For Quick Alerts
ALLOW NOTIFICATIONS  
For Daily Alerts

ಛೇ! ಇಲ್ಲಿ ಕಾಮಗೊಂಬೆಗಳೇ ಮನೆಯ ಸದಸ್ಯರಾಗಿವೆಯೆಲ್ಲಾ

By Arshad
|

ಕಣ್ಣಿಗೆ ಕಾಣುವುದೇ ನಿಜವಾದ ಸೌಂದರ್ಯವಲ್ಲ, ಅದರ ಅಡಿ ಇರುವ ತಳಹದಿಯೇ ನಿಜವಾದ ಸೌಂದರ್ಯಕ್ಕೆ ಮೂಲ. ಉದಾಹರಣೆಗೆ ಮನೆ ಎಷ್ಟೇ ಸುಂದರವಾಗಿ ಕಂಡರೂ ಇದರ ತಳಹದಿ ಗಟ್ಟಿಯಾಗಿದ್ದರೆ ಮಾತ್ರ ಇದು ನೂರು ವರ್ಷ ಬಾಳಿಕೆ ಬರಬಲ್ಲುದು. ಅಂತೆಯೇ ಈ ಜಗತ್ತಿನಲ್ಲಿ ಮನುಷ್ಯರ ನಡವಳಿಕೆ ಹೊರಗಿನಿಂದ ಒಂದು ರೀತಿ ಕಂಡರೆ ಒಳಗಿನಿಂದ ಬೇರೆಯೇ ರೀತಿಯಾಗಿರುತ್ತದೆ. ಜಪಾನೀಯರು ಕೂಡ 'ಗೊಂಬೆ ಹಬ್ಬ' ಆಚರಿಸುತ್ತಾರಂತೆ!

ಇದೇ ಕಾರಣಕ್ಕೆ ಮೀರ್ ಸಾಧಿಕ್, ಶಕುನಿಯಂಥವರು ಇತಿಹಾಸದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಮನರಂಜನೆಗಾಗಿ ಚಿತ್ರ ವಿಚಿತ್ರ ಕ್ರಮಗಳನ್ನೂ ಅನುಸರಿಸಲಾಗುತ್ತಿದೆ. ಕೆಲವೊಮ್ಮೆ ಇದು ವಿಪರೀತಕ್ಕೂ ಹೋಗಿ ಅಪರಾಧಗಳಾಗುತ್ತವೆ. ಇವೆಲ್ಲವೂ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿಯೇ ನಡೆಯುವುದರಿಂದ ಹೊರಗಿನವರಿಗೆ ಇದರ ಅರಿವೇ ಇಲ್ಲದೇ ಹೋಗುತ್ತದೆ. ಆದರೆ ಇಂತಹವರ ಬೇಡಿಕೆಯನ್ನು ಗಮನಿಸಿ ಗುಟ್ಟಾಗಿಯೇ ಅಂತರ್ಜಾಲದಿಂದ ಕೆಲವು ವಸ್ತುಗಳನ್ನು ಪೂರೈಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಕಾಮಗೊಂಬೆಗಳು ಅಥವಾ ಕಾಮತೃಷೆಯನ್ನು ಕೃತಕವಾಗಿ ತಣಿಸುವ ವಸ್ತುಗಳು. ಆಡು ಮುಟ್ಟದ ಸೊಪ್ಪಿಲ್ಲ, ಚೀನೀಯರು ತಿನ್ನದ ಆಹಾರವಿಲ್ಲ!

ಒಂಟಿಯಾಗಿರುವವರಿಗೆ, ಸಂಬಂಧಗಳಲ್ಲಿ ಕೊರತೆ ಕಂಡುಕೊಂಡು ಹೊರಗೆ ಬಂದವರಿಗೆ, ಅಕ್ರಮ, ಅಸುರಕ್ಷಿತ ಸಂಬಂಧ ಬೆಳೆಸಲು ಒಪ್ಪದೇ ದೇಹದ ನೈಸರ್ಗಿಕ ಬೇಡಿಕೆಯನ್ನು ಪೂರೈಸಿಕೊಳ್ಳಲು ಇವು ಒಂದರ್ಥದಲ್ಲಿ ಒಳ್ಳೆಯವೇ ಹೌದಾದರೂ ಸಮಾಜ ಈ ವಿಷಯವನ್ನು ಒಪ್ಪದೇ ಹೋಗುತ್ತದೆ. ಈ ಬೇಡಿಕೆಯನ್ನು ಪೂರೈಸಲು ಭಾರತದಲ್ಲಿ ಇನ್ನೂ ಯಾವುದೇ ಕ್ರಮ ಪ್ರಾರಂಭವಾಗದೇ ಇದ್ದರೂ ನೆರೆಯ ಚೀನಾದಲ್ಲಿ ಮಾತ್ರ ಇದೊಂದು ದೊಡ್ಡ ಉದ್ಯಮವಾಗಿ ಬೆಳೆಯುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ. ಬನ್ನಿ, ಈ ಉದ್ಯಮವನ್ನು ಪ್ರಾರಂಭಿಸಿರುವ ಈ ತಂದೆ ಮಗನ ಬಗ್ಗೆ ಅರಿಯೋಣ....

ಯಾರಿವರು?

ಯಾರಿವರು?

58 ವರ್ಷದ ಲಿ ಚೆನ್ (ಹೆಸರುಗಳನ್ನು ಬದಲಾಯಿಸಲಾಗಿದೆ) ಮತ್ತು ಅವರ ಪುತ್ರ ಯಾಂಗ್ಯಾಂಗ್ ಎಂಬ ಇಬ್ಬರು ಚೀನಾದ ನೈಋತ್ಯ ಪಟ್ಟಣವಾದ ಗುಯಿಜೌ ನಿವಾಸಿಗಳಾಗಿದ್ದು ಈ ಉದ್ಯಮವನ್ನು ಪ್ರಾರಂಭಿಸಿದ ಮೊದಲಿಗರಾಗಿದ್ದಾರೆ.

ಇವರ ಕಥೆ ಈಗ ಜನಜನಿತವಾಗಿದೆ

ಇವರ ಕಥೆ ಈಗ ಜನಜನಿತವಾಗಿದೆ

ಯಾವಾಗ ಈ ಉದ್ಯಮದ ಬಗ್ಗೆ ಇವರ ಯಾರೋ ಗಿರಾಕಿಗಳು ಅಂತರ್ಜಾಲದಲ್ಲಿ ಮಾಹಿತಿ ಹರಿಯಬಿಟ್ಟರೋ, ಕೆಲವೇ ದಿನಗಳಲ್ಲಿ ಇವರಿಬ್ಬರೂ ಚೀನಾದ ಮನೆಮಾತಾಗಿ ಬಿಟ್ಟಿದ್ದಾರೆ. ಇವರು ಮಾರುವ ಒಂದು ಸೆಟ್ ಗೊಂಬೆಗಳಲ್ಲಿ ಒಟ್ಟು ಏಳು ಸಿಲಿಕಾನ್ ಬಳಸಿ ತಯಾರಿಸಿದ ಏಳು ಗೊಂಬೆಗಳಿದ್ದು ಸಧ್ಯಕ್ಕೆ ಎಲ್ಲರ ತಲೆಕೆಡಿಸಿವೆ.

ಇವರೇಕೆ ಈ ಉದ್ಯಮಕ್ಕೆ ಬಂದರು?

ಇವರೇಕೆ ಈ ಉದ್ಯಮಕ್ಕೆ ಬಂದರು?

ಈ ಪ್ರಶ್ನೆಯನ್ನು ಇವರಿಗೇ ಕೇಳಿದಾಗ ಲಿ ಚೆನ್ ರವರು ನೀಡಿದ ಉತ್ತರ ಹೀಗಿದೆ. 2010ರಲ್ಲಿ ಜೂಜಿನ ವ್ಯಸನದ ಕಾರಣ ನೀಡಿ ಅವರ ಪತ್ನಿ ಅವರಿಗೆ ವಿಚ್ಚೇದನ ನೀಡಿದ ಬಳಿಕ ಕಾಮತೃಷೆಯನ್ನು ತಣಿಸಲು ಎಲ್ಲಿಂದಲೋ ಒಂದು ಕಾಮಗೊಂಬೆಯನ್ನು ಖರೀದಿಸಿದ್ದರು. ಇದರ ಮಹಿಮೆಯನ್ನು ಕಂಡ ಬಳಿಕ ಇದನ್ನೇಕೆ ಉದ್ಯಮವನ್ನಾಗಿ ರೂಪಿಸಿಕೊಳ್ಳಬಾರದು ಎಂದು ಅವರಿಗೆ ಚಿಂತನೆ ಮೂಡಿತಂತೆ.

ಈ ಗೊಂಬೆಗಳು ಈಗ ಮನೆಯ ಸದಸ್ಯರು

ಈ ಗೊಂಬೆಗಳು ಈಗ ಮನೆಯ ಸದಸ್ಯರು

ವಾಸ್ತವವಾಗಿ ಏಳು ಗೊಂಬೆಗಳಿದ್ದರೂ ಎಲ್ಲವನ್ನೂ ಕಾಮತೃಷೆಗೆ ಬಳಸಿಕೊಳ್ಳಲಾಗುವುದಿಲ್ಲ. ಬದಲಿಗೆ ಈ ಗೊಂಬೆಗಳನ್ನು ಮನೆಯ ಸದಸ್ಯರಂತೆ ಪರಿಗಣಿಸಿ ಭಾವನಾತ್ಮಕ ಸಂಬಂಧ ಹೊಂದಲಾಗುತ್ತದೆ. ಅಷ್ಟೇ ಅಲ್ಲ, ಲಿ ಚೆನ್ ರವರು ಮಗನ ತದ್ರೂಪಿ ಬೊಂಬೆಯೊಂದನ್ನು ನಿರ್ಮಿಸಿ ಆತನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿ ಆತನ ಆತ್ಮಸಂಗಾತಿಯ ರೂಪದಲ್ಲಿ ನೋಡುವಂತೆ ತಿಳಿಸಿದ್ದಾರೆ.

ಈ ಗೊಂಬೆಗಳೇನೂ ಅಗ್ಗವಲ್ಲ

ಈ ಗೊಂಬೆಗಳೇನೂ ಅಗ್ಗವಲ್ಲ

ಚೀನಾದ ಉತ್ಪನ್ನಗಳೆಲ್ಲಾ ಅಗ್ಗವಲ್ಲ. ಅಂತೆಯೇ ಈ ಗೊಂಬೆಗಳು ಸಹಾ. ಇವುಗಳಿಗೆ ಬಳಸಲಾಗಿರುವ ಕಚ್ಚಾವಸ್ತುಗಳಿಗಿಂತಲೂ ಇವುಗಳನ್ನು ಅಲಂಕರಿಸಲು ಬೇಕಾದ ಬಟ್ಟೆ ಮತ್ತು ಇತರ ಅಲಂಕಾರಿಕ ವಸ್ತುಗಳೇ ತುಂಬಾ ದುಬಾರಿಯಾಗಿವೆ.

ಈಗ ಇವರು ಇದನ್ನೇ ಉದ್ಯಮವನ್ನಾಗಿ ಪ್ರಾರಂಭಿಸಲು ಯೋಜಿಸಿದ್ದಾರೆ

ಈಗ ಇವರು ಇದನ್ನೇ ಉದ್ಯಮವನ್ನಾಗಿ ಪ್ರಾರಂಭಿಸಲು ಯೋಜಿಸಿದ್ದಾರೆ

ಯಾವಾಗ ಇವರ ಗೊಂಬೆಗಳ ವಿಷಯ ಎಲ್ಲಾ ಕಡೆ ಹರಿಯಲು ಪ್ರಾರಂಭಿಸಿತೋ, ಆಗಲೇ ಇವರಿಗೆ ಈ ಪುಕ್ಕಟೆ ಪ್ರಚಾರವನ್ನು ಏಕೆ ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಬಾರದು ಎಂದೆನ್ನಿಸಿದೆ. ವಾಸ್ತವವಾಗಿ ಈ ಗೊಂಬೆಗಳನ್ನು ಮಾರುವುದಕ್ಕಿಂತ ಹೆಚ್ಚು ಲಾಭವನ್ನು ಇವುಗಳಿಗೆ ಬಳಸಲಾಗುವ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳ ಮಾರಾಟದಲ್ಲಿಯೇ ಇರುವುದನ್ನು ಕಂಡುಕೊಂಡ ಈ ಬುದ್ಧಿವಂತರು ಈ ವಸ್ತುಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸದ್ಯಕ್ಕಂತೂ ಇವರಿಬ್ಬರೂ ನೋಟು ಎಣಿಸುವುದರಲ್ಲಿ ಹೆಚ್ಚು ಮಗ್ನರಾಗಿದ್ದಾರೆ. ಈ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ ಭಾಗದಲ್ಲಿ ನಮಗೆ ಖಂಡಿತಾ ಬರೆದು ತಿಳಿಸಿ.

Image Source

English summary

Insane! Love-making Dolls Are Like A Family Here!

There are so many bizarre things that people do around the world. Some of the weird things are done for the sake of entertainment, while some to kill boredom. But who would have lovemaking dolls as their family members? From people eating bizarre foods to trying on making love at the most unexpected places, the list is long.
X
Desktop Bottom Promotion