For Quick Alerts
ALLOW NOTIFICATIONS  
For Daily Alerts

ಇದು ಉಗುರಿನ ಸೀಕ್ರೆಟ್‌ ವಿಷಯ, ಕೊಂಚ ಇಂಟರೆಸ್ಟಿಂಗ್!

By Manu
|

ಉಗುರುಗಳ ಅಂದವನ್ನು ನೋಡಬೇಕೆಂದರೆ ನಾವು ಮಹಿಳೆಯರ ಕೈಗಳನ್ನು ನೋಡಬೇಕು. ಉಗುರನ್ನು ಅವರಿಗೆ ಬೇಕಾದ ಶೈಲಿಯಲ್ಲಿ ಕೆತ್ತನೆ ಮಾಡಿ ಅದಕ್ಕೆ ಬೇಕಾದಂತೆ ಪಾಲಿಶ್ ಮಾಡಿಕೊಂಡಿರುತ್ತಾರೆ. ಒಂದೊಂದು ಉಗುರಿಗೆ ಬೇರೆಬೇರೆ ಬಣ್ಣವನ್ನು ಹಚ್ಚಿಕೊಳ್ಳುವ ಕಾಲವಿದು. ಉಗುರಿನ ಬಣ್ಣ ಹಳದಿ ಆಗಿದೆಯೇ? ಇನ್ನು ಚಿಂತೆ ಬಿಡಿ...

ಅದೇನೇ ಇರಲಿ, ನಮ್ಮ ಕೈ ಮತ್ತು ಕಾಲುಗಳಲ್ಲಿ ಇರುವ ಉಗುರುಗಳು ಕೆಲವೊಮ್ಮೆ ನಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ಇದನ್ನು ಚೆನ್ನಾಗಿ ಆರೈಕೆ ಮಾಡುವುದು ಮಹಿಳೆಯರು ಮಾತ್ರ. ಪುರುಷರು ಯಾವುದೇ ಸಂದರ್ಶನ ಅಥವಾ ಡೇಟಿಂಗ್‌ಗೆ ಹೋಗಲು ಇದ್ದರೆ ಉಗುರುಗಳ ಕಡೆ ಗಮನಹರಿಸುತ್ತಾರೆ. ಇಲ್ಲವೆಂದಾದರೆ ಅದನ್ನು ಅದರಷ್ಟಕ್ಕೆ ಬೆಳೆಯಲು ಬಿಟ್ಟಿರುತ್ತಾರೆ. ಉಗುರು ನೋಡಿ ಭವಿಷ್ಯ ಹೇಳಬಹುದಂತೆ! ನಂಬುತ್ತೀರಾ..?

ಈ ಲೇಖನದಲ್ಲಿ ಉಗುರುಗಳ ಬಗ್ಗೆ ನಿಮಗೆ ತಿಳಿಯದೆ ಇರುವ ಕೆಲವೊಂದು ಸಂಗತಿಗಳನ್ನು ಹೇಳಲಿದ್ದೇವೆ. ಉಗುರಿನ ಕಠಿಣ ಭಾಗವನ್ನು ಪ್ಲೇಟ್ ಎನ್ನಲಾಗುತ್ತದೆ. ಇದು ಚರ್ಮದ ಕೆಳಗಡೆ ಇರುತ್ತದೆ. ಬುಡದಿಂದ ಬೆಳೆಯುವುದನ್ನು ಮ್ಯಾಟ್ರಿಕ್ಸ್ ಎನ್ನುತ್ತೇವೆ. ಉಗುರಿನ ಬಗ್ಗೆ ನಿಮಗೆ ತಿಳಿಯದೆ ಇರುವ ಹಲವಾರು ವಿಷಯಗಳಿವೆ. ಇದನ್ನು ತಿಳಿದುಕೊಳ್ಳಲು ಮುಂದಕ್ಕೆ ಓದುತ್ತಾ ಇರಿ.....

ತಿಂಗಳಿಗೆ 3.5 ಮಿ.ಮೀಟರ್ ಬೆಳೆಯುವ ಕೈಬೆರಳುಗಳ ಉಗುರು

ತಿಂಗಳಿಗೆ 3.5 ಮಿ.ಮೀಟರ್ ಬೆಳೆಯುವ ಕೈಬೆರಳುಗಳ ಉಗುರು

ಕಾಲಿನ ಬೆರಳಿನ ಉಗುರುಗಳಿಗೆ ಹೋಲಿಸಿದರೆ ಕೈಬೆರಳಿನ ಉಗುರುಗಳು ವೇಗವಾಗಿ ಬೆಳೆಯುತ್ತದೆ. ಕಾಲಿನ ಬೆರಳಿನ ಉಗುರು ತಿಂಗಳಿಗೆ 1.6 ಮಿ.ಮೀ. ಬೆಳೆದರೆ ಕೈಬೆರಳಿನ ಉಗುರು 3.5 ಮಿ.ಮೀ. ಬೆಳೆಯುತ್ತದೆ.

ಬಿಳಿ ಕಲೆಗಳು ಕ್ಯಾಲ್ಸಿಯಂ ಕೊರತೆಯ ಲಕ್ಷಣವಲ್ಲ

ಬಿಳಿ ಕಲೆಗಳು ಕ್ಯಾಲ್ಸಿಯಂ ಕೊರತೆಯ ಲಕ್ಷಣವಲ್ಲ

ಬಿಳಿ ಕಲೆಗಳು ಸಾಮಾನ್ಯವಾದದ್ದು ಮತ್ತು ಇದರಿಂದ ಯಾವುದೇ ಹಾನಿಯಿಲ್ಲ. ಇದು ಯಾವುದೇ ವಿಟಮಿನ್ ಕೊರತೆಯ ಲಕ್ಷಣವಲ್ಲ. ಇದೊಂದು ಸಾಮನ್ಯ ಸತ್ಯ.

ಉಗುರು ಕಚ್ಚುವುದರಿಂದ ಚರ್ಮದ ಸೋಂಕು

ಉಗುರು ಕಚ್ಚುವುದರಿಂದ ಚರ್ಮದ ಸೋಂಕು

ಉಗುರು ಕಚ್ಚುವುದರಿಂದ ಚರ್ಮದ ಸೋಂಕು ಉಂಟಾಗಬಹುದು ಮತ್ತು ಇದು ಉಗುರಿನ ಅಂದ ಕೆಡಿಸಬಹುದು. ಇದರಿಂದ ನೀವು ಉಗುರು ಕಚ್ಚುವುದನ್ನು ಬಿಟ್ಟುಬಿಡಿ.

ಉಗುರುಗಳು ಆರೋಗ್ಯದ ಲಕ್ಷಣ

ಉಗುರುಗಳು ಆರೋಗ್ಯದ ಲಕ್ಷಣ

ಉಗುರುಗಳು ಬಿಳಿ ಹಳದಿ ಅಥವಾ ಬೇರೆ ಬಣ್ಣಕ್ಕೆ ತಿರುಗುವುದು ನಿಮ್ಮ ಆರೊಗ್ಯದ ಲಕ್ಷಣವನ್ನು ಸೂಚಿಸುತ್ತದೆ. ಇದು ಗಂಭೀರ ಅನಾರೋಗ್ಯದ ಲಕ್ಷಣವಾಗಿರಬಹುದು ಅಥವಾ ಪ್ರಾಣಹಾನಿಯುಂಟು ಮಾಡುವ ರೋಗವಾಗಿರಬಹುದು. ಉಗುರಿನ ಬಣ್ಣ ಬದಲಾದರೆ ಎಚ್ಚರ ವಹಿಸಿ.

ಉಗುರಿನ ಮೇಲೂ ಒತ್ತಡ ಪರಿಣಾಮ ಬೀರಬಲ್ಲದು

ಉಗುರಿನ ಮೇಲೂ ಒತ್ತಡ ಪರಿಣಾಮ ಬೀರಬಲ್ಲದು

ಒತ್ತಡ ಮತ್ತು ನಿಶ್ಯಕ್ತಿಯು ಆರೋಗ್ಯಕರವಾಗಿ ಬೆಳೆಯುವ ಉಗುರು ಮತ್ತು ಕೂದಲಿನಿಂದ ದೇಹದ ಶಕ್ತಿ ಮತ್ತು ಪೋಷಕಾಂಶವನ್ನು ದೂರವಿಡುತ್ತದೆ. ಇದರಿಂದಾಗಿ ಉಗುರುಗಳಿಗೆ ಹಾನಿಯಾಗುತ್ತದೆ.

 ಚರ್ಮ ಕಿತ್ತು ಬರುವುದು

ಚರ್ಮ ಕಿತ್ತು ಬರುವುದು

ಉಗುರಿನ ಬದಿಯಿಂದ ಚರ್ಮ ಕಿತ್ತು ಬರುವುದು ನಮಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇದರ ಹಿಂದೆ ಒಂದು ಉದ್ದೇಶವಿದೆ. ಇದು ಒಳಗಿರುವ ಚರ್ಮಕ್ಕೆ ತೇವಾಂಶವನ್ನು ನೀಡಿ ಕೀಟಾಣುಗಳಿಂದ ರಕ್ಷಿಸುತ್ತದೆ.

English summary

Things You Might Not Know About Your Nails

Did you know that the nails on our fingers and toes are much more complicated than most of us think them to be? Well, yes they are. In this article, we are here to share information on some of the things that you might not know about your nails.
X
Desktop Bottom Promotion