For Quick Alerts
ALLOW NOTIFICATIONS  
For Daily Alerts

ಜಪಾನ್‌ನ 'ಸ್ತನ ದೇವಾಲಯ' ಎಲ್ಲರನ್ನೂ ಅಚ್ಚರಿಯ ಕೂಪಕ್ಕೆ ತಳ್ಳುತ್ತಿದೆ!!

ಜಪಾನಿನಲ್ಲಿರುವ ಒಂದು ಮಂದಿರ (ದೇವಾಲಯವೆಂದೂ ಕರೆಯಬಹುದು) ಸ್ತನಗಳಿಗೆ ಮೀಸಲಾಗಿದ್ದು ಇದಕ್ಕೊಂದು ಕಾರಣವೂ ಇದೆ. ಇದೇನು ಕಾರಣ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ...

By Deepu
|

ಜಪಾನ್ ಎಂದಾಕ್ಷಣ ನಮಗೆಲ್ಲಾ ನೆನಪಿಗೆ ಬರುವುದು ಎಲೆಕ್ಟ್ರಾನಿಕ್ಸ್ ಮತ್ತು ಕಾರುಗಳು. ಆದರೆ ಜಪಾನ್ ಬಗ್ಗೆ ಇನ್ನೂ ಹಲವಾರು ವಿಚಿತ್ರವಾದ ಮಾಹಿತಿಗಳಿವೆ. ಇವರ ಆಹಾರಾಭ್ಯಾಸ, ಸರಳತೆ, ಶಿಸ್ತು, ನೈಸರ್ಗಿಕ ವಿಪತ್ತುಗಳು ಮತ್ತು ಇವುಗಳನ್ನು ಎದುರಿಸುವ ಮನೋದಾರ್ಢ್ಯತೆ, ಅತ್ಯಂತ ನಾಗರಿಕವಾಗಿದ್ದೂ ಅತಿ ಪುರಾತನ ಸಂಸ್ಕೃತಿಯನ್ನು ಇನ್ನೂ ಉಳಿಸಿಕೊಂಡಿವುದು, ದೊಡ್ಡ ಸಂಸ್ಥೆಯ ಬಾಸ್ ಆದರೂ ಸೈಕಲ್ಲಿನಲ್ಲಿ ಓಡಾಡುವುದು ಇತ್ಯಾದಿಗಳು ಜಪಾನ್ ಬಗ್ಗೆ ಕುತೂಹಲವನ್ನು ಹೆಚ್ಚಿಸುತ್ತವೆ. ಭೂಕಂಪದ ಶಾಪ: ಜಪಾನ್ ದೇಶವೇ ಟಾರ್ಗೆಟ್! ಯಾಕೆ ಹೀಗೆ?

ಆದರೆ ಜಪಾನಿನಲ್ಲಿರುವ ಒಂದು ಮಂದಿರ (ದೇವಾಲಯವೆಂದೂ ಕರೆಯಬಹುದು) ಸ್ತನಗಳಿಗೆ ಮೀಸಲಾಗಿದ್ದು ಇದಕ್ಕೊಂದು ಕಾರಣವೂ ಇದೆ. ಇದೇನು ಕಾರಣ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಜಪಾನೀಯರ ಶಿಸ್ತು, ಪ್ರಾಮಾಣಿಕತೆಗೆ ತಲೆಬಾಗಲೇಬೇಕು!

ಈ ಮಂದಿರದಲ್ಲಿ ನಿಜಕ್ಕೂ ಏನಾಗುತ್ತಿದೆ? ಸ್ತನಗಳಿಗೇ ಪೂಜೆ ನಡೆಯುತ್ತದೆಯೇ ಅಥವಾ ಬೇರೇನಾದರೂ ಇದೆಯೇ ಎಂಬ ಕುತೂಹಲವನ್ನು ತಣಿಸಲು ಮುಂದೆ ಓದಿ....

ಈ ಮಂದಿರ ಎಲ್ಲಿದೆ?

ಈ ಮಂದಿರ ಎಲ್ಲಿದೆ?

ಈ ಮಂದಿರ ಜಪಾನಿನ ಒಕಯಾಮಾ ಎಂಬ ಪ್ರಾಂತದಲ್ಲಿರುವ ಸೋಜಾ ಸಿಟಿ ಎಂಬ ನಗರದಲ್ಲಿದೆ. ಇದೊಂದು ವಿಶಿಷ್ಟ ಮಂದಿರವಾಗಿದ್ದು ಇದಕ್ಕೆ ಜಪಾನಿ ಭಾಷೆಯಲ್ಲಿ ಮಾಮಾ ಕಾನ್ನೋನ್ ಅಥವಾ ರ್‍ಯುವೋನ್ ಜಿ ಎಂದು ಕರೆಯುತ್ತಾರೆ. ಈ ಮಂದಿರ ಸ್ತನದ ದೇವತೆಯಾದ ಚಿಚಿಗಾಮಿಸಾಮಾಳಿಗೆ ಮುಡಿಪಾಗಿದೆ.

ಇದನ್ನು ಯಾವಾಗ ಸ್ಥಾಪಿಸಲಾಯಿತು?

ಇದನ್ನು ಯಾವಾಗ ಸ್ಥಾಪಿಸಲಾಯಿತು?

ಈ ವಿಶಿಷ್ಟ ಮಂದಿರವನ್ನು 1678ರಲ್ಲಿ ಸ್ಥಾಪಿಸಲಾಯಿತು. ಆದರೆ ಈ ಸ್ಥಳ ಇಂದು ಮಂದಿರಕ್ಕಿಂತಲೂ ಹೆಚ್ಚಾಗಿ ಇದರ ಸುತ್ತಲೂ ನೆಟ್ಟಿರುವ dead weeping cherry ಎಂಬ ಮರಗಳಿಗಾಗಿ ಪ್ರಸಿದ್ಧವಾಗಿದೆ.

ಈ ಮಂದಿರದ ಗೋಡೆಗಳ ವೈಶಿಷ್ಟ್ಯವೇನು?

ಈ ಮಂದಿರದ ಗೋಡೆಗಳ ವೈಶಿಷ್ಟ್ಯವೇನು?

ಈ ಮಂದಿರಕ್ಕೆ ಬರುವ ಪ್ರವಾಸಿಗರಿಗೆ ಗರ್ಭಗುಡಿಗಿಂತಲೂ ಹೆಚ್ಚಾಗಿ ಗೋಡೆಗಳೇ ಆಕರ್ಷಣೀಯವಾಗಿವೆ. ಏಕೆಂದರೆ votive tablets ಅಥವಾ ಸಾಂಕೇತಿಕ ಸ್ತನಗಳಂತಿರುವ ಫಲಕಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಇಮಾ (ema) ಎಂದು ಕರೆಯುತ್ತಾರೆ. ಈ ಇಮಾಗಳು ಮಹಿಳೆಯರ ಸ್ತನಗಳ ಪ್ರತೀಕವಾಗಿವೆ.

ಇಮಾ ಇಲ್ಲಿ, ಇಮಾ ಎಲ್ಲೆಲ್ಲೂ...

ಇಮಾ ಇಲ್ಲಿ, ಇಮಾ ಎಲ್ಲೆಲ್ಲೂ...

ದೇವಾಲಯದ ಒಳಭಾಗದಲ್ಲಿ ಎಲ್ಲಿಲ್ಲಿಯೂ ನೂರಾರು ಸಾವಿರಾರು ಇಮಾಗಳನ್ನು ಅಳವಡಿಸಿದ್ದು ಇವು ವಿವಿಧ ರೂಪಗಳಲ್ಲಿವೆ. ಇವುಗಳ ಕೆಳಗೆ ಚಿಕ್ಕ ಮರದ ಹಲಗೆ ಇದ್ದು ಇದರ ಮೇಲೆ ಭಕ್ತರು ತಮ್ಮ ಪ್ರಾರ್ಥನೆಗಳನ್ನು ಮತ್ತು ಅಭೀಷ್ಟೆಗಳನ್ನು ಬರೆದು ದೇವತೆಯಲ್ಲಿ ಇದನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ.

ಈ ಪರಿಯ ಪ್ರಾರ್ಥನೆಯೇಕೆ?

ಈ ಪರಿಯ ಪ್ರಾರ್ಥನೆಯೇಕೆ?

ಸ್ತನದೇವತೆಯನ್ನು ಪ್ರಾರ್ಥಿಸುವ ಮೂಲಕ ಮಹಿಳೆಯರು ಸುಖಪ್ರಸವಗೊಳ್ಳಲು ಸಾಧ್ಯವಾಗುತ್ತದೆ ಹಾಗೂ ತಾಯಿಹಾಲು ಉತ್ತಮ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಅಲ್ಲದೇ ಈ ದೇವತೆಯನ್ನು ಪ್ರಾರ್ಥಿಸಿದರೆ ಸ್ತನ ಕ್ಯಾನ್ಸರ್ ಸಹಾ ಗುಣವಾಗುತ್ತದೆ ಎಂದು ನಂಬಲಾಗಿದೆ.

ಮಹಿಳೆಯರು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಇನ್ನೂ ಹಲವಾರು ಕಾರಣಗಳಿವೆ

ಮಹಿಳೆಯರು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಇನ್ನೂ ಹಲವಾರು ಕಾರಣಗಳಿವೆ

ಕೇವಲ ಸುಖಪ್ರಸವ ಮತ್ತು ತಾಯಿಹಾಲು ಹೆಚ್ಚಲು ಮಾತ್ರವಲ್ಲ, ಇನ್ನೂ ಕೆಲವಾರು ಬೇಡಿಕೆಗಳನ್ನು ಮಹಿಳೆಯರು ಸ್ತನದೇವತೆಗೆ ಸಲ್ಲಿಸುತ್ತಾರೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಸ್ತನಗಳ ಗಾತ್ರ ಹೆಚ್ಚಿಸುವುದು. ಇನ್ನುಳಿದಂತೆ ಸ್ತನತೊಟ್ಟು ಗುಲಾಬಿ ಬಣ್ಣಕ್ಕೆ ಬರಬೇಕು, ಜೋತುಬಿದ್ದವು ಸುಂದರವಾಗಬೇಕು ಎಂದೆಲ್ಲಾ ಇವರ ಬಯಕೆಗಳಾಗಿವೆ.

All Image source

English summary

Have You Heard About The Breast Temple?

A breasts temple in Japan is famous for a specific reason. Here, we are about to enlighten you about the reason of having this boobs temple. Check out as to what happens here and what does this place signify, as it is quite bizarre to have a temple like this!
X
Desktop Bottom Promotion