For Quick Alerts
ALLOW NOTIFICATIONS  
For Daily Alerts

ಮದುವೆಯೋ ಅಥವಾ ಶಿಕ್ಷೆಯೋ ಒಂದೂ ಅರ್ಥವಾಗುತ್ತಿಲ್ಲ!

By manu
|

ಬಾಲ್ಯದಲ್ಲಿ ನಮ್ಮ ಜತೆಗೆ ಹೆತ್ತವರಿದ್ದರೆ, ಯೌವನದಲ್ಲಿ ಸಂಗಾತಿ ಮತ್ತು ವೃದ್ಧಾಪ್ಯದಲ್ಲಿ ನಮ್ಮ ಮಕ್ಕಳು ಜತೆಗಿರುತ್ತಾರೆ ಎನ್ನುವುದು ನಂಬಿಕೆ. ಬಾಲ್ಯ ಕಳೆದು ಯೌವನವನ್ನು ಮುಟ್ಟುತ್ತಿದ್ದಂತೆ ಪ್ರತಿಯೊಬ್ಬರು ಬಾಳ ಸಂಗಾತಿಯನ್ನು ಹುಡುಕಲು ಆರಂಭಿಸುತ್ತಾರೆ. ಕೆಲವರು ಹಿರಿಯರು ಹುಡುಕಿದ ಬಾಳಸಂಗಾತಿಯನ್ನು ಮದುವೆಯಾದರೆ, ಮತ್ತೆ ಕೆಲವರು ತಮಗೆ ಇಷ್ಟದವರನ್ನೇ ಮದುವೆಯಾಗುತ್ತಾರೆ.

ಪ್ರತಿಯೊಂದು ಧರ್ಮ, ಜಾತಿ ಹಾಗೂ ಪಂಗಡಗಳಲ್ಲಿ ಮದುವೆಯೆನ್ನುವುದು ಒಂದು ಸಂಪ್ರದಾಯವಿದ್ದಂತೆ. ಇದು ವಿಭಿನ್ನ ರೀತಿಯಲ್ಲಿ ನಡೆಯುತ್ತಲಿದ್ದರೂ ಅಂತಿಮವಾಗಿ ಹೆಣ್ಣು ಮತ್ತು ಗಂಡನ್ನು ಒಂದುಗೂಡಿಸುವುದೇ ಇದರ ಧೇಯ್ಯ. ಭಾರತದಲ್ಲೇ ನೋಡಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಮದುವೆಗಳು ನಡೆಯುತ್ತಲಿರುತ್ತದೆ. ಅವರ ಉಡುಗೆತೊಡುಗೆ, ಆಚರಣೆಗಳು ತುಂಬಾ ಭಿನ್ನವಾಗಿರುತ್ತದೆ. ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

ಒಂದು ಊರಿನಲ್ಲಿ ಕುದುರೆ ಮೇಲೇರಿ ವರ ಬಂದರೆ ಮತ್ತೊಂದು ಊರಿನಲ್ಲಿ ಎತ್ತಿನಗಾಡಿಯಲ್ಲಿ ಬರುತ್ತಾನೆ. ಹೀಗೆ ಹಲವಾರು ಸಂಪ್ರದಾಯಗಳಿವೆ. ಆದರೆ ಅತ್ಯಂತ ತಯಾಷೆ, ಅಚ್ಚರಿಯ ಮದುವೆಗಳು ಇನ್ನೂ ಇದೆ. ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಅದರ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ. ಇದನ್ನು ಓದಿದಾಗ ನಿಮಗೂ ನಗು ಉಕ್ಕಿ ಬರಬಹುದು! ಹಾಗಾದರೆ ಇನ್ನೇಕೆ ತಡ, ಮುಂದೆ ಓದಿ..

 ವಧು-ವರರನ್ನು ಕಪ್ಪಗೆ ಮಾಡುವುದು

ವಧು-ವರರನ್ನು ಕಪ್ಪಗೆ ಮಾಡುವುದು

ಈ ಸಂಪ್ರದಾಯವು ಸ್ಕಾಟ್ ಲೆಂಡ್‌ನಲ್ಲಿ ಈಗಲೂ ಚಾಲ್ತಿಯಲ್ಲಿದೆ. ಅಲ್ಲಿನ ಜನರು ಹಣ್ಣುಗಳಿಂದ ಮಾಡಿದಂತಹ ಸಾಮಗ್ರಿಯಿಂದ ವಧು-ವರರನ್ನು ಕಪ್ಪಗೆ ಮಾಡುತ್ತಾರೆ. ಮದುವೆ ಸಂದರ್ಭದಲ್ಲಿ ನಾವು ಸುಂದರವಾಗಿ ಕಾಣಲು ಬಯಸಿದರೆ ಇಲ್ಲಿನ ಜನರು ವಧುವರರನ್ನು ಕಪ್ಪಗೆ ಮಾಡುತ್ತಾರೆ. ಸುತ್ತಲು ಇರುವ ಜನರು ಇವರನ್ನು ನೋಡಿ ನಕ್ಕು ನಕ್ಕು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. Image courtesy

ವಧು ಅಳುವುದು

ವಧು ಅಳುವುದು

ಮದುವೆ ವೇಳೆ ನಾವು ಸಂಭ್ರಮ ಹಾಗೂ ನಗುವಿನಿಂದ ಓಡಾಡುತ್ತೇವೆ. ಆದರೆ ಚೀನಾದ ಮದುವೆ ಮನೆಯಲ್ಲಿ ವಧು ಪ್ರತೀ ದಿನ ಒಂದು ಗಂಟೆ ಅಳುತ್ತಿರಬೇಕು. ಒಂದು ವಾರದ ಬಳಿಕ ಆಕೆಯ ತಾಯಿ ಅಳಲು ಆರಂಭಿಸಬೇಕು. ಇದರ ಬಳಿಕ ಮನೆಯ ಎಲ್ಲಾ ಮಹಿಳೆಯರು ಅಳುವ ಕಾರ್ಯಕ್ರಮದಲ್ಲಿ ಸೇರಬೇಕು. ಇದನ್ನು ಕಣ್ಣೀರಿನ ಮದುವೆ ಎನ್ನಲು ಅಡ್ಡಿಯಿಲ್ಲ ಅಲ್ಲವೇ? Image courtesy

ಅವರನ್ನು ಬಿಡಬೇಡಿ!

ಅವರನ್ನು ಬಿಡಬೇಡಿ!

ಉತ್ತರ ಬೊರ್ನೊದ ಟಿಡೊಂಗ್ ಜನಾಂಗದವರು ಮದುವೆಯಾದ ಗಂಡುಮತ್ತು ಹೆಣ್ಣನ್ನು ಕೆಲವು ದಿನಗಳ ಕಾಲ ಎಲ್ಲಿಗೂ ಹೋಗಲು ಬಿಡುವುದಿಲ್ಲ. ಶೌಚಾಲಯಕ್ಕೂ ಹೋಗಲು ಅನುಮತಿಯಿಲ್ಲ. ಇದು ವಧುಮತ್ತು ವರನಿಗೆ ನೀಡುವಂತಹ ಚಿತ್ರಹಿಂಸೆ.

ಕಿಸ್ ಪಾರ್ಟಿ

ಕಿಸ್ ಪಾರ್ಟಿ

ಇದು ತುಂಬಾ ತಮಾಷೆ ಹಾಗೂ ಮುಜುಗರವನ್ನು ಉಂಟುಮಾಡುವಂತಹ ಸಂಪ್ರದಾಯ. ಸ್ವೀಡನ್ ನಲ್ಲಿ ವರ ಅಥವಾ ವಧು ಶೌಚಾಲಯಕ್ಕೆ ಹೋಗಲು ಪ್ರಯತ್ನಿಸಿದರೆ ಆಗ ಇತರರು ಹೋಗಿ ಅವರಿಗೆ ಕಿಸ್ ನೀಡಬಹುದು. ಇಲ್ಲಿ ಎಲ್ಲಾ ಹುಡುಗರು ವಧುವಿಗೆ ಕಿಸ್ ನೀಡಲು ಸಾಲುಗಟ್ಟಿ ನಿಂತಿರುತ್ತಾರೆ.

ಎಂಜಲೂಟ ಮಾಡುವುದು

ಎಂಜಲೂಟ ಮಾಡುವುದು

ಅತಿಥಿಗಳು ತಿಂದು ಬಿಟ್ಟ ಊಟವನ್ನು ಶೌಚಾಲಯದ ಪಾತ್ರೆಯಲ್ಲಿ ವಧು ಮತ್ತು ವರ ಮಾಡಬೇಕಾದಂತಹ ಸಂಪ್ರದಾಯ ತೀರ ಹೇಸಿಗೆಯನ್ನು ಮೂಡಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಬದಲಾವಣೆ ತರಲಾಗಿದ್ದು, ಚಾಕಲೇಟನ್ನು ಸವಿಯಬೇಕಾಗಿದೆ. ಆದರೆ ಇದು ಕೂಡ ಶೌಚಾಲಯದ ಪಾತ್ರೆಯಲ್ಲಿ ಮಾಡುವ ಕಾರಣ ತುಂಬಾ ಹೇಸಿಗೆ ತರಿಸುತ್ತದೆ. Image courtesy

ಪಾತ್ರೆಗಳನ್ನು ಒಡೆದುಹಾಕುವುದು

ಪಾತ್ರೆಗಳನ್ನು ಒಡೆದುಹಾಕುವುದು

ಈ ಸಂಪ್ರದಾಯವು ಜರ್ಮನಿಯಲ್ಲಿ ಆಚರಣೆಯಲ್ಲಿದೆ. ಹೊಸದಾಗಿ ಮದುವೆಯಾದ ವಧು-ವರನಿಗೆ ಮಣ್ಣಿನ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಮನೆಗೆ ತೆರಳಿದ ಬಳಿಕ ಎಲ್ಲರೂ ಸೇರಿ ಈ ಪಾತ್ರೆಗಳನ್ನು ಒಡೆದುಹಾಕುತ್ತಾರೆ. ದುಷ್ಟಶಕ್ತಿಗಳನ್ನು ದೂರ ಓಡಿಸಲು ಹೀಗೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. Image courtesy

ವಧುವಿನ ಮುಖಕ್ಕೆ ಉಗಿಯುವುದು

ವಧುವಿನ ಮುಖಕ್ಕೆ ಉಗಿಯುವುದು

ಇಂತಹ ಸಂಪ್ರದಾಯ ಈಗಲೂ ಇದೆಯಲ್ಲಾ ಎನ್ನುವ ಬಗ್ಗೆ ಅಚ್ಚರಿಯಾಗುತ್ತಿದೆ. ವಧುವಿನ ತಂದೆ ಆಕೆಯ ಮುಖ ಹಾಗೂ ಎದೆಗೆ ಉಗುಳಬೇಕು. ಇದು ಆಶೀರ್ವಾದವನ್ನು ನೀಡುವ ಸಂಪ್ರದಾಯವಂತೆ! Image courtesy

English summary

Weird Wedding Traditions That Exist

Wedding is the best celebration time one can witness in his/her lifetime. It is one of the easiest ways to catch up with your long lost cousin or hear from an aunt whom you have hardly met! Generally, we all look forward for weddings, as they bring our best side out, where we dress to be the perfect person and to the fact that we get to chill around in our best attire.
X
Desktop Bottom Promotion