For Quick Alerts
ALLOW NOTIFICATIONS  
For Daily Alerts

ಆಕೆ ಹಲ್ಲಿನ ಸಮಸ್ಯೆಯೆಂದು ದಂತ ವೈದ್ಯರ ಬಳಿ ಹೋದಳು, ಆದರೆ....

ಇಲ್ಲೊಬ್ಬಳು ಯುವತಿ ಹಲ್ಲಿನ ಸಮಸ್ಯೆಗೆಂದು ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋದ ಬಳಿಕ ಆಕೆಯ ಮುಖದ ಸೌಂದರ್ಯವೇ ಕೆಟ್ಟು ಹೋಯಿತು! ಏನಿದು ವಿಚಿತ್ರ ಘಟನೆ ಮುಂದೆ ಓದಿ...

By Manu
|

ವೈದ್ಯರನ್ನು ನಂಬಿಕೊಂಡು ನಾವು ಚಿಕಿತ್ಸೆಗೆ ತೆರಳುತ್ತೇವೆ. ಆದರೆ ಕೆಲವು ಸಲ ವೈದ್ಯರಿಂದಲೇ ತಪ್ಪುಗಳು ನಡೆಯುವ ಕಾರಣದಿಂದ ರೋಗಿಗಳ ಮುಂದಿನ ಜೀವನ ನರಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಸಣ್ಣ ತಪ್ಪಿನಿಂದಾಗಿ ರೋಗಿಯು ಪಡಬಾರದ ಪಾಡನ್ನು ಪಡಬೇಕಾಗುತ್ತದೆ. ರೋಗಿಯು ಈ ವೇದನೆಯನ್ನು ಅನುಭವಿಸುವಾಗ ವೈದ್ಯರನ್ನು ಶಪಿಸಬಹುದು. ಇದಕ್ಕಿಂತ ಹೆಚ್ಚು ಏನನ್ನೂ ಮಾಡಲು ಆತನಿಗೆ ಸಾಧ್ಯವಾಗದು. ಮನುಷ್ಯನ ಶರೀರದ ಬಗ್ಗೆ 9 ಅಚ್ಚರಿಯ ವಿಷಯಗಳು

ಇಲ್ಲೊಬ್ಬಳು ಯುವತಿ ಹಲ್ಲಿನ ಸಮಸ್ಯೆಗೆಂದು ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋದ ಬಳಿಕ ಆಕೆಯ ಮುಖದ ಸೌಂದರ್ಯವೇ ಕೆಟ್ಟು ಹೋಯಿತು. ಈಗ ಆಕೆಗೆ ಚರ್ಮವನ್ನು ತಿನ್ನುವಂತಹ ರೋಗವು ಕಾಡುತ್ತಿದೆ. ಇಂತಹ ವೇದನೆಯ ಕಥೆಗಳು ಹಲವಾರು ನಮ್ಮ ಮುಂದೆ ಇದೆ. ಬೋಲ್ಡ್ ಸ್ಕೈ ಈ ಲೇಖನದಲ್ಲಿ 18ರ ಹರೆಯದ ಯುವತಿ ಸೂಥ್ ರೆಥ್ ಬಗ್ಗೆ ತಿಳಿಸಿಕೊಡಲಿದೆ. ಹಲ್ಲನ್ನು ಕೀಳಲು ಹೋದ ಆಕೆ ತನ್ನ ಚಿಕಿತ್ಸೆ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಆದರೆ ಮುಂದೆ ಆಕೆ ದೊಡ್ಡ ಸಮಸ್ಯೆಗೆ ಗುರಿಯಾದಳು. ಇದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ...

ಹಲ್ಲು ಕೀಳಲು ಹಲ್ಲಿನ ವೈದ್ಯರನ್ನು ಭೇಟಿಯಾದಳು

ಹಲ್ಲು ಕೀಳಲು ಹಲ್ಲಿನ ವೈದ್ಯರನ್ನು ಭೇಟಿಯಾದಳು

18ರ ಹರೆಯದ ಸೂತ್ ರೆತ್ ಹಲ್ಲಿನ ಸಮಸ್ಯೆಯೆಂದು ಹಲ್ಲನ್ನು ಕೀಳಲು ಹಲ್ಲಿನ ವೈದ್ಯರಲ್ಲಿಗೆ ಹೋದಳು. ಇದೊಂದು ಸಾಮಾನ್ಯ ಚಿಕಿತ್ಸೆಯೆಂದು ಆಕೆ ಭಾವಿಸಿದ್ದಳು.

ಆಕೆಗೆ ಸೈನಸ್ ಸೋಂಕಿತ್ತು

ಆಕೆಗೆ ಸೈನಸ್ ಸೋಂಕಿತ್ತು

ಕೆಲವು ವಾರಗಳ ಮೊದಲು ಆಕೆಗೆ ಸೈನಸ್ ಸೋಂಕು ಭಾದಿಸಿತ್ತು. ಇದನ್ನು ಹೊರತುಪಡಿಸಿ ಆಕೆ ತುಂಬಾ ಆರೋಗ್ಯವಾಗಿದ್ದಳು. ಆದರೆ ಆಕೆ ತನ್ನ ಹಲ್ಲುಗಳನ್ನು ಕೀಳಿಸಿದ ಬಳಿಕ ಆಕೆಯ ಮುಖವೇ ಕೆಟ್ಟು ಹೋಯಿತು.

ಚರ್ಮ ತಿನ್ನುವ ಕಾಯಿಲೆ!

ಚರ್ಮ ತಿನ್ನುವ ಕಾಯಿಲೆ!

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಎನ್ನುವ ಕಾಯಿಲೆಯಿಂದ ಆಕೆ ಬಳಲುತ್ತಾ ಇದ್ದಾಳೆ. ಇದನ್ನು ಸಾಮಾನ್ಯವಾಗಿ ಚರ್ಮ ಕಿತ್ತು ತಿನ್ನುವ ಕಾಯಿಲೆಯೆಂದು ಕರೆಯಲಾಗುತ್ತದೆ. ಹಲ್ಲುಗಳನ್ನು ಕಿತ್ತ ಬಳಿಕ ಆಕೆಯ ಗಾಯಗಳು ಹಾಗೆ ಹಸಿಯಾಗಿದ್ದವು. ಈ ವೇಳೆ ಸೈನಸ್ ನ ಬ್ಯಾಕ್ಟೀರಿಯಾಗಳು ಅದರೊಳಗೆ ಪ್ರವೇಶಿಸಿ ರಕ್ತನಾಳಗಳನ್ನು ಸೇರಿಕೊಂಡವು.

ಚರ್ಮದ ನಯವಾದ ಭಾಗವನ್ನು ಕೊಂದವು

ಚರ್ಮದ ನಯವಾದ ಭಾಗವನ್ನು ಕೊಂದವು

ಇಂತಹ ಕಾಯಿಲೆ ಕಾನಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ಇದನ್ನು ಆ್ಯಂಟಿಬಯೋಟಿಕ್ ನೀಡಿ ಚಿಕಿತ್ಸೆ ಮಾಡಬಹುದು ಮತ್ತು ಸೋಂಕು ಹರಡದಂತೆ ತಡೆಯಲು ಶಸ್ತ್ರಚಿಕಿತ್ಸೆ ನಡೆಸಬಹುದು.

ಮುಖದ ಭಾಗವೇ ಮಾಯ

ಮುಖದ ಭಾಗವೇ ಮಾಯ

ಜರ್ಮನಿಯ ವೈದ್ಯರ ತಂಡವೊಂದು ಆಕೆಯ ಮುಖದ ಮರುನಿರ್ಮಾಣಕ್ಕೆ ಶಸ್ತ್ರಚಿಕಿತ್ಸೆ ನಡೆಸಿದೆ. ಆಕೆಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಚಿಕಿತ್ಸೆ ತುಂಬಾ ನೋವಿನಿಂದ ಕೂಡಿರಲಿದೆ ಎಂದು ವೈದ್ಯರು ಹೇಳಿದ್ದಾರೆ.

All Image Sources

English summary

Her Face Ruined After A Dentist’s Visit!

Many of us may already be familiar with the disorder known as autism, right? Well, if we have knowledge about its symptoms, then we can only imagine how hard it must be for the parents or caretakers of children affected with this disorder. Autism can be described as a developmental disorder that seriously hampers a child's ability to learn, interact and communicate.
X
Desktop Bottom Promotion