ಬೆಂಗಳೂರು ಹುಡುಗನ ಅಸಾಮಾನ್ಯ ಸಾಧನೆ- ವೋಟ್ ಮಾಡಿ ಗೆಲ್ಲಿಸಿ...

ಭಾರತದ ಕ್ಯುಟೆಸ್ಟ್ ವೆಜಿಟೇರಿಯನ್ ನೆಕ್ಸ್ಟ್ ಡೋರ್ ಸ್ಪರ್ಧೆಯಲ್ಲಿ ಕುಶಾಲ್ ಹೆಬ್ಬಾರ್ ಅಂತಿಮ ಕಂಪ್ಯೂಟರ್ ಸೈನ್ ಇಂಜಿನಿಯರಿಂಗ್ ವಿದ್ಯಾರ್ಥಿ ಅಂತಿಮ ಸುತ್ತಿಗೆ ಬಂದಿದ್ದು, ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ....

By: manu
Subscribe to Boldsky

ಮಾಂಸಾಹಾರವೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ? ಪ್ರತಿಯೊಬ್ಬರು ಮಾಂಸಾಹಾರ ಪ್ರಿಯರೇ. ಹುಟ್ಟು ಸಸ್ಯಹಾರಿಗಳನ್ನು ಹೊರತುಪಡಿಸಿ! ಇಂದಿನ ದಿನಗಳಲ್ಲಿ ಯುವ ಜನಾಂಗವು ಸಂಪೂರ್ಣವಾಗಿ ಮಾಂಸಹಾರವನ್ನು ನೆಚ್ಚಿಕೊಂಡಿದೆ. ಎಲ್ಲಿ ಹೋದರೂ ಅವರಿಗೆ ಮಾಂಸಾಹಾರವೇ ಬೇಕು.

ಮಾಲ್‌ಗಳಲ್ಲಿ ಅಥವಾ ಯಾವುದೇ ಕಾರ್ಯಕ್ರಮವಾಗಲಿ ಅಲ್ಲಿ ಮಾಂಸಹಾರ ಬೇಕೇ ಬೇಕು. ಇಂತಹ ಇಷ್ಟದ ಮಾಂಸಾಹಾರವನ್ನು ತ್ಯಜಿಸುವುದು ಸಾಧ್ಯವೇ? ಇಲ್ಲ ಎನ್ನುತ್ತಾರೆ ಪ್ರತಿಯೊಬ್ಬರು. ಆದರೆ ಬೆಂಗಳೂರಿನ ಯುವಕ ಕುಶಾಲ್ ಹೆಬ್ಬಾರ್ ಎನ್ನುವವರು ಸಂಪೂರ್ಣ ಸಸ್ಯಹಾರಿಯಾಗಿ ಪೆಟಾ ಆಯೋಜಿಸಿರುವ ಇಂಡಿಯಾಸ್ ಕ್ಯೂಟೆಸ್ಟ್ ವೆಜಿಟೇರಿಯನ್ ನೆಕ್ಸ್ಟ್ ಡೋರ್ ಸ್ಪರ್ಧೆಯಲ್ಲಿ ಫೈನಲಿಗೇರಿದ್ದಾರೆ...

ಇತ್ತೀಚೆಗೆ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಿ ಸಸ್ಯಾಹಾರ ಅಂಶಕ್ಕೆ ಹೆಚ್ಚಿನ ಒತ್ತನ್ನು ನೀಡುವುದಕ್ಕಾಗಿ ಪೆಟಾದಂತಹ ಸಂಸ್ಥೆ ಹೊಸದಾದ ಸ್ಪರ್ಧೆಯೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ ಕೊನೆಯ ಸುತ್ತಿಗೆ ಉದ್ಯಾನ ನಗರಿ ಬೆಂಗಳೂರಿನ ಯುವ ಇಂಜಿನಿಯರಿಂಗ್ ವಿದ್ಯಾರ್ಥಿ ಕುಶಾಲ್ ತಲುಪಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. 

ಪೆಟಾ (ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್) ನಡೆಸುತ್ತಿರುವ ಭಾರತದ ಕ್ಯುಟೆಸ್ಟ್ ವೆಜಿಟೇರಿಯನ್ ನೆಕ್ಸ್ಟ್ ಡೋರ್ ಸ್ಪರ್ಧೆಯಲ್ಲಿ ಕುಶಾಲ್ ಹೆಬ್ಬಾರ್ ಅಂತಿಮ ಕಂಪ್ಯೂಟರ್ ಸೈನ್ ಇಂಜಿನಿಯರಿಂಗ್ ವಿದ್ಯಾರ್ಥಿ ಅಂತಿಮ ಸುತ್ತಿಗೆ ಬಂದಿದ್ದು ಇತರ ಒಂಬತ್ತು ಸ್ಪರ್ಧಿಗಳಿಗೆ ತೀವ್ರವಾದ ಪೈಪೋಟಿಯನ್ನು ನೀಡುತ್ತಿದ್ದಾರೆ. ಇದು ಪುರುಷ ಮತ್ತು ಮಹಿಳಾ ವಿಭಾಗವನ್ನು ಒಳಗೊಂಡಿದ್ದು ಎರಡೂ ವಿಭಾಗಗಳಲ್ಲಿ ಒಬ್ಬೊಬ್ಬ ವಿಜಯಿಗಳನ್ನು ನವೆಂಬರ್ 2 ರಂದು ಆಯ್ಕೆಮಾಡಲಾಗುತ್ತದೆ.

vote for kushal
 

ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಟ್ರೋಫಿ, ನಗದು, ಸರ್ಟಿಫಿಕೇಟ್, ವೆಜಿಟೇರಿಯನ್ ಸ್ಟಾರ್ಟರ್ ಕಿಟ್ ಮತ್ತು ಗ್ಲಾಸ್ ವಾಲ್ ಡಿವಿಡಿ ಯನ್ನು ನೀಡಲಾಗುವುದು ಎಂದು ಪೆಟಾದ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ. ಪ್ರಾಣಿಗಳ ರಕ್ಷಣೆ, ಅವುಗಳ ಶಾರೀರಿಕ ಲಕ್ಷಣಗಳನ್ನು ಕಾಪಾಡುವುದು ಮತ್ತು ಸಸ್ಯಹಾರವನ್ನು ಆಯ್ಕೆ ಮಾಡಿರುವುದು ಯಾಕೆ ಎನ್ನುವ ಕಾರಣವನ್ನು ಕುಶಾಲ್  ತೀರ್ಪುಗಾರರಿಗೆ ಮನವರಿಕೆಯಾಗುವಂತೆ ನೀಡಿರುವ ಕಾರಣದಿಂದಾಗಿ ಅವರು ಫೈನಲಿಗೆ ಆಯ್ಕೆಯಾಗಿದ್ದಾರೆ.

ಕೇವಲ ರುಚಿಯ ಕಾರಣಕ್ಕಾಗಿ ಮಾತ್ರ ತಾನು ಮಾಂಸಾಹಾರವನ್ನು ತ್ಯಜಿಸುತ್ತಿಲ್ಲ. ಬದಲಿಗೆ ಪ್ರಾಣಿಗಳ ಮೇಲೆ ದಯೆ ತನಗಿದೆ ಎಂದು ಕುಶಾಲ್ ಅವರ ಅಭಿಪ್ರಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ...

ಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವಂತಹ ಪ್ರಚಾರಗಳನ್ನು ಪೇಟಾ ಮಾಡುತ್ತಿದೆ. ಸಸ್ಯಾಹಾರಿಗಳಿಗೆ ಈ ಬಗೆಯಲ್ಲಿ ಹೆಚ್ಚಿನ ಮಹತ್ವವನ್ನು ಸಂಸ್ಥೆ ನೀಡುತ್ತಿದ್ದು ಈ ಬಗೆಯಲ್ಲಿ ಪ್ರಾಣಿ ಹತ್ಯೆಯನ್ನು ತಡೆಯುವ ಕ್ರಿಯೆ ಸಂಸ್ಥೆಯದ್ದಾಗಿದೆ. ಮಾಂಸಾಹಾರ ಆಹಾರ ಪದ್ಧತಿಯಿಂದ ಮನುಷ್ಯರು ರೋಗಗಳಿಗೆ ಬೇಗನೇ ತುತ್ತಾಗುವುದು ಮಾತ್ರವಲ್ಲದೆ ಪರಿಸರಕ್ಕೂ ಇದರಿಂದ ಹಾನಿಯಾಗುತ್ತಿದೆ ಎಂಬುದನ್ನು ಸಂಸ್ಥೆ ವಾದಿಸುತ್ತದೆ..

vote for kushal
 

ಈಗ ಬೆಂಗಳೂರಿನ ಕುಶಾಲ್ ಪೇಟಾದ ಅತ್ಯಮೂಲ್ಯ ಗರಿಮೆಯನ್ನು ತಮ್ಮ ಮುಡಿಗೇರಿಸಿಕೊಂಡು ಉದ್ಯಾನ ನಗರಿಯ ಹಿರಿಮೆಯನ್ನು ಖ್ಯಾತಿಗೊಳಿಸುವುದು ಮಾತ್ರವಲ್ಲದೆ ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ. ಹೆಚ್ಚಿನವರಿಗೆ ಕುಶಾಲ್ ಗೆಲ್ಲುವ ವಿಶ್ವಾಸವಿರುವುದರಿಂದ ಅವರ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ  

ಅದಕ್ಕಿಂತಲೂ ಹೆಚ್ಚಾಗಿ ನಾವೆಲ್ಲರೂ ಕುಶಾಲ್ ಅವರಿಗೆ ಹೆಚ್ಚು ಹೆಚ್ಚು ವೋಟ್ ಮಾಡುವುದರ ಮೂಲಕ ವಿಜಯದ ಪಟ್ಟಕ್ಕೆ ಏರಿಸಬೇಕಾಗಿದೆ. ಅಕ್ಟೋಬರ್ 28 (2016) ರಂದು ಸಂಜೆ 5:30 ವರೆಗೆ ವೋಟಿಂಗ್ ಮುಂದುವರಿಯಲಿದೆ. ಕುಶಾಲ್ ಅವರನ್ನು ವಿಜಯಿಯಾಗಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ....

http://www.petaindia.com/blog/vote-for-cutest-vegetarian-next-door/. 

Story first published: Saturday, October 15, 2016, 15:20 [IST]
English summary

vote kushal help him win cutest vegetarian next door

A final-year student of computer science engineering at BNM Institute of Technology, Kushal will take on nine other male competitors to win the contest, which was open to all non-celebrity Indian residents. The female section also has 10 contestants. Two champs, one from either section, will be declared on November 2.
Please Wait while comments are loading...
Subscribe Newsletter