For Quick Alerts
ALLOW NOTIFICATIONS  
For Daily Alerts

ಜುಕರ್‌ಬರ್ಗ್ ದಂಪತಿಯ ಸಮಾಜ ಸೇವೆಗೆ ನಮ್ಮದೊಂದು ಸಲಾಂ!

By Manu
|

ಖ್ಯಾತಿ ಮತ್ತು ಹಣಗಳಿಸುವ ಮೊದಲು ಹೆಚ್ಚಿನವರು ಒಂದು ವೇಳೆ ತಮಗೆ ಹಣ ಬಂದರೆ ಬಡಬಗ್ಗರ ಸೇವೆ ಮಾಡುತ್ತೇನೆ ಎಂದೆಲ್ಲಾ ಬೊಗಳೆ ಬಿಡುತ್ತಾರೆ. ಹಣ ಬಂದ ಬಳಿಕ ಇವರು ಹೆಚ್ಚಾಗಿ ಇದನ್ನು ಇನ್ನೂ ಹೆಚ್ಚು ಮಾಡುವತ್ತ ವಿನಿಯೋಗಿಸುತ್ತಾರೆಯೇ ವಿನಃ ಬಡಜನರಿಗೆ ಏನೂ ಮಾಡುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ಕೆಲವು ವ್ಯಕ್ತಿಗಳು ಪ್ರಚಾರ ಬಯಸದೇ ಅಪಾರವಾದ ಜನಸೇವೆಯನ್ನು ಮಾಡುತ್ತಾ ಬಂದಿದ್ದಾರೆ.

ಈ ಪಟ್ಟಿಯಲ್ಲಿ ಹೊಸ ಸೇರ್ಪಡೆ ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ಬರ್ಗ್ (ಮಾರ್ಕ್ ಜ್ಯೂಕರ್ಬರ್ಗ್ ಅಂತಾಲೂ ಕರೆಯುತ್ತಾರೆ) ಮತ್ತು ಪ್ರಿಸಿಲ್ಲಾ ದಂಪತಿಗಳದ್ದು. ಈ ದಂಪತಿಗಳು ವಿವಿಧ ಕಾಯಿಲೆಗಳಿಗೆ ಚಕಿತ್ಸೆಯ ರೂಪದಲ್ಲಿ ಸುಮಾರು ಮೂರು ಬಿಲಿಯನ್ ಡಾಲರುಗಳು ಅಂದರೆ ಸುಮಾರು 1200 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದ್ದಾರೆ.

Zuckerberg & Priscilla Chan

ಈ ಧನ ಕೇವಲ ಸಂಶೋಧನೆ ಮತ್ತು ಚಿಕಿತ್ಸೆಗೆ ಮಾತ್ರ ಬಳಸಲ್ಪಡಲಾಗುತ್ತದೆ ಹಾಗೂ ಕೇವಲ ಅರ್ಹ ಜನರಿಗೆ ಮಾತ್ರ ಲಭ್ಯವಾಗಲಿದೆ. ಈ ದಾನದ ಮೂಲಕ ಒಳ್ಳೆಯ ಜನರು ಈ ಭೂಮಿಯ ಮೇಲೆ ಈಗಲೂ ಇದ್ದಾರೆ ಎಂಬುದನ್ನು ಈ ದಂಪತಿಗಳು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಮಾರ್ಕ್ ಜುಕರ್ಬರ್ಗ್ ಹಾಗೂ ಅವರ ಪತ್ನಿ ಪ್ರಿಸಿಲ್ಲಾ ಚಾನ್‌ರವರು ಡಿಸೆಂಬರ್ 1, 2015 ರಂದು ಒಂದು ನಿಯಮಿತ ಸಂಸ್ಥೆಯನ್ನು ಕಟ್ಟಿದ್ದರು. ಅಂದಿನಿಂದ ಈ ಸಂಸ್ಥೆ ಸತತವಾಗಿ ಬೆಳೆಯುತ್ತಿದೆ. ಬನ್ನಿ, ತಮ್ಮಲ್ಲಿರುವ ಈ ಅಪಾರ ಧನವನ್ನು ಏಕಾಗಿ ಈ ದಂಪತಿ ಜನಸೇವೆಗಾಗಿ ಮುಡಿಪಾಗಿಟ್ಟರು ಎಂಬ ವಿಷಯವನ್ನು ಈಗ ಅರಿಯೋಣ:

ತಾವು ಮೂರು ಬಿಲಿಯನ್ ಡಾಲರುಗಳನ್ನು ನೀಡುತ್ತೇವೆ ಎಂದು ಮೊದಲೇ ಹೇಳಿಕೊಂಡಿದ್ದರು ಮುಂದಿನ ದಶಕದಲ್ಲಿ ತಾವು ಚಿಕಿತ್ಸೆಯ ನೆರವಿಗಾಗಿ ಮೂರು ಬಿಲಿಯನ್ ಡಾಲರುಗಳನ್ನು ನೀಡುತ್ತೇವೆ ಎಂದು ಈ ದಂಪತಿಗಳು ಮೊದಲೇ ಹೇಳಿದ್ದರು. ಈ ಮೂಲಕ ಹಲವು ಕಾಯಿಲೆಗಳನ್ನು ಬರದಂತೆ ತಡೆಗಟ್ಟುವ ಹಾಗೂ ಈ ಶತಮಾನದ ಅಂತ್ಯದ ವೇಳೆಗೆ ಎಲ್ಲಾ ಕಾಯಿಲೆಗಳನ್ನು ತಹಬಂದಿಗೆ ತರುವ ಪ್ರಯತ್ನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದಿದ್ದರು.

ಅವರ ಮಗಳೇ ನಿಜವಾದ ಪ್ರೇರಣೆ
ಇವರ ಪುತ್ರಿ ಮ್ಯಾಕ್ಸ್‌ಳ ಜನನವಾದ ಬಳಿಕ ಈ ದಂಪತಿಗಳಿಗೆ ತಮ್ಮಂತೆಯೇ ಇತರ ಜನರೂ ಉತ್ತಮ ಜೀವನ ಸಾಗಿಸುವಂತಾಗಬೇಕು ಎಂಬ ಹಂಬಲ ಉಲ್ಬಣಗೊಳ್ಳತೊಡಗಿತು. ಅಲ್ಲದೇ ಉತ್ತಮ ಆರೋಗ್ಯವೆನ್ನುವುದು ಎಲ್ಲರೂ ಹೊಂದುವಂತಾಗಬೇಕು ಎಂದು ಅವರು ಪಣತೊಟ್ಟರು.

ಮುಂದಿನ ನೂರು ವರ್ಷಗಳು
ಈ ಹಣವನ್ನು ನೂರು ವರ್ಷಗಳವರೆಗೆ ಜನರ ಆಯಸ್ಸನ್ನು ವೃದ್ಧಿಸಲು ಅನುಕೂಲವಾಗುವ ಸಂಶೋಧನೆ, ಚಿಕಿತ್ಸೆಗಳಿಗೆ ಬಳಸಲಾಗುವುದು.

ಈ ದಂಪತಿಗಳಿಗೆ ಶುಭಹಾರೈಕೆಗಳು
ಜನರ ಆರೋಗ್ಯಕ್ಕಾಗಿ ತಮ್ಮ ದುಡಿಮೆಯ ಹಣವನ್ನು ವಿನಿಯೋಗಿಸುತ್ತಿರುವ ಈ ದಂಪತಿಗಳು ಇತರರಿಗೂ ಮಾದರಿಯಾಗಲಿ, ಈ ವಿನಿಯೋಗದ ಮೂಲಕ ಹಲವಾರು ಸಂಶೋಧನೆಗಳು ನಡೆದು ಇದರ ಪ್ರಯೋಜನವನ್ನು ಅಗತ್ಯವುಳ್ಳವರು ಪಡೆಯುವಂತಾಗಲಿ ಎಂದು ನಾವೆಲ್ಲರೂ ಹಾರೈಸೋಣ.

English summary

Zuckerberg & Priscilla Chan To Spend $3 Billion To Cure Diseases

Charity begins at home and a clear example of this is the Facebook founder "Mark Zuckerberg & his loving wife Priscilla Chan's" act of making a whopping donation of $3 billion for treatment of various diseases. They'd be investing this huge amount for research and to cure diseases that people are afflicted with.
X
Desktop Bottom Promotion