ಅಚ್ಚರಿ ಜಗತ್ತು: ಮೈ ನಡುಗಿಸುವ ವಿಚಿತ್ರ ಕಾಯಿಲೆಗಳಿವು!

ವಿಶ್ವದೆಲ್ಲೆಡೆ ಸಾವಿರಾರು ರೋಗಗಳು ಹಾಗೂ ಕಾಯಿಲೆಗಳು ಇದ್ದರೂ ಅದರಲ್ಲಿ ಕೆಲವೊಂದು ತುಂಬಾ ವಿಚಿತ್ರವಾಗಿದೆ. ಇದರ ಬಗ್ಗೆ ಕೇಳಿದರೆ ನೀವು ಆಶ್ಚರ್ಯಚಕಿತರಾಗುವುದರಲ್ಲಿ ಸಂಶಯವೇ ಇಲ್ಲ.

By: manu
Subscribe to Boldsky

ಮಾನವ ಹಲವಾರು ಸಂಶೋಧನೆಗಳನ್ನು ಮಾಡುತ್ತಾ ಸಾಗಿದಂತೆ ಪ್ರಕೃತಿ ಕೂಡ ಅದಕ್ಕೆ ವಿರುದ್ಧವಾಗಿರುತ್ತದೆ. ಇದರಿಂದ ವಿಶ್ವದೆಲ್ಲೆಡೆಯಲ್ಲಿ ಹಲವಾರು ರೋಗಗಳಿಗೆ ಇಂದಿಗೂ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದರಲ್ಲೂ ಕೆಲವೊಂದು ರೋಗಗಳು ತುಂಬಾ ವಿಚಿತ್ರವಾಗಿದೆ.

ವಿಶ್ವದೆಲ್ಲೆಡೆ ಸಾವಿರಾರು ರೋಗಗಳು ಹಾಗೂ ಕಾಯಿಲೆಗಳು ಇದ್ದರೂ ಅದರಲ್ಲಿ ಕೆಲವೊಂದು ತುಂಬಾ ವಿಚಿತ್ರವಾಗಿದೆ. ಇದರ ಬಗ್ಗೆ ಕೇಳಿದರೆ ನೀವು ಆಶ್ಚರ್ಯಚಕಿತರಾಗುವುದರಲ್ಲಿ ಸಂಶಯವೇ ಇಲ್ಲ.  ಈ ಕಾಯಿಲೆ ಬಂದರೆ ಇಪ್ಪತ್ತನಾಲ್ಕು ಗಂಟೆಯಲ್ಲಿ ಸಾವು ಖಚಿತ!

ನೀಲಿ ಚರ್ಮದ ರೋಗ ಅಥವಾ ರಕ್ತಪಿಶಾಚಿ ರೋಗಗಳು ಇದರಲ್ಲಿ ಕೆಲವು. ಇಂತಹ ಕೆಲವು ರೋಗಗಳ ಬಗ್ಗೆ ನಿಮಗೆ ತಿಳಿದಿರಲಿಕ್ಕೂ ಇಲ್ಲ. ಈ ಲೇಖನದಲ್ಲಿ ಅಂತಹ ಕೆಲವೊಂದು ರೋಗಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ.... 


ನಿರಂತರ ಲೈಂಗಿಕ ಪ್ರಚೋದನೆಯ ಕಾಯಿಲೆ

ಇದು ವ್ಯಕ್ತಿಯೊಬ್ಬನು ಅನುಭವಿಸುವಂತಹ ಅತ್ಯಂತ ವಿಚಿತ್ರವಾಗಿರುವಂತಹ ರೋಗವಾಗಿದೆ. ಈ ಕಾಯಿಲೆ ಇರುವ ವ್ಯಕ್ತಿಗೆ ನಿರಂತರ 24 ಗಂಟೆಯೂ ಜನನಾಂಗ ಉದ್ರೇಕವಾಗುತ್ತಿರುತ್ತದೆ. ಇದು ನಿರಂತರ, ನಿಷ್ಕರುಣೆಯ ಜನನಾಂಗದ ಉದ್ರೇಕವಾಗಿದೆ. ಇದಕ್ಕೆ ಹಾಗೂ ಲೈಂಗಿಕ ಆಕಾಂಕ್ಷೆಗಳಿಗೆ ಯಾವುದೇ ಸಂಬಂಧವಿಲ್ಲ. ಎಷ್ಟು ವಿಚಿತ್ರವಲ್ಲವೇ?

ತೋಳಮಾನವ ಲಕ್ಷಣ

ಕೆಲವರು ಹೆಚ್ಚುವರಿ ಕೂದಲನ್ನು ಬೆಳೆಯುವಂತಹ ಎಕ್ಸ್ ವರ್ಣತಂತುವಿನೊಂದಿಗೆ ಜೀನ್‌ಗಳೊಂದಿಗೆ ಜನಿಸಿರುತ್ತಾರೆ. ಇಂತಹ ವ್ಯಕ್ತಿಗಳ ಮುಖ ಪೂರ್ತಿ ಕೂದಲು ಬೆಳೆಯುತ್ತದೆ. ವಿಶ್ವದೆಲ್ಲೆಡೆಯಲ್ಲಿ ಇಂತಹ ಸುಮಾರು 50 ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲೂ ಮಧ್ಯಮ ವಯಸ್ಸಿನವರಲ್ಲಿ ಇದು ಕಂಡುಬರುವುದು.

ಸ್ಫೋಟಗೊಳ್ಳುವ ತಲೆ ಕಾಯಿಲೆ!

ಇದು ವಿಶ್ವದೆಲ್ಲೆಡೆಯಲ್ಲಿ ಸಾವಿರಾರು ಮಂದಿಯಲ್ಲಿ ಕಂಡುಬರುತ್ತಾ ಇದೆ. ಇಂತಹ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಬಾಂಬ್ ಸಿಡಿದಂತೆ, ಗುಂಡು ಹಾರಿಸಿದಂತೆ ಅಥವಾ ಇತರ ಯಾವುದೇ ಜೋರಾದ ಸದ್ದು ಮಲಗುವ ಸಮಯದಲ್ಲಿ ಕಿವಿಗೆ ಕೇಳಿಸುತ್ತದೆ.

ಆಲಿಸ್ ಇನ್ ವಂಡರ್ಲ್ಯಾಂಡ್

ಈ ಕಾಯಿಲೆ ಬಗ್ಗೆ ಓದಿದರೆ ನಿಮಗೆ ತುಂಬಾ ವಿಚಿತ್ರವೆನಿಸುತ್ತದೆ. ಇಂತಹ ಕಾಯಿಲೆಯಿಂದ ಹಲವಾರು ಮಂದಿ ಬಳಲುತ್ತಾ ಇರುತ್ತಾರೆ. ಭ್ರಮೆ, ದಿಗ್ಭ್ರಮೆ ಮತ್ತು ಗಾತ್ರ ಸರಿಯಾಗಿ ಕಾಣಿಸದೆ ಇರುವುದು ಈ ರೋಗದ ಲಕ್ಷಣವಾಗಿದೆ. ಇದು ಬಾಲ್ಯದಲ್ಲಿ ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಯೌವನಕ್ಕೆ ಕಾಲಿಡುತ್ತಾ ಇರುವಂತೆ ಇದು ಸಂಪೂರ್ಣವಾಗಿ ವ್ಯಕ್ತಿಯನ್ನು ಆವರಿಸುತ್ತದೆ.

ಏಲಿಯನ್ ಕೈ

ಇದು ತುಂಬಾ ಅಚ್ಚರಿ ಮೂಡಿಸುವಂತಹ ನರವಿಜ್ಞಾನದ ಕಾಯಿಲೆಯಾಗಿದೆ. ಒಬ್ಬ ವ್ಯಕ್ತಿಯ ಕೈಯು ಆತನ ನಿಯಂತ್ರಣವಿಲ್ಲದೆ ಮತ್ತು ಆತನಿಗೆ ಪರಿವೆಯೇ ಇಲ್ಲದೆ ಅತ್ತಿತ್ತ ಹೋಗುತ್ತಾ ಇರುತ್ತದೆ. ಯಾವುದೇ ವಸ್ತುವಿನ ಕಡೆ ಕೈಯು ಸಾಗಬಹುದು ಮತ್ತು ಅದನ್ನು ತುಂಬಾ ಕುಶಲತೆಯಿಂದ ಹಿಡಿಯಬಹುದು.

ನೀಲಿ ಚರ್ಮ ರೋಗ

ಬೆಳ್ಳಿಯ ರಾಸಾಯನಿಕಗಳಿಗೆ ದೇಹವು ಅತೀ ಹೆಚ್ಚು ಒಗ್ಗಿಕೊಂಡಾಗ ಇದು ಕಾಣಿಸುತ್ತದೆ. ದೇಹದ ಹೆಚ್ಚಿನ ಭಾಗವು ಈ ರೋಗದಿಂದ ಪ್ರಭಾವಿತವಾಗಿರುತ್ತದೆ. ಈ ಕಾಯಿಲೆಯಿಂದ ವ್ಯಕ್ತಿಯ ಚರ್ಮವು ನೀಲಿ ಬಣ್ಣಕ್ಕೆ ತಿರುಗುವುದು.

 

Story first published: Tuesday, November 22, 2016, 11:55 [IST]
English summary

weirdest-diseases-around-the-world

These days, there are too many new diseases that are affecting several people every other day. We are here to share the list of some of the weirdest diseases around the world. There are thousands of diseases and disorders, but there are a few disorders that are so weird, they will leave you dumbstruck.
Please Wait while comments are loading...
Subscribe Newsletter