For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲಿ ಈ ಉತ್ಪನ್ನಗಳಿಗೆ ನಿಷೇಧ-ಭಾರತದಲ್ಲಿ ರಾಜಮರ್ಯಾದೆ!

By Manu
|

ನಾಗರಿಕತೆ ನಾಗಾಲೋಟದಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಆದರೂ ಮುಂದುವರೆದ ದೇಶಗಳು ಇನ್ನೂ ಭಾರತವನ್ನು ಒಂದು ತೃತೀಯ ದೇಶದಂತೆಯೇ ಕಾಣುತ್ತಿದೆ. ಹಿಂದಿನಿಂದ ನಡೆದುಕೊಂಡು ಬಂದಂತೆ ಈ ದೇಶಗಳು ತಮ್ಮ ನಾಗರಿಕರಿಗೆ ಅಪಾಯಕಾರಿಯಾದ ಔಷಧಿ ಉತ್ಪನ್ನಗಳನ್ನೆಲ್ಲಾ ತೃತೀಯ ದೇಶಗಳಿಗೆ ರವಾನಿಸಿ ಹಣ ಮಾಡಿಕೊಳ್ಳುತ್ತಿವೆ. ಉದಾಹರಣೆಗೆ baralgan ಎಂಬ ಹೊಟ್ಟೆನೋವಿನ ಮಾತ್ರೆ ಭಾರತದಲ್ಲಿ ಹಿಂದೆ ಬಹಳ ಹೆಚ್ಚು ಬಳಕೆಯಲ್ಲಿತ್ತು. ಆದರೆ ಇದು ಅಮೇರಿಕಾದಲ್ಲಿ ಹತ್ತು ವರ್ಷ ಹಿಂದೆಯೇ ನಿಷೇಧಗೊಂಡಿತ್ತು.

ಆದರೆ ಉತ್ಪತ್ತಿಯಾದ ಮಾತ್ರೆಗಳನ್ನು ಅಮೇರಿಕಾದ ಸಂಸ್ಥೆಗಳು ಭಾರತದಂತಹ ತೃತೀಯ ದೇಶಗಳಿಗೆ ಮಾರಿ ಹಣ ಮಾಡಿಕೊಂಡವು. ಭಾರತದ ವಿಜ್ಞಾನಿಗಳು ಮತ್ತು ಕಾಳಜಿಯುಳ್ಳ ವೈದ್ಯರ ಒತ್ತಡಕ್ಕೆ ಮಣಿದು 1996ರಲ್ಲಿ ಈ ಔಷಧಿಯ ಸಹಿತ ಇನ್ನೂ ಹಲವಾರು ಔಷಧಿಗಳಿಗೆ ಭಾರತ ನಿಷೇಧ ಹೇರಿತು. ಆದರೆ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಅಮೇರಿಕಾದ ಈ ನಿಷೇಧಿತ ಮಾತ್ರೆ ಭಾರತದ ಜನರ ಸ್ವಾಸ್ಥ್ಯವನ್ನು ಕೆಡಿಸಿ ಅವರ ತಿಜೋರಿಗಳನ್ನು ಭರ್ತಿ ಮಾಡಿತು. ಭಾರತದ ಈ ಐದು ಸ್ಥಳಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ!

ಆದರೆ ಈ ಪ್ರಕ್ರಿಯೆ ಇಲ್ಲಿಗೇ ನಿಂತಿಲ್ಲ, ಇಂದಿಗೂ ಎಷ್ಟೋ ಸಾಮಾಗ್ರಿಗಳು ವಿದೇಶಗಳಲ್ಲಿ ನಿಷೇಧಗೊಂಡಿದ್ದರೂ ಕಾನೂನಿನ ಕಡಿವಾಣ ಇನ್ನೂ ಬೀಳದೇ ಇರುವ ಕಾರಣ ಭಾರತದಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬೆಲೆ ಅಗ್ಗವಾಗಿರಬೇಕು ಎಂದು ಬಯಸುವ ಭಾರತದ ಗ್ರಾಹಕನ ಮನಃಸ್ಥಿತಿ. ಇವುಗಳಲ್ಲಿ ಹಲವು ನಮ್ಮ ನಿತ್ಯಬಳಕೆಯ ವಸ್ತುಗಳಾಗಿದ್ದು ಇತರ ದೇಶಗಳಲ್ಲಿ ಹುಡುಕಿದರೂ ಸಿಗದ ಸಾಮಾಗ್ರಿಗಳಾಗಿವೆ.

ಪಾಮ್ ಎಣ್ಣೆ ಅನಾರೋಗ್ಯವೆಂದು ಕಂಡುಕೊಂಡ ಬಳಿಕ ಸರ್ಕಾರದ ಮೂಲಕವೇ ಭಾರೀ ಪ್ರಮಾಣದಲ್ಲಿ ಈ ಎಣ್ಣೆ ಭಾರತಕ್ಕೆ ಹರಿದುಬರುತ್ತಿದೆ. ಬನ್ನಿ, ಇಂತಹ ಕೆಲವು ವಿದೇಶಗಳಲ್ಲಿ ನಿಷೇಧಿತ ಆದರೆ ಭಾರತದಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಸಾಮಾಗ್ರಿಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಡಿ-ಕೋಲ್ಡ್, ವಿಕ್ಸ್ ಆಕ್ಷನ್ 500 ಮೊದಲಾದ ಮಾತ್ರೆಗಳು

ಡಿ-ಕೋಲ್ಡ್, ವಿಕ್ಸ್ ಆಕ್ಷನ್ 500 ಮೊದಲಾದ ಮಾತ್ರೆಗಳು

ಅಗ್ಗ ಎಂಬ ಒಂದೇ ಕಾರಣಕ್ಕೆ ಭಾರತದ ಅತ್ಯಂತ ಚಿಕ್ಕ ಅಂಗಡಿಯಲ್ಲಿಯೂ ಮುಕ್ತವಾಗಿ ಲಭ್ಯವಿರುವ ಕೆಲವು ಮಾತ್ರೆಗಳು ವಿದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಮಾತ್ರೆಗಳಾಗಿವೆ. ಡಿ-ಕೋಲ್ಡ್, ವಿಕ್ಸ್ ಆಕ್ಷನ್ 500, ಎಂಟೆರೋಕ್ವಿನಾಲ್, ಅನಾಲ್ಜಿನ್, ಸಿಸ್ಪ್ರೈಡ್ ಮೊದಲಾದ ಸಾಮಾನ್ಯ ಗುಳಿಗೆಗಳೂ ತೀವ್ರ ಅಡ್ಡಪರಿಣಾಮಗಳನ್ನು ಹೊಂದಿದ್ದು ವಿದೇಶದಲ್ಲಿ ನಿಷೇಧಕ್ಕೆ ಒಳಗಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಡಿ-ಕೋಲ್ಡ್, ವಿಕ್ಸ್ ಆಕ್ಷನ್ 500 ಮೊದಲಾದ ಮಾತ್ರೆಗಳು

ಡಿ-ಕೋಲ್ಡ್, ವಿಕ್ಸ್ ಆಕ್ಷನ್ 500 ಮೊದಲಾದ ಮಾತ್ರೆಗಳು

ಅದರಲ್ಲೂ ವಿಕ್ಸ್ ಆಕ್ಷನ್ 500 ಅಪಾಯಕಾರಿ ಎಂದು ಹಲವು ವೈದ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಿ ನಿಷೇಧಕ್ಕೆ ಒಲಿಸಿಕೊಂಡರೂ ಈ ನಿಷೇಧ ತಾತ್ಕಾಲಿಕವಾಗಿದ್ದು ಕೆಲವೇ ದಿನಗಳಲ್ಲಿ ಮತ್ತೆ ಮಾರುಕಟ್ಟೆಗೆ ಬಂದಿದ್ದು ಮಾತ್ರ ಕಾಣದ ಕೈಗಳ ಕೈವಾಡವಾಗಿದೆ.

ಕೀಟಾನಾಶಕಗಳು

ಕೀಟಾನಾಶಕಗಳು

ಭಾರತದಲ್ಲಿ ಸುಲಭವಾಗಿ ಸಿಗುತ್ತಿರುವ ಕೀಟನಾಶಕಗಳು ಕೀಟಗಳನ್ನು ನಾಶಪಡಿಸುವುದಕ್ಕಿಂತ ಹೆಚ್ಚಾಗಿ ನಮ್ಮ ರೈತರ ಆತ್ಮಹತ್ಯೆಗೆ ಹೆಚ್ಚು ಬಳಕೆಯಾದಂತೆ ತೋರುತ್ತಿದೆ. ಏಕೆಂದರೆ ಭಾರತದಲ್ಲಿ ಸುಲಭವಾಗಿ, ಯಾವುದೇ ತಾಲ್ಲೂಕು ಕೇಂದ್ರದಲ್ಲಿ ಲಭ್ಯವಿರುವ ಎಪ್ಪತ್ತರಷ್ಟು ವಿವಿಧ ಕೀಟನಾಶಕಗಳು ಈಗಾಗಲೇ ವಿದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೀಟಾನಾಶಕಗಳು

ಕೀಟಾನಾಶಕಗಳು

ಆದರೆ ಈಗಾಗಲೇ ಇದಕ್ಕೆ ಬಂಡವಾಳ ಹೂಡಿರುವವರು ತಮ್ಮ ನಷ್ಟವನ್ನೇ ಮುಂದೆ ತೋರಿರುವ ಕಾರಣ ಈ ನಿಟ್ಟಿನಲ್ಲಿ ನೇಮಕವಾಗಿದ್ದ ಸಮಿತಿ ಕೆಲವು ನಿರ್ಧಾರಗಳನ್ನು ಕೈಗೊಂಡಿದೆ. ಆ ಪ್ರಕಾರ ಹೆಚ್ಚಿನ ಕೀಟನಾಶಕಗಳನ್ನು ಬಳಕೆಗೆ ಒಪ್ಪಿಗೆ ನೀಡಿದ್ದು ಉಳಿದವುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವಂತೆ ಶಿಫಾರಸ್ಸು ಮಾಡಿದೆ. ಅಂದರೆ ವಿಷವನ್ನು ಒಮ್ಮೆಲೇ ಕುಡಿಯಬೇಡಿ, ನಿಧಾನವಾಗಿ ಕುಡಿಯಿರಿ ಎಂದು ಹೇಳಿದಂತಾಯಿತು.

ಕಿಂಡರ್ ಜಾಯ್ ಎಂಬ ಮೊಟ್ಟೆಯಾಕಾರದ ಸಿಹಿ

ಕಿಂಡರ್ ಜಾಯ್ ಎಂಬ ಮೊಟ್ಟೆಯಾಕಾರದ ಸಿಹಿ

ಒಂದು ಮೊಟ್ಟೆಯಷ್ಟೇ ದೊಡ್ಡದಾದ ಚಾಕಲೇಟಿನ ತೆಳುವಾದ ಡಬ್ಬಿಯನ್ನು ತಯಾರಿಸಿ ಇದರೊಳಗೆ ಮಕ್ಕಳೇ ಸ್ವತಃ ಜೋಡಿಸಬಹುದಾದ ಚಿಕ್ಕ ಆಟಿಕೆಯೊಂದನ್ನು ಇಡಲಾಗುತ್ತದೆ. ಕಿಂಡರ್ ಜಾಯ್ ಎಂಬ ಹೆಸರಿನ ಈ ತಿಂಡಿ+ಆಟಿಕೆ ಮಕ್ಕಳಿಗೆ ಬಲು ಮೆಚ್ಚಿನ ತಿಂಡಿಯಾಗಿದೆ. ಆದರೆ ಇದರ ಒಳಗಿನ ಆಟಿಕೆಯ ಚಿಕ್ಕ ಗಾತ್ರವೇ ವಾಸ್ತವವಾಗಿ ಮಕ್ಕಳಿಗೆ ಹೆಚ್ಚು ಅಪಾಯವುಂಟು ಮಾಡಬಹುದು. ಚಿಕ್ಕ ಮಕ್ಕಳು ಈ ಆಟಿಕೆಯ ಬಿಡಿಭಾಗಗಳನ್ನು ಬಾಯಿಗೆ ಹಾಕಿಕೊಳ್ಳುವ ಮೂಲಕ ಜೀವಕ್ಕೇ ಅಪಾಯ ಎದುರಾಗಬಹುದು.

ಕಿಂಡರ್ ಜಾಯ್ ಎಂಬ ಮೊಟ್ಟೆಯಾಕಾರದ ಸಿಹಿ

ಕಿಂಡರ್ ಜಾಯ್ ಎಂಬ ಮೊಟ್ಟೆಯಾಕಾರದ ಸಿಹಿ

ಇದನ್ನು ಮನಗಂಡ ಅಮೇರಿಕಾದ ಸರ್ಕಾರ ಇದನ್ನು ಮಕ್ಕಳ ಸುರಕ್ಷತೆಯ ಕಾರಣ ನೀಡಿ ಸಾರಾಸಗಟಾಗಿ ನಿಷೇಧಿಸಿದೆ. ಆದರೆ ಭಾರತ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಕಾರಣ ಈ ತಿಂಡಿಯ ಮೂಲಕ ಬರುವ ಆಟಿಕೆಗಳಿಂದ ನಮ್ಮ ಮಕ್ಕಳಿಗೆ ಭಾರೀ ಅಪಾಯವಿದೆ. ಆದ್ದರಿಂದ ಈ ತಿಂಡಿಯನ್ನು ಕೊಳ್ಳದೇ ಇರುವುದೇ ಮೇಲು.

ಹಲ್ದೀರಾಮ್ಸ್ ತಿಂಡಿಗಳು

ಹಲ್ದೀರಾಮ್ಸ್ ತಿಂಡಿಗಳು

ಬಿಸ್ಕತ್ತು ಮತ್ತು ಕುರುಕಲು ತಿಂಡಿಗಳ ಉತ್ಪನ್ನಗಳಾದ ಹಲ್ದೀರಾಮ್ಸ್ ಸಂಸ್ಥೆಯ ಉತ್ಪನ್ನಗಳನ್ನು ಅಮೇರಿಕಾ ನಿಷೇಧಿಸಿದೆ. ಏಕೆಂದರೆ ಭಾರತದಲ್ಲಿ ಉತ್ಪಾದಿಸಿದ ಉತ್ಪನ್ನಗಳಾದ ಬಿಸ್ಕತ್ತು, ವೇಫರ್ ಮತ್ತು ಕುಕ್ಕೀಸ್ ಗಳಲ್ಲಿ ಭಾರೀ ಪ್ರಮಾಣದ ಕಲಬೆರಕೆ ಕಂಡುಬಂದಿದೆ.

ಹಲ್ದೀರಾಮ್ಸ್ ತಿಂಡಿಗಳು

ಹಲ್ದೀರಾಮ್ಸ್ ತಿಂಡಿಗಳು

ಇದನ್ನು ನಿಷೇಧಿಸಿದ ವರದಿಯಲ್ಲಿ "ಇದನ್ನು ತಯಾರಿಸಲು ಬಳಸಿದ ಸಾಮಾಗ್ರಿಗಳು ಕಳಪೆ ಗುಣಮಟ್ಟ ಹೊಂದಿದ್ದು ಸುಮಾರಾಗಿ ಕೊಳೆತ ಸ್ಥಿತಿಯಲ್ಲಿ ಬಳಸಲಾಗಿದ್ದು ಮಾನವರ ಸೇವನೆಗೆ ಅನರ್ಹವಾಗಿದೆ" ಎಂದು ತಿಳಿಸಲಾಗಿದೆ. ಆದರೆ ಈ ಕೊಳೆತ ಸಾಮಾಗ್ರಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ನಾವು ಮಾತ್ರ ಸಕ್ಕರೆ ಸೇರಿಸಿ ಸವಿಯುತ್ತಿದ್ದೇವೆ.

ಗುಜರಾತಿನ ಹೆಸರಿಲ್ಲದ ಕುರುಕಲು ತಿಂಡಿ

ಗುಜರಾತಿನ ಹೆಸರಿಲ್ಲದ ಕುರುಕಲು ತಿಂಡಿ

ಗುಜರಾತಿನಲ್ಲಿ ಉತ್ಪನ್ನಗೊಂಡು ಅಮೇರಿಕಾಕ್ಕೆ ರಫ್ತು ಮಾಡಲಾಗಿರುವ ಇನ್ನೊಂದು ಸಂಸ್ಥೆಯ ಉತ್ಪನ್ನಗಳನ್ನೂ ಅಮೇರಿಕಾ ನಿಷೇಧಿಸಿದ್ದು ಅಲ್ಲಿನ ನಷ್ಟವನ್ನು ಆ ಸಂಸ್ಥೆ ಭಾರತದಲ್ಲಿ ಮಾರಾಟ ಮಾಡುವ ಮೂಲಕ ಭರಿಸುತ್ತಿದೆ. ಈ ನಿಷೇಧಕ್ಕೂ ಅಮೇರಿಕಾ ಹಲ್ದೀರಾಮ್ಸ್ ಗೆ ನೀಡಿದ ಕಾರಣವನ್ನೇ ನೀಡಿದೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಭಾರತದಲ್ಲಿ ಉತ್ಪತ್ತಿಯಾದ ತುಪ್ಪ ಬಹುತೇಕವಾಗಿ ಅಮೇರಿಕಾದಲ್ಲಿ ನಿಷೇಧ ಪಡೆದಿದೆ. ಏಕೆಂದರೆ ತುಪ್ಪದಲ್ಲಿ ಡಾಲ್ಡಾ ಬೆರೆಸಿದರೆ ಸುಲಭವಾಗಿ ಪತ್ತೆ ಮಾಡಲು ಸಾಧ್ಯವೇ ಇಲ್ಲ. ಈ ಗುಟ್ಟನ್ನು ಅರಿತ ಹಳ್ಳಿಯವರೂ ಈಗ ಲಾಭಕ್ಕಾಗಿ ಅರವತ್ತು ಭಾಗ ಡಾಲ್ಡಾ ಸೇರಿಸಿ ಮಾರುತ್ತಿದ್ದಾರೆ. ಇವರಿಂದ ಪಡೆದ ತುಪ್ಪಕ್ಕೆ ಇನ್ನಷ್ಟು ಡಾಲ್ಡಾ ಸೇರಿಸಿ ವ್ಯಾಪಾರಿಗಳು ಮಾರುತ್ತಾರೆ. ಆದರೆ ಈ ಪಟ್ಟನ್ನು ಅಮೇರಿಕಾ ಒಪ್ಪದೇ ನೇರವಾಗಿ ನಿಷೇಧಿಸಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಉತ್ತಮ ಗುಣಮಟ್ಟ ಮತ್ತು ಅಪ್ಪಟ ಎಂದು ಭಾರತದ ಕೆಲವು ಖ್ಯಾತ ಸಂಸ್ಥೆಗಳು ನಿಜವಾಗಿಯೂ ಅಪ್ಪಟ ತುಪ್ಪವನ್ನು ಒದಗಿಸಿದರೂ ಇದರಲ್ಲಿ ಏನು ಅಡಕವಾಗಿದೆ ಎಂದು ಲೇಬಲ್ಲಿನಲ್ಲಿ ನಮೂದಿಸದೇ ಇರುವ ಕಾರಣ ಅಮೇರಿಕಾದ FDA ಈ ನಿಷೇಧವನ್ನು ಎತ್ತಿ ಹಿಡಿದಿದೆ. ಆದರೆ ಡಾಲ್ಡಾ ಬೆರೆಸಿದ ತುಪ್ಪ ಹಳ್ಳಿಯಿಂದ ನಗರಗಳಲ್ಲಿ ಮುಕ್ತವಾಗಿ ದುಬಾರಿ ಬೆಲೆಗೇ ಲಭ್ಯವಿದೆ.

ಲೈಫ್ ಬಾಯ್ ಎಂಬ ಪ್ರಾಣಿಗಳ ಸೋಪು

ಲೈಫ್ ಬಾಯ್ ಎಂಬ ಪ್ರಾಣಿಗಳ ಸೋಪು

ಲೈಫ್ ಬಾಯ್ ಎಂಬ ಪ್ರಾಣಿಗಳ ಸೋಪು ಸುಮಾರು ಎಪ್ಪತ್ತರ ದಶಕದಿಂದಲೂ ಈ ಸೋಪು ಭಾರತದಲ್ಲಿ ಭರ್ಜರಿ ಮಾರಾಟವಾಗುತ್ತಿದೆ. ಇದರ ಜಾಹೀರಾತನ್ನು ಕೊಂಚ ಗಮನವಿಟ್ಟು ಆಲಿಸಿ 'ಇದು ಕೊಳೆಯಲ್ಲಿರುವ ಕ್ರಿಮಿಗಳನ್ನು ತೆಗೆದುಬಿಡುತ್ತದೆ' ಎಂದರೆ ಕೊಳೆ ತೆಗೆಯುವುದಿಲ್ಲ, ಕೊಳೆಯಲ್ಲಿರುವ ಕ್ರಿಮಿಗಳನ್ನು ಮಾತ್ರ ತೆಗೆಯುತ್ತದೆ ಎಂದು ಅರ್ಥವಲ್ಲವೇ? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೈಫ್ ಬಾಯ್ ಎಂಬ ಪ್ರಾಣಿಗಳ ಸೋಪು

ಲೈಫ್ ಬಾಯ್ ಎಂಬ ಪ್ರಾಣಿಗಳ ಸೋಪು

ಆದರೆ ವಿದೇಶಗಳಲ್ಲಿ ಕೊಳೆಯೂ ತೆಗೆಯುವುದು ಬೇಡ, ಕ್ರಿಮಿಗಳನ್ನು ತೆಗೆಯುವುದೂ ಬೇಡ, ಪ್ರಾಣಿಗಳಿಗೆ ಮಾತ್ರ ಸಾಕು, ಮನುಷ್ಯರಿಗೆ ಈ ಸೋಪೇ ಬೇಡ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದನ್ನು ಭಾರತದಲ್ಲಿ ಮಾತ್ರ ಕೆಂಪಗಿನ ಕವಚ ತೊಡಿಸಿ ಕ್ರಿಮಿನಿವಾರಿಸುವ ಸುಂದರ ಜಾಹೀರಾತಿನ ಮೂಲಕ ಪ್ರಾಣಿಗಳ ಸೋಪನ್ನು ಮನುಷ್ಯರ ಸೋಪಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.

English summary

Things that are banned in foreign, but not In India!

There's a whole lot of stuff that's banned in India, and the movement is only getting larger. With media attention focused so much on this practise though, it's easy to forget that they also outlaw things in other parts of the world. Some of the things we see so commonly around us in everyday life are actually rare commodities in other countries. Let's just say, a lot of times things don't get to fly under the radar. Check out these things that are banned abroad but not in India!
X
Desktop Bottom Promotion