For Quick Alerts
ALLOW NOTIFICATIONS  
For Daily Alerts

ವಿಚಿತ್ರ, ಹುಚ್ಚು ಹುಚ್ಚಾದ, ತಲೆಚಿಟ್ಟು ಹಿಡಿಸುವ ಕಾನೂನು!

By Super
|

ಯಾವುದೇ ಪ್ರದೇಶಕ್ಕೆ ಹೊರಡುವ ಮುನ್ನ ಆ ಪ್ರದೇಶದ ಬಗ್ಗೆ ಕೊಂಚ ಅರಿವಿರುವುದು ಮುಖ್ಯ. ಉದಾಹರಣೆಗೆ ಗುಡ್ಡದ ತುದಿಯಲ್ಲಿರುವ ಊರಿಗೆ ಹೋಗುವಾದ ಅಲ್ಲಿ ಚಳಿ ಇದೆಯೇ ಇಂದು ವಿಚಾರಿಸಿ ಇದೆ ಎಂದರೆ ಬೆಚ್ಚಗಿನ ಉಡುಪುಗಳನ್ನು ಕೊಂಡೊಯ್ಯುವುದು ಜಾಣತನದ ಕ್ರಮ. ಒಂದು ವೇಳೆ ಬೇರೆ ದೇಶಕ್ಕೆ ಹೋಗುವುದಾದರೆ ಅಲ್ಲಿನ ಕಾನೂನು ಮತ್ತು ಇತರ ಮುಖ್ಯ ಜೀವನಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಸಹಾ. ತಮಿಳುನಾಡಿಗೆ ಹೋಗುವುದಾದರೆ ತಮಿಳು ಬರದಿದ್ದರೂ ತೊಂದರೆ ಇಲ್ಲ, ಆದರೆ ಇಂಗ್ಲಿಷ್ ಮಾತನಾಡಿ, ಹಿಂದಿ ಮಾತ್ರ ಮಾತನಾಡಲು ಹೋಗಬೇಡಿ ಎಂದು ಹಿತೈಷಿಗಳು ಹೇಳಿದರೆ ತಮಿಳುನಾಡಿಗೆ ಒಮ್ಮೆಯೂ ಭೇಟಿ ನೀಡದ ಹೊಸಬರಿಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ವಾಸ್ತವ. ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್‍ ಅನ್ನುತ್ತದೆ...

ತಮಿಳುನಾಡಿನವರು ಹಿಂದಿಯನ್ನು ವಿರೋಧಿಸುವ ಕಾರಣ ಹಿಂದಿ ಮಾತನಾಡುವವರನ್ನೂ ವಿರೋಧಿಸುತ್ತಾರೆ. ನಮ್ಮ ದೇಶದಲ್ಲಿಯೇ ಹೀಗಿರುವಾಗ ಇನ್ನು ವಿಶ್ವದ ಇತರ ದೇಶಗಳ ಕಥೆ ಏನಾಗಿರಬೇಕು? ಕೆಲವು ದೇಶದಲ್ಲಿ ಮುಖ ಗಂಟಿಕ್ಕುವುದೂ, ಕೂದಲಿಗೆ ಬಣ್ಣ ಹಾಕುವುದೂ ನಿಷಿದ್ಧ. ಇದೇ ತರಹದ ವಿಚಿತ್ರ ಮತ್ತು ಹುಚ್ಚುಹುಚ್ಚಾದ ಕಾನೂನುಗಳು ಹಲವಾರು ದೇಶದಲ್ಲಿವೆ. ಈ ಕಾನೂನುಗಳು ಬಹುತೇಕವಾಗಿ ಮಾನವನ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುತ್ತದೆ. ಬನ್ನಿ, ಇಂತಹ ವಿಚಿತ್ರ, ಹುಚ್ಚುಹುಚ್ಚಾದ, ತಲೆಚಿಟ್ಟುಹಿಡಿಸುವ ಕೆಲವು ಕಾನೂನುಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ...

ಇಟಲಿಯಲ್ಲಿ ಮುಖ ಗಂಟಿಕ್ಕುವುದು ನಿಷಿದ್ಧ

ಇಟಲಿಯಲ್ಲಿ ಮುಖ ಗಂಟಿಕ್ಕುವುದು ನಿಷಿದ್ಧ

ರೋಮ್ ನಲ್ಲಿದ್ದಾಗ ರೋಮನ್ ಆಗಿರು ಎಂಬುದೊಂದು ಇಂಗ್ಲಿಷ್ ಸುಭಾಷಿತ. ಇದಕ್ಕೆ ಕೊಂಚವೇ ಮಾರ್ಪಾಡು ಮಾಡಿ ಇಟಲಿಯ ಮಿಲಾನ್ ನಗರದಲ್ಲಿದ್ದಾಗ ಸದಾ ನಗುನಗುತ್ತಿರು ಎಂದು ಬದಲಿಸಿಕೊಳ್ಳಬಹುದು. ಅಂದರೆ ಕಾನೂನಿನ ಪ್ರಕಾರ ಎಲ್ಲಾ ಕಾಲದಲ್ಲಿಯೂ ನಗುತ್ತಲೇ ಇರಬೇಕು. ಬಲವಂತವಾಗಿಯಾದರೂ ಕೆನ್ನೆಯ ಸ್ನಾಯುಗಳನ್ನು ಸೆಳೆದುಕೊಂಡು ನೋವು ಬರಿಸಿಕೊಂಡಿರಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಟಲಿಯಲ್ಲಿ ಮುಖ ಗಂಟಿಕ್ಕುವುದು ನಿಷಿದ್ಧ

ಇಟಲಿಯಲ್ಲಿ ಮುಖ ಗಂಟಿಕ್ಕುವುದು ನಿಷಿದ್ಧ

ಈ ಕಾನೂನಿಗೆ ಕೇವಲ ಶವಸಂಸ್ಕಾರದ ಸಮಯದಲ್ಲಿ ಮತ್ತು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳನ್ನು ನೋಡುವಾಗ ಮಾತ್ರ ಸಡಿಲವಿದೆ. ಇನ್ನುಳಿದಂತೆ ಸಾರ್ವಜನಿಕವಾಗಿ ಇದ್ದಷ್ಟೂ ಹೊತ್ತು ಕೆನ್ನೆಯನ್ನು ಸೆಳೆದುಕೊಂಡೇ ಇರಬೇಕು.

ಸಿಂಗಾಪೂರ್ ನಲ್ಲಿ ಚ್ಯೂಯಿಂಗ್ ಗಮ್ ಅಗಿಯುವಂತಿಲ್ಲ

ಸಿಂಗಾಪೂರ್ ನಲ್ಲಿ ಚ್ಯೂಯಿಂಗ್ ಗಮ್ ಅಗಿಯುವಂತಿಲ್ಲ

ಸಿಂಗಾಪೂರ್ ನಲ್ಲಿ ರಾಜಾ ಕುಳ್ಳ ಚಿತ್ರದಲ್ಲಿ ವಿಷ್ಟುವರ್ಧನ್ ದ್ವಾರಕೀಶ್ ಇಬ್ಬರೂ ಒಮ್ಮೆಯೂ ಚ್ಯೂಯಿಂಗ್ ಗಮ್ ಅಗಿಯದಿರಲು ಅಲ್ಲಿನ ಕಾನೂನು ಕಾರಣವಿರಬಹುದು. ಏಕೆಂದರೆ ಸಿಂಗಾಪೂರ್ ನಲ್ಲಿ ಚ್ಯೂಯಿಂಗ್ ಗಮ್ ಮಾರುವುದೂ ಜಗಿಯುವುದೂ ನಿಷಿದ್ಧವಾಗಿದೆ.

ಇಟಲಿಯಲ್ಲಿ ಸದ್ದು ಮಾಡುವ ಚಪ್ಪಲಿಗೂ ನಿಷೇಧ

ಇಟಲಿಯಲ್ಲಿ ಸದ್ದು ಮಾಡುವ ಚಪ್ಪಲಿಗೂ ನಿಷೇಧ

ಇಟಲಿಯ ದ್ವೀಪನಗರವಾದ ಕ್ಯಾಪ್ರಿಯಲ್ಲಿ ನಡೆಯುವಾಗ ಚರಕ್ ಚರಕ್ ಸದ್ದು ಮಾಡುವ ಫ್ಲಿಪ್ ಫ್ಲಾಪ್ ಸ್ಯಾಂಡಲ್ ಪಾದರಕ್ಷೆಗಳನ್ನು ಧರಿಸಲು ನಿಷೇಧವಿದೆ. ಧರಿಸಿದರೆ ದಂಡ ಖಚಿತ.

ಆಸ್ಟ್ರೇಲಿಯಾದಲ್ಲಿ ಬಲ್ಬ್ ನೀವಾಗಿ ಬದಲಿಸುವಂತಿಲ್ಲ

ಆಸ್ಟ್ರೇಲಿಯಾದಲ್ಲಿ ಬಲ್ಬ್ ನೀವಾಗಿ ಬದಲಿಸುವಂತಿಲ್ಲ

ನಿಮ್ಮ ಮನೆಯ ವಿದ್ಯುತ್ ಬಲ್ಪ್ ಕೆಟ್ಟುಹೋದರೆ ನೀವೇ ಅದನ್ನು ಬದಲಿಸುವಂತಿಲ್ಲ. ವೃತ್ತಿಪರ ಮತ್ತು ಲೈಸನ್ಸ್ ಉಳ್ಳ ಎಲೆಕ್ಟ್ರಿಶಿಯನ್ ಒಬ್ಬರನ್ನು ಕರೆದು ಇದನ್ನು ಬದಲಿಸಿಕೊಳ್ಳಬೇಕು. ಹೀಗೊಂದು ಕಾನೂನು ಆಸ್ಟ್ರೇಲಿಯಾದ ವಿಕ್ಟೋರಿಯಾ ನಗರದಲ್ಲಿದೆ. ಒಂದು ವೇಳೆ ನೀವೇ ಬದಲಿಸಿದುದು ಗೊತ್ತಾದರೆ ದಂಡ ಖಚಿತ.

ಅದೇ ಭಾರತದಲ್ಲಿ...!

ಅದೇ ಭಾರತದಲ್ಲಿ...!

ತದ್ವಿರುದ್ದವಾಗಿ ಭಾರತದಲ್ಲಿ ಮನೆಯ ಬಲ್ಬ್ ಬಿಡಿ, ಗದ್ದೆಯಲ್ಲಿ ಹಾದು ಹೋಗುವ ಹೈಟೆನ್ಶನ್ (ಅತಿ ಹೆಚ್ಚಿನ ವೋಲ್ಟೇಜ್ ಇರುವ) ತಂತಿಗಳಿಗೇ ವೈರುಗಳ ಕೊಕ್ಕೆ ಸಿಕ್ಕಿಸಿ ತಮ್ಮ ಮೋಟಾರುಗಳಿಂದ ಉಚಿತವಾಗಿ ನೀರು ಬಿಟ್ಟುಕೊಳ್ಳುವ ಭೂಪರಿದ್ದಾರೆ.

ಫ್ರಾನ್ಸ್‌ನಲ್ಲಿ ರಸ್ತೆಯಲ್ಲಿ ಉಗಿಯುವಂತಿಲ್ಲ

ಫ್ರಾನ್ಸ್‌ನಲ್ಲಿ ರಸ್ತೆಯಲ್ಲಿ ಉಗಿಯುವಂತಿಲ್ಲ

ಫ್ರಾನ್ಸ್ ನ ಕೌಲೇನ್ಸ್ ನಗರದಲ್ಲಿ ಅಪ್ಪಿ ತಪ್ಪಿಯೂ ರಸ್ತೆಯಲ್ಲಿ ಉಗಿಯುವಂತಿಲ್ಲ. ಏಕೆಂದರೆ ಈ ಉಗಿತ ಹಂದಿಜ್ವರಕ್ಕೆ ಆಹ್ವಾನ ನೀಡಬಹುದು.

ಫ್ರಾನ್ಸ್‌ನಲ್ಲಿ ರಸ್ತೆಯಲ್ಲಿ ಉಗಿಯುವಂತಿಲ್ಲ

ಫ್ರಾನ್ಸ್‌ನಲ್ಲಿ ರಸ್ತೆಯಲ್ಲಿ ಉಗಿಯುವಂತಿಲ್ಲ

ಕೆಲಕಾಲ ಹಿಂದೆ ನಗರವನ್ನು ಆವರಿಸಿದ್ದ ಹಂದಿಜ್ವರ ಹರಡಲು ಉಗಿತವೇ ಕಾರಣ ಎಂದು ಖಚಿತವಾದ ಬಳಿಕ ಆ ನಗರದ ಮೇಯರ್ ಉಗಿತವನ್ನು ದಂಡಾರ್ಹ ಅಪರಾಧ ಎಂದು ಕಾನೂನು ಹೊರಡಿಸಿದ್ದಾರೆ.

ಸ್ಪೇನ್‌ನಲ್ಲಿ ಸಾವಿಗೂ ಕಾನೂನು

ಸ್ಪೇನ್‌ನಲ್ಲಿ ಸಾವಿಗೂ ಕಾನೂನು

ಸ್ಪೇನ್‌ನ ಅಂದುಲುಸ್ ನಗರದಲ್ಲಿ ಸಾವಿಗೂ ಕಾನೂನು ಇದೆ. ಅಂದರೆ ಸಾಯಲೂ ಕಾನೂನಿನ ಅನುಮತಿ ಬೇಕು. ಇದೇ ಕಾನೂನು ಬ್ರಜಿಲ್ ದೇಶದ ಬ್ರಿಟಿಬಿಯಾ-ಮಿರಿಂ ಎಂದ ನಗರದಲ್ಲಿಯೂ ಇದೆ. ಇಲ್ಲಿ ಎಲ್ಲಿಯವರೆಗೆ ಸರ್ಕಾರ ಶವಸಂಸ್ಕಾರಕ್ಕಾಗಿ ನೆಲ ಮತ್ತು ಹೊಸ ಶವಾಗಾರವನ್ನು ನಿರ್ಮಿಸುವುದಿಲ್ಲವೋ ಅಲ್ಲಿಯವರೆಗೆ ಸಾಯದಿರುವಂತೆ ಕಾನೂನು ಮಾಡಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸ್ಪೇನ್‌ನಲ್ಲಿ ಸಾವಿಗೂ ಕಾನೂನು

ಸ್ಪೇನ್‌ನಲ್ಲಿ ಸಾವಿಗೂ ಕಾನೂನು

ಇದು ದೇವರ ಕೈಯಲ್ಲಿರುವುದಲ್ಲವೇ ಇಲ್ಲಿ ಹೀಗೇಕೆ ಎಂದು ಕೇಳಿದರೆ ಇದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ತನ್ಮೂಲಕ ಶವಾಗಾರದ ಮೇಲೆ ಅಗತ್ಯಕ್ಕಿಂತಲೂ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುವ ಕ್ರಮ ಎಂಬ ಉತ್ತರ ಸಿಗುತ್ತದೆ.

ಇಟಲಿಯಲ್ಲಿ ಚಿನ್ನದ ಬಣ್ಣದ ಮೀನಿನ ಅಕ್ವೇರಿಯಂ ಇಡುವಂತಿಲ್ಲ

ಇಟಲಿಯಲ್ಲಿ ಚಿನ್ನದ ಬಣ್ಣದ ಮೀನಿನ ಅಕ್ವೇರಿಯಂ ಇಡುವಂತಿಲ್ಲ

ಇಟಲಿಯ ಮೋನ್ಸಾ (Monza) ಎಂಬ ನಗರದಲ್ಲಿ ಮನೆಯಲ್ಲಿ ಚಿನ್ನದ ಬಣ್ಣದ ಮೀನಿರುವ ಗಾಜಿನ ಜಾಡಿ ಅಥವಾ ಅಕ್ವೇರಿಯಂ ಇಡುವಂತಿಲ್ಲ. ಏಕೆಂದರೆ ಮೀನನ್ನು ಅಕ್ವೇರಿಯಂನಲ್ಲಿಡುವ ಮೂಲಕ ವಾಸ್ತವದ ವಿರೂಪಗೊಂಡ ರೂಪ ಅನಾವರಣಗೊಳ್ಳುತ್ತದೆ (distorted view of reality) ಎಂಬ ಕಾರಣವನ್ನು ಇಲ್ಲಿನ ಸರ್ಕಾರ ನೀಡುತ್ತದೆ.

ಇಟಲಿಯಲ್ಲಿ ಕಾರಿನೊಳಗೆ ಚುಂಬನ ನೀಡುವಂತಿಲ್ಲ

ಇಟಲಿಯಲ್ಲಿ ಕಾರಿನೊಳಗೆ ಚುಂಬನ ನೀಡುವಂತಿಲ್ಲ

ಇಟಲಿಯ ಎಬೋಲಿ (Eboli) ಎಂಬ ನಗರದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಚುಂಬನ ನಿಷಿದ್ಧವಾಗಿದೆ.

ಇಟಲಿಯಲ್ಲಿ ಕಾರಿನೊಳಗೆ ಚುಂಬನ ನೀಡುವಂತಿಲ್ಲ

ಇಟಲಿಯಲ್ಲಿ ಕಾರಿನೊಳಗೆ ಚುಂಬನ ನೀಡುವಂತಿಲ್ಲ

ಏಕೆಂದರೆ ಇದರಿಂದ ಚಾಲಕನ ಗಮನ ಬೇರೆಡೆ ಸೆಳೆದು ಅಪಘಾತವಾಗುವ ಸಂಭವನ್ನು ಇದಕ್ಕೆ ಕಾರಣವೆಂದು ಸರ್ಕಾರ ತಿಳಿಸುತ್ತದೆ. ಈ ಅಪರಾಧಕ್ಕೆ ದಂಡವೂ ದೊಡ್ಡದಿದೆ. ಪ್ರಥಮ ಚುಂಬನ ದಂತದ ಜೊತೆಗೇ ಕೆಲವಾರು ನೂರು ಡಾಲರುಗಳೂ ಭಗ್ನವಾಗಬಹುದು.

ಡೆನ್ಮಾರ್ಕ್‌ನಲ್ಲಿ ನಿಮ್ಮಿಷ್ಟದ ಹೆಸರನ್ನು ಮಗುವಿಗೆ ಇಡುವಂತಿಲ್ಲ

ಡೆನ್ಮಾರ್ಕ್‌ನಲ್ಲಿ ನಿಮ್ಮಿಷ್ಟದ ಹೆಸರನ್ನು ಮಗುವಿಗೆ ಇಡುವಂತಿಲ್ಲ

ತಮ್ಮ ಮಕ್ಕಳ ಹೆಸರು ಸುಂದರ, ಭಿನ್ನವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಡೆನ್ಮಾರ್ಕ್ ನಲ್ಲಿ ಸರ್ಕಾರ ಪ್ರಜೆಗಳು ತಮ್ಮಿಷ್ಟದ ಹೆಸರನ್ನು ಮಗುವಿಗೆ ಇಡುವಂತಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಡೆನ್ಮಾರ್ಕ್‌ನಲ್ಲಿ ನಿಮ್ಮಿಷ್ಟದ ಹೆಸರನ್ನು ಮಗುವಿಗೆ ಇಡುವಂತಿಲ್ಲ

ಡೆನ್ಮಾರ್ಕ್‌ನಲ್ಲಿ ನಿಮ್ಮಿಷ್ಟದ ಹೆಸರನ್ನು ಮಗುವಿಗೆ ಇಡುವಂತಿಲ್ಲ

ಸರ್ಕಾರ ಅನುಮೋದಿಸಿದ ಏಳು ಸಾವಿರ ಹೆಸರುಗಳಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳಲು ಕಾನೂನು ಅವಕಾಶ ನೀಡುತ್ತದೆ. ಅಂದರೆ ಡೆನ್ಮಾರ್ಕಿನ ಅಷ್ಟೂ ಪ್ರಜೆಗಳಲ್ಲಿ ಏಳು ಸಾವಿರ ಹೆಸರುಗಳು ಸಮಾನವಾಗಿವೆ.

English summary

Weird And Crazy Things That Are Banned In Different Countries!

It is sometimes so funny to hear that a thing which can be legal and authentic can be banned in many countries. Since humans seek freedom to do anything in life, putting a ban on essential things can be quite annoying actually. Read on to know more about the weird things that are banned in many countries.
X
Desktop Bottom Promotion