For Quick Alerts
ALLOW NOTIFICATIONS  
For Daily Alerts

ಭಾರತದ ಬಗ್ಗೆ ಹೆಮ್ಮೆ ಪಡುವ ಸಂಗತಿಗಳು

By Deepu
|

ವಿಶ್ವಪರ್ಯಟನೆಯ ಬಯಕೆಯೇ? ಭಾರತವನ್ನೊಂದು ಬಾರಿ ಸುತ್ತಿ, ಜಗತ್ತೇ ನಿಮ್ಮೆದುರು ತೆರೆದುಕೊಳ್ಳುತ್ತದೆ ಎನ್ನುತ್ತಾರೆ ಹಿರಿಯರು. ಭೌಗೋಳಿಕವಾಗಿ ಎಲ್ಲಾ ರೀತಿಯ ವೈಪರೀತ್ಯವನ್ನು ಹೊಂದಿರುವ ದೇಶ ಭಾರತ. ಸಾವಿರಾರು ಹಳ್ಳಿ ನಗರಗಳಿಂದ ಕೂಡಿದ ಭಾರತ ಇಂದಿಗೂ ಹಳೆಯ ಸಂಪ್ರದಾಯಗಳು, ಆಚಾರ ವಿಚಾರ, ವಿಭಿನ್ನ ಶೈಲಿಯ ಸಂಸ್ಕೃತಿಯಿಂಲೇ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ.

ಹೌದು, ಭಾರತ ಎಂದ ಕೂಡಲೇ ಇಂದಿಗೂ ವಿದೇಶೀಯರ ಮನದಲ್ಲಿ ಮೂಡುವುದು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ಬಣ್ಣಬಣ್ಣದ ಹಬ್ಬಗಳು, ಮನಸೆಳೆಯುವ ಮೆರವಣಿಗೆ ಇತ್ಯಾದಿ. ಪ್ರತಿ ಕಿಲೋಮೀಟರಿಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಅವರನ್ನು ಬೆಚ್ಚಬೆರಗಾಗಿಸುತ್ತವೆ. ಸಾವಿರಾರು ವರ್ಷಗಳಿಂದ ಭಾರತದಾದ್ಯಂತ ಸಾವಿರಾರು ಸಂಸ್ಕೃತಿ, ಲಿಪಿ ಇರುವ ಭಾಷೆ, ಲಿಪಿ ಇಲ್ಲದ ಭಾಷೆ ಜಾತಿ, ಉಪಜಾತಿಗಳ ಸಮನ್ವಯದಲ್ಲಿ ಜನರು ಬಾಳ್ವೆ ನಡೆಸುತ್ತಾ ಬಂದಿದ್ದಾರೆ.

ಇಷ್ಟೊಂದು ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವದ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಅದರಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪಟ್ಟ ಯಾರಿಗೂ ಸಮವಲ್ಲ. ಇಂದು ಹಲವು ಕುಂದು ಕೊರತೆಗಳ ನಡುವೆಯೂ ಆರ್ಥಿಕ ಸ್ಥಾನ ಉತ್ತಮ ಸ್ಥಾನದಲ್ಲಿಯೇ ಇದೆ. ಇನ್ನು ಆಹಾರ ಪದ್ಧತಿ, ಉಳಿಸಿಕೊಂಡು ಬಂದಿರುವ ಸಂಪ್ರದಾಯಗಳು, ಹಿರಿಯರಿಗೆ ನೀಡುವ ಆದರ ಗೌರವ, ವಿದೇಶಗಳಲ್ಲಿರುವ ಭಾರತೀಯರು ತಮ್ಮ ಜಾಣ್ಮೆಯಿಂದ ಪಡೆದ ಹುದ್ದೆ ಮತ್ತು ತೋರಿದ ಫಲಗಳು ಮೊದಲಾದವು ವಿದೇಶೀಯರನ್ನು ಅಪಾರವಾಗಿ ಭಾರತದತ್ತ ಆಕರ್ಷಿಸುತ್ತಿದೆ. ಆದರೆ ಈ ಸಂಪ್ರದಾಯ ಆಚಾರ ವಿಚಾರಗಳ ನಡುವೆಯೇ ಕೆಲವು ಅಚ್ಚರಿಯ ಸಂಗತಿಗಳೂ ಭಾರತದಲ್ಲಿ ಅಡಗಿವೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ ಮುಂದೆ ಓದಿ...

ಏಕೈಕ ವ್ಯಕ್ತಿಗಾಗಿ ಒಂದು ಮತ ಕೇಂದ್ರ!

ಏಕೈಕ ವ್ಯಕ್ತಿಗಾಗಿ ಒಂದು ಮತ ಕೇಂದ್ರ!

2004ರ ನಂತರ ಬಂದ ಎಲ್ಲಾ ಚುನಾವಣೆಗಳಲ್ಲಿ ಭಾರತೀಯ ಚುನಾವಣಾ ಆಯೋಗವು ಗುಜರಾತಿನ ಗೀರ್ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಏಕೈಕ ಮತದಾರ ಮಹಾಂತ್ ಭರತ್‌ದಾಸ್ ದರ್ಶನ್‌ದಾಸ್‌ರವರಿಗಾಗಿ ಒಂದು ಮತಕೇಂದ್ರವನ್ನು ಸ್ಥಾಪಿಸಿದೆ. ಇದರ ಮೂಲಕ ಪ್ರತಿಯೊಬ್ಬರ ಮತವು ಅತ್ಯಂತ ಮುಖ್ಯ ಎಂಬ ಸಂದೇಶವನ್ನು ರವಾನಿಸಿದೆ.

ಅತಿಥಿ ದೇವೋಭವ

ಅತಿಥಿ ದೇವೋಭವ

ಅತಿಥಿ ದೇವೋಭವ ಎಂಬ ಉಕ್ತಿಯನ್ನು ಬಲವಾಗಿ ನಂಬುವ ಭಾರತೀಯರು ಅತಿಥಿಗಳನ್ನು ದೇವರಂತೆ ಕಾಣುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಉಪಚಾರ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನು ನೀಡುವ ಮೂಲಕ ನೀಡುವ ಸೇವೆ ವಿಶ್ವದಲ್ಲಿ ಇನ್ನೊಂದೆಡೆ ಇರಲಾರದು.

ಮೊಟ್ಟ ಮೊದಲ ವಜ್ರ

ಮೊಟ್ಟ ಮೊದಲ ವಜ್ರ

ಕೃಷ್ಣ ನದಿಯ ದಂಡೆಯಲ್ಲಿ ನೆಲೆಗೊಂಡಿರುವ ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ವಿಶ್ವದಲ್ಲಿಯೇ ಮೊಟ್ಟ ಮೊದಲ ವಜ್ರದ ಗಣಿಗಾರಿಕೆಯನ್ನು ನಡೆಸಲಾಯಿತು.

ಪ್ರಾಚೀನ ಅಸ್ಥಿಪಂಜರಗಳ ಕೆರೆ

ಪ್ರಾಚೀನ ಅಸ್ಥಿಪಂಜರಗಳ ಕೆರೆ

ಇಂಡೋ-ಚೀನಾ ಗಡಿಯಲ್ಲಿ ಒಂದು ಕೆರೆಯಿದೆ. ಬೇಸಿಗೆ ಕಾಲದಲ್ಲಿ ಅದರಲ್ಲಿರುವ ನೀರು ಬತ್ತಿಹೋದಾಗ ಅದರಲ್ಲಿ ನೂರಾರು ಮಾನವನ ಅಸ್ಥಿ ಪಂಜರಗಳು ಕಾಣಿಸುತ್ತವೆ. ಇವುಗಳು ಸುಮಾರು 1200 ವರ್ಷ ಹಳೆಯವು ಎಂಬುದು ಪ್ರತೀತಿ.

ಮಸಾಲೆ ಪದಾರ್ಥಗಳಲ್ಲಿ ಎತ್ತಿದ ಕೈ

ಮಸಾಲೆ ಪದಾರ್ಥಗಳಲ್ಲಿ ಎತ್ತಿದ ಕೈ

ಅಡುಗೆಗಳಲ್ಲಿ ಮಸಾಲೆ ಪದಾರ್ಥ ಭಾರತೀಯ ಅಡುಗೆಗಳಲ್ಲಿ ಮಸಾಲೆ ವಸ್ತುಗಳು ಅನಿವಾರ್ಯವಾಗಿವೆ. ಈ ಮಸಾಲೆಗಳೇ ಬ್ರಿಟಿಷರನ್ನು ಭಾರತಕ್ಕೆ ಸೆಳೆಯಲು ಪ್ರಮುಖ ಕಾರಣವಾಗಿವೆ. ಭಾರತೀಯ ಅಡುಗೆಗಳು ಶಾಕಾಹಾರಿಯಾಗಿದ್ದರೂ ಮಾಂಸಾಹಾರವೂ ಸಾಮಾನ್ಯವಾಗಿದೆ.ಕೋಳಿ, ಕುರಿ, ಮೀನು ಮತ್ತು ಇತರ ಮಾಂಸಗಳನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇವಿಸುತ್ತಾರೆ. ಕೆಲವು ಪಂಗಡದ ಜನರು ಅಪ್ಪಟ ಸಸ್ಯಾಹಾರಿಗಳಾಗಿದ್ದಾರೆ.

ಸಾಂಪ್ರಾದಾಯಿಕ ಉಡುಗೆ

ಸಾಂಪ್ರಾದಾಯಿಕ ಉಡುಗೆ

ಭಾರತದ ಸಾಂಪ್ರಾದಾಯಿಕ ಉಡುಗೆಗಳಲ್ಲಿ ಪ್ರಮುಖವಾಗಿ ಸೀರೆ, ಘಾಘ್ರಾ ಚೋಲಿ, ಸಲ್ವಾರ್ ಕಮೀಜ್, ದಾವಣಿ, ಧೋತಿ, ಪೈಜಾಮಾ ಮತ್ತು ಕುರ್ತಾ ಪ್ರಮುಖವಾಗಿವೆ. ಬ್ರಿಟಿಷರ ಆಗಮನದ ಬಳಿಕ ಉಡುಗೆಗಳಲ್ಲಿ ಪ್ರಮುಖ ಬದಲಾವಣೆ ಕಂಡಿತು. ಪರಿಣಾಮವಾಗಿ ಇಂದು ಪಾಶ್ಚಾತ್ಯ ಮತ್ತು ಭಾರತೀಯ ಶೈಲಿಯ ಮಿಶ್ರಣದ ಉಡುಗೆ ಯುವಜನತೆಯ ಅಚ್ಚುಮೆಚ್ಚಿನದ್ದಾಗಿದೆ.

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪವೂ ವಿಶ್ವದ ಅಗ್ರಗಣ್ಯ ವಾಸ್ತುಶಿಲ್ಪಗಳಲ್ಲಿ ಪರಿಗಣಿಸಲ್ಪಡುತ್ತದೆ. ತಾಜ್ ಮಹಲ್, ಕುತುಬ್ ಮಿನಾರ್, ಫತೆಹಪುರ್ ಸಿಕ್ರಿ, ಕೆಂಪು ಕೋಟೆ ಮೊದಲಾದವು ಭಾರತೀಯ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿವೆ. ಅದರಲ್ಲೂ ಮುಂಬೈಯ ನಾರಿಮನ್ ಪಾಯಿಂಟ್‌‌ನಲ್ಲಿರುವ ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು ಮನಸೆಳೆಯುತ್ತವೆ.

ತೇಲುವ ಪೋಸ್ಟ್ ಆಫೀಸ್!

ತೇಲುವ ಪೋಸ್ಟ್ ಆಫೀಸ್!

ಭಾರತದಲ್ಲಿ 1, 55,015 ಅಂಚೆ ಕಚೇರಿಗಳಿರುವ ವಿಶ್ವದ ಅತ್ಯಂತ ದೊಡ್ಡ ಅಂಚೆ ಜಾಲವನ್ನು ಹೊಂದಿದೆ. ಒಂದು ಸಣ್ಣ ಅಂಚೆ ಕಚೇರಿಯು ಸಹ ಅಂದಾಜು 7,175 ಜನರಿಗೆ ಸೇವೆಯನ್ನು ಸಲ್ಲಿಸುತ್ತದೆ. ದಾಲ್ ಸರೋವರವು ಕಾಶ್ಮೀರದಲ್ಲಿರುವ ಅತ್ಯಂತ ದೊಡ್ಡ ಸರೋವರ. ಈ ಸರೋವರದ ಅಂಚಿನಲ್ಲಿ ನೆಲೆಸಿರುವ ಜನರ ಸೇವೆ ಮಾಡಲು ಭಾರತದ ಅಂಚೆ ಇಲಾಖೆಯು 2011 ರಲ್ಲಿ ಒಂದು ತೇಲುವ ಅಂಚೆ ಕಚೇರಿಯನ್ನು ಸ್ಥಾಪಿಸಿತು. ಇದು ಹಡಗಿನಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಮತ್ತು ಜನರ ಮನೆಗಳ ಬಳಿಗೆ ಸಾಗುತ್ತದೆ.

English summary

Things that will Make You feel Proud To Be An Indian

India is a land of diversity. We are home to more than a hundred different languages and have a history that goes back thousands of years. Over the period, we have made discoveries that have changed the course of the world's history.
X
Desktop Bottom Promotion