For Quick Alerts
ALLOW NOTIFICATIONS  
For Daily Alerts

ಈ ಊರಿನ ಹುಡುಗಿಯರು ತಮ್ಮ ತಂದೆಯನ್ನೇ ಪತಿಯಾಗಿ ಸ್ವೀಕರಿಸಬೇಕು!

By Arshad
|

ಬಾಂಗ್ಲಾದೇಶದ ಆಗ್ನೇಯ ಭಾಗದಲ್ಲಿ 'ಮಂದಿ' ಎಂದು ಕರೆಯಲಾಗುವ ಬುಡಕಟ್ಟು ಜನಾಂಗವಿದೆ. ಈ ಜನಾಂಗದಲ್ಲಿ ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವಿದ್ದು ತಂದೆಯೇ ಮಗಳ ಶಯನಸಂಗಾತಿಯಾಗುವ ಕ್ರಮ ಅನುಸರಿಸಲಾಗುತ್ತಿದೆ. ಆದರೆ ಇಂದು ಇವರಲ್ಲಿ ತೊಂಭತ್ತು ಶೇಖಡಾಕ್ಕೂ ಹೆಚ್ಚು ಜನರು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ಅಳಿದುಳಿದ ಜನರಲ್ಲಿ ಈ ಸಂಪ್ರದಾಯ ಇಂದಿಯೂ ಜೀವಂತವಾಗಿದೆ.

ಒಂದು ವೇಳೆ ಮಹಿಳೆಯೊಬ್ಬಳು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾದರೆ ಆಕೆ ತನ್ನದೇ ಬುಡಕಟ್ಟಿನ ಪುರುಷನನ್ನು ವಿವಾಹವಾಗುವ ಅರ್ಹತೆ ಹೊಂದಿರುತ್ತಾಳೆ. ಅದರೆ ಈ ಗುಂಪಿನಲ್ಲಿ ಅವಿವಾಹಿತ ಪುರುಷರೆಂದರೆ ಹದಿಹರೆಯದ ಹುಡುಗರು ಅಥವಾ ಇನ್ನೂ ಇಪ್ಪತ್ತು ವರ್ಷ ಕಳೆಯದವರಾಗಿದ್ದಾರೆ. ಆದ್ದರಿಂದ ಆಕೆ ಪ್ರಾಪ್ತವಯಸ್ಕಳಾಗುವವರೆಗೂ ಸಾಮಾಜಿಕ ಸ್ಥಾನಮಾನ ಪಡೆಯಲು ತಂದೆಯನ್ನೇ ಅವಲಂಬಿಸಬೇಕಾಗುತ್ತದೆ.... ಮುಂದೆ ಓದಿ...

ಮೂರು ತಿಂಗಳಿನ ಮಗುವಿರುವಾಗಲೇ ಮದುವೆ!!

ಮೂರು ತಿಂಗಳಿನ ಮಗುವಿರುವಾಗಲೇ ಮದುವೆ!!

ಇಂತಹ ಒಂದು ಸಂದರ್ಭ ಈ ಬುಡಕಟ್ಟಿಗೆ ಸೇರಿದ ಒರೋಲಾ ಡಾಲ್ಬೋಟ್ ಎಂಬುವರಿಗೆ ಎದುರಾಗಿತ್ತು. ಈ ಯುವತಿ ಕೇವಲ ಮೂರು ತಿಂಗಳಿನವಳಾಗಿದ್ದಾಗ ಆಕೆಯ ತಾಯಿ ಯಾರನ್ನು ಮದುವೆಯಾಗಿದ್ದಳೋ ಆ ವ್ಯಕ್ತಿಯನ್ನೇ ಈಕೆಗೂ ಮದುವೆ ಮಾಡಿಕೊಡಲಾಗಿತ್ತು. ಕೇವಲ ಮೂರು ವರ್ಷದ ಹಸುಳೆಗೆ ತಾನು ತಾಯಿ ಮದುವೆಯಾದ ವ್ಯಕ್ತಿಯನ್ನೇ ಮದುವೆಯಾಗಿದ್ದೇನೆ ಎಂದೇ ತಿಳಿದಿರಲಿಲ್ಲ.

ಇಲ್ಲಿ ಗಂಡನ ತಮ್ಮನೊಂದಿಗೂ ಹಾಸಿಗೆ ಹಂಚಿಕೊಳ್ಳಬೇಕಂತೆ! ಎಲ್ಲಿದೆ ನ್ಯಾಯ?

ತನ್ನ ತಂದೆಯನ್ನೇ ಪತಿಯನ್ನಾಗಿ ಸ್ವೀಕರಿಸಬೇಕು!

ತನ್ನ ತಂದೆಯನ್ನೇ ಪತಿಯನ್ನಾಗಿ ಸ್ವೀಕರಿಸಬೇಕು!

ಆದರೆ ಯಾವಾಗ ಈಕೆ ಪ್ರಾಪ್ತವಯಸ್ಕಳಾದಳೋ, ಆಗ ಈ ವಿಷಯ ತಿಳಿದುಬಂದು ಭೂಮಿಯೇ ಕುಸಿದಂತಾಯ್ತು. ಅಲ್ಲಿಂದ ಓಡಿ ಹೋಗಲು ಯತ್ನಿಸಿದರೂ ಆಕೆಗೆ ಅದು ಸಾಧ್ಯವಾಗಲಿಲ್ಲ. ಸಂಪ್ರದಾಯದ ಪ್ರಕಾರ ತನ್ನ ತಂದೆಯನ್ನೇ ಪತಿಯನ್ನಾಗಿ ಸ್ವೀಕರಿಸುವಂತೆ ತಾಯಿಯೂ ತಿಳಿಹೇಳಿದರು!

ತನ್ನ ತಂದೆಯನ್ನೇ ಪತಿಯನ್ನಾಗಿ ಸ್ವೀಕರಿಸಬೇಕು!

ತನ್ನ ತಂದೆಯನ್ನೇ ಪತಿಯನ್ನಾಗಿ ಸ್ವೀಕರಿಸಬೇಕು!

ಆದರೆ ಆತ್ಮವಿಶ್ವಾಸವುಳ್ಳ ಒರೋಲಾಳಿಗೆ ತನ್ನ ಅನುಮತಿಯೇ ಇಲ್ಲದೇ ವ್ಯಕ್ತಿಯೊಬ್ಬನನ್ನು ಜೀವನಸಂಗಾತಿಯಾಗಿ ಆರಿಸಿಕೊಳ್ಳುವುದು ತನ್ನ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಅನ್ಯಾಯದ ಪರಮಾವಧಿಯಾಗಿತ್ತು.

ಈ ಪದ್ಧತಿಯ ಉದ್ದೇಶವೇನು?

ಈ ಪದ್ಧತಿಯ ಉದ್ದೇಶವೇನು?

ಆದರೆ ಈ ಬುಡಕಟ್ಟಿನಲ್ಲಿ ತಾಯಿ ಮತ್ತು ಮಗಳನ್ನು ವ್ಯಕ್ತಿಯೊಬ್ಬರಿಗೆ ಏಕಕಾಲಕ್ಕೆ ಮದುವೆ ಮಾಡಿ ಕೊಡುವುದರ ಹಿಂದೆ ಪುರುಷರಿಗೆ ಹೆಚ್ಚಿನ ಪ್ರಧಾನ್ಯತೆ ಅಥವಾ ಹೆಚ್ಚು ಕಾಮ ಪಡೆಯುವಂತಾಗುವುದು ಅಲ್ಲವೇ ಅಲ್ಲ. ಬದಲಿಗೆ ಸಮಾಜದಲ್ಲಿ ಆರ್ಥಿಕವಾದ ಸಮಾನತೆ ಹಾಗೂ ತಲೆಯೆತ್ತಿ ಬದುಕುವುದಾಗಿದೆ.

ಆಸ್ತಿಯ ಒಡೆತನಕ್ಕೆ?

ಆಸ್ತಿಯ ಒಡೆತನಕ್ಕೆ?

ಹಲವು ಬುಡಕಟ್ಟುಗಳಲ್ಲಿರುವಂತೆಯೇ ಮಂದಿ ಬುಡಕಟ್ಟು ಸಹಾ (ಇದಕ್ಕೆ ಗಾರೋ ಬುಡಕಟ್ಟು ಎಂಬ ಇನ್ನೊಂದು ಹೆಸರೂ ಇದೆ) ಮಹಿಳಾಧಿಪತ್ಯಕ್ಕೆ ಒಳಗೊಂಡಿದೆ. ಅಂದರೆ ಮಹಿಳೆಯೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾಳೆ. ತಾಯಿಯನ್ನೂ ಮಗಳನ್ನೂ ಒಂದೇ ವ್ಯಕ್ತಿಗೆ ಮದುವೆ ಮಾಡಿಕೊಡುವ ಮೂಲಕ ಕುಟುಂಬದ ಎರಡೂ ಕಡೆಯಲ್ಲಿಯೂ ಮಹಿಳೆಯೇ ಆ ಕುಟುಂಬದ ಆಸ್ತಿಯ ಒಡೆಯಳಾಗಿರುವಂತೆ ನೋಡಿಕೊಳ್ಳಲಾಗುತ್ತದೆ.

ಆಸ್ತಿಯ ಒಡೆತನಕ್ಕೆ?

ಆಸ್ತಿಯ ಒಡೆತನಕ್ಕೆ?

ಈ ಸಂದರ್ಭದಲ್ಲಿ, ಒರೋಲಾಳ ತಾಯಿ ಮಿತ್ತಮೋನಿ ತನ್ನ ಮೊದಲ ಪತಿಯ ವಂಶದಲ್ಲಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ಮರುಮದುವೆಯಾಗುವ ಮೂಲಕ ಕುಟುಂಬ ಹಂಚಿಹೋಗುವುದನ್ನು ತಡೆಗಟ್ಟಿದಂತಾಗುತ್ತದೆ. ಅಲ್ಲದೇ ಮಗಳನ್ನೂ ತನ್ನ ಪತಿಯೊಂದಿಗೇ ಮದುವೆ ಮಾಡುವ ಮೂಲಕ ಎರಡು ವಿಷಯಗಳನ್ನು ಖಚಿತಪಡಿಸಿದಂತಾಗುತ್ತದೆ. ಮೊದಲನೆಯದು, ಪತಿಯ ವಂಶ ಬೆಳೆಯಲು ಎಳೆಯ ಪತ್ನಿಯ ದೊರಕುವಿಕೆಯಿಂದ ಆರೋಗ್ಯಕರ ಮಕ್ಕಳು ಹುಟ್ಟಲು ಸಾಧ್ಯವಾಗುತ್ತದೆ. ಎರಡನೆಯದಾಗಿ ಮೊದಲ ಪತ್ನಿ ವಿಧಿವಶಳಾದ ಬಳಿಕ ಎರಡನೆಯ ಪತ್ನಿಯ ಮೂಲಕ ಪತಿಯ ಆಸ್ತಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೆಚ್ಚಿನವರು ಈ ನೀಚ ಪದ್ಧತಿಯಿಂದ ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾರೆ

ಹೆಚ್ಚಿನವರು ಈ ನೀಚ ಪದ್ಧತಿಯಿಂದ ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾರೆ

ಈ ಬುಡಕಟ್ಟು ಜನಾಂಗದ ಮಹಿಳಾ ಸಂಘಟನೆಯಾದ 'ಅಚಿಕ್ ಮಿಚಿಕ್' ಪ್ರಕಾರ ಮಹಿಳೆಯರ ಆಸ್ತಿಯನ್ನು ರಕ್ಷಿಸಲು ಕೆಲವಾರು ವಿಧಾನಗಳಿದ್ದು ತಾಯಿ ಮತ್ತು ಮಗಳನ್ನು ಓರ್ವನೇ ವ್ಯಕ್ತಿಗೆ ಮದುವೆ ಮಾಡಿಕೊಡುವುದು ಇದರಲ್ಲೊಂದು ಕ್ರಮವಾಗಿದೆ. ಆದರೆ ಇಂದಿನ ಯುವತಿಯರು ಈ ಕ್ರಮವನ್ನು ವಿರೋಧಿಸುತ್ತಿದ್ದು ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರ ಹಾಗೂ ಇತರ ಪಟ್ಟಣಗಳಿಗೆ ಓಡಿ ಹೋಗಿ ಈ ಕ್ರಮದಿಂದ ತಪ್ಪಿಸಿಕೊಂಡಿದ್ದಾರೆ.

All Image Courtesy

English summary

Bizarre Tradition of a Tribe Where Daughters Share Bed with Their Fathers

There’s a ‘Mandi’ tribe in the south-eastern part of Bangladesh which is still following this bizarre tradition. Almost 90 percent of the people of this tribe are now Catholics but there are many families who follow mother-daughter custom.
Story first published: Friday, May 19, 2017, 20:05 [IST]
X
Desktop Bottom Promotion