ಈಕೆಯ ವಯಸ್ಸು 24-ಆದರೂ ಮಗುವಿನಂತೆ ಕಾಣುವ ಯುವತಿ!

ಆಕೆಗೆ ವಯಸ್ಸು 24 ಆಗಿದ್ದರೂ ಮಗುವಿನಂತಿದ್ದಾಳೆ. ಆಕೆಯ ಕಥೆ ಎಂಥವರ ಕಲ್ಲು ಹೃದಯವನ್ನು ನೀರಾಗಿಸುತ್ತದೆ. ಸರಿ 20 ಕೆಜಿ ಇದ್ದು 87 ಸೆಂ.ಮೀ ಇದ್ದಾಳೆ. ಆಕೆಯ ಮೂಕ ಭಾಷೆ ಆಕೆಯ ತಾಯಿಗೆ ಮಾತ್ರ ಅರ್ಥವಾಗುತ್ತದೆ.

By: Jaya subramanya
Subscribe to Boldsky

ಈ ಜಗತ್ತಿನಲ್ಲಿ ವಿಸ್ಮಯಗಳು ನಡೆಯುವುದು ಏನೂ ಕಡಿಮೆ ಏನಲ್ಲ. ಐದು ಕಾಲಿನ ಹಸುವಿನ ಜನನ, ಎರಡು ತಲೆಯ ಬೆಕ್ಕು, ಮಗುವಿಗೆ ಮೂರು ಕಾಲು, ವಿಕೃತ ರೂಪಿ ಮಕ್ಕಳು ಹೀಗೆ ಮನುಷ್ಯ ಪ್ರಾಣಿಗಳೆನ್ನದೆ ಪ್ರಕೃತಿ ತನ್ನ ಜಾದೂವನ್ನು ತೋರಿಸುತ್ತಿರುತ್ತದೆ. ಆದರೆ ನೈಸರ್ಗಿಕವಾಗಿ ಇದು ಪವಾಡ ಎಂದೆನ್ನಿಸಿದರೂ ಆ ಮಗು ಮತ್ತು ಅವರ ಪಾಲಕರು ಅನುಭವಿಸುವ ನೋವು ಅವರಿಗೆ ಗೊತ್ತಿರುತ್ತದೆ. ಪ್ರಪಂಚದಲ್ಲಿ ಈ ರೀತಿ ನಡೆಯುವುದು  ಈಕೆಗೆ ಇದೆ ಒಂದು ವಿಚಿತ್ರ ಕಾಯಿಲೆ-ಕೇಳಿದರೆ ಅಚ್ಚರಿ ಪಡುವಿರಿ!

ಸಾಮಾನ್ಯವಾಗಿದ್ದರೂ ಅದು ತುಂಬಾ ದುಃಖಕರವಾಗಿರುತ್ತದೆ. ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಸರಿ ರೆಜಿಟಾ ಅರಿಯಂತಿಯ ಕಥೆ ಮಾತ್ರ ಕರುಳು ಹಿಂಡುವಂತಿದೆ. ಆಕೆಗೆ ವಯಸ್ಸು 24 ಆಗಿದ್ದರೂ ಮಗುವಿನಂತಿದ್ದಾಳೆ. ಆಕೆಯ ಕಥೆ ಎಂಥವರ ಕಲ್ಲು ಹೃದಯವನ್ನು ನೀರಾಗಿಸುತ್ತದೆ. ಆಕೆಯ ದೇಹದ ತೂಕ ಸರಿಸುಮಾರು 20 ಕೆಜಿ ಇದ್ದು 87 ಸೆಂ.ಮೀ ಇದ್ದಾಳೆ, ಹಾಗೂ ಆಕೆಯ ಮೂಕ ಭಾಷೆ ಆಕೆಯ ತಾಯಿಗೆ ಮಾತ್ರ ಅರ್ಥವಾಗುತ್ತದೆ. ಆಕೆಗೆ ಸಂಭವಿಸಿದ್ದಾದರೂ ಏನು ಎಂಬುದನ್ನು ಅರಿಯೋಣ.....   

ನೋಡಲು ಇನ್ನೂ ಮಗುವಿನಂತೆ ಇದ್ದಾಳೆ....

ಆಕೆ ನೋಡಲು ಇನ್ನೂ ಮೂರು ವರ್ಷದ ಮಗುವಿನಂತೆ ಇದ್ದು ಆಕೆಗೆ 24 ರ ಹರೆಯ ಎಂಬುದಾಗಿ ಯಾರೂ ಹೇಳಲಿಕ್ಕಿಲ್ಲ....

ಆಕೆ 24 ರ ಹರೆಯದವಳು

ಆಕೆಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಮತ್ತು ತನ್ನ ವೀಲ್ ಚೇರ್ ಅನ್ನು ದೂಡಲು ಆಕೆಗೆ ಇನ್ನೊಬ್ಬರ ನೆರವು ಬೇಕು. ಮಾತನಾಡಲು ಸಾಧ್ಯವಾಗುವುದಿಲ್ಲ ಬರಿಯ ಕೈಸನ್ನೆಯಿಂದಲೇ ಸಂವಹನ ನಡೆಸುತ್ತಾಳೆ. ಆದರೆ ಮುಖದಲ್ಲಿ ನಗು ಎಂದಿಗೂ ಮಾಸುವುದಿಲ್ಲ.

ಪ್ರಾರಂಭದಲ್ಲಿ ಆಕೆಯ ಪರಿಸ್ಥಿತಿ ಅರಿವಾಗಲಿಲ್ಲ

ಆಕೆಗೆ ಎರಡು ವರ್ಷವಾಗುವವರೆಗೆ ಮಗಳು ಈ ಪರಿಸ್ಥಿತಿಯಲ್ಲಿದ್ದಾಳೆ ಎಂಬುದು ಆಕೆಯ ತಾಯಿಗೆ ತಿಳಿದಿರಲಿಲ್ಲ. ಪರಿಸ್ಥಿತಿ ಅರಿವಾಗುವಾಗ ಕೈಮೀರಿ ಹೋಗಿತ್ತು, ಮತ್ತು ಆಕೆಯನ್ನು ಉಪಚರಿಸುವುದು ಕಷ್ಟಕರವಾಗಿತ್ತು.

ಆಕೆಗೆ ಈ ಕೆಲಸಗಳೆಂದರೆ ಇಷ್ಟ

ತನ್ನ ಉಗುರುಗಳಿಗೆ ಬಣ್ಣ ಹಚ್ಚಿಕೊಳ್ಳುವುದು ಮತ್ತು ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದೆಂದರೆ ಆಕೆಗೆ ಇಷ್ಟ.

ಆಕೆಯ ದೇಹ ರಚನೆ ಮಗುವಿನಂತಿದೆ

ಆಕೆ ನೋಡಲು ಮಗುವಿನಂತಿದ್ದಾಳೆ ಮತ್ತು ಆಕೆಯ ದೇಹ ಕೂಡ ಸಣ್ಣದಾಗಿದೆ ಮತ್ತು ಮಕ್ಕಳಂತೆಯೇ ಆಕೆ ಇದ್ದಾಳೆ. ತನ್ನ ಮಾಸಿಕ ಮುಟ್ಟನ್ನು ಆಕೆ ಅನುಭವಿಸುತ್ತಾಳೆ. ನಾವು ಆಕೆಯ ಆರೋಗ್ಯಕ್ಕಾಗಿ ದೇವರನ್ನು ಪ್ರಾರ್ಥಿಸೋಣ ಅಂತೆಯೇ ನಿಮ್ಮ ಅಭಿಪ್ರಾಯವನ್ನು ನಮ್ಮ ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ಬರೆಯಿರಿ... 
All Image courtesy 

 

 

Story first published: Saturday, February 11, 2017, 11:27 [IST]
English summary

A Woman Who Is 24 Years Old & Looks Like A Toddler!

Check out the story of Sari Rezita Ariyanti who looks like a toddler, but is 24 years old, and here is her unique story.
Please Wait while comments are loading...
Subscribe Newsletter