ಚಲನಚಿತ್ರಗಳಲ್ಲಿ ನಗ್ನತೆ-ಮಹಿಳೆಗೇ ಏಕೆ ಸೀಮಿತ?

ಚಲನಚಿತ್ರದ ಆಕರ್ಷಣೆ ಹೆಚ್ಚಲು ಕೇವಲ ಹೆಣ್ಣಿನ ದೇಹದ ಅಂಗಗಳಿಗೇ ಹೆಚ್ಚಿನ ಪ್ರಾಶಸ್ತ್ಯವೇಕೆ? ಈ ಪ್ರಶ್ನೆಯನ್ನು ಈ ಲೇಖನದಲ್ಲಿ ನೀಡಲಾಗಿದೆ... ಮುಂದೆ ಓದಿ...

By: Arshad
Subscribe to Boldsky

ಚಲನಚಿತ್ರ ಲಾಭಕರವಾಗಿ ನಡೆಯಲು ಹಲವಾರು ವಿಷಯಗಳನ್ನು ಅಳವಡಿಸಬೇಕಾಗುತ್ತದೆ. ಚಿತ್ರಕಥೆ, ಸಂಭಾಷಣೆ, ಹಾಡು, ಹಾಸ್ಯ, ಉಡುಪು, ಸ್ಥಳ ಇತ್ಯಾದಿ. ಆದರೆ ಇಷ್ಟೇ ಸಾಕಾಗುವುದಿಲ್ಲ, ಪ್ರೇಕ್ಷಕನಿಗೆ ಗುಟ್ಟಾಗಿ ಇನ್ನೇನೋ ನೀಡುತ್ತಿದ್ದೇವೆ ಎಂಬ ಭಾವನೆ ಬರಲು ನಡುನಡುವೆ ಬಿಸಿಯೇರಿಸುವ ದೃಶ್ಯ ಮತ್ತು ಸಂಭಾಷಣೆಗಳನ್ನೂ ತೂರಿಸಲಾಗುತ್ತದೆ. ಎಷ್ಟು ತೂರಿಸಬಹುದು ಎಂಬುದನ್ನು ಸೆನ್ಸಾರ್ ಮಂಡಳಿ ನಿರ್ಧರಿಸುತ್ತದೆ.   ಅಶ್ಲೀಲ ಚಿತ್ರಗಳನ್ನು 'ನೀಲಿ ಚಿತ್ರ' ಎಂದೇಕೆ ಕರೆಯುತ್ತಾರೆ?

ಆದರೆ ಸೆನ್ಸಾರ್ ಮಂಡಳಿಯ ಕತ್ತರಿಗೂ ಸಿಗದೇ ಪ್ರದರ್ಶಿಸಲ್ಪಡುವ ಇಂದಿನ ಚಲನಚಿತ್ರಗಳಲ್ಲಿ ಚುಂಬನ ದೃಶ್ಯಗಳೊಂದಿಗೆ ನಾಯಕಿಯ ಅಥವಾ ಇತರ ಮಹಿಳಾ ಪಾತ್ರಧಾರಿಗಳ ಗುಪ್ತಾಂಗಗಳನ್ನು ಕ್ವಚಿತ್ತಾಗಿ ಎಂಬಂತೆ ತೋರಿಸಲಾಗುತ್ತದೆ. ಆದರೆ ಪುರುಷನ ಗುಪ್ತಾಂಗಗಳನ್ನು ಸರ್ವಥಾ ತೋರಿಸಲಾಗುವುದಿಲ್ಲ. ಇದರ ಹಿಂದೆ ಏನೋ ಮಸಲತ್ತು ಇದೆ ಎಂದು ಅನ್ನಿಸುವುದಿಲ್ಲವೇ?   ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!

ಹಾಗೇ ತೋರಿಸಲೇಬೇಕಿದ್ದರೆ ಅದು ವಯಸ್ಕರ ಪೋಲಿಚಿತ್ರವೇ ಆಗಬೇಕೇ ಹೊರತು ಸಾಮಾಜಿಕ ಪ್ರದರ್ಶನವಾಗುವುದಿಲ್ಲ. ಈಗ NC-17 ಎಂಬ ಹೊಸ ಮಾನದಂಡ ಬಂದಿದ್ದು ಈ ಚಿತ್ರಗಳನ್ನು ಕೇವಲ ವಯಸ್ಕರಿಗೆ ಮಾತ್ರವೇ ನಿಗದಿಪಡಿಸಲಾಗಿದೆ. ಆದರೂ ಚಲನಚಿತ್ರದ ಆಕರ್ಷಣೆ ಹೆಚ್ಚಲು ಕೇವಲ ಹೆಣ್ಣಿನ ದೇಹದ ಅಂಗಗಳಿಗೇ ಹೆಚ್ಚಿನ ಪ್ರಾಶಸ್ತ್ಯವೇಕೆ? ಈ ಪ್ರಶ್ನೆಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಒಂದು ವೇಳೆ ಈ ಲೇಖನ ಓದುತ್ತಿರುವವರು ಮಹಿಳೆಯಾಗಿದ್ದರೆ ಇದುವರೆಗೆ ಈ ಬಗ್ಗೆ ಇದ್ದ ನಿಮ್ಮ ಅಭಿಪ್ರಾಯಗಳು ಬದಲಾಗಿ ಹೆಮ್ಮೆಯೂ ಮೂಡಬಹುದು...  

ಕಾರಣ #1

ಪುರುಷನ ದೇಹ ಸೌಂದರ್ಯಕ್ಕಿಂತಲೂ ಮಹಿಳೆಯ ದೇಹ ಸೌಂದರ್ಯವೇ ಮೇಲು ಎಂಬುದನ್ನು ಪುರಾಣಗಳಿಂದ ಪ್ರಾರಂಭವಾಗಿ ಇಂದಿನವರೆಗೂ ವಿಶ್ವದಾದ್ಯಂತ ಎಲ್ಲರೂ ನಂಬಿರುವ ಸತ್ಯವಾಗಿದೆ. ವಿಷಯ ಹೀಗಿರುವಾಗ ಮಹಿಳೆಯರ ದೇಹವನ್ನು ಬಿಟ್ಟು ಪುರುಷನ ದೇಹದ ಅಂಗಗಳನ್ನು ವೈಭವೀಕರಿಸಿದರೆ ಇದನ್ನು ಪ್ರೇಕ್ಷಕ ನೋಡಲು ಇಷ್ಟಪಡುವುದಿಲ್ಲ.

ಕಾರಣ #2

ಮಹಿಳೆಯ ದೇಹದ ಸೂಕ್ಷ್ಮ ಅಂಗಗಳನ್ನು ಕೇವಲ ಪುರುಷರು ಮಾತ್ರ ಗಮನಿಸುವುದಿಲ್ಲ, ಬದಲಿಗೆ ಇತರ ಮಹಿಳೆಯರೂ, ಸಲಿಂಗಕಾಮಿಗಳೂ, ದ್ವಿಲಿಂಗಿಗಲೂ ಏಕಸಮಾನವಾಗಿ ನೋಡಬಯಸುತ್ತಾರೆ.

ಕಾರಣ #3

ಈ ವಿಶ್ವದಲ್ಲಿ ಭಿನ್ನಲಿಂಗರತಿಯ ಪುರುಷರೇ ಅತ್ಯಧಿಕ ಸಂಖ್ಯೆಯಲ್ಲಿದ್ದು ಮಹಿಳೆಯರ ದೇಹದತ್ತ ಆಕರ್ಷಣೆಯನ್ನು ಸ್ವಾಭಾವಿಕವಾಗಿ ಹೊಂದಿರುತ್ತಾರೆ. ಅಂತೆಯೇ ಪುರುಷರು ಪರದೆಯ ಮೇಲೆ ನೋಡಬಯಸುವ ಇತರ ವಿಷಯಗಳಾದ ಕಾರು, ಸ್ಪೋಟ, ವೇಗ, ರೋಮಾಂಚನಗಳೊಂದಿಗೇ ವಕ್ಷಸ್ಥಲ, ಮಹಿಳೆಯ ನಗ್ನ ದೇಹ ಮೊದಲಾದವೂ ನೋಡಬಯಸುವ ವಿಷಯಗಳೇ ಆಗಿವೆ. ಲಾಭ ಮಾಡಿಕೊಳ್ಳಬೇಕಾದ ಚಿತ್ರನಿರ್ಮಾಪಕರಿಗೆ ಈ ವಿಷಯ ತಿಳಿಯದೇ ಇರುತ್ತದೆಯೇ? ಅಂತೆಯೇ ಇವುಗಳನ್ನೂ ಚಿತ್ರಗಳಲ್ಲಿ ಅಳವಡಿಸಲಾಗುತ್ತದೆ.

ಕಾರಣ #4

ಎಲ್ಲೋ ಚಿತ್ರದ ನಡುವಿನ ಒಂದು ಕ್ಷಣ ಕಾಣುವ ಈ ಸ್ತಬ್ಧಚಿತ್ರವೊಂದನ್ನು ವೈಭವೀಕರಿಸಿ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತದೆ. ಈ ಚಿತ್ರದ ತುಣುಕನ್ನು ಗಮನಿಸಿದ ಪುರುಷರು ಇಲ್ಲೇನೋ ಇದೆ ಎಂಬ ಕುತೂಹಲದಿಂದ ಚಿತ್ರಮಂದಿರಕ್ಕೆ ನುಗ್ಗುತ್ತಾರೆ. ಪರಿಣಾಮ ಭರ್ಜರಿ ಟಿಕೆಟ್ ಮಾರಾಟ.

ಕಾರಣ #5

ಒಂದು ವೇಳೆ ಪುರುಷದ ದೇಹದ ಗುಪ್ತಾಂಗವನ್ನು ಪ್ರಮುಖವಾಗಿ ತೋರಿಸಿದರೆ ಸೆನ್ಸಾರ್ ಮಂಡಳಿ ಇದಕ್ಕೆ ತಕ್ಷಣ ಕತ್ತರಿ ಹಾಕುತ್ತದೆ ಅಥವಾ NC-17 ಮಾನದಂಡ ನೀಡುತ್ತದೆ. ಇದು ಚಿತ್ರದ ಲಾಭದ ಮೇಲೆ ನೇರವಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆ.

ಕಾರಣ #6

ನಿಸರ್ಗದ ಚೆಲುವನ್ನು ತೋರಿಸಲು ಜಲಪಾತ, ಹಸಿರಿನ ಗದ್ದೆ, ಹಿಮಾಚ್ಛಾದಿತ ಬೆಟ್ಟ ಮೊದಲಾದವುಗಳ ಜೊತೆಗೇ ಕಲಾತ್ಮಕವಾಗಿ ಹೆಣ್ಣಿನ ರೂಪವನ್ನೂ ತೋರಿದರೆ ಇದನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ಈ ವಿಷಯಗಳೊಂದಿಗೆ ಗಾನಗಳೂ ಮನಮುಟ್ಟುವಂತಿದ್ದರೆ ಪ್ರೇಕ್ಷಕರ ಸಂಖ್ಯೆಯಲ್ಲಿ ಮಹಿಳೆಯರೇ ಹೆಚ್ಚಿರುವುದನ್ನು ಗಮನಿಸಲಾಗಿದೆ. ಅದೇ ಪುರುಷರ ದೇಹಸಿರಿಯನ್ನು ತೋರಿದರೆ? ಪುರುಷರು ಚಿತ್ರಮಂದಿರಕ್ಕೆ ಹೋಗುವುದಿಲ್ಲ, ಮಹಿಳೆಯರು ಬರುವುದಿಲ್ಲ ಎಂಬ ಸ್ಥಿತಿ ಎದುರಾಗುತ್ತದೆ.

ಕಾರಣ #7

ಪುರುಷ ಪಾತ್ರಧಾರಿಯ ಆಕರ್ಷಣೆ ಆತನ ಪ್ರತಿಭೆಯ ಮೂಲಕವೇ ಪ್ರೇಕ್ಷಕವೃಂದ ಗುರುತಿಸುತ್ತದೆಯೇ ಹೊರತಾಗಿ ಆತನ ಇತರ ವೈಶಿಷ್ಟ್ಯಗಳು ನಂತರ ಗಮನಿಸಲ್ಪಡುತ್ತವೆ. ಉದಾಹರಣೆಗೆ ನೀಳಕಾಯದ ವ್ಯಕ್ತಿಗಳೆಲ್ಲರೂ ಅಮಿತಾಭ್ ಬಚ್ಚನ್ ಆಗಲಿಕ್ಕೆ ಸಾಧ್ಯವಿಲ್ಲ. ಬದಲಿಗೆ ಇವರ ನೀಳಕಾಯ ಇವರ ಪ್ರತಿಭೆಯನ್ನು ಮೆರೆಯಲು ಸಹಾಯ ಮಾಡಿತಷ್ಟೇ.

Story first published: Monday, November 7, 2016, 11:45 [IST]
English summary

Why Do Only Women Show Their Privates In Movies

Here, in this article, we are about to share some of the reasons as to why this is practiced. From the ratings changing to NC-17 where the audience is restricted to only adults, to the confidence of men playing the roles, there are various other factors because of which men do not show their privates in movies. If you are a woman you would definitely feel great after reading this piece. Check out the reasons...
Please Wait while comments are loading...
Subscribe Newsletter