಯಕ್ತಿಗಳಾಗಿದ್ದು ಸಂದರ್ಭಕ್ಕೆ ಸರಿಯಾಗಿ ತಮ್ಮನ್ನು ಹೊಂದಿಸಿಕೊಳ್ಳುವಲ್ಲಿ ಚತುರರೂ ಆಗಿರುತ್ತಾರೆ.

ಏಕಮಾತ್ರ ಮಕ್ಕಳು

ಏಕಮಾತ್ರ ಮಕ್ಕಳು

ತಂದೆ ತಾಯಿಯರಿಗೆ ಜನಿಸಿದ ಏಕಮಾತ್ರ ಮಗುವಾಗಿ ಬೆಳೆದಿರುವವರು ಸಾಮಾನ್ಯವಾಗಿ ಹೆಚ್ಚು ಜವಾಬ್ದಾರಿಯುತ ಹಾಗೂ ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ. ಇವರು ತಮ್ಮ ನಿಜವಾದ ವಯಸ್ಸಿಗೂ ಮೀರಿತ ಪ್ರೌಢಿಮೆ ಹಾಗೂ ಸಂವೇದನೆಯನ್ನು ಪ್ರಕಟಿಸುತ್ತಾರೆ. ಇವರು ನಾಯಕತ್ವದ ಗುಣವನ್ನು ಹೊಂದಿದ್ದು ತಾವು ಇದಕ್ಕೆ ಅರ್ಹರೇ ಎಂದು ಒರೆಹಚ್ಚಿ ನೋಡಿಕೊಂಡೇ ಮುಂದುವರೆಯುವ ಸ್ವಭಾವದವರಾಗಿರುತ್ತಾರೆ. ಅಲ್ಲದೇ ಇವರಿಗೆ ಎದುರಾಗುವ ಟೀಕೆಗಳ ವಿರುದ್ಧ ಅತಿ ಹೆಚ್ಚು ಸಂವೇದನೆ ಪ್ರಕಟಿಸುವ ಸೂಕ್ಷ್ಮಮತಿಗಳಾಗಿದ್ದು ಶುದ್ಧಾಂತಃಕರಣದವರೂ ಆಗಿರುತ್ತಾರೆ. ಇವರು ಅತಿ ಹೆಚ್ಚು ಸಂಘಜೀವಿಗಳೂ ಆಗಿದ್ದು ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುವ ಕಾರಣ ಇವರಿಗೆ ವಿಶ್ರಾಂತಿ ಕಡಿಮೆ ಲಭಿಸುತ್ತದೆ.

ದತ್ತುಪುತ್ರರು/ಪುತ್ರಿಯರು

ದತ್ತುಪುತ್ರರು/ಪುತ್ರಿಯರು

ಈ ಮಕ್ಕಳ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಇವರ ಬಾಲ್ಯ ದತ್ತು ಪಡೆದ ತಂದೆ ತಾಯಿಯರು ಹೇಗೆ ನಡೆಸಿಕೊಂಡರು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಪ್ರಥಮ, ದ್ವಿತೀಯ ಅಥವಾ ಕೊನೆಯ ಮಗುವಿನ ವ್ಯಕ್ತಿತ್ವದಲ್ಲಿ ಗುರುತಿಸಲು ಸಾಧ್ಯವಿಲ್ಲ.

ಇಬ್ಬರು ಮಕ್ಕಳ ನಡುವಣ ಅಂತರ

ಇಬ್ಬರು ಮಕ್ಕಳ ನಡುವಣ ಅಂತರ

ಒಂದು ವೇಳೆ ಇಬ್ಬರು ಮಕ್ಕಳ ನಡುವಣ ಅಂತರ ಅತಿ ಹೆಚ್ಚಾಗಿದ್ದರೆ ಎರಡನೆಯವರಾಗಿ ಹುಟ್ಟಿದ ಮಕ್ಕಳು ಮೊದಲ ಮಗುವಿನ ವ್ಯಕ್ತಿತ್ವವನ್ನು ಅನುಸರಿಸುವ ಸಾಧ್ಯತೆ ಹೆಚ್ಚು.

 ಈ ವ್ಯತ್ಯಾಸವೇಕೆ ಸಂಭವಿಸುತ್ತದೆ?

ಈ ವ್ಯತ್ಯಾಸವೇಕೆ ಸಂಭವಿಸುತ್ತದೆ?

ಈ ವ್ಯತ್ಯಾಸಗಳಿಗೂ ಅನುವಂಶಿಕವಾಗಿ ಬರುವ ಗುಣಗಳಿಗೂ ಏನೂ ಸಂಬಂಧವಿಲ್ಲ. ಈ ಮಕ್ಕಳು ಮೊದಲ, ನಡುವಣ ಅಥವಾ ಕೊನೆಯ ಮಗುವಾಗಿ ಹುಟ್ಟಿದ್ದ ಕಾರಣಕ್ಕೇ ತಂದೆತಾಯಿಯರ ನಡವಳಿಕೆ ಮತ್ತು ನೀಡುವ ಸಮಯದಲ್ಲಿ ಅನಿವಾರ್ಯ ಬದಲಾವಣೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಕುಟುಂಬದ ಪರಿಸ್ಥಿತಿ, ಮಕ್ಕಳ ಪಾಲಕರೊಂದಿಗಿನ ಹಾಗೂ ಒಡಹುಟ್ಟಿದವರೊಂದಿಗಿನ ಸಂಬಂಧವೂ ಗಾಢವಾದ ಪರಿಣಾಮ ಬೀರುತ್ತದೆ.

English summary

Know Your Personality According To Your Birth Order

For parents, every child is precious be it a first, middle, last or a single child. However, the personalities of a child can depend on the order of his/her birth. A first child is brought up in a way very different from a middle or last child.
X
Desktop Bottom Promotion