For Quick Alerts
ALLOW NOTIFICATIONS  
For Daily Alerts

ವಿಚಿತ್ರ ಆದರೂ ಸತ್ಯ: ಮಿಲನದ ಬಳಿಕ-ಇವುಗಳ ಸಾವು ಖಚಿತ!

By Manu
|

ಬ್ಲಾಕ್ ವಿಡೋ ಅಥವಾ ಕಪು ವಿಧವೆ ಎಂಬ ಜೇಡವೊಂದಿದೆ. ಇದಕ್ಕೆ ಈ ಹೆಸರನ್ನು ಸುಮ್ಮಸುಮ್ಮನೇ ಇಟ್ಟಿಲ್ಲ. ಈ ಜೇಡದಲ್ಲಿ ಹೆಣ್ಣು ಜೇಡ ತನ್ನೊಂದಿಗೆ ಕೂಡಲು ಬಂದ ಗಂಡಿನ ಕಾರ್ಯವಾದ ಬಳಿಕ ಕೊಂದು ತಿಂದು ತೇಗಿಬಿಡುತ್ತದೆ. ಅಂದರೆ ಗಂಡಿಗೆ ಪ್ರಥಮ ಪ್ರಣಯವೇ ಮರಣಶಯ್ಯೆ, ಅದೂ ಕೂಡಿದ ಹೆಣ್ಣಿನ ಬಾಯಿಗೇ ಆಹಾರವಾಗುವ ಮೂಲಕ! ಬರೇ ಕಪ್ಪು ವಿಧವೆ ಮಾತ್ರವಲ್ಲ, ಈ ಜಗತ್ತಿನಲ್ಲಿ ಇನ್ನೂ ಕೆಲವಾರು ಜೀವಿಗಳಿವೆ. ಇವುಗಳಲ್ಲಿ ಪ್ರಮುಖ ಐದು ಜೀವಿಗಳನ್ನು ಇಂದು ವಿವರಿಸಲಾಗಿದೆ.

ಪುರ್ಸಿಫರ್ ಲ್ಯಾಬೋರ್ಡಿ ಊಸರವಳ್ಳಿ (Furcifer Labordi Chameleons)

ಪುರ್ಸಿಫರ್ ಲ್ಯಾಬೋರ್ಡಿ ಊಸರವಳ್ಳಿ (Furcifer Labordi Chameleons)

ಈ ಊಸರವಳ್ಳಿಗಳು ಸದಾ ತಮ್ಮೊಂದಿಗೆ ಕಾದಾಡುತ್ತಾ ಇರುತ್ತವೆ. ಹೆಣ್ಣಿಗಾಗಿ ಎರಡು ಗಂಡು ಊಸರವಳ್ಳಿಗಳು ಕಾದಾಡುವುದು ಮಾತ್ರವಲ್ಲ, ಹೆಣ್ಣು ಊಸರವಳ್ಳಿಗಳೂ ಗಂಡು ಊಸರವಳ್ಳಿಯೊಂದಿಗೆ ಕಾದಾಡುತ್ತವೆ. ಆದರೆ ಈ ಕಾದಾಟದಿಂದ ಗಂಡು ಊಸರವಳ್ಳಿಗಳು ಸಾಯುವುದಿಲ್ಲ. ಬದಲಿಗೆ ಇವುಗಳ ಹೋರಾಟದ ಉದ್ರೇಕದ ಕಾರಣದಿಂದ ಇವುಗಳ ದೇಹದಲ್ಲಿ ಅತಿ ಹೆಚ್ಚು ಹಾರ್ಮೋನುಗಳು ಸ್ರವಿಸುವುದರಿಂದ ಇದನ್ನು ಸಹಿಸಲಾರದೇ ಸಾಯುತ್ತವೆ ಎಂದು ಸಂಶೋಧನೆಯ ಮೂಲಕ ಕಂಡುಕೊಳ್ಳಲಾಗಿದೆ.

ಇದನ್ನೂ ಓದಿ -ಅಚ್ಚರಿ ಜಗತ್ತು: ನಿದ್ದೆ ಮಾಡುವುದರಲ್ಲಿ ಈ ಪ್ರಾಣಿಗಳು ನಂ.1...

ಅಸ್ಟ್ರೇಲಿಯಾದ ಗಂಡು ಆಂಟೆಚಿನಸ್ ಇಲಿ

ಅಸ್ಟ್ರೇಲಿಯಾದ ಗಂಡು ಆಂಟೆಚಿನಸ್ ಇಲಿ

ಈ ಇಲಿಗಳಲ್ಲಿ ಗಂಡು ಇಲಿ ಸತತ ಹದಿನಾಲ್ಕು ಘಂಟೆಗಳ ಕಾಲ ಹೆಣ್ಣಿಲಿಯೊಂದಿಗೆ ಕೂಡುತ್ತದೆ ಬಳಿಕ ಸಾವನ್ನಪ್ಪುತ್ತದೆ. ಬೆದೆಯ ಸಮಯದಲ್ಲಿ ಕೂಡಲು ತೋರುವ ಉತ್ಸುಕತೆಯ ಕಾರಣ ಗಂಡಿಲಿಯ ದೇಹದಲ್ಲಿ ಉತ್ಪತ್ತಿಯಾಗುವ ರಸದೂತಗಳು ಇಲಿಯ ರೋಗ ನಿರೋಧಕ ಶಕ್ತಿಯನ್ನೇ ಉಡುಗಿಸುತ್ತವೆ. ಇದರಿಂದ ಇಲಿಯ ಯಕೃತ್ ನಲ್ಲಿ ಸೋಂಕು ಉಂಟಾಗುತ್ತದೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ರಕ್ತ ಮತ್ತು ಕರುಳಿನಲ್ಲಿದ್ದ ಪರಾವಲಂಬಿ ಕ್ರಿಮಿಗಳು ಆಶ್ರಯ ಕೊಟ್ಟ ಇಲಿಯ ದೇಹವನ್ನು ಒಳಗಿನಿಂದ ಕೊಳೆಸಿ ಇಲಿ ಸಾವನ್ನಪ್ಪುವಂತೆ ಮಾಡುತ್ತದೆ.

ಆಸ್ಟ್ರ್ರೇಲಿಯಾದ ಕೆಂಪುಬೆನ್ನಿನ ಜೇಡ (Australian Redback Spiders)

ಆಸ್ಟ್ರ್ರೇಲಿಯಾದ ಕೆಂಪುಬೆನ್ನಿನ ಜೇಡ (Australian Redback Spiders)

ಈ ಜೇಡಗಳಲ್ಲಿ ಗಂಡು ಮಿಲನದ ಬಳಿಕ ತನ್ನ ಪ್ರಾಣವನ್ನು ಅರ್ಪಿಸುತ್ತದೆ. ಅಂದರೆ ಇಲ್ಲಿ ಹೆಣ್ಣು ಜೇಡ ಗಂಡನ್ನು ತಿನ್ನುವುದಿಲ್ಲ. ಬದಲಿಗೆ ಗಂಡು ಜೇಡ ಬೇರೆ ಹೆಣ್ಣು ಜೇಡದೊಂದಿಗೆ ಮಿಲನಗೊಳ್ಳಲು ಸಾಧ್ಯವಾಗದಂತೆ ತನ್ನನ್ನು ತಾನೇ ಜೇಡವನ್ನು ತಿನ್ನುವ ಹಕ್ಕಿಗೆ ಆಹಾರವಾಗಿ ಅರ್ಪಿಸಿಕೊಳ್ಳುತ್ತದೆ.

ಆಸ್ಟ್ರೇಲಿಯಾದ ಪುಟ್ಟ ಕೆಂಪಿಲಿ (Little Red Kaluta)

ಆಸ್ಟ್ರೇಲಿಯಾದ ಪುಟ್ಟ ಕೆಂಪಿಲಿ (Little Red Kaluta)

ಆಸ್ಟ್ರೇಲಿಯಾದ ಹುಲ್ಲುಗಾವಲಿನಲ್ಲಿ ಕಂಡುಬರುವ ಈ ಪುಟ್ಟ ಕೆಂಪು ಇಲಿ ಅತ್ಯಂತ ಪ್ರಾಚೀನವಾಗಿದ್ದು ಮಿಲನದ ಸಮಯದಲ್ಲಿ ತನ್ನ ಪ್ರಾಣವನ್ನು ಅರ್ಪಿಸುತ್ತದೆ. ನಿಶಾಹಾರಿಯಾದ ಈ ಪ್ರಾಣಿ ಮಿಲನದ ಸಮಯದಲ್ಲಿ ತನ್ನ ಪೂರ್ಣಶಕ್ತಿಯನ್ನು ವ್ಯಯಿಸುವ ಕಾರಣ ಮಿಲನದ ಬಳಿಕ ನಿತ್ರಾಣಗೊಂಡು ಸಾಯುತ್ತದೆ. ಅಚ್ಚರಿ ಎಂದರೆ ಹೆಣ್ಣು ಇಲಿ ತನ್ನ ಜೀವಿತಾವದಿಯಲ್ಲಿ ಎರಡು ಬಾರಿ ಮಾತ್ರ ಮರಿಗಳನ್ನು ಹೆರುತ್ತದೆ.

ಇದನ್ನೂ ಓದಿ - ಅಳಿವಿನಂಚಿನಲ್ಲಿರುವ ಬಲು ಅಪರೂಪದ ಈ ಕಪ್ಪು ಪ್ರಾಣಿಗಳು!

ಬ್ರೆಜಿಲ್‌ನ ಕಾಡುಪಾಪ (Brazilian Slender Opossums)

ಬ್ರೆಜಿಲ್‌ನ ಕಾಡುಪಾಪ (Brazilian Slender Opossums)

ಬ್ರೆಜಿಲ್‌ನ ಪೂರ್ವದ ಅರಣ್ಯಗಳಲ್ಲಿ ಕಾಣಬರುವ ಈ ಕಾಡುಪಾಪದಂತಹ ಪುಟ್ಟ ಜೀವಿಗಳು ಮರದಲ್ಲಿಯೇ ತಮ್ಮ ಜೀವನ ಸವೆಸುವಂತಹದ್ದಾಗಿವೆ. ಇದರಲ್ಲಿ ವಿಚಿತ್ರವೆಂದರೆ ಮಿಲನದ ಬಳಿಕ ಗಂಡು ಪ್ರಾಣಿ ತನ್ನ ಪ್ರಾಣ ಕಳೆದುಕೊಂಡರೆ ಹೆರಿಗೆಯ ಬಳಿಕ ಹೆಣ್ಣು ಪ್ರಾಣ ಕಳೆದುಕೊಳ್ಳುತ್ತದೆ.

English summary

Animals That Mate Themselves To Death

Is lovemaking really worth dying for? There are a few animals out there that die while they mate with their partners. These are the animals that die during the lovemaking sessions and the list can actually shock you, as these animals are not worth dying. Check out the list of these 5 animals that die while making love with their partners.
X
Desktop Bottom Promotion