For Quick Alerts
ALLOW NOTIFICATIONS  
For Daily Alerts

ಈ ಉದ್ಯೋಗಗಳಿಂದ 'ಕ್ಯಾನ್ಸರ್‌ ರೋಗ' ಕೂಡ ಬರಬಹುದು!

ಇಂದಿನ ಲೇಖನದಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕೆಲವು ಉದ್ಯೋಗಗಳನ್ನು ಸಂಗ್ರಹಿಸಲಾಗಿದೆ. ಒಂದು ವೇಳೆ ನೀವು ಈ ಕೆಳಗೆ ಪಟ್ಟಿ ಮಾಡಿರುವ ಉದ್ಯೋಗದಲ್ಲಿದ್ದು ನಿಮಗೆ ಅರಿವೇ ಇಲ್ಲದಂತೆ ಕ್ಯಾನ್ಸರ್ ಎದುರಾಗುವ ಸಂಭವಕ್ಕೆ ಒಳಗಾಗಿರಬಹುದು..!!

By Manu
|

ಕ್ಯಾನ್ಸರ್ ಎಂದರೆ ಯಾವುದೋ ಅಂಗದ ಅಂಗಾಂಶ ಅಥವಾ ಜೀವಕೋಶಗಳು ನಿಯಂತ್ರಣಕ್ಕೆ ಸಿಗದೇ ಬೆಳವಣಿಗೆ ಪಡೆಯುವುದು. ಇದು ಯಾವುದೇ ಅಂಗಕ್ಕೆ ಆವರಿಸಬಹುದು. ಅಷ್ಟೇ ಏಕೆ, ನಮ್ಮ ರಕ್ತಕ್ಕೂ ಸಂಭವಿಸಬಹುದು. ಕ್ಯಾನ್ಸರ್ ಆವರಿಸಲು ಕೆಲವಾರು ಕಾರಣಗಳಿದ್ದು ಇವುಗಳಲ್ಲಿ ಕೆಲವು ಉದ್ಯೋಗಗಳೇ ನೇರವಾಗಿ ಕಾರಣ ಎಂಬುದನ್ನು ಬಲ್ಲಿರಾ? ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಸಾಮಾನ್ಯವಾಗಿ ಆಫೀಸ್ ನೊಳಗೆ ಕುಳಿತು ಮಾಡುವ ಕೆಲಸವನ್ನೇ ಬಯಸುವ ಯುವಜನತೆ ತಮಗೆ ರೋಗ ತಗಲುವ ಸಾಧ್ಯತೆ ಕಡಿಮೆ ಎಂಬ ಭಾವನೆಯಲ್ಲಿರುತ್ತಾರೆ. ಆದರೆ ಗಂಟೆಗಟ್ಟಲೇ ಒಂದೇ ಕಡೆ ಕುರ್ಚಿಯಲ್ಲಿ ಕುಳಿತು ವ್ಯಾಯಮವಿಲ್ಲದೇ ದಿನ ಕಳೆಯುವುದೂ ಕ್ಯಾನ್ಸರ್ ನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ನಿದ್ದೆ ಕೆಡಿಸುವ ಅತೀ ಜವಾಬ್ದಾರಿಯುತ 12 ಉದ್ಯೋಗಗಳು

ಇಂದಿನ ಲೇಖನದಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕೆಲವು ಉದ್ಯೋಗಗಳನ್ನು ಸಂಗ್ರಹಿಸಲಾಗಿದೆ. ಒಂದು ವೇಳೆ ನೀವು ಈ ಕೆಳಗೆ ಪಟ್ಟಿ ಮಾಡಿರುವ ಉದ್ಯೋಗದಲ್ಲಿದ್ದು ನಿಮಗೆ ಅರಿವೇ ಇಲ್ಲದಂತೆ ಕ್ಯಾನ್ಸರ್ ಎದುರಾಗುವ ಸಂಭವಕ್ಕೆ ಒಳಗಾಗಿರಬಹುದು. ಬನ್ನಿ, ಯಾವುದಕ್ಕೂ ಎರಡು ಪರಾಮರ್ಶಿಸಿ ಒಂದು ವೇಳೆ ಹೌದು ಎಂದಾದರೆ ಸೂಕ್ತ ಕ್ರಮಗಳನ್ನು ತಕ್ಷಣ ಕೈಗೊಳ್ಳಿ....

ಲೋಹದ ಕೆಲಸಗಾರರು

ಲೋಹದ ಕೆಲಸಗಾರರು

ಲೋಹ, ಅಂದರೆ ತಗಡು, ಸರಳು ಮೊದಲಾದ ಕಚ್ಚಾವಸ್ತುಗಳನ್ನು ಕತ್ತರಿಸಿ, ವೆಲ್ಡಿಂಗ್ ಮಾಡಿ, ರಿವೆಟ್ ಹೊಡೆದು ಅಥವಾ ಇದೇ ರೀತಿಯ ಕೆಲಸಗಳನ್ನು ಮಾಡುವ ಸ್ಥಳಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಈ ಸ್ಥಳದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇತರರಿಗಿಂತ 75% ಹೆಚ್ಚು.

ಗಣಿ ಕೆಲಸಗಾರರು

ಗಣಿ ಕೆಲಸಗಾರರು

ಗಣಿಯ ಕೆಲಸಗಾರರು ಕೆಲಸ ಮಾಡಿ ಹಿಂದಿರುಗುವಾಗ ಅವರ ಜೀನ್ಸ್ ಪ್ಯಾಂಟುಗಳು ಹರಿದಿರುವುದನ್ನು ಗಮನಿಸಿ ಪಡ್ಡೆ ಹುಡುಗರು ತಮ್ಮ ಜೀನ್ಸ್ ಪ್ಯಾಂಟುಗಳನ್ನು ಹರಿದು ತೊಡುವುದು ಇಂದು ಫ್ಯಾಶನ್ ಆಗಿದೆ. ಆದರೆ ಗಣಿಯ ಆಳದಲ್ಲಿ ಕೆಲಸ ಮಾಡುವ ಉದ್ಯೋಗ ಯುವಜನತೆ ಅಂದುಕೊಂಡಷ್ಟು ರೋಚಕವೇನೂ ಆಗಿರುವುದಿಲ್ಲ. ಬದಲಿಗೆ ಇವರಿಗೆ ಹೊಟ್ಟೆ, ಮೆದುಳು ಮತ್ತು ಥೈರಾಯ್ಡ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ನೆಲದ ಮೇಲಿವವರಿಗಿಂತ ಅತಿ ಹೆಚ್ಚಾಗಿದೆ.

ಪ್ಲಾಸ್ಟಿಕ್ ಕಾರ್ಖಾನೆಯ ಕಾರ್ಮಿಕರು

ಪ್ಲಾಸ್ಟಿಕ್ ಕಾರ್ಖಾನೆಯ ಕಾರ್ಮಿಕರು

ಈ ಕಾರ್ಖಾನೆಗಳ ಒಳಭಾಗದ ಗಾಳಿಯಲ್ಲಿ ಸೂಕ್ಷ್ಮವಾದ ಪ್ಲಾಸ್ಟಿಕ್ ಕಣಗಳು ಸದಾ ಹರಿದಾಡುತ್ತಿದ್ದು ಇದರ ಸೇವನೆಯಿಂದ ಯಕೃತ್, ಮೂತ್ರಪಿಂಡ ಹಾಗೂ ಗಂಟಲಗೂಡು ಅಥವಾ ಧ್ವನಿಪಟ್ಟಿಗೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಪ್ಲಾಸ್ಟಿಕ್ ಕಣಗಳಲ್ಲಿ ಕ್ಯಾಡ್ಮಿಯಂ ಹಾಗೂ ಇದನ್ನು ಸುಟ್ಟಾಗ ಹೊಮ್ಮುವ ಗಾಳಿಯಲ್ಲಿ ಹಲವಾರು ವಿಷಕಾರಿ ಅನಿಲಗಳಿರುತ್ತವೆ.

ಕೇಶಶೃಂಗಾರ ಮಳಿಗೆ ಕೆಲಸಗಾರರು

ಕೇಶಶೃಂಗಾರ ಮಳಿಗೆ ಕೆಲಸಗಾರರು

ಈ ಮಾಹಿತಿ ಕೊಂಚ ದಂಗುಬಡಿಸುವಂತಹದ್ದಾದರೂ ನಿಜವಾಗಿದೆ. ನಮ್ಮ ಕೇಶವನ್ನು ಕತ್ತರಿಸುವ ನಾಪಿತರು ಕೇಶಗಳಿಗೆ ಕಪ್ಪುಬಣ್ಣ ಹಚ್ಚುವ ಕೃತಕ ಬಣ್ಣ ಮತ್ತು ಡೈ ಗಳು ಸತತವಾಗಿ ಸೂಸುವ ರಾಸಾಯನಿಕಗಳನ್ನು ಸೇವಿಸುತ್ತಾ ಇರುತ್ತಾರೆ. ಇವರಿಗೆ ಮೂತ್ರಕೋಶ, ಗಂಟಲಪೆಟ್ಟಿಗೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು.

ರಾತ್ರಿ ಪಾಳಿ ಕೆಲಸಗಾರರು

ರಾತ್ರಿ ಪಾಳಿ ಕೆಲಸಗಾರರು

ದಿನದ ಜಂಜಾಟವನ್ನು ಬಯಸದ ಕೆಲವರು ರಾತ್ರಿ ಪಾಳಿಯನ್ನೇ ಆಯ್ದುಕೊಂಡು ತಮ್ಮ ನೈಸರ್ಗಿಕ ವೇಳಾಪಟ್ಟಿಯನ್ನೇ ಹಿಂದುಮುಂದಾಗಿಸಿರುತ್ತಾರೆ. ಅಂದರೆ ನಿದ್ದೆಯ ಹೊತ್ತಿನಲ್ಲಿ ಎಚ್ಚರಿರುವುದೂ, ಎಚ್ಚರಿರಬೇಕಾದ ಸಮಯದಲ್ಲಿ ಮಲಗುವುದೂ ಮಾಡುವ ಮೂಲಕ ಜೈವಿಕ ಗಡಿಯಾರ ಏರುಪೇರಾಗುತ್ತದೆ (circadian rhythm disruption). ಈ ಏರುಪೇರು ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗೆ ಕಾರಣವಾಗಬಹುದು. ಆದ್ದರಿಂದ ರಾತ್ರಿ ಪಾಳಿಯ ಕೆಲಸಗಾರರೇ, ಎಚ್ಚರವಿರಲಿ.

ವಿಮಾನದ ಪೈಲಟ್ ಮತ್ತು ಸಿಬ್ಬಂದಿ

ವಿಮಾನದ ಪೈಲಟ್ ಮತ್ತು ಸಿಬ್ಬಂದಿ

ನೆಲದ ಮೇಲೆ ಕೆಲಸ ಮಾಡುವವರಿಗಿಂತಲೂ ವಿಮಾನದಲ್ಲಿ ತಮ್ಮ ಸಮಯವನ್ನು ಹೆಚ್ಚು ಕಳೆಯುವ ಪೈಲಟ್ ಹಾಗೂ ಇತರ ಸಿಬ್ಬಂದಿಗಳು ವಿಮಾನದೊಳಗಿನ ಅತಿನೇರಳೆ ಹಾಗೂ ಕಾಸ್ಮಿಕ್ ಕಿರಣಗಳಿಗೆ ಹೆಚ್ಚು ಒಡ್ಡುವ ಮೂಲಕ ಕ್ಯಾನ್ಸರ್ ನ ಸಾಧ್ಯತೆ ಹೆಚ್ಚಿಸಿಕೊಂಡಿರುತ್ತಾರೆ. ಅಲ್ಲದೇ ನೆಲಮಟ್ಟದಿಂದ ಹೆಚ್ಚು ಎತ್ತರದಲ್ಲಿ ಒತ್ತಡ ಕಡಿಮೆ ಇರುವ ಕಾರಣ ಈ ಕಿರಣಗಳು ಶರೀರವನ್ನು ಬಾಧಿಸುವ ಪ್ರಮಾಣವೂ ಹೆಚ್ಚಾಗಿರುತ್ತದೆ.

English summary

Do You Know That These Jobs Can Give You Cancer?

High-alert! These jobs can make you prone to cancer. So make sure you check if your profession is in the list!
X
Desktop Bottom Promotion