ಅಶ್ಲೀಲ ಚಿತ್ರಗಳನ್ನು 'ನೀಲಿ ಚಿತ್ರ' ಎಂದೇಕೆ ಕರೆಯುತ್ತಾರೆ?

By: deepu
Subscribe to Boldsky

ಭಾರತದಲ್ಲಿ ಕದ್ದು ಮುಚ್ಚಿ ನೋಡುವ, ಕುಡಿಯುವ, ಜಗಿಯುವ ವಸ್ತುಗಳಿಗೆ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಮುಂಬೈಯಲ್ಲಿ ಕಂಭ ಎಂದು ಯಾವುದನ್ನು ಕರೆಯುತ್ತಾರೆ ಗೊತ್ತೇ? ಮದ್ಯದ ಬಾಟಲಿಯನ್ನು. ಇದೇ ರೀತಿ ಪಿಸ್ತೂಲಿಗೆ ಘೋಡಾ, ಲಕ್ಷ ರೂಪಾಯಿಗೆ ಪೇಟಿ, ಕೋಟಿ ರೂಪಾಯಿಗೆ ಖೋಕಾ ಮೊದಲಾದ ಹೆಸರುಗಳಿವೆ. ಅಂತೆಯೇ ಕನ್ನಡದಲ್ಲಿ ಮದ್ಯಕ್ಕೆ 'ಎಣ್ಣೆ' ಎಂದೂ ಕರೆಯುತ್ತಾರೆ. ಎಲ್ಲೆಡೆ ಇಂದು ಸಾರ್ವತ್ರಿಕವಾಗಿರುವ ಅಶ್ಲೀಲ ಚಿತ್ರಗಳಿಗೆ ನೀಲಿ ಚಿತ್ರಗಳು ಎಂದು ಕರೆಯುತ್ತಾರೆ.

ಅಶ್ಲೀಲ ಎಂದು ಕರೆಯಲು ಪಡುವ ಮುಜುಗರ ನೀಲಿಚಿತ್ರ ಅಥವಾ ಬ್ಲೂ ಫಿಲ್ಮ್ ಎಂದು ಹೇಳಿಕೊಳ್ಳಲು ಉಂಟಾಗುವುದಿಲ್ಲ. ಆದರೆ ಈ ಪದ ಕೇಳಿದಾಕ್ಷಣ ಹುಬ್ಬು ಮೇಲೇರುವುದಂತೂ ಖಂಡಿತ.

ಭಾರತದಂತಹ ಸಂಪ್ರದಾಯಿಕ ರಾಷ್ಟ್ರದಲ್ಲಿ ಇಂದಿಗೂ ವಿವಾಹದ ಹೊರಗಿನ ಸಂಬಂಧಕ್ಕೆ ಯಾವುದೇ ಮನ್ನಣೆ ಇಲ್ಲವಾಗಿದ್ದು ಕದ್ದು ಮುಚ್ಚಿ ನಡೆಯುವ ಸಂಬಂಧಗಳನ್ನು ಕಾನೂನುಬಾಹಿರ ಎಂದೇ ಪರಿಗಣಿಸಲ್ಪಡುತ್ತದೆ. ಆದರೂ ಕಾಮದ ಬಗ್ಗೆ ಇರುವ ಕುತೂಹಲ ಈ ಚಿತ್ರಗಳನ್ನು ಕದ್ದು ಮುಚ್ಚಿಯಾದರೂ ನೋಡಲು ಪ್ರೇರೇಪಿಸುತ್ತದೆ. ಬನ್ನಿ, ಈ ಪದದ ಬಳಕೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೋಡೋಣ

ಕಾರಣ #1

ಚಲನಚಿತ್ರಗಳನ್ನು ಸಿನಿಮಾ ಮಂದಿರಗಳ ಬದಲಿಗೆ ಮನೆಯಲ್ಲಿಯೇ ವೀಸಿಆರ್ ಮೂಲಕ ನೋಡುವ ಪ್ರಕ್ರಿಯೆ ಪ್ರಾರಂಭವಾದ ಬಳಿಕ VSR ಕ್ಯಾಸೆಟ್ಟುಗಳಿಗೆ ಭಾರೀ ಬೇಡಿಕೆ ಉಂಟಾಗಿತ್ತು. ಸಾಂಸಾರಿಕ ಚಿತ್ರಗಳೊಂದಿಗೇ ವಯಸ್ಕರ ಚಿತ್ರದ ಕ್ಯಾಸೆಟ್ಟುಗಳೂ ಜೊತೆಗೇ ಬರುತ್ತಿದ್ದವು.

ಕಾರಣ #1

ಆದರೆ ಇವುಗಳನ್ನು ಪ್ರತ್ಯೇಕಿಸುವುದು ಹೇಗೆ? ಆದ್ದರಿಂದ ಇವುಗಳನ್ನು ಗುರುತಿಸಲು ಸುಲಭವಾಗುವಂತೆ ಸಾದಾ ಬಿಳಿಯ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸಾಂಸಾರಿಕ ಚಿತ್ರಗಳನ್ನೂ ನೀಲಿ ಬಣ್ಣದ ಅಪಾರದರ್ಶಕ ನೀಲಿ ಬಣ್ಣದ ಪೊಟ್ಟಣದಲ್ಲಿ ವಯಸ್ಕರ ಚಿತ್ರದ ಕ್ಯಾಸೆಟ್ಟುಗಳನ್ನೂ ಪ್ಯಾಕ್ ಮಾಡಿ ಕಳುಹಿಸಲಾಗುತ್ತಿತ್ತು. ನೀಲಿ ಬಣ್ಣ ಎಂದ ಕೂಡಲೇ ಇದರಲ್ಲಿ ವಯಸ್ಕರ ಚಿತ್ರ ಇದೆ ಎಂದು ತಿಳಿಯಲಾಗುತ್ತಿತ್ತು. ಇದೇ ಬ್ಲೂ ಫಿಲ್ಮ್‌ನ ಹೆಸರಿನ ಗುಟ್ಟು.

ಕಾರಣ #2

ಸಾಮಾನ್ಯವಾಗಿ ವಯಸ್ಕರ ಚಿತ್ರದ ಪೋಸ್ಟರುಗಳನ್ನು ಅಂಟಿಸುವಾಗ ಹಿನ್ನೆಲೆ ನೀಲಿಯಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅಂದರೆ ಈ ಪೋಸ್ಟರು ನೋಡಿದ ಕೂಡಲೇ ಜನರಿಗೆ ಇದು ವಯಸ್ಕರ ಚಿತ್ರ ಎಂದು ಗೊತ್ತಾಗುತ್ತಿತ್ತು.

ಕಾರಣ #3

ಇಂದು ನೀಲಿ ಚಿತ್ರಗಳೂ ದೊಡ್ಡ ಬಜೆಟ್ಟಿನಲ್ಲಿ ಚಿತ್ರೀಕರಣಗೊಳ್ಳುತ್ತಿವೆ. ಆದರೆ ಹಿಂದಿನ ದಿನಗಳಲ್ಲಿ ಕಡಿಮೆ ಬಜೆಟ್ಟಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಹೆಚ್ಚಾಗಿ ಈ ಚಿತ್ರಗಳನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಿ ಕಡಿಮೆ ಬಜೆಟ್ಟಿನಲ್ಲಿ ಬಣ್ಣಗೊಳಿಸುವ ಯತ್ನಗಳಾಗುತ್ತಿದ್ದವು.

ಕಾರಣ #3

ಇದು ಒಂದು ಬಗೆಯ ನೀಲಿ ಛಾಯೆಯನ್ನು ಚಿತ್ರದ ಮೇಲೆ ಮೂಡಿಸುತ್ತಿತ್ತು, ನೀಲಿ ಚಿತ್ರವೆಂಬ ಹೆಸರು ಬರಲು ಈ ಕಾರಣವೂ ಒಂದು.

ಕಾರಣ #4

ಸಾಮಾನ್ಯವಾಗಿ ಹಿಂದಿನ ದಿನಗಳಲ್ಲಿ ನೀಲಿ ಚಿತ್ರಗಳನ್ನು ತಡರಾತ್ರಿ ಮತ್ತು ಕೊಳಕು ಚಿತ್ರಮಂದಿರಗಳಲ್ಲಿಯೇ ತೋರಿಸಲಾಗುತ್ತಿತ್ತು. ಅಂದರೆ ಕೊಳಕಾದ ಚಿತ್ರಮಂದಿರಕ್ಕೆ ಗ್ರಾಹಕರನ್ನು ಆಕರ್ಷಿಸಲು ತಡರಾತ್ರಿಯೇ ಪ್ರದರ್ಶಿಸಲಾಗುತ್ತಿತ್ತು.

ಕಾರಣ #4

ಕಾರ್ಮಿಕ ಜನರೇ ಹೆಚ್ಚಾಗಿ ಈ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದು ಈ ಚಿತ್ರಗಳು ಕೆಳವರ್ಗದ ಜನರಿಗಾಗಿ ಎಂದು ಅವಹೇಳನ ಮಾಡಲು ಈ ಚಿತ್ರಗಳಿಗೆ ನೀಲಿ ಹೆಸರು ಅಂಟಿಕೊಂಡಿತು.

ಕಾರಣ #5

ಸುಮಾರು ಐವತ್ತು ಅರವತ್ತು ವರ್ಷದ ಹಿಂದೆ ಭಾರತದ ಹಲವು ರಾಜ್ಯಗಳಲ್ಲಿ 'ನೀಲಿ ಕಾನೂನು' ಜಾರಿಯಲ್ಲಿತ್ತು. ಈ ಕಾನೂನಿನ ಪ್ರಕಾರ ಭಾನುವಾರ ಎಲ್ಲಾ ವಹಿವಾಟಿಗೆ ರಜೆ ಇರಲಾಗುತ್ತಿತ್ತು.

ಕಾರಣ #5

ರಜೆ ಇದ್ದಾಗ ಜನರಿಗೆ ಹೆಚ್ಚು ಸಮಯವಿದ್ದು ಆ ಸಮಯದಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಕದ್ದು ಮುಚ್ಚಿಯೇ ಪ್ರದರ್ಶಿಸಲಾಗುತ್ತಿದ್ದ ಈ ಚಿತ್ರಕ್ಕೆ ನೀಲಿ ಚಿತ್ರ ಎಂಬ ಹೆಸರು ಅಂಟಿಕೊಂಡಿತು.

 

English summary

Why Porn Movies Are Called Blue Movies?

The word "Porn or blue films" are enough to make people raise their eyebrows or to make a person feel guilty of what they just told, as it is considered as a taboo, at least in this part of the continent! We'll let you know about reasons why porn movies are often referred to as blue films, check it out.
Please Wait while comments are loading...
Subscribe Newsletter