For Quick Alerts
ALLOW NOTIFICATIONS  
For Daily Alerts

ದಿನವೂ ಒಂದೇ ಸಮಯದಲ್ಲಿ ಎಚ್ಚರವಾಗುತ್ತದೆ ಎಂದಾದರೆ ಹುಷಾರಾಗಿರಬೇಕು!

By Manu
|
Are U Waking Up Suddenly Every Night? To Know The Reason Watch Video

ಊಟ-ತಿಂಡಿಯಷ್ಟೇ ಪ್ರಮುಖವಾದದ್ದು ನಿದ್ರೆ. ನಿತ್ಯವೂ ಕಣ್ತುಂಬ ನಿದ್ರೆ ಮಾಡಿದರೆ ಅದೆಷ್ಟೋ ಆರೋಗ್ಯ ಸಮಸ್ಯೆಗಳು ದೂರ ಉಳಿಯುತ್ತವೆ. ಅದೇ ನಿದ್ರಾ ಹೀನತೆ ಅಥವಾ ಮಲಗಿದ ನಂತರ ಪದೇ ಪದೇ ಎಚ್ಚರವಾಗುವುದು ಒಂದು ಬಗೆಯ ಕಿರಿಕಿರಿಯನ್ನು ಉಂಟುಮಾಡುತ್ತದೆ.

ರಾತ್ರಿ ನಿದ್ರಿಸುವಾಗ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ. ಅದು ಕೆಟ್ಟ ಕನಸಿನ ಮಹಿಮೆಯಾ ಅಥವಾ ದುಃಖದ ಭಾವಕ್ಕೋ ಎನ್ನುವ ಅರಿವು ಬರುವುದಿಲ್ಲ. ಆಶ್ಚರ್ಯವೆಂದರೆ ಪ್ರತಿದಿನ ಒಂದೇ ಸಮಯಕ್ಕೆ ಎಚ್ಚರವಾಗುವುದು. ನಂತರ ಮತ್ತೆ ನಿದ್ರೆಗೆ ಜಾರಲು ತುಸು ತೊಂದರೆ ಉಂಟಾಗುವುದು.

ಮಹಿಳೆಯ ಕನಸು ಬಿದ್ದರೆ-ಕನಸಲ್ಲಿ ಅರೆರೆರೇ! ಭವಿಷ್ಯ ಅಯ್ಯಯ್ಯಯ್ಯೋ..!

ಹೀಗೆ ಯಾಕೆ? ಏನು? ಎನ್ನುವ ಸಮಸ್ಯೆ ಅನೇಕರನ್ನು ಕಾಡಿರಬಹುದು. ಅಥವಾ ಹೀಗಾಗುತ್ತದೆ ಎನ್ನುವವರ ಕಥೆಯನ್ನು ಕೇಳಿರಬಹುದು. ನಿಜ, ಈ ರೀತಿಯ ಸಮಸ್ಯೆ ನಿಮಗೆ, ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಆಗುತ್ತಿದ್ದರೆ ಮೊದಲು ಕಾರಣವನ್ನು ತಿಳಿದುಕೊಳ್ಳಿ...

ನೆನಪಿಡಿ

ನೆನಪಿಡಿ

ನಿದ್ರೆಯಲ್ಲಿ ಪದೇ ಪದೇ ಎಚ್ಚರಾಗುವುದು ಅಥವಾ ಪ್ರತಿ ದಿನವೂ ಒಂದೇ ಸಮಯದಲ್ಲಿ ಎಚ್ಚೆತ್ತುಕೊಳ್ಳುವುದು ಆತ್ಮದ ಮಹಿಮೆ. ಈ ಕ್ರಿಯೆಯ ಮೂಲಕ ಸಕಾರಾತ್ಮಕ ಆತ್ಮವು ಕಾಸ್ಮಿಕ್ ಶಕ್ತಿಯೊಂದಿಗೆ ಸಂಹನ ನಡೆಸಲು ಪ್ರಯತ್ನಿಸುತ್ತದೆ ಎಂದು ಕನಸ್ಸಿನ ಶಾಸ್ತ್ರ ಹೇಳುತ್ತದೆ. ಇದಕ್ಕೆ ಪರಿಹಾರವೆಂದರೆ ಪ್ರತಿದಿನ ಧ್ಯಾನ ಮತ್ತು ಉಸಿರಾಟದ ವ್ಯಾಯಾಮ ಮಾಡಬೇಕು.

ನಿದ್ರೆಯ ಸಮಯ

ನಿದ್ರೆಯ ಸಮಯ

ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಆಯಾಸಗೊಂಡ ನಮಗೆ ರಾತ್ರಿ 9 ರಿಂದ 11ರ ವರೆಗೆ ಮಲಗಲು ಸೂಕ್ತ ಸಮಯ. ಗಾಢ ನಿದ್ರೆಯಿಂದ ಮನಸ್ಸಿಗೊಂದು ಬಗೆಯ ಹಿತವುಂಟಾಗುವುದು.

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ನಿದ್ರೆಯ ಸಮಯ

ನಿದ್ರೆಯ ಸಮಯ

ಆದರೆ ಈ ಸಮಯದಲ್ಲಿ ನಿದ್ರೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದಾದರೆ, ನೀವು ಒತ್ತಡದ ಜೀವನದಲ್ಲಿ ಜೀವಿಸುತ್ತಿದ್ದೀರಿ ಅಥವಾ ಮನಸ್ಸಿಗೆ ಬಗೆಹರಿಸಲಾಗದಷ್ಟು ಸಮಸ್ಯೆಗಳಿವೆ ಎಂದು ಸೂಚಿಸುತ್ತದೆ. ಇದಕ್ಕೆ ಪರಿಹಾರವೆಂದರೆ: ಸ್ನೇಹಿತರೊಡನೆ ಸಮಸ್ಯೆಗಳ ಕುರಿತು ಮಾತನಾಡಿ ಸಲಹೆ ಪಡೆಯಬೇಕು. ಜೊತೆಗೆ ನಮ್ಮ ಹವ್ಯಾಸಕ್ಕೆ ಜೀವತುಂಬಬೇಕು.

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ಎಚ್ಚರದ ಸಮಯ

ಎಚ್ಚರದ ಸಮಯ

ರಾತ್ರಿ 12 ರಿಂದ 2ಗಂಟೆಯ ವೇಳೆ ಎಚ್ಚರವಾಗುವುದು ನಮ್ಮ ಜೀವನದಲ್ಲಿ ಭಾವನಾತ್ಮಕ ಯಾತನೆ ಮತ್ತು ನಿರಾಶೆಯನ್ನು ಸೂಚಿಸುತ್ತದೆ.

ಇದಕ್ಕೆ ಪರಿಹಾರ...

ಇದಕ್ಕೆ ಪರಿಹಾರ...

ನಮ್ಮಲ್ಲಿ ಕ್ಷಮಿಸುವ ಸ್ವಭಾವ ಅಳವಡಿಸಿಕೊಳ್ಳಬೇಕು. ಸುಳ್ಳು ನಟನೆಯ ಸ್ವಭಾವದಿಂದ ದೂರವಿರಬೇಕು.

ಆರೋಗ್ಯ ತೊಂದರೆ

ಆರೋಗ್ಯ ತೊಂದರೆ

ರಾತ್ರಿ ನಿದ್ರಿಸುವಾಗ 2-3ಗಂಟೆ ಸಮಯದಲ್ಲಿ ಎಚ್ಚರವಾದರೆ ಅದು ಯಕೃತ್ತಿಗೆ ಸಂಬಂಧಿಸಿದ ತೊಂದರೆ ಮತ್ತು ಕೋಪದ ಸ್ವಭಾವ ಎಂದು ಹೇಳಲಾಗುತ್ತದೆ.

ಪರಿಹಾರ..

ಪರಿಹಾರ..

ಎಚ್ಚರವಾದಾಗ ತಂಪು ನೀರನ್ನು ಕುಡಿದು, 5 ನಿಮಿಷಗಳ ಕಾಲ ದೀರ್ಘ ಉಸಿರಾಟ ಕ್ರಿಯೆ ನಡೆಸಬೇಕು.

ನಿಮ್ಮ ಸಮಸ್ಯೆ

ನಿಮ್ಮ ಸಮಸ್ಯೆ

ರಾತ್ರಿ ನಿದ್ರೆ ಮಾಡಿದ ನಂತರ ಬೆಳಗ್ಗೆ 5-7ಗಂಟೆಯ ಸಮಯಗಳಲ್ಲಿ ಎಚ್ಚರವಾಗುತ್ತಿದ್ದರೆ ಹೆದರಿಕೆ ಹಾಗೂ ಆತ್ಮವಿಶ್ವಾಸದ ಕೊರತೆಯೇ ಕಾರಣ. ಪರಿಹಾರ: ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಪ್ರಬಲವಾಗಿರಬೇಕು. ಜೊತೆಗೆ ಸಾಮಾನ್ಯ ಯೋಗ ಕೈಗೊಳ್ಳಬೇಕು.

ದಿನನಿತ್ಯ ಏಳು ಗಂಟೆಗಳ ನಿದ್ದೆ-ರೋಗ ರುಜಿನಗಳು ನಾಪತ್ತೆ!


English summary

Do You Wake Up at the Same Time Every Night?

Consider this situation: You are waking up at night suddenly, not from a nightmare or a bad dream, but without any trigger. Your sleep is breaking at night at around the same time daily. You feel flummoxed, confused and go back to sleep. Also, the time at which you wake up also has a lot of significance.
X
Desktop Bottom Promotion