For Quick Alerts
ALLOW NOTIFICATIONS  
For Daily Alerts

ಇಲ್ಲಿ ಗಂಡನ ತಮ್ಮನೊಂದಿಗೂ ಹಾಸಿಗೆ ಹಂಚಿಕೊಳ್ಳಬೇಕಂತೆ! ಎಲ್ಲಿದೆ ನ್ಯಾಯ?

ರಾಜಸ್ಥಾನದ ಮಂಚೇರಾ ಎನ್ನುವ ಒಂದು ಪುಟ್ಟ ಹಳ್ಳಿ. ಇಲ್ಲಿ ವಿಲಕ್ಷಣ ಪದ್ಧತಿಯಾದ "ದೈಹಿಕವಾಗಿ ಮಹಿಳೆಯನ್ನು ಹಂಚಿಕೊಳ್ಳುವ' ವ್ಯವಸ್ಥೆ ಇದೆ. ಈ ಪದ್ಧತಿಯ ವಿರುದ್ಧ ಇನ್ನೂ ಯಾರು ಚಕಾರ ಎತ್ತದೆ ಸುಮ್ಮನಿರುವುದು ಒಂದು ಆಶ್ಚರ್ಯದ ವಿಚಾರ....

By Divya
|

ಮಹಿಳೆಯರಿಗೆ ಸ್ವಾತಂತ್ರ್ಯವಿದೆ, ಶಿಕ್ಷಣ ಕೊಟ್ಟಿದ್ದೇವೆ, ಸಮಾನತೆ ನೀಡುತ್ತಿದ್ದೇವೆ, ಮೀಸಲಾತಿಯಿದೆ... ಎಂದು ಎಷ್ಟೇ ಸಮರ್ಥನೆ ಮಾಡಿಕೊಂಡರೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮಾತ್ರ ನಿಲ್ಲುತ್ತಿಲ್ಲ. 21ನೇ ಶತಮಾನಕ್ಕೆ ಕಾಲಿಟ್ಟಿದ್ದೇವೆ ಎನ್ನುವ ಹಿರಿಮೆ ನಮ್ಮದ್ದಾಗಿರಬಹುದು... ಆದರೆ ಅದೆಷ್ಟೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಇಂದಿಗೂ ಪ್ರಾಣಿಗಳಿಗಿಂತಲೂ ಅಗ್ಗವಾಗಿ ಕಾಣುತ್ತಿದ್ದಾರೆ. ಅವರ ಮೇಲೆ ಕಾನೂನು ಬಾಹಿರ ಕೃತ್ಯಗಳು ಅಮಾನವೀಯವಾಗಿ ನಡೆಯುತ್ತಲೇ ಇವೆ... ಮುಗ್ಧನಂತೆ ವರ್ತಿಸಿ ಕೊನೆಗೆ ಅತ್ಯಾಚಾರ ಮಾಡಿದ ಪಾಪಿ ಬಾಲಕ!

ಇಂತಹ ಕೃತ್ಯಗಳಿಗೆ ಸಾಕ್ಷಿಯಾಗಿ ಕನ್ನಡಿ ಹಿಡಿಯುವ ಹಳ್ಳಿ ಎಂದರೆ ರಾಜಸ್ಥಾನದ ಮಂಚೇರಾ ಎನ್ನುವ ಒಂದು ಪುಟ್ಟ ಹಳ್ಳಿ. ಇಲ್ಲಿ ವಿಲಕ್ಷಣ ಪದ್ಧತಿಯಾದ "ದೈಹಿಕವಾಗಿ ಮಹಿಳೆಯನ್ನು ಹಂಚಿಕೊಳ್ಳುವ' ವ್ಯವಸ್ಥೆ ಇದೆ. ಈ ಪದ್ಧತಿಯ ವಿರುದ್ಧ ಇನ್ನೂ ಯಾರು ಚಕಾರ ಎತ್ತದೆ ಸುಮ್ಮನಿರುವುದು ಒಂದು ಆಶ್ಚರ್ಯದ ವಿಚಾರ. ಆ ಮಹಿಳೆಯ ಮುಗ್ಧ ಮನಸ್ಸಿನ ಮೇಲೆ ಹೇರುವ ದೌರ್ಜನ್ಯ ನಿಜಕ್ಕೂ ಅನಾಚಾರದ ಕೃತ್ಯ...

ವಿಲಕ್ಷಣ ಪದ್ಧತಿಗೆ ಕಾರಣ

ವಿಲಕ್ಷಣ ಪದ್ಧತಿಗೆ ಕಾರಣ

ಮಹಿಳೆಯನ್ನು ಹಂಚಿಕೊಳ್ಳುವ ಈ ವಿಲಕ್ಷಣ ಪದ್ಧತಿಗೆ ಹಳ್ಳಿಯವರು ತಮ್ಮದೇ ಆದ ಕಾರಣ ನೀಡುತ್ತಾರೆ. ಅವರ ಜನಾಂಗದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಿರುವುದು. ಗಂಡಸರಿಗೆ ಹೋಲಿಸಿದರೆ ಮಹಿಳೆಯರ ಅನುಪಾತದಲ್ಲಿ ಬಹಳ ದೊಡ್ಡ ಅಂತರ ಇರುವುದೇ ಕಾರಣವಂತೆ.

ಆಸ್ತಿಯ ಸಮಸ್ಯೆ

ಆಸ್ತಿಯ ಸಮಸ್ಯೆ

ಕುಟುಂಬಕ್ಕೆ ಸೇರಿದ ಆಸ್ತಿಯ ಪ್ರಮಾಣ ಕಡಿಮೆ ಇದ್ದು, ಕಿರಿದಾದ ಜಮೀನು ಇರುವವರು ಈ ಪದ್ಧತಿಯನ್ನು ಅನುಸರಿಸುದ್ದಿದ್ದಾರೆ. ಅಂತಹ ಕುಟುಂಬದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಹೋದರರಿದ್ದರೆ ವಿವಾಹದ ನಂತರ ಜಮೀನಿನ ಪಾಲು ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಇರುವ ಜಮೀನು ಇನ್ನಷ್ಟು ಕಿರಿದಾಗುತ್ತದೆ ಎನ್ನುವ ಚಿಂತೆ.

ತ್ಯಾಗದ ಹೆಸರಿನಲ್ಲಿ ಮಹಿಳೆಯ ಹಂಚಿಕೆ!

ತ್ಯಾಗದ ಹೆಸರಿನಲ್ಲಿ ಮಹಿಳೆಯ ಹಂಚಿಕೆ!

ಇಂತಹ ಕಿರಿದಾದ ಆಸ್ತಿಯನ್ನು ಹೊಂದಿರುವ ಸಂಸಾರದಲ್ಲಿ ಅಣ್ಣ ಮದುವೆಯಾದರೆ ತಮ್ಮ ತನ್ನ ವೈವಾಹಿಕ ಜೀವನವನ್ನು ತ್ಯಾಗ ಮಾಡುತ್ತಾನೆ. ಜೊತೆಗೆ ಅಣ್ಣನನ್ನು ವಿವಾಹವಾದ ಮಹಿಳೆಯನ್ನೇ ತಮ್ಮನು ಹಂಚಿಕೊಳ್ಳುತ್ತಾನೆ.

ವರದಕ್ಷಿಣೆಯ ಸ್ವಾರ್ಥ

ವರದಕ್ಷಿಣೆಯ ಸ್ವಾರ್ಥ

ಈ ಚಿಕ್ಕ ಕುಟುಂಬದವರು ಅನುಕೂಲಸ್ಥ ಕುಟುಂಬದ ಮಹಿಳೆಯನ್ನೇ ವಿವಾಹವಾಗುತ್ತಾರೆ. ಅವರು ತರುವ ವರದಕ್ಷಿಣೆ ಹಾಗೂ ಆಸ್ತಿಯನ್ನು ಪಡೆದು ತಮ್ಮ ಸಂಸಾರದ ಆಸ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುವ ದುರುದ್ದೇಶವೇ ಇದಕ್ಕೆ ಕಾರಣ.

ಮಹಿಳೆಗೆ ಮಾನಸಿಕ ಹಿಂಸೆ

ಮಹಿಳೆಗೆ ಮಾನಸಿಕ ಹಿಂಸೆ

ಇಂತಹ ಕುಟುಂಬಕ್ಕೆ ವಿವಾಹವಾಗುವ ಮಹಿಳೆ ತನ್ನ ಭಾವನೆಯನ್ನು ಕೇವಲ ಪತಿಗಷ್ಟೇ ಸೀಮಿತ ಮಾಡಿಕೊಳ್ಳುವಂತಿಲ್ಲ. ಬದಲಿಗೆ ಬಲವಂತವಾಗಿಯಾದರೂ ಪತಿಯ ಸಹೋದರನೊಂದಿಗೆ ಹಂಚಿಕೊಳ್ಳಬೇಕು. ವಿವಾಹವಾಗಿದ್ದು ಏಕ ಪುರುಷನನ್ನಾದರೂ ಬಹು ಪತಿತ್ವದ ರೀತಿಯಲ್ಲಿ ಬದುಕಬೇಕು.

ಮಹಿಳೆಯ ಭಾವನೆಗೆ ಬೆಲೆಯಿಲ್ಲ

ಮಹಿಳೆಯ ಭಾವನೆಗೆ ಬೆಲೆಯಿಲ್ಲ

ಇಲ್ಲಿ ಮಹಿಳೆರಯರ ಪರವಾಗಿ ನಿಲ್ಲುವ ವ್ಯಕ್ತಿಗಳು ಯಾರಿಲ್ಲ. ಈ ಕ್ರೂರ ಪದ್ಧತಿಯ ವಿರುದ್ಧ ಹೋರಾಡಲು ಆಗದೆ ಮೂಕವಾಗಿ ಸ್ವೀಕರಿಸಬೇಕು. ಮಹಿಳೆಯ ಅನುಪಾತ ಹೆಚ್ಚಾದರೂ, ಕಡಿಮೆಯಾದರೂ ಅನುಭವಿಸುವ ಕಷ್ಟ ಆಕೆಗೇ ಮೀಸಲಾಗುವುದು ನಿಜಕ್ಕೂ ದುಃಖಕರ ಸಂಗತಿ.

English summary

in this village wives are shared within families to save land

This unique custom is practiced due to the huge gap in the male-female sex ratio and owing to the small landholdings each household possesses. So, if there are two brothers in the family with very small landholding, then the family does not marry one of the brothers.
X
Desktop Bottom Promotion