ಪುರುಷರೇಕೆ ತಮ್ಮ ಉಗುರುಗಳನ್ನು ಉದ್ದವಾಗಿರಿಸುತ್ತಾರೆ?

By: manu
Subscribe to Boldsky

ಪುರುಷರಲ್ಲಿಯೂ ಇಂದಿನ ದಿನಗಳಲ್ಲಿ ಸೌಂದರ್ಯ ಪ್ರಜ್ಞೆ ಮೂಡುತ್ತಿದ್ದರೂ ಇದು ಕೇಶ ಶೃಂಗಾರ, ಮುಖದ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಬೆರಳುಗಳ ಉಗುರಿಗೆ ಮಹಿಳೆಯರು ನೀಡಿದಷ್ಟು ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಹೆಚ್ಚಿನವರು ಸುಂದರವಾಗಿ ಕತ್ತರಿಸುವುದೂ ಇಲ್ಲ. ಒರಟಾಗಿ ಕತ್ತರಿಸಿರುತ್ತಾರೆ. ಆದರೆ ಹೆಚ್ಚಿನವರು ಕಿರುಬೆರಳಿನ ಉಗುರನ್ನು ಮಾತ್ರ ಕೊಂಚ ಉದ್ದವಾಗಿ ಬಿಟ್ಟಿರುತ್ತಾರೆ. ಏಕೆ?       ಉಗುರಿನ ಬಣ್ಣದಲ್ಲಿ ಏರುಪೇರು-ಇದು ಹಲವು ರೋಗಗಳ ಲಕ್ಷಣ!

ಉಗುರಿನ ಬಗ್ಗೆ ಕಾಳಜಿ ಇಲ್ಲದವರೂ ಎಲ್ಲಾ ಬೆರಳುಗಳ ಉಗುರುಗಳನ್ನು ಕತ್ತರಿಸಿಕೊಂಡಿದ್ದರೂ ಕಿರುಬೆರಳಿನ ಉಗುರು ಮಾತ್ರ ಕೊಂಚ ಉದ್ದಕ್ಕಿರುವುದು ಒಂದು ಕುತೂಹಲ ಮೂಡಿಸುವ ವಿಷಯವಾಗಿದೆ. ಇದಕ್ಕೇನು ಕಾರಣ ಎಂಬ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳು ದೊರಕುತ್ತವೆ. ಕೆಲವು ಅಂಧಾನುಕರಣೆಯಾಗಿದ್ದರೆ ಕೆಲವು ನಂಬಿಕೆಗಳಾಗಿವೆ. ಬನ್ನಿ, ಈ ನಂಬಿಕೆ, ಅನುಕರಣೆಗಳು ಯಾವುವು ಎಂಬುದನ್ನು ನೋಡೋಣ:      ಉಗುರಿನ ಬಣ್ಣ ಹಳದಿ ಆಗಿದೆಯೇ? ಇನ್ನು ಚಿಂತೆ ಬಿಡಿ...   

Nails
 

ಕಾರಣ #1
ಚೀನಾದಲ್ಲಿ ಕಿರುಬೆರಳಿನ ಉಗುರು ಉದ್ದಕ್ಕಿರುವುದು ಶ್ರೀಮಂತಿಕೆಯ ಸಂಕೇತ ಎಂದು ನಂಬಲಾಗುತ್ತದೆ. ಇದು ಜಗತ್ತಿಗೆ ತಿಳಿದಿದ್ದು ಕೆಲವು ವರ್ಷಗಳ ಹಿಂದೆ. ಹೀಗೆ ಉದ್ದ ಉಗುರಿರುವವರು ಶ್ರಮಪಡುವ ಅಗತ್ಯವಿಲ್ಲ ಹಾಗೂ ಆರಾಮವಾಗಿ ಹಣ ಎಣಿಸುವವರು ಎಂದು ಎದುರಿನವರು ಭಾವಿಸುತ್ತಾರೆ. ಈ ವಿಷಯ ಈಗ ತಿಳಿದವರು ಎದುರಿನವರು ತಮ್ಮನ್ನೂ ಹೀಗೇ ಭಾವಿಸಬೇಕು ಎಂಬ ಇರಾದೆಯಿಂದ ಕಿರುಬೆರಳಿನ ಉಗುರನ್ನು ಉದ್ದಕ್ಕೆ ಬಿಡುತ್ತಾರೆ.

nail
 

ಕಾರಣ#2
ಕೆಲವರಿಗೆ ಕಿವಿಯಲ್ಲಿ ಸದಾ ತುರಿಕೆಯಾಗುತ್ತಿದ್ದು ಬೆರಳಿನಿಂದ ನಿಧಾನಕ್ಕೆ ಕೆರೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಉಳಿದ ಬೆರಳುಗಳ ಉಗುರು ಕಿವಿಯ ಕೊಳವೆಯೊಳಗೆ ತೂರಲು ಕೊಂಚ ದೊಡ್ಡದಾದುದರಿಂದ ಕಿರುಬೆರಳಿನ ಉಗುರನ್ನೇ ಕಿವಿಚಮಚದಂತೆ ಬಳಸುತ್ತಾರೆ. ಈ ಮಾಹಿತಿ ಕೊಂಚ ವಾಕರಿಕೆ ತರಿಸುವುದಾದರೂ ನಿಜವಾದ ಮಾಹಿತಿಯಾಗಿದೆ.

men
 

ಕಾರಣ#3
ಗಿಟಾರ್ ಬಾರಿಸಲು ಒಂದು ತ್ರಿಕೋನಾಕಾರದ ಉಪಕರಣದ ಅಗತ್ಯವಿದೆ. ಇದಕ್ಕೆ plectrum ಎಂದು ಕರೆಯುತ್ತಾರೆ. ಈ ಉಪಕರಣವಿಲ್ಲದೇ ಗಿಟಾರ್ ನ ತಂತಿಗಳನ್ನು ಸ್ಪಷ್ಟವಾಗಿ ಮೀಟಲು ಸಾಧ್ಯವಿಲ್ಲ. ಆದರೆ plectrum ತರಲು ಸದಾ ಮರೆಯುವವರು ತಮ್ಮ ಕಿರುಬೆರಳಿನ ಉಗುರನ್ನೇ plectrum ತರಹ ಬಳಸಿ ಗಿಟಾರ್ ನುಡಿಸುತ್ತಾರೆ. ಈಗ ಈ ಉಗುರಿನ ಜೀವನ ಸಾರ್ಥಕವಾಯಿತು.

ಕಾರಣ#4
ಮಾದಕ ಪದಾರ್ಥಗಳನ್ನು ಸೇವಿಸುವವರಿಗೆ ಒಂದು ನಿರ್ದಿಷ್ಟ ಪ್ರಮಾಣವನ್ನು ಅಳತೆ ಮಾಡಲು ಚಿಕ್ಕ ಚಮಚದ ಅಗತ್ಯವಿರುತ್ತದೆ. ಆದರೆ ಚಮಚವನ್ನು ಸದಾ ಜೇಬಿನಲ್ಲಿರಿಸಿ ಓಡಾಡಲು ಸಾಧ್ಯವಿದೆಯೇ? ಇವರು ತಮ್ಮ ಉಗುರುಗಳನ್ನೇ ಮಿಳ್ಳೆಯಂತೆ ಬಳಸುತ್ತಾರೆ. ಕೆಲವರು ಈ ಉಗುರಿನಲ್ಲಿಯೇ ಮಾದಕಪದಾರ್ಥವನ್ನು ಇರಿಸಿ ಮೂಗಿನ ಮೂಲಕ ಎಳೆದುಕೊಳ್ಳುತ್ತಾರೆ. ಈ ಕಾರಣಕ್ಕಾದರೆ ಉಗುರು ಬೆಳೆಸುವುದೇ ಬೇಡ.      ನಿಮ್ಮ ಉಗುರುಗಳು ಬೇಗನೆ ಮುರಿದು ಹೋಗುತ್ತದೆಯೇ?   

nail
 

ಕಾರಣ #5
ಕಿರುಬೆರಳಿನ ಉಗುರು ಉದ್ದಕ್ಕಿರುವುದು ಶ್ರೀಮಂತಿಕೆ ಮತ್ತು ಪ್ರತಿಷ್ಠೆಯ ಸಂಕೇತವಾಗಿದೆ. ಪ್ರತಿಷ್ಠೆಯನ್ನು ಪ್ರಕಟಿಸಲು ಕೆಲವರು ಉಗುರನ್ನು ಉದ್ದಕ್ಕೆ ಬಿಡುವುದು ಮಾತ್ರವಲ್ಲ, ಎದುರಿನವರು ನೋಡಲಿ ಎಂಬಂತೇ ಕೈಗಳನ್ನು ಆಡಿಸುತ್ತಾರೆ.  ಈ ಕಾರಣಗಳ ಹೊರತಾಗಿ ಬೇರೆ ಮಾಹಿತಿ ನಿಮ್ಮಲ್ಲಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ಭಾ ಗವನ್ನು ಬಳಸಿಕೊಳ್ಳಿ.

Story first published: Thursday, October 6, 2016, 10:54 [IST]
English summary

Why Do Men Have Long Nails

Find out the reason as to why men prefer growing a longer little fingernail. There have been certain myths and beliefs that people have been following; and this is a sheer example of these kind of myths.
Please Wait while comments are loading...
Subscribe Newsletter