For Quick Alerts
ALLOW NOTIFICATIONS  
For Daily Alerts

ಮುಸಲ್ಮಾನ್ ಸ್ನೇಹಿತರಿದ್ದರೆ, ಭೂರಿ ಭೋಜನಕ್ಕೆ ಮೋಸವಿಲ್ಲ!

By Manu
|

ಭಾರತೀಯರು ಎಂದರೆ ಸಾಕು, ವಿಶ್ವದ ಇತರೆ ದೇಶಗಳಲ್ಲಿ ನೆಲೆಸಿರುವವರಿಗೆ ಬಣ್ಣ ಬಣ್ಣದ ಚಿತ್ರಗಳು ಮನದಲ್ಲಿ ಸಾಗುತ್ತವೆ. ಬಣ್ಣಗಳಿಂದ ಕೂಡಿದ ಬಟ್ಟೆಗಳು, ಹಬ್ಬಗಳು, ಅಷ್ಟೇ ಅಲ್ಲ ಅಡುಗೆಗಳು ಸಹ ಅವರ ನೆನಪಿಗೆ ಬರುತ್ತವೆ. ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯೇ ಹಾಗೆ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಂಸ್ಕೃತಿ ನಮ್ಮದು.

ಭಾರತವೆಂಬುದು ಹಲವಾರು ಧರ್ಮಗಳೆಂಬ ನದಿಗಳು ಬಂದು ಸೇರುವ ಸಾಗರವಿದ್ದಂತೆ. ಅದರಲ್ಲಿ ಹಿಂದೂ, ಮುಸಲ್ಮಾನ್, ಕ್ರೈಸ್ತ ಸೇರಿದಂತೆ ಹಲವಾರು ಧರ್ಮಗಳು ಇವೆ. ಅಡುಗೆಯ ವಿಚಾರಕ್ಕೆ ಬಂದರೆ ಹಿಂದೂ ಧರ್ಮೀಯರಷ್ಟೇ ಅಲ್ಲದೆ, ಮುಸಲ್ಮಾನ್ ಧರ್ಮೀಯರು ಸಹ ಒಳ್ಳೆಯ ಪಾಕ ಪ್ರಾವೀಣ್ಯತೆಯನ್ನು ಪಡೆದವರು ಎಂದು ಪರಿಗಣಿಸಲ್ಪಟ್ಟಿದ್ದಾರೆ!.

ನಿಜ ನೀವು ನಂಬಿದರು ಮತ್ತು ನಂಬದಿದ್ದರೂ, ಮುಸಲ್ಮಾನರು ತಮ್ಮ ಮನೆಗಳಲ್ಲಿಯೇ ವಿಶ್ವದ ಅತ್ಯಂತ ರುಚಿಕರವಾದ ಬಿರಿಯಾನಿಯನ್ನು ತಯಾರಿಸುತ್ತಾರೆ! ಜೊತೆಗೆ ಇನ್ನಿತರ ಖಾದ್ಯಗಳನ್ನು ಸಹ ಇವರು ತಯಾರಿಸುತ್ತಾರೆ. ಒಂದು ವೇಳೆ ನೀವು ಯಾವುದಾದರೂ ಮುಸಲ್ಮಾನ್ ಸ್ನೇಹಿತರ ಮನೆಗೆ ಅಚಾನಕಾಗಿ ಭೇಟಿ ನೀಡಿದರೆ, ಅವರ ಮನೆಯ ಡೈನಿಂಗ್ ಟೇಬಲ್ ಮೇಲೆ ನಿಮಗೆ ಎರಡು ಅಥವಾ ಮೂರು ಬಗೆಯ ಮನೆಯಲ್ಲಿ ಮಾಡಿದ ಸಿಹಿತಿಂಡಿಗಳು ಕಾಣಿಸಿಕೊಳ್ಳುತ್ತವೆ. ಅದೂ ಆ ಬಿರಿಯಾನಿ ಬಡಿಸುವ ದೊಡ್ಡ ಪಾತ್ರೆಯ ಪಕ್ಕದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಮುಸ್ಲಿಮರು ಎಂದಾಕ್ಷಣ ಅವರೆಲ್ಲರೂ ಉಗ್ರಗಾಮಿಯಲ್ಲ...

ಇನ್ನು ಮದುವೆಗಳ ವಿಚಾರಕ್ಕೆ ಬಂದರೆ, ಅದು ಯಾವಾಗಲು ವರ್ಣರಂಜಿತವಾಗಿರುತ್ತದೆ. ಅದರಲ್ಲೂ ಗಾಢ ಬಣ್ಣಗಳು ನಿಮಗೆ ಮದುವೆಯಲ್ಲಿ ಎದ್ದು ಕಾಣುತ್ತವೆ. ಅವರು ಯಾವಾಗಲು ಯಾವುದೇ ಉಡುಗೆಯನ್ನಾಗಲಿ ಪರ್ಫೆಕ್ಟ್ ಎನ್ನುವ ರೀತಿ ಧರಿಸುತ್ತಾರೆ. ಸರಿ ಬನ್ನಿ ಇಂದು ನಾವೆಲ್ಲರೂ ಕನಿಷ್ಠ ಒಬ್ಬ ಮುಸಲ್ಮಾನ್ ಸ್ನೇಹಿತರನ್ನಾದರು ಏಕೆ ಹೊಂದಿರಬೇಕು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ. ಅದಕ್ಕೆ ನಾನು ನೀಡುವ ಕಾರಣಗಳನ್ನು ತಿಳಿದುಕೊಳ್ಳಲು ಮುಂದೆ ಓದಿ!

ಅವರ ಮನೆಯಲ್ಲಿ ಊಟೋಪಚಾರದ ಸುನಾಮಿ

ಅವರ ಮನೆಯಲ್ಲಿ ಊಟೋಪಚಾರದ ಸುನಾಮಿ

ಹಲವಾರು ಮುಸಲ್ಮಾನ್ ಸ್ನೇಹಿತರು ಆಹಾರ ಪ್ರಿಯರಾಗಿರುತ್ತಾರೆ. ಅದಕ್ಕಾಗಿ ಅವರ ಮನೆಯಲ್ಲಿ ಊಟ ತಿಂಡಿಗೆ ಕೊರತೆಯಿಲ್ಲದೆ, ಯಾವಾಗಲು ಏನಾದರು ವಿಶೇಷವಿರುತ್ತದೆ. ನೀವು ಅವರ ಮನೆಗೆ ಹೋದಾಗ ನಿಮಗೆ ಊಟೋಪಚಾರದ ಸುನಾಮಿ ಎದುರಾದರೆ ಅಚ್ಚರಿಪಡಬೇಡಿ. ಅವರ ಮನೆಯ ಡೈನಿಂಗ್ ಟೇಬಲ್ ಖಾಲಿಯಿರುವುದಿಲ್ಲ, ಅಲ್ಲಿ ಏನಾದರು ತಿಂಡಿ ಪದಾರ್ಥ ಇದ್ದೇ ಇರುತ್ತದೆ, ಕನಿಷ್ಠ ಕುರುಕಲು ತಿಂಡಿಗಳಾದರು ಅಲ್ಲಿ ಕಾಯುತ್ತಿರುತ್ತವೆ.

ಬಿರಿಯಾನಿ, ಬಿರಿಯಾನಿ, ಇನ್ನಷ್ಟು ಬಿರಿಯಾನಿ

ಬಿರಿಯಾನಿ, ಬಿರಿಯಾನಿ, ಇನ್ನಷ್ಟು ಬಿರಿಯಾನಿ

ನೀವು ಬಿರಿಯಾನಿ ಪ್ರಿಯರಾಗಿದ್ದಲ್ಲಿ, ನಿಮಗೆ ಖಂಡಿತ ಒಬ್ಬ ಮುಸಲ್ಮಾನ್ ಸ್ನೇಹಿತರು ಇರಲೇ ಬೇಕು. ಏಕೆಂದರೆ ಮುಸಲ್ಮಾನ್ ಬಾಂಧವರಿಗಿಂತ ಈ ಖಾದ್ಯವನ್ನು ಚೆನ್ನಾಗಿ ಮಾಡುವವರು ಪ್ರಪಂಚದಲ್ಲಿಯೇ ಇಲ್ಲ. ಅವರ ಮನೆಗಳಲ್ಲಿ, ಅವರದೇ ಆದ ಶೈಲಿಯ ಬಿರಿಯಾನಿಯ ಜೊತೆಗೆ, ಹೈದರಾಬಾದಿನಿಂದ ಹಿಡಿದು, ಅರೇಬಿಯಾದ ಕಬ್ಸಾ ಬಿರಿಯಾನಿಯವರೆಗೆ ಎಲ್ಲಾ ಬಗೆಗಳನ್ನು ಇವರು ಮಾಡುತ್ತಾರೆ.

ಸಿಹಿ ತಿಂಡಿಗಳ ದರ್ಬಾರ್

ಸಿಹಿ ತಿಂಡಿಗಳ ದರ್ಬಾರ್

ಕೆಲವರ ಮನೆಯಲ್ಲಿ ಬಿರಿಯಾನಿ ತಿಂದ ಕೂಡಲೆ ಸಿಹಿ ತಿಂಡಿಯನ್ನು ಕೊಡುತ್ತಾರೆ, ಖಾರ ಕಡಿಮೆಯಾಗಲಿ ಎಂದು!. ಇನ್ನೂ ಕೆಲವರ ಮನೆಯಲ್ಲಿ ರಂಜಾನ್, ಬಕ್ರೀದ್ ಮುಂತಾದ ಹಬ್ಬಗಳ ದಿನ ಮನೆಗೆ ಬಂದವರಿಗೆ ಮೊದಲು ಶೀರ್ ಕುರ್ಮಾ ಮತ್ತು ಮಲ್ಪುವಾ ಇರುವ ರಬ್ರಿ ಕೊಡುತ್ತಾರೆ. ಇವುಗಳನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಇದು ಇವರ ಸಮುದಾಯದಲ್ಲಿ ವಿಶೇಷವಾಗಿ ತಯಾರಿಸುವ ಸಿಹಿ ತಿಂಡಿಗಳಾಗಿರುತ್ತವೆ. ಅದರಲ್ಲೂ ಆ ಪಿಸ್ತಾ, ಗೊಡಂಬಿ, ದ್ರಾಕ್ಷಿ ಮತ್ತು ಬಾದಾಮಿ ಹಾಕಿದ ಪಾಯಸವನ್ನು ಸೇವಿಸಿದವರಿಗೆ ಮಾತ್ರ ಗೊತ್ತು ಆ ರುಚಿ.

ಆ ಸುಂದರ ಚಿನ್ನದ ಒಡವೆಗಳು

ಆ ಸುಂದರ ಚಿನ್ನದ ಒಡವೆಗಳು

ಮುಸಲ್ಮಾನರಿಗೆ ಈ ಹಳದಿ ಲೋಹದ ಮೇಲೆ ಮೋಹ! ಅದನು ನೋಡಬೇಕು ಎಂದರೆ ಇವರ ವಧುಗಳನ್ನು ನೋಡಿ. ಹಳದಿ ಬಣ್ಣದ ಲೋಹ ಎದ್ದು ಕಾಣುವಂತೆ ಇರುತ್ತದೆ. ಕೆಲವು ಕಡೆಯಲ್ಲಂತು ಪ್ರಕಾಶಮಾನವಾಗಿ ಕಾಣುವಷ್ಟು ಒಡವೆಗಳನ್ನು ಧರಿಸಿರುತ್ತಾರೆ. ಇನ್ನೂ ಕೆಲವು ಕಡೆ ಕಡಿಮೆ ಧರಿಸಿದರು ಆಕರ್ಷಕವಾಗಿರುವಂತೆ ನೋಡಿಕೊಂಡಿರುತ್ತಾರೆ.

ವೈಭವೋಪೇತ ಮದುವೆಗಳು

ವೈಭವೋಪೇತ ಮದುವೆಗಳು

ಒಂದು ವೇಳೆ ನೀವು ಮುಸಲ್ಮಾನರ ಮದುವೆಗೆ ಹೋದರೆ, ನಿಮಗೆ ಆ ಅದ್ಧೂರಿತನದ ಪರಿಚಯವಾಗುತ್ತದೆ. ವರ್ಣರಂಜಿತ ಉಡುಗೆ ತೊಡುಗೆಗಳು, ವಿನ್ಯಾಸಗಳು ನಿಮ್ಮನ್ನು ಸೆಳೆಯುತ್ತವೆ. ಕೆಲವು ಮದುವೆಗಳಂತು ವಿಶೇಷವಾದ ಪರಿಕಲ್ಪನೆಗಳಿಂದ ಕೂಡಿದ ಸೆಟ್‌ನಲ್ಲಿ ನಡೆದರೆ, ಮಧ್ಯಮ ಮತ್ತು ಬಡ ಕುಟುಂಬಗಳು ಸಹ ತಮ್ಮ ಕೈಲಾದ ಅದ್ಧೂರಿತನದಲ್ಲಿ ಮದುವೆ ಮಾಡಿಕೊಡುತ್ತಾರೆ.

English summary

Why We All Should Have Muslim Friends

The one thing that everyone looks forward to in an Indian home is food. Indians are known for their great diversity of cuisine and from the many cultures and religions, and not to be partial, it is said that Muslims are the better cooks! Here are some of my reasons as to why having a Muslim friend is just awesome. Take a look and do let us know your reasons too!
Story first published: Thursday, February 11, 2016, 11:58 [IST]
X
Desktop Bottom Promotion