ನಿಮ್ಮ ಹೆಸರು “S” ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?

ಕೆಲವು ಅಕ್ಷರಗಳು ಹೆಚ್ಚಿನ ಮಹತ್ವವುಳ್ಳದ್ದಾಗಿವೆ. ಅವೆಂದರೆ "A, J, O ಮತ್ತು S". ಅದರಲ್ಲೂ “S” ಅಕ್ಷರ ಅತಿ ಹೆಚ್ಚಿನ ಮಹತ್ವವನ್ನು ಪಡೆದಿದೆ. ಒಂದು ವೇಳೆ ನಿಮ್ಮ ಹೆಸರೂ “S” ಅಕ್ಷರದಿಂದ ಪ್ರಾರಂಭವಾಗುತ್ತಿದ್ದರೆ ಈ ಲೇಖನ ಓದಿ...

By: manu
Subscribe to Boldsky

ವ್ಯಕ್ತಿಯ ಜೀವನದಲ್ಲಿ ಆತನ ಹೆಸರು ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲಿಯೂ ಪ್ರಾರಂಭದ ಅಕ್ಷರಕ್ಕೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಹೆಸರು ಕರೆಯಲು ಈ ಅಕ್ಷರವನ್ನೇ ಮೊದಲಾಗಿ ಉಚ್ಛರಿಸಲಾಗುತ್ತದೆ. ಕೆಲವು ಅಕ್ಷರಗಳು ಹೆಚ್ಚಿನ ಮಹತ್ವವುಳ್ಳದ್ದಾಗಿವೆ. ಅವೆಂದರೆ "A, J, O ಮತ್ತು S". ಅದರಲ್ಲೂ "S" ಅಕ್ಷರ ಅತಿ ಹೆಚ್ಚಿನ ಮಹತ್ವವನ್ನು ಪಡೆದಿದೆ. ಒಂದು ವೇಳೆ ನಿಮ್ಮ ಹೆಸರೂ "S" ಅಕ್ಷರದಿಂದ ಪ್ರಾರಂಭವಾಗುತ್ತಿದ್ದರೆ ಇಂದಿನ ಲೇಖನ ನಿಮಗಾಗಿ ಮೀಸಲಾಗಿದೆ.ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ?

ಸಂಖ್ಯಾಭವಿಷ್ಯದ ಪ್ರಕಾರ "S" ಅಕ್ಷರ ಅಂಕೆ 1 ಕ್ಕೆ ಸಮನಾಗಿದ್ದು ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು ಜನ್ಮತಃ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ ಹಾಗೂ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಸಾಧಿಸುತ್ತಾರೆ. ಇವರ ಬಗ್ಗೆ ಕುಹೂಲಹಭರಿತವಾದ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ನಿಮ್ಮ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಲಿದೆ....

ಇವರು ನಿಷ್ಠಾವಂತರಾಗಿರುತ್ತಾರೆ

ಇವರು ನಿಷ್ಠಾವಂತರಾಗಿರುತ್ತಾರೆ

"S" ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ಅತಿ ನಿಷ್ಠಾವಂತರೆಂದು ಸಂಖ್ಯಾಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಇವರು ಹೆಚ್ಚು ರಸಿಕರಲ್ಲದೇ ಹೋದರೂ ಮಾತು ಕಡಿಮೆ ಕೆಲಸ ಹೆಚ್ಚು ಎಂಬ ತತ್ವವನ್ನು ಅನುಸರಿಸುತ್ತಾರೆ. ಇವರು ತಮ್ಮ ಪ್ರೀತಿಯನ್ನು ಬಾಯಿಯಲ್ಲಿ ಹೇಳುವ ಬದಲು ತಮ್ಮ ಕಾರ್ಯಗಳು ಹಾಗೂ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ವ್ಯಕ್ತಪಡಿಸುತ್ತಾರೆ.

ಇವರು ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿದ್ದಾರೆ

ಇವರು ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿದ್ದಾರೆ

ಇವರ ಹೆಸರಿನ ಅಕ್ಷರ ಪ್ರಥಮ ಸ್ಥಾನದಲ್ಲಿರುವ ಪ್ರಕಾರ ಇವರ ವ್ಯಕ್ತಿತ್ವ ಎಲ್ಲರೂ ಇಷ್ಟಪಡುವಂತಿರುತ್ತದೆ. ಇವರಲ್ಲಿ ಪ್ರೇಮ, ಸಹಾನುಭೂತಿ, ತಮ್ಮತನದ ಭಾವನೆ ಮತ್ತ್ತುಆತ್ಮೀಯತೆ ತುಂಬಿರುತ್ತದೆ. ಯಾವುದೇ ವ್ಯಕ್ತಿ ತೊಂದರೆಯಲ್ಲಿರುವುದು ಕಂಡುಬಂದರೆ ಇವರು ಸಹಾಯ ನೀಡುವಲ್ಲಿ ಧಾವಿಸುವವರಲ್ಲಿ ಮುಂದಾಗಿರುತ್ತಾರೆ.

ಇವರು ನಂಬಿಕಸ್ಥರಾಗಿರುತ್ತಾರೆ

ಇವರು ನಂಬಿಕಸ್ಥರಾಗಿರುತ್ತಾರೆ

ಪ್ರಾಮಾಣಿಕತೆ ಇವರ ರಕ್ತದಲ್ಲಿದ್ದು ಇವರನ್ನು ನಂಬಬಹುದು. ಆದರೆ ಸಿಟ್ಟಿನ ಅಥವಾ ರೋಷವುಕ್ಕಿಸುವ ಸಂದರ್ಭದಲ್ಲಿ ಮಾತ್ರ ಇವರು ಹಿಂದುಮುಂದು ನೋಡದೆ ನುಗ್ಗುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಈ ಕಾರಣದಿಂದಲೇ ಕೆಲವೊಮ್ಮೆ ಇವರನ್ನು ಅರ್ಥಮಾಡಿಕೊಳ್ಳುವುದು ಇತರರಿಗೆ ದೊಡ್ಡ ಸವಾಲಾಗುತ್ತದೆ.

ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಸಮರ್ಥರಾಗಿರುತ್ತಾರೆ

ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಸಮರ್ಥರಾಗಿರುತ್ತಾರೆ

ಸಾಮಾನ್ಯವಾಗಿ ಇವರು ತಮ್ಮ ಆಂತರಿಕ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಇದೇ ಕಾರಣಕ್ಕೆ ಇವರನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಪರಿಣಾಮವಾಗಿ ಇತರರು ಇವರಲ್ಲಿರುವ ಅರ್ಹತೆಯನ್ನು ಗಮನಿಸಲು ವಿಫಲರಾಗಿ ಇವರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಇತರರಿಗೆ ನೀಡಿದಾಗ ಇವರು ಸ್ವಾಭಾವಿಕವಾಗಿಯೇ ಖಿನ್ನತೆಗೆ ಒಳಗಾಗುತ್ತಾರೆ.

ಇವರು ಅತ್ಯಂತ ಮನಮೋಹಕ ವ್ಯಕ್ತಿತ್ವ ಹೊಂದಿರುತ್ತಾರೆ

ಇವರು ಅತ್ಯಂತ ಮನಮೋಹಕ ವ್ಯಕ್ತಿತ್ವ ಹೊಂದಿರುತ್ತಾರೆ

ಇವರು ಬಾಹ್ಯ ಸೌಂದರ್ಯವನ್ನು ಹೊಂದಿದ್ದರೂ ಇದಕ್ಕಿಂತಲೂ ಇವರ ಆಂತರಿಕ ಸೌಂದರ್ಯ ಹೆಚ್ಚು ಜನರನ್ನು ಸೆಳೆಯುತ್ತದೆ. ಇವರು ತಮ್ಮ ಸುತ್ತಮುತ್ತಲಿನವರಲ್ಲಿ ಸಂತೋಷದ ಮತ್ತು ದುಃಖದ ಸಮಯಗಳಲ್ಲಿ ಇತರರಿಗಿಂತಲೂ ಹೆಚ್ಚು ಭಾಗಿಯಾಗಿ ಆತ್ಮತೃಪ್ತಿಯನ್ನು ಪಡೆಯುತ್ತಾರೆ. ಇದೇ ಕಾರಣಕ್ಕೆ ಇವರನ್ನು ಸುತ್ತಮುತ್ತಲ ಜನರು ಹೆಚ್ಚು ಗೌರವಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ.

ಉದ್ಯೋಗದಲ್ಲಿಯೂ ಇವರು ಹೆಚ್ಚು ಯಶಸ್ವಿಯಾಗಿರುತ್ತಾರೆ

ಉದ್ಯೋಗದಲ್ಲಿಯೂ ಇವರು ಹೆಚ್ಚು ಯಶಸ್ವಿಯಾಗಿರುತ್ತಾರೆ

ಸಾಮಾನ್ಯವಾಗಿ ಈ ವ್ಯಕ್ತಿಗಳು ತಮ್ಮ ಉದ್ಯೋಗ ಹಾಗೂ ಹಣಕಾಸಿನ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುವ ಕಾರಣ ಇವರು ಯಶಸ್ವಿ ಉದ್ಯಮಿ, ರಾಜಕಾರಣಿ, ಸಿನೇಮಾ ನಟ/ನಟಿ ಹಾಗೂ ಉದ್ಯೋಗಸ್ಥರಾಗಿರುತ್ತಾರೆ. ಹಣಕಾಸಿನ ವಿಷಯದಲ್ಲಿ ಸದೃಢರಾಗಿರುವುದು ಇವರಿಗೆ ಪ್ರಮುಖ ವಿಷಯವಾಗಿದೆ.

ಇವರು ತಮ್ಮ ಸಂಬಂಧದಲ್ಲಿ ಅತಿ ನಿಷ್ಠಾವಂತರಾಗಿರುತ್ತಾರೆ

ಇವರು ತಮ್ಮ ಸಂಬಂಧದಲ್ಲಿ ಅತಿ ನಿಷ್ಠಾವಂತರಾಗಿರುತ್ತಾರೆ

ಇವರು ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂಬ ಬಯಕೆ ಹೊಂದಿರುವ ಜೊತೆಗೇ ತಮ್ಮ ಜೀವನಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ಹೆಚ್ಚು ಕಾಳಜಿಯುಳ್ಳವರಾಗಿರುತ್ತಾರೆ. ತಮ್ಮ ಸ್ನೇಹಿತರ, ಸಹೋದ್ಯೋಗಿಗಳೊಂದಿಗಿನ ಬಾಂಧವ್ಯಕ್ಕೆ ಇವರು ಹೆಚ್ಚಿನ ಮಹತ್ವ ನೀಡುವವರಾಗಿದ್ದು ಸ್ನೇಹವನ್ನು ಸದಾ ಉಳಿಸಿಕೊಂಡು ಹೋಗುವವರಾಗಿರುತ್ತಾರೆ.

ಇನ್ನಷ್ಟು ಕುತೂಹಲಕರ ಮಾಹಿತಿಯಿದ್ದರೆ, ನಮ್ಮೊಂದಿಗೆ ಹಂಚಿಕೊಳ್ಳಿ

ಇನ್ನಷ್ಟು ಕುತೂಹಲಕರ ಮಾಹಿತಿಯಿದ್ದರೆ, ನಮ್ಮೊಂದಿಗೆ ಹಂಚಿಕೊಳ್ಳಿ

ಒಂದು ವೇಳೆ ನಿಮ್ಮ ಹೆಸರೂ ಎಸ್ ಅಕ್ಷರದಿಂದ ಪ್ರಾರಂಭವಾಗುತ್ತಿದ್ದು ನಿಮ್ಮ ಅನುಭವದ ಪ್ರಕಾರ ಯಾವುದಾದರೂ ಕುತೂಹಲಕರ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

Story first published: Tuesday, February 28, 2017, 11:25 [IST]
English summary

Does Your Name Start With The Letter “S”?

Names starting with specific letters have their own importance. Here, we have shared about the characteristics of people whose names start with the letter “S”. Check it out.
Please Wait while comments are loading...
Subscribe Newsletter