For Quick Alerts
ALLOW NOTIFICATIONS  
For Daily Alerts

ಪ್ರೀತಿಯಿಂದ ಒಬ್ಬರಿಗೊಬ್ಬರು ಕಚ್ಚುವಾಗ ಎಚ್ಚರವಿರಲಿ!

ಮಿಲನ ಮಹೋತ್ಸವದ ವೇಳೆ ಕಾಮನೆಗಳನ್ನು ಹತ್ತಿಕೊಳ್ಳಲು ಸಾಧ್ಯವಾಗದೆ ಅಂತಿಮವಾಗಿ ಪ್ರೀತಿಯಿಂದ ಪರಸ್ಪರರನ್ನು ಕಚ್ಚಿಕೊಳ್ಳುತ್ತಾರೆ. ಇದು ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಕೂಡ, ಆದರೆ.....

By Hemanth
|

ಸಂಗಾತಿಗಳ ಮಧ್ಯೆ ನಡೆಯುತ್ತಿರುವ ಮಿಲನ ಮಹೋತ್ಸವದ ವೇಳೆ ಕಾಮನೆಗಳನ್ನು ಹತ್ತಿಕೊಳ್ಳಲು ಸಾಧ್ಯವಾಗದೆ ಅಂತಿಮವಾಗಿ ಪ್ರೀತಿಯಿಂದ ಪರಸ್ಪರರನ್ನು ಕಚ್ಚಿಕೊಳ್ಳುತ್ತಾರೆ. ಇದು ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಕೂಡ. ಆದರೆ ಪ್ರೀತಿಯಿಂದ ಕಚ್ಚಿದರೂ ಅದರಿಂದ ಕೆಲವೊಂದು ಅಡ್ಡ ಪರಿಣಾಮಗಳು ಇದೆ ಎಂದು ತಿಳಿದಿದೆಯಾ? ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ಹೌದು, ಈ ಪ್ರೀತಿಯ ಕಚ್ಚುವಿಕೆಯಿಂದಾಗಿ ಅಡ್ಡಪರಿಣಾಮಗಳು ಉಂಟಾಗುತ್ತದೆ. ಅದು ಏನು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ. ಪ್ರೀತಿಯ ಕಚ್ಚುವಿಕೆಯ ಬಗ್ಗೆ ನಿಮಗೆ ತಿಳಿದಿರುವಂತಹ ಕೆಲವೊಂದು ವಿಷಯಗಳನ್ನು ನಾವು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ.

ಆದರೆ ಈ ಸತ್ಯಗಳನ್ನು ಹೆಚ್ಚಿನವರು ಕಡೆಗಣಿಸುತ್ತಾರೆ ಮತ್ತು ಪ್ರೀತಿಯಿಂದ ಕಚ್ಚುತ್ತಾರೆ ಅಥವಾ ಕಚ್ಚಿಸಿಕೊಳ್ಳುತ್ತಾರೆ. ಆದರೆ ಈ ಲೇಖನವನ್ನು ಓದಿದ ಬಳಿಕ ನೀವು ಕಚ್ಚಲು ಅಥವಾ ಕಚ್ಚಿಸಿಕೊಳ್ಳಲು ಮತ್ತೊಮ್ಮೆ ಯೋಚಿಸಬೇಕಾಗುತ್ತದೆ.

ವಾಸ್ತವ #1

ವಾಸ್ತವ #1

ಪ್ರೀತಿಯಿಂದ ಕಚ್ಚಿಸಿಕೊಳ್ಳುವ ಸಂಪ್ರದಾಯ ಹುಟ್ಟಿಬಂದಿರುವುದು ಪ್ರಾಣಿಗಳ ಜಗತ್ತಿನಿಂದ. ಪ್ರಾಣಿಗಳು ಪರಸ್ಪರ ಪ್ರೀತಿಸುವಾಗ ಸಂಗಾತಿಯ ಕುತ್ತಿಗೆಯನ್ನು ಕಚ್ಚುತ್ತವೆ.

ವಾಸ್ತವ #2

ವಾಸ್ತವ #2

ಕಬ್ಬಿನಾಂಶ ಕಡಿಮೆ ಇರುವ ವ್ಯಕ್ತಿಗಳಲ್ಲಿ ಸಂಗಾತಿಯು ಕಚ್ಚಿದಾಗ ಚರ್ಮದ ಮೇಲೆ ಗುರುತುಗಳು ಬೇಗನೆ ಮೂಡುತ್ತದೆ. ಇದರಿಂದ ಪಾರಾಗಲು ಮೀನು ಹಾಗೂ ಹಸಿರೆಲೆ ತರಕಾರಿಗಳನ್ನು ತಿನ್ನಬೇಕು.

ವಾಸ್ತವ #3

ವಾಸ್ತವ #3

ಇದರಿಂದ ಪಾರ್ಶ್ವವಾಯು ಸಂಭವಿಸಬಹುದು ಮತ್ತು ವ್ಯಕ್ತಿ ಸಾಯಬಹುದು. ಲೈಂಗಿಕ ಕ್ರಿಯೆ ವೇಳೆ ಸಂಗಾತಿಗೆ ಪ್ರೀತಿಯಿಂದ ಕಚ್ಚಿದಾಗ ಪಾರ್ಶ್ವವಾಯು ಕಾಣಿಸಿಕೊಂಡು ಅದರಿಂದ ಜೀವ ಹಾನಿಯಾದ ಉದಾಹರಣೆಗಳು ಇವೆ. ಯಾರೂ ಕೂಡ ಇದನ್ನು ಬಯಸಲ್ಲ.

ವಾಸ್ತವ #4

ವಾಸ್ತವ #4

ಬಾಯಿಯ ಸರ್ಪಸುತ್ತು ಇರುವಂತಹ ವ್ಯಕ್ತಿಯು ಕಚ್ಚಿದರೆ ಆಗ ಸಂಗಾತಿಗೆ ಕೂಡ ಬಾಯಿಯ ಸರ್ಪಸುತ್ತು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರೀತಿಯ ಕಚ್ಚುವಿಕೆಯಲ್ಲಿ ಬಾಯಿಯ ಸರ್ಪಸುತ್ತು ಬೇಗನೆ ಹರಡುತ್ತದೆ.

ವಾಸ್ತವ #5

ವಾಸ್ತವ #5

ಇದರಿಂದ ನಿಮ್ಮ ದೇಹದ ಮೇಲೆ ಕಲೆಗಳು ಉಂಟಾಗಬಹುದು. ಗಾಯ ದೊಡ್ಡದಾಗಿದ್ದರೆ ಅದು ಖಾಯಂ ಆಗಿ ನಿಮ್ಮ ದೇಹದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ವಾಸ್ತವ #6

ವಾಸ್ತವ #6

ಇದರಿಂದ ಲೈಂಗಿಕ ಸಂಬಂಧಿ ಕಾಯಿಲೆಗಳು ಬರಬಹುದು. ಪ್ರೀತಿಯ ಕಚ್ಚುವಿಕೆಯಿಂದ ದೇಹದಲ್ಲಿ ಹೆಚ್ಚಿನ ಗಾಯಗಳು ಇದ್ದರೆ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ಮಾಡಲಾಗಿದೆ ಎಂದು ಭಾವಿಸಬೇಕಾಗುತ್ತದೆ.

ವಾಸ್ತವ #7

ವಾಸ್ತವ #7

ಕಾಮಸೂತ್ರದಲ್ಲಿ ಕೂಡ ಈ ಪ್ರೀತಿಯ ಕಚ್ಚುವಿಕೆಯ ಬಗ್ಗೆ ಉಲ್ಲೇಖವಿದೆ. ಇದನ್ನು ಹವಳ ಮತ್ತು ರತ್ನಗಳೆಂದು ಕರೆಯಲಾಗಿದೆ. ತುಟಿಗಳನ್ನು ಹವಳಗಳೆಂದು ಮತ್ತು ಹಲ್ಲುಗಳನ್ನು ರತ್ನಗಳೆಂದು ಬಣ್ಣಿಸಲಾಗಿದೆ.

ವಾಸ್ತವ #8

ವಾಸ್ತವ #8

ಪ್ರೀತಿಯ ಕಚ್ಚುವಿಕೆಗೆ ಯಾವುದೇ ತ್ವರಿತ ಉಪಶಮನವಿಲ್ಲ. ಸಮಯವೇ ಇದನ್ನು ಶಮನಗೊಳಿಸಬೇಕು. ನಾಚಿಕೆಯಾಗುತ್ತಿದ್ದರೆ ಮೇಕಪ್‌ನಿಂದ ಅದನ್ನು ಮುಚ್ಚಿಕೊಳ್ಳಬಹುದು.

English summary

Unknown Facts About Love Bites

We've shared some of the unknown facts and secrets about love bites that you should know. These are the facts that most of us ignore and instead end up giving as well as receiving love bites.
X
Desktop Bottom Promotion