ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

By: manu
Subscribe to Boldsky

ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು ಋಣಾತ್ಮಕ ಶಕ್ತಿ. ನಮ್ಮ ಮನೆಯ ಸಮೃದ್ಧಿ, ಶಾಂತಿ, ನೆಮ್ಮದಿ ಎಲ್ಲವೂ ಈ ಶಕ್ತಿಗಳನ್ನು ಅವಲಂಬಿಸಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಲು ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಪ್ರವಹಿಸುವುದು ಅಗತ್ಯ.  ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ

ಒಂದು ವೇಳೆ ಧನಾತ್ಮಕ ಶಕ್ತಿಗೆ ಯಾವುದಾದರೊಂದು ವಸ್ತು ಅಡ್ಡಿಯಾಗಿ ಋಣಾತ್ಮಕ ಶಕ್ತಿ ಸುಲಭವಾಗಿ ಪ್ರವಹಿಸುತ್ತಿದ್ದರೆ ಮನೆಯ ನೆಮ್ಮದಿ ಕದಡಬಹುದು. ಬನ್ನಿ, ಇವು ಯಾವುವು ಎಂಬುದನ್ನು ಮುಂದೆ ಓದಿ...

ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಸುವುದು

ಮನೆಯಲ್ಲಿರುವ ಸ್ಥಳಾವಕಾಶದಲ್ಲಿ ಅಗತ್ಯವಿರುವಷ್ಟು ಮಾತ್ರ ವಸ್ತುಗಳನ್ನಿರಿಸಬೇಕು. ಅತಿ ಹೆಚ್ಚು ಮತ್ತು ಅನಗತ್ಯವಾದ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿರಿಸಿದರೆ ಧನಾತ್ಮಕ ಶಕ್ತಿಯ ಪ್ರವಹನೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ವಸ್ತುಗಳು ಸಾಧ್ಯವಾದಷ್ಟು ಕೋಣೆಯ ಬದಿಗಳಲ್ಲಿ ಒಪ್ಪ ಓರಣವಾಗಿದ್ದು ನಡುವಣ ಸ್ಥಳ ಖಾಲಿ ಇರುವಂತೆ ನೋಡಿಕೊಳ್ಳಬೇಕು. ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳು ಇರಲೇಬಾರದು!

ಅತಿಥಿಗಳು ತಂದ ಸಿಹಿವಸ್ತುಗಳು ಚಲ್ಲಾಪಿಲ್ಲಿಯಾಗಿರುವುದು

ಒಂದು ವೇಳೆ ನಿಮ್ಮ ಮನೆಗೆ ಆಗಮಿಸಿದ ಅತಿಥಿಗಳು ಸಿಹಿಯನ್ನು ಉಡುಗೊರೆಯಾಗಿ ತಂದಿದ್ದರೆ ಈ ಸಿಹಿಯನ್ನು ಸರ್ವಥಾ ಅಲ್ಲಲ್ಲಿ ಇಡಕೂಡದು. ಸಾಧ್ಯವಾದಷ್ಟು ಬೇಗನೇ ಇದನ್ನು ತಿಂದು ಖಾಲಿ ಮಾಡಬೇಕು. ಒಂದು ವೇಳೆ ಸಿಹಿ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಮನೆಯಲ್ಲಿ ತಿರುಗಾಡುತ್ತಿದ್ದರೆ ಇದು ಋಣಾತ್ಮಕ ಶಕ್ತಿಯನ್ನು ಹೋದಲ್ಲೆಲ್ಲಾ ಆಕರ್ಷಿಸುತ್ತದೆ, ಜೊತೆಗೆ ನೊಣಗಳನ್ನು ಸಹಾ!

ದೇವರ ವಿಗ್ರಹಗಳನ್ನು ಎದುರುಬದುರಾಗಿರಿಸುವುದು

ಒಂದು ವೇಳೆ ನಿಮ್ಮ ಮನೆಯಲ್ಲಿ ಹಲವಾರು ದೇವರ ವಿಗ್ರಹ ಮತ್ತು ಪಟಗಳಿದ್ದರೆ ಪ್ರತಿ ವಿಗ್ರಹವೂ ಇನ್ನೊಂದು ವಿಗ್ರಹಕ್ಕೆ ಎದುರುಬದುರಾಗಿರದಂತೆ ನೋಡಿಕೊಳ್ಳಿ. ಏಕೆಂದರೆ ಇದರಿಂದ ಋಣಾತ್ಮಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ. ಪ್ರತಿಯೊಂದನ್ನೂ ಪ್ರತ್ಯೇಕವಾಗಿರುವಂತೆ ಮತ್ತು ಒಂದು ಇನ್ನೊಂದರತ್ತ ಮುಖ ಮಾಡದಂತೆ ಜೋಡಿಸಿ.

ಟೀಕೆಗಳು

ಮನೆಯ ಸದಸ್ಯರಲ್ಲಿ ಯಾರೇ ಆದರೂ ಇನ್ನೊಬ್ಬರ ಬಗ್ಗೆ ಮಾಡುವ ಟೀಕೆಗಳು ಅತಿ ಪ್ರಬಲವಾದ ಋಣಾತ್ಮಕ ಶಕ್ತಿಯ ಆಕರ್ಷಣೆಗಳಾಗಿವೆ. ಟೀಕೆಯ ಭರದಲ್ಲಿ ದನಿ ಏರಿಸಿದಷ್ಟೂ ಋಣಾತ್ಮಕ ಶಕ್ತಿ ಪ್ರಬಲಗೊಳ್ಳುತ್ತಾ ಹೋಗುತ್ತದೆ.   ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ಮನೆಯಲ್ಲಿ ಕೊಳಕು ವಸ್ತ್ರಗಳನ್ನು ಧರಿಸುವುದು

ಕೆಲವರು ಮನೆಯಲ್ಲಿದ್ದಾಗ ಸ್ವಚ್ಛ ಬಟ್ಟೆಗಳನ್ನು ತೊಡದೇ ಒಂದೇ ಬಟ್ಟೆಯನ್ನು ಹಲವಾರು ದಿನಗಳವರೆಗೆ ತೊಟ್ಟುಕೊಳ್ಳುವ ಅಭ್ಯಾಸವುಳ್ಳವರಾಗಿರುತ್ತಾರೆ. ಬಟ್ಟೆ ಹಳೆದಾದರೂ ಅಗ್ಗವಾದರೂ ಪರವಾಗಿಲ್ಲ, ಸ್ವಚ್ಛವಾಗಿರುವುದು ಮಾತ್ರ ಅತಿ ಅಗತ್ಯ.

ಮನೆಯಲ್ಲಿ ಕೊಳಕು ವಸ್ತ್ರಗಳನ್ನು ಧರಿಸುವುದು

ಪ್ರತಿದಿನವೂ ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಕೊಳಕು ಬಟ್ಟೆಗಳು ಋಣಾತ್ಮಕ ಶಕ್ತಿಯನ್ನು ಮಾತ್ರವಲ್ಲ, ಕೀಟಾಣು, ದುರ್ಗಂಧಗಳನ್ನೂ ಆಹ್ವಾನಿಸುತ್ತದೆ.

ಕಲ್ಲುಪ್ಪು ಬಳಕೆ

ಸಮುದ್ರದ ಉಪ್ಪು ಅಥವಾ ಕಲ್ಲುಪ್ಪು ಋಣಾತ್ಮಕ ಶಕ್ತಿಯನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂದು ಫೆಂಗ್ ಶುಯಿ ತಿಳಿಸುತ್ತದೆ. ನಿತ್ಯವೂ ಮನೆ ಒರೆಸುವಾಗ ಈ ನೀರಿನಲ್ಲಿ ಕೊಂಚ ಉಪ್ಪು ಬೆರೆಸಿ ಒರೆಸುವುದು ಒಂದು ಕ್ರಮ. ಇನ್ನೊಂದು ಕ್ರಮದಲ್ಲಿ ಚಿಕ್ಕ ಕಪ್ ಒಂದರಲ್ಲಿ ಕೊಂಚ ಕಲ್ಲುಪ್ಪು ತುಂಬಿ ಪ್ರತಿ ಕೋಣೆಯಲ್ಲಿಯೂ ಕಿಟಕಿಗೆ ಎದುರಾಗಿರುವಂತೆ ಇಡಬೇಕು.

ಮನೆಯ ಸ್ವಚ್ಛತೆ

ಎಷ್ಟೇ ಕೆಲಸಬಾಹುಳ್ಯವಿದ್ದರೂ ಮನೆಯನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಗುಡಿಸಿ ಒರೆಸಿ ಸ್ವಚ್ಛಗೊಳಿಸಬೇಕು. ನಿತ್ಯವೂ ಈ ಕಾಯಕ ನಡೆಸಿದರೆ ಅತ್ಯುತ್ತಮ. ವಿಶೇಷವಾಗಿ ಮನೆಯಲ್ಲಿ ಧೂಳು ಕೂರುವ ಸ್ಥಳಗಳಲ್ಲಿ ಧೂಳು ಇರದಂತೆ ನೋಡಿಕೊಳ್ಳಿ.

ಕಿಟಕಿ ಪರದೆ, ಹಾಸಿಗೆಯ ಹೊದಿಕೆ, ನೆಲದ ರತ್ನಗಂಬಳಿ

ವಾರಕ್ಕೊಮ್ಮೆ ಕಿಟಕಿ ಪರದೆ, ಹಾಸಿಗೆಯ ಹೊದಿಕೆ, ನೆಲದ ರತ್ನಗಂಬಳಿ ಮೊದಲಾದವುಗಳನ್ನು ಧೂಳುರಹಿತವಾಗಿಸುವುದು ಅಗತ್ಯ.

ಅನಗತ್ಯ ವಸ್ತುಗಳನ್ನು ಬಿಸಾಡಿ

ಮನೆಯಲ್ಲಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಇರಿಸಿ. ಅನಗತ್ಯ ಎನಿಸುವ ಯಾವುದೇ ವಸ್ತುಗಳನ್ನು ವಿಲೇವಾರಿ ಮಾಡಿ. ಮನೆಯಲ್ಲಿ ವಸ್ತುಗಳು ಕನಿಷ್ಠವಿದ್ದಷ್ಟೂ ಧನಾತ್ಮಕ ಶಕ್ತಿ ಆಗಮಿಸುವ ಸಾಧ್ಯತೆ ಹೆಚ್ಚುತ್ತದೆ.

ಸುಗಂಧದ ಮೇಣದ ಬತ್ತಿ ಉರಿಸಿ

ಮನೆಯಲ್ಲಿ ಮುಂಜಾನೆ ಮತ್ತು ಸಂಜೆಯ ವೇಳೆ ಸುಗಂಧಭರಿತ ಮೇಣದ ಬತ್ತಿಗಳನ್ನು ಉರಿಸುವ ಮೂಲಕ ಧನಾತ್ಮಕ ಶಕ್ತಿ ಪ್ರವಹಿಸುತ್ತದೆ. ಇದರೊಂದಿಗೆ ಗಾಳಿಯಾಡಿದಾಗ ಇಂಪಾದ ಸಂಗೀತ ಹೊಮ್ಮಿಸುವ ಗಂಟೆಗಳನ್ನು ನೇತು ಹಾಕುವುದೂ ಉತ್ತಮ.

ಬೆಳ್ಳುಳ್ಳಿ

ಕೆಲವು ಬೆಳ್ಳುಳ್ಳಿಗಳನ್ನು ಒಂದು ಹತ್ತಿಯ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಎಲ್ಲಿ ಅತಿ ಹೆಚ್ಚು ಇರುತ್ತದೆ ಎಂಬ ಅನುಮಾನವಿದ್ದಲ್ಲಿ ನೇತು ಹಾಕಿ.

ಬೆಳ್ಳುಳ್ಳಿ

ಇದು ಗೊತ್ತಾಗದಿದ್ದರೆ ಮನೆಯ ಮುಂಬಾಗಿಲಿನ ಮೇಲೆ, ಅಂದರೆ ಮನೆಯ ಒಳಗಿನಿಂದ ಹೊರಗೆ ಹೋಗುವಾಗ ಬಾಗಿಲ ಮೇಲೆ ನೋಡಿದರೆ ಸ್ಪಷ್ಟವಾಗಿ ಕಾಣುವಂತೆ ನೇತುಹಾಕಿ. ಇದರಿಂದ ಋಣಾತ್ಮಕ ಶಕ್ತಿ ಮಾರ್ಗ ಬದಲಿಸಲು ಸಾಧ್ಯವಾಗುತ್ತದೆ.

 

Story first published: Friday, September 16, 2016, 10:40 [IST]
English summary

These things will bring negative energy in your house

We all know that negativity attracts negativity. However do you know that what are otherwise considered as normal, regular things in the house can in fact turn out to the harbinger of negativity in your house? Here are those things.
Please Wait while comments are loading...
Subscribe Newsletter