For Quick Alerts
ALLOW NOTIFICATIONS  
For Daily Alerts

ಆಡು ಮುಟ್ಟದ ಸೊಪ್ಪಿಲ್ಲ, ಚೀನೀಯರು ತಿನ್ನದ ಆಹಾರವಿಲ್ಲ!

By Super Admin
|

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚೀನೀಯರು ತಿನ್ನದ ಆಹಾರವಿಲ್ಲ!, ಸುಮಾರು ಎಪ್ಪತ್ತರ ದಶಕಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯರಷ್ಟೇ ಸಂಖ್ಯೆಯಲ್ಲಿದ್ದ ಚೀನೀಯರನ್ನು ಮೊದಲಿಗೆ ಸೌದಿ ಅರೇಬಿಯಾ, ಬಳಿಕ ಇತರ ರಾಷ್ಟ್ರಗಳು ಹೊರದಬ್ಬಿದ್ದಕ್ಕೆ ಕಾರಣವೆಂದರೆ ಚೀನೀಯರ ನರಭಕ್ಷಕ ಗುಣ. ಇದು ಮಾತ್ರವಲ್ಲ, ಚೀನೀಯರ ಬಗ್ಗೆ ಇರುವ ಹತ್ತು ಹಲವು ಮಾಹಿತಿಗಳು ನಿಮ್ಮನ್ನು ಬೆಕ್ಕಸ ಬೆರಗಾಗಿಸಬಹುದು. ಅವರಲ್ಲಿ ಇಂಗ್ಲಿಷ್ ಜ್ಞಾನ ಕಡಿಮೆ ಇದ್ದುದಕ್ಕೇ ವಿಶ್ವದ ಮಹಾನ್ ಶಕ್ತಿಯಾಗುವುದಕ್ಕೆ ಅಡ್ಡಗಾಲಿದೆಯೇ ಹೊರತು ಚೀನೀಯರು ಏನು ಮಾಡಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ವಿಷಭರಿತ ಚೀನಾ ಆಹಾರಗಳು ಮಾರುಕಟ್ಟೆಗೆ ಬಂದುಬಿಟ್ಟಿವೆ!

ಅಂತರ್ಜಾಲದ ಕಠಿಣ ಬಲೆಯನ್ನೂ ಬೇಧಿಸುವುದರಿಂದ ಹಿಡಿದು ನಾವೆಲ್ಲಾ ನೋಡಲೂ ಅಸಹ್ಯಪಡುವ ಕ್ರಿಮಿ, ಮಾಂಸಗಳನ್ನು ಭಕ್ಷಿಸುವ ಅವರ ಗುಣಗಳು ವ್ಯಗ್ರತೆಯನ್ನೂ ತರಿಸುತ್ತವೆ. ಇವರ ಕೆಲವು ಸಂಸ್ಕೃತಿಗಳಂತೂ ಭಾರತೀಯರಿಗೆ ಅರಗಿಸಿಕೊಳ್ಳಲೂ ಆಗದಷ್ಟು ವಿಕೃತವಿದೆ. ಬ್ಲ್ಯಾಕ್ ಹೆಡ್ ಸಮಸ್ಯೆಯೇ? ಚೀನೀಯರ ಚಿಕಿತ್ಸೆ ಪ್ರಯತ್ನಿಸಿ!

ಇದರಲ್ಲೊಂದು ಶ್ವಾನಭಕ್ಷ ಅಂದರೆ ನಾಯಿಯ ಮಾಂಸದ ಸೇವನೆ. ಚೀನೀಯರಿಗೆ ಅತಿ ಹೆಚ್ಚು ಇಷ್ಟವಾದ ಈ ಭಕ್ಷ್ಯಕ್ಕಾಗಿಯೇ ಒಂದು ಮೇಳವಿದೆ. ಯೂಲಿನ್ ಪ್ರಾಂತದಲ್ಲಿ ಹೆಚ್ಚಾಗಿ ಆಚರಿಸುವ ಈ ಮೇಳದಲ್ಲಿ ಭಾಗವಹಿಸಿ ಭಕ್ಷಗಳನ್ನು ಸವಿಯಲು ಲಕ್ಷಾಂತರ ಚೀನೀಯರು ಇಲ್ಲಿಗೆ ಆಗಮಿಸುತ್ತಾರೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ... ಯಾರೇ ಕೂಗಾಡಲಿ, ಚೀನಾದ ಜನರು ಇರುವುದೇ ಹೀಗೆ!

ಈ ಮೇಳವನ್ನು ಆಚರಿಸುವುದಾದರೂ ಏತಕ್ಕೆ?

ಈ ಮೇಳವನ್ನು ಆಚರಿಸುವುದಾದರೂ ಏತಕ್ಕೆ?

ಸಾಮಾನ್ಯವಾಗಿ ಬೇಸಿಗೆ ಪ್ರಾರಂಭವಾಗುವ ಮೊದಲು ಬರುವ ಈ ಮೇಳದಲ್ಲಿ ಶ್ವಾನಭಕ್ಷ್ಯಗಳು ತಮ್ಮನ್ನು ಆರೋಗ್ಯವಾಗಿರಿಸಲು ಮತ್ತು ಬೇಸಿಗೆಯ ಬೇಗೆಯಿಂದ ರಕ್ಷಿಸಲು ನೆರವಾಗುತ್ತದೆ ಎಂದು ಚೀನೀಯರು ನಂಬುತ್ತಾರೆ.

ಈ ಮೇಳವನ್ನು ಆಚರಿಸುವುದಾದರೂ ಏತಕ್ಕೆ?

ಈ ಮೇಳವನ್ನು ಆಚರಿಸುವುದಾದರೂ ಏತಕ್ಕೆ?

ಯಾವ ವೈದ್ಯನೂ ಹೇಳದ, ಯಾವ ಶಾಸ್ತ್ರದಲ್ಲಿಯೂ ಬರೆದಿರದ ಈ ಕಾಲ್ಪನಿಕ ಪುರಾಣಗಳನ್ನೇ ಆಧಾರವಾಗಿಸಿ ಮುಗ್ಧ ಪ್ರಾಣಿಗಳ ಹತ್ಯೆ ನಡೆಯುವುದು ಮಾತ್ರ ಅತ್ಯಂತ ಶೋಚನೀಯವಾಗಿದೆ.

ಈ ಮೇಳ ಕಾನೂನುಬದ್ಧವೇ?

ಈ ಮೇಳ ಕಾನೂನುಬದ್ಧವೇ?

ನಿರಾಶಾದಾಯಕ ವಿಷಯವೆಂದರೆ ಚೀನಾದಲ್ಲಿ ಪ್ರಾಣಿಗಳ ಪರವಾಗಿ ಯಾವುದೇ ಕಾನೂನೇ ಇಲ್ಲ! ಅಂದರೆ ಇದು ಸರಿ ಅನ್ನುವುದೂ ಇಲ್ಲ ತಪ್ಪು ಅನ್ನುವುದೂ ಇಲ್ಲ. ಇದನ್ನೇ ನೆಪವಾಗಿಸಿಕೊಂಡ ಶ್ವಾನಭಕ್ಷ್ಯಪ್ರಿಯರು ಲಂಗುಲಗಾಮಿಲ್ಲದೇ ಹತ್ಯೆಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ ಟ್ರಕ್ಕುಗಳಲ್ಲಿ ಬರುವ ಲಕ್ಷಾಂತರ ನಾಯಿಗಳನ್ನು ತಡೆಯಲು ಸಾಧ್ಯವಾಗದೇ ನಿರ್ಲಕ್ಷ್ಯ ಧೋರಣೆ ಪ್ರಕಟಿಸುತ್ತಿದೆ. Image courtesy

ಈ ಹುಚ್ಚುತನಕ್ಕೆ ಎಷ್ಟು ನಾಯಿಗಳು ಬಲಿಯಾಗುತ್ತವೆ?

ಈ ಹುಚ್ಚುತನಕ್ಕೆ ಎಷ್ಟು ನಾಯಿಗಳು ಬಲಿಯಾಗುತ್ತವೆ?

ಒಂದು ಸಮೀಕ್ಷೆಯ ಅಂದಾಜಿನ ಪ್ರಕಾರ ಪ್ರತಿವರ್ಷ ಇಡಿಯ ಚೀನಾದಲ್ಲಿ ಒಂದರಿಂದ ಎರಡು ಕೋಟಿ ನಾಯಿಗಳು ಆಹಾರವಾಗಿ ಬದಲಾಗುತ್ತವೆ. ಈ ಯೂಲಿನ್ ಮೇಳದಲ್ಲಿ ಕನಿಷ್ಟ ಹತ್ತು ಸಾವಿರ ನಾಯಿಗಳ ಮಾರಣಹೋಮ ನಡೆಯುತ್ತದೆ. Image courtesy

ಈ ಮೇಳದಲ್ಲಿ ಬಲಿಯಾಗುವುದು ಕೇವಲ ನಾಯಿಗಳೇ ಅಥವಾ...

ಈ ಮೇಳದಲ್ಲಿ ಬಲಿಯಾಗುವುದು ಕೇವಲ ನಾಯಿಗಳೇ ಅಥವಾ...

ಹೋಟೆಲಿನಲ್ಲಿ ಬರೆಯ ದೋಸೆ ಇದ್ದರೆ ಹೆಚ್ಚು ಗಿರಾಕಿಗಳು ಬರುವುದಿಲ್ಲ ಅಲ್ಲವೇ, ಅಂತೆಯೇ ಮೇಳದಲ್ಲಿ ಕಡಿಮೆ ಪ್ರಮಾಣದಲ್ಲಿಯಾದರೂ ಇತರ ಪ್ರಾಣಿಗಳ ಮಾಂಸವನ್ನೂ ಬಡಿಸಲಾಗುತ್ತದೆ. ಇದರಲ್ಲಿ ಬೆಕ್ಕು ಪ್ರಮುಖವಾಗಿದ್ದು ಇದರೊಂದಿಗೆ ಕ್ಯಾನುಗಟ್ಟಲೇ ಬಿಯರ್ ಸಹಾ ಸಮಾರಾಧನೆಯಾಗುತ್ತದೆ. ಆದರೆ ಇವೆಲ್ಲವೂ ಒಂದು ಸೈಡ್ ಡಿಶ್ ಮಾತ್ರ. ಮೇನ್ ಡಿಶ್ ಏನಿದ್ದರೂ ಶ್ವಾನಕ್ಕೇ ಮುಡಿಪು. Image courtesy

ಈ ಶ್ವಾನಗಳು ಎಲ್ಲಿಂದ ಬರುತ್ತವೆ?

ಈ ಶ್ವಾನಗಳು ಎಲ್ಲಿಂದ ಬರುತ್ತವೆ?

ಈ ಶ್ವಾನಗಳನ್ನು ಫಾರಮ್ಮುಗಳಲ್ಲಿ ಬೆಳೆಸಲಾಗುತ್ತದೆ ಎಂದು ಇದನ್ನು ಕೊಳ್ಳುವವರು ತಿಳಿಸುತ್ತಾರೆ. ಆದರೆ ಇದು ಅಸತ್ಯವಾಗಿದ್ದು ಸಾಮಾನ್ಯವಾಗಿ ನಾಯಿಗಳನ್ನು ಅಪಹರಿಸಿ ಮಾದಕ ಪದಾರ್ಥ ತಿನ್ನಿಸಿ ಕಟಕಟೆಯ ದೊಡ್ಡ ದೊಡ್ಡ ಕಂಟೇನರುಗಳಲ್ಲಿ ತುಂಬಿಸಿ ಯೂಲಿನ್ ನಗರಕ್ಕೆ ಕಳಿಸಲಾಗುತ್ತದೆ.Image courtesy

ಈ ಶ್ವಾನಗಳನ್ನು ಜೀವಂತವಾಗಿ ಬೇಯಿಸಲಾಗುತ್ತದೆಯೇ?

ಈ ಶ್ವಾನಗಳನ್ನು ಜೀವಂತವಾಗಿ ಬೇಯಿಸಲಾಗುತ್ತದೆಯೇ?

ಹೌದು, ಇದೊಂದು ಅತ್ಯಂತ ಬರ್ಬರ ಕೃತ್ಯವಾಗಿದ್ದು ಹೃದಯಹೀನತೆಯ ಜ್ವಲಂತ ನಿದರ್ಶನವಾಗಿದೆ. ವೈಜ್ಞಾನಿಕ ರೀತಿಯಲ್ಲಿ ಈ ವಿಧಯನ್ನು ಅನುಸರಿಸಬಹುದಾದರೂ ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಬೇಕಾಬಿಟ್ಟಿ ವಿಧಾನಗಳಲ್ಲಿ ನಾಯಿಗಳನ್ನು ವಧಿಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಈ ಶ್ವಾನಗಳನ್ನು ಜೀವಂತವಾಗಿ ಬೇಯಿಸಲಾಗುತ್ತದೆಯೇ?

ಈ ಶ್ವಾನಗಳನ್ನು ಜೀವಂತವಾಗಿ ಬೇಯಿಸಲಾಗುತ್ತದೆಯೇ?

ಇನ್ನೂ ಹಲವು ವಿಧಾನಗಳಲ್ಲಿ ನಾಯಿಗಳನ್ನು ಕೊಲ್ಲಲಾಗುತ್ತದಾದರೂ ಇಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಈ ಕೀಳು ಕ್ರಮದ ಬಗ್ಗೆ ಎಚ್ಚೆತ್ತುಕೊಂಡು ಈ ಮಾರಣಹೋಮವನ್ನು ನಿಲ್ಲಿಸಲು ಯಾರಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. Image courtesy

ಈ ಶ್ವಾನಗಳನ್ನು ಜೀವಂತವಾಗಿ ಬೇಯಿಸಲಾಗುತ್ತದೆಯೇ?

ಈ ಶ್ವಾನಗಳನ್ನು ಜೀವಂತವಾಗಿ ಬೇಯಿಸಲಾಗುತ್ತದೆಯೇ?

ಇದೊಂದು ನಾಗರಿಕತೆಗೆ ಮಸಿಬಳಿಯುವ ವಿಕೃತ ಕೃತ್ಯ, ಇದನ್ನು ನಿಲ್ಲಿಸಿ ಎಂದು ಇತ್ತೀಚೆಗೆ ಪರಿಸರವಾದಿಗಳು ಬೊಬ್ಬಿಡುತ್ತಿದ್ದಾರೆ. ಆದರೂ ಜನರು ಹೆಚ್ಚು ಹೆಚ್ಚಾಗಿ ಇಂದಿಗೂ ಈ ಮೇಳಕ್ಕೆ ಆಗಮಿಸುತ್ತಿರುವುದುಇದರ ಜನಪ್ರಿಯತೆಯನ್ನು ತೋರುತ್ತದೆ. ಕೇವಲ ಭಕ್ಷ್ಯಕ್ಕಾಗಿ ಮಾನವನ ನೆಚ್ಚಿನ ಮಿತ್ರನನ್ನೇ ಕೊಲ್ಲುವುದು ಪ್ರಾಣಿಪ್ರಿಯರಿಗೆಲ್ಲಾ ಅತೀವ ಬೇಸರದ ಸಂಗತಿಯಾಗಿದೆ.

English summary

Things To Know About China’s Yulin Dog Meat Festival

There are many weird things that are taking the world by a storm. Be it the Internet challenges or the weirdest festivals that people are celebrating around the world. We are witnessing the most bizarre festivals and trends nowadays. Be it a a Dog meat festival, you can only get to know about the most fetish and disgusting rituals that are followed by many. In this article, we are here to share info on some of the things that you need to know about China's Yulin dog meat festival.
X
Desktop Bottom Promotion