ಸಪ್ತಪದಿ ಇದು ಏಳೇಳು ಹೆಜ್ಜೆಗಳ ಅನುಬಂಧ....

ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು ವಧು ಹಾಗೂ ವರ ಮದುವೆಯ ಏಳು ನಿಯಮಗಳನ್ನು ಸ್ವೀಕರಿಸುವುದೇ ಇದರ ಮಹತ್ವವಾಗಿದೆ. ಹಿಂದೂ ಧರ್ಮದಲ್ಲಿ ಅಗ್ನಿ ದೇವರನ್ನು ತುಂಬಾ ಪವಿತ್ರವೆಂದು ನಂಬಲಾಗುತ್ತದೆ.

By: manu
Subscribe to Boldsky

ಸಪ್ತಪದಿ...ಇದು ಸಪ್ತಪದಿ...ಏಳೇನು ಜನ್ಮಗಳ ಅನುಬಂಧ ಎಂದು ಡಾ. ರಾಜ್ ಅವರು ಹಾಡಿರುವುದನ್ನು ಕೇಳಿದ್ದೀರಿ. ಮದುವೆಯಲ್ಲಿ ವಧು ಹಾಗೂ ವರ ಮಧುವೆಯ ಸಂದರ್ಭ ಸಪ್ತಪದಿಯನ್ನು ತುಳಿಯುತ್ತಾರೆ. ಹಿಂದೂ ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವವಿದೆ. ಸಪ್ತಪದಿ ತುಳಿಯುವುದರ ಅರ್ಥ

ಮದುವೆಯಲ್ಲಿ ಸಪ್ತಪದಿಯ ಪ್ರಾಮುಖ್ಯತೆ ಏನು ಎಂದು ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ. ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು ವಧು ಹಾಗೂ ವರ ಮದುವೆಯ ಏಳು ನಿಯಮಗಳನ್ನು ಸ್ವೀಕರಿಸುವುದೇ ಇದರ ಮಹತ್ವವಾಗಿದೆ.  ಹಿಂದೂ ಮದುವೆ ಶಾಸ್ತ್ರದ ಹಿಂದಿರುವ ವೈಜ್ಞಾನಿಕ ಸತ್ಯಾಸತ್ಯತೆ

ಹಿಂದೂ ಧರ್ಮದಲ್ಲಿ ಅಗ್ನಿ ದೇವರನ್ನು ತುಂಬಾ ಪವಿತ್ರವೆಂದು ನಂಬಲಾಗುತ್ತದೆ. ಅಗ್ನಿ ದೇವರನ್ನು ಪೂಜಿಸದೆ ಯಾವುದೇ ಕಾರ್ಯಗಳು ಹಿಂದೂ ಧರ್ಮದಲ್ಲಿ ನಡೆಯುವುದಿಲ್ಲ. ಸಪ್ತಪದಿಯ ಮಹತ್ವಗಳು ಏನು ಎನ್ನುವುದನ್ನು ನೀವು ಈ ಲೇಖನದಲ್ಲಿ ತಿಳಿಯಿರಿ......

ಮೊದಲ ಹೆಜ್ಜೆ

ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಶಪಥ ಮಾಡಿಕೊಳ್ಳುತ್ತಾರೆ. ವರನು ವಧುವಿನಿಂದ ಊಟದ ಬೇಡಿಕೆಯನ್ನು ಇಟ್ಟರೆ ವಧು ತನ್ನ ಹಾಗೂ ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಪಡೆದುಕೊಳ್ಳಬೇಕೆಂಬ ಆಶ್ವಾಸನೆಯನ್ನು ಪಡೆಯುತ್ತಾಳೆ.

ಎರಡನೇ ಹೆಜ್ಜೆ

ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂದು ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ. ಈ ಮಾತನ್ನು ಸಂತೋಷದಿಂದ ಒಪ್ಪಿಕೊಳ್ಳುವ ವಧು, ವರನಿಂದ ಕೇವಲ ಪ್ರೀತಿಯನ್ನು ಬಯಸುತ್ತಾಳೆ.

ಮೂರನೇ ಹೆಜ್ಜೆ

ವರನು ಸಮೃದ್ಧಿಯನ್ನು ಹಾಗೂ ಮನೆಯವರ ಜತೆಯಾಗಿ ಸಾಗಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಬಯಸುತ್ತಾನೆ. ಇದಕ್ಕೆ ವಧು ಒಪ್ಪಿಕೊಂಡು ಆತನಿಗೆ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಇರಲು ಬಯಸುತ್ತಾಳೆ.

ನಾಲ್ಕನೇ ಹೆಜ್ಜೆ

ತಾನು ಈಗ ಪರಿಪೂರ್ಣನಾಗಿದ್ದೇನೆ ಮತ್ತು ಮಕ್ಕಳನ್ನು ನೀಡಬೇಕೆಂದು ವರನು ಕೇಳುತ್ತಾನೆ. ತನ್ನನ್ನು ಯಾವುದೇ ಷರತ್ತುಗಳಿಲ್ಲದೆ ಪ್ರೀತಿಸಬೇಕೆಂದು ವಧು ಹೇಳುತ್ತಾಳೆ.

ಐದನೇ ಹೆಜ್ಜೆ

ವಧುವನ್ನು ತನ್ನ ಅತ್ಯುತ್ತಮ ಸ್ನೇಹಿತೆಯನ್ನಾಗಿ ಮಾಡಿಕೊಳ್ಳಲು ವರ ಬಯಸುತ್ತಾನೆ. ಇದಕ್ಕೆ ಪ್ರತಿಯಾಗಿ ತಾನು ಜೀವಂತವಿರುವ ತನಕ ತನ್ನೊಂದಿಗೆ ಇರಬೇಕೆಂದು ಆಕೆ ಬಯಸುತ್ತಾಳೆ. ಒಂದೇ ಕುಟುಂಬದವರಂತೆ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳಬೇಕೆಂದು ಅವರಿಬ್ಬರು ನಿರ್ಧರಿಸುತ್ತಾರೆ. ವರ ಎಲ್ಲಾ ಆಕಾಂಕ್ಷೆ ಹಾಗೂ ಆಸೆಗಳನ್ನು ಪೂರೈಸುವುದಾಗಿ ವಧು ಭರವಸೆ ನೀಡುತ್ತಾಳೆ.

ಆರನೇ ಹೆಜ್ಜೆ

ಸುಖ ಹಾಗೂ ಸಂತೋಷವನ್ನು ಪಡೆ ಎಂದು ವರನು ವಧುವನ್ನು ಆಶೀರ್ವದಿಸುತ್ತಾನೆ. ವಧು ಕೂಡ ಇದನ್ನೇ ಮಾಡುತ್ತಾಳೆ.

ಏಳನೇ ಹೆಜ್ಜೆ

ಅಂತಿಮ ಹಾಗೂ ಏಳನೇ ಹೆಜ್ಜೆಯಲ್ಲಿ ಅವರಿಬ್ಬರು ಪತಿ ಹಾಗೂ ಪತ್ನಿಯರೆಂದು ಒಪ್ಪಿಕೊಳ್ಳುತ್ತಾರೆ ಮತ್ತು ಜೀವನದ ಕೊನೆಯ ತನಕ ಜತೆಯಾಗಿರುವ ಶಪಥ ಮಾಡುತ್ತಾರೆ. ಪತ್ನಿಯು ವರನನ್ನು ತನ್ನ ಪತಿಯಾಗಿ ಸ್ವೀಕರಿಸುತ್ತಾಳೆ. ವರ ಕೂಡ ವಧುವನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸುತ್ತಾನೆ.

 

Story first published: Wednesday, November 9, 2016, 16:39 [IST]
English summary

What Do Seven Pheras In A Wedding Mean

Hindus consider fire to be a very sacred element and most of the Hindu rituals are incomplete without worshiping the Fire God. Following is the relevance and the significance of the saath Pheras, have a look:
Please Wait while comments are loading...
Subscribe Newsletter