ಹದಿಹರೆಯದ ಯುವತಿಯರ ಗೋಳು, ಕೇಳುವವರು ಯಾರು?

By: suma
Subscribe to Boldsky

ಕೆಲವರಿಗೆ ಏನೇ ಆದರೂ ಮಹಿಳೆಯರನ್ನು ತುಚ್ಛವಾಗಿ ಕಾಣುವ ಅಭ್ಯಾಸ. ಇದು ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಪರಿಸ್ಥಿತಿ. ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದರೆ ನಮ್ಮನ್ನು ಎಲ್ಲರೂ ಗುಣಗಾನ ಮಾಡುತ್ತಾರೆ ಎನ್ನುವ ಭಾವನೆ ಅವರಲ್ಲಿರುತ್ತದೆ. ಆದರೆ ಇದು ನಿಜವಾಗಿಯೂ ತಪ್ಪು.      ಹೆಣ್ಣನ್ನು ಅರ್ಥೈಸಿಕೊಳ್ಳಲು ಬ್ರಹ್ಮನಿಂದಲೂ ಸಾಧ್ಯವಿಲ್ಲ!

ಕೆಲವು ಯುವಕರು/ಪುರುಷರು ಹದಿಹರೆಯದ ಯುವತಿಯರ ಬಗ್ಗೆ ವಿಲಕ್ಷಣವಾಗಿ ಮಾತನಾಡುತ್ತಾ ಇರುತ್ತಾರೆ. ಇದನ್ನು ಯುವತಿಯರು ಕೂಡ ಕೇಳುತ್ತಾ ಇರುತ್ತಾರೆ. ಇದರಿಂದ ಅವರಿಗೆ ತುಂಬಾ ಬೇಸರ ಹಾಗೂ ಕೋಪ ಬರುವುದು ಸಹಜ.   ಈ ದೇಶಗಳಲ್ಲಿ ಮಹಿಳೆಯರಿಗೆ ನಯಾ ಪೈಸೆಯ ಮರ್ಯಾದಿ ಇಲ್ಲ!

18-24ನೇ ವಯಸ್ಸಿನ ಯುವತಿಯರು ಕೇಳಲ್ಪಡುವಂತಹ ಕೆಲವೊಂದು ವಿಲಕ್ಷಣವಾದ ಮಾತುಗಳ ಬಗ್ಗೆ ನಾವು ಈ ಲೇಖನದಲ್ಲಿ ಚರ್ಚೆ ನಡೆಸಲಿದ್ದೇವೆ. ಯಾರದೇ ಜತೆ ಮಾತನಾಡುವಾಗ ಎಚ್ಚರದಿಂದ ಇದ್ದು, ಈ ಮಾತುಗಳನ್ನು ಕಡೆಗಣಿಸಿದರೆ ಒಳ್ಳೆಯದು.   

ಸಿಳ್ಳೆ ಹೊಡೆಯುವುದು

ಮಹಿಳೆಯರು ರಸ್ತೆಯಲ್ಲಿ ಹೋಗುತ್ತಿರುವ ಕಳ್ಳಬೆಕ್ಕಿನಂತೆ ಅವರ ಹಿಂದಿನಿಂದ ಹೋಗಿ ಸಿಳ್ಳೆ ಹಾಕುವುದು. ನಿಮ್ಮ ಮನೆಯ ಸಾಕು ನಾಯಿಯ ಮುಂದೆ ಸಿಳ್ಳೆ ಹಾಕಿ. ಅದಕ್ಕಾದರೂ ತುಂಬಾ ಸಂತೋಷವಾಗಬಹುದು.

ಮೇಕಪ್ ಇಲ್ಲದೆಯೂ ನೀನು ಸುಂದರವಾಗಿ ಕಾಣುತ್ತಿ!

ಮಹಿಳೆಯರು ಮೇಕಪ್ ಮಾಡಿಕೊಳ್ಳುವುದು ತಮ್ಮ ತೃಪ್ತಿಗಾಗಿ ಮತ್ತು ಒಳ್ಳೆಯ ರೀತಿ ಕಾಣಿಸಿಕೊಳ್ಳಲು. ಬೇರೆಯವರನ್ನು ಸೆಳೆಯಲು ಅಲ್ಲ ಎನ್ನುವುದು ಪುರುಷರು ನೆನಪಿಟ್ಟುಕೊಳ್ಳಬೇಕು. ಇದರ ಬಗ್ಗೆ ಅವರಿಗೆ ಉಪದೇಶ ಮಾಡಲು ಹೋಗಬೇಡಿ! 

ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೆ. ಆದರೆ...

ಪೂರ್ಣಗೊಳ್ಳದ ಈ ವಾಕ್ಯವು ಯಾವುದೇ ಅರ್ಥವನ್ನು ಕಲ್ಪಿಸುವುದಿಲ್ಲ. ಆಕೆಯ ತೂಕ ಅಥವಾ ಧರಿಸುವ ಬಟ್ಟೆಯ ಬಗ್ಗೆ ನೀವು ಹೇಳುತ್ತೀರಿ ಎಂದಾದರೆ ಅದರ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಬಿಡಿ. ಇಂತಹ ಅರ್ಧಂಬರ್ಧ ಮಾತುಗಳು ತುಂಬಾ ಕೋಪ ಉಂಟುಮಾಡುತ್ತದೆ.

ನನ್ನ ಗೆಳತಿಯಾಗಿರುವುದು ಯಾಕೆ?

ನಾವು ಕೇವಲ ಸ್ನೇಹಿತರಾಗಿ ಉಳಿದಿಲ್ಲ ಅಥವಾ ನಿನ್ನತ್ತ ಆಕರ್ಷಿತರಾಗಿದ್ದೇವೆ ಎನ್ನುವ ಬಗ್ಗೆ ಯಾವುದೇ ಸಂಜ್ಞೆಗಳನ್ನು ಮಾಡಿಲ್ಲ. ಹಾಗೆ ಏನಾದರೂ ಇದ್ದರೆ ಖಂಡಿತವಾಗಿಯೂ ನಾವು ಅದನ್ನು ಹೇಳಿಕೊಳ್ಳುತ್ತೇವೆ.

ತಾಳ್ಮೆ ವಹಿಸು

ಈ ಮಾತು ಹೆಚ್ಚಿನ ಹುಡುಗಿಯರ ಮನಸ್ಸನ್ನು ಕೆಡಿಸಿಬಿಡುತ್ತದೆ. ಅವರಿಗೆ ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಂತಹ ಸ್ವಾತಂತ್ರ್ಯವಿದೆ ಮತ್ತು ಅದನ್ನು ವ್ಯಕ್ತಪಡಿಸುವುದು ತಪ್ಪಲ್ಲ ಎಂದು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು.

ಮಹಿಳೆಯಾಗಿ ನೀನು ತುಂಬಾ ಜಾಣೆ

ಇಂತಹ ಮಾತುಗಳನ್ನು ಮಹಿಳೆಯರು ಪ್ರಶಂಸೆಯಾಗಿ ಸ್ವೀಕರಿಸಬೇಕಾ ಅಥವಾ ವ್ಯಂಗವೇ?

 

English summary

Weird Things 18-24 Year Old Girls Are Tired Of Hearing

As we grow up, we hear many things that can make us feel frustrated and angry. These are the common things that get dragged on into any topic and are used to make you realise about certain things. But what happens when you get annoyed with these words?
Please Wait while comments are loading...
Subscribe Newsletter