ತಂಗಿಯ ಮೇಲೇ ಅತ್ಯಾಚಾರ ಎಸಗಿದ ಹನ್ನೊಂದರ ಪೋರ!

By: Arshad
Subscribe to Boldsky

ಅತ್ಯಾಚಾರ ಇಂದು ಎಲ್ಲೆಡೆ ಸಾರ್ವತ್ರಿಕವಾಗುತ್ತಿದೆ.ಕೆಲವು ಪ್ರಕರಣಗಳ ಬಗ್ಗೆ ತಿಳಿದುಕೊಂಡಾಗ ಮಾನವೀಯತೆಯೇ ಕೊನೆಗೊಳ್ಳುತ್ತಿದೆಯೇ ಎಂಬ ಅನುಮಾನವೂ ಮೂಡುತ್ತದೆ. ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರಿ ಆಕ್ರಮಣಕ್ಕೊಳಗಾದವರ ಆಪ್ತರೇ ಆಗಿರುವುದು ಆತಂಕಕಾರಿಯಾಗಿದ್ದು ಯಾರನ್ನು ನಂಬಬೇಕು ಎನ್ನುವುದೇ ದ್ವಂದ್ವವಾಗಿದೆ. ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ 

ಇಂದಿನ ಲೇಖನದಲ್ಲಿ ಅತ್ಯಾಚಾರದಂತಹ ಗುರುತರ ಅಪರಾಧ ಎಸಗಿದ ವ್ಯಕ್ತಿಯ ಬಗ್ಗೆ ಪರಿಚಯಿಸುತ್ತಿದ್ದೇವೆ. ಪ್ರಾಯಶಃ ಈತ ವಿಶ್ವದ ಅತ್ಯಂತ ಕಿರಿಯ ಅತ್ಯಾಚಾರಿ. ಏಕೆಂದರೆ ಇವನ ವಯಸ್ಸು ಇನ್ನೂ ಕೇವಲ ಹನ್ನೊಂದು ವರ್ಷ. ಅದರಲ್ಲೂ ಆತ ಅತ್ಯಾಚಾರ ಎಸಗಿದ್ದು ಸ್ವಂತ ತಂಗಿಯ ಮೇಲೇ! ಅದೂ ಎರಡೆರಡು ಬಾರಿ! ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಈ ಕಿರಿಯ ವಯಸ್ಸಿಗೇ ಅತ್ಯಾಚಾರ ಎಸಗುವಂತೆ ಆತನ ಮನಸ್ಸನ್ನು ಯಾವ ವಿಷಯ ಮೋಡಿ ಮಾಡಿತ್ತು ಎನ್ನುವುದು ಮಾತ್ರ ತಿಳಿಯದ ರಹಸ್ಯವಾಗಿದೆ. ಬಳಿಕ ಏನಾಯಿತು, ಬಾಲಕನಿಗೆ ಯಾವ ಶಿಕ್ಷೆ ವಿಧಿಸಲಾಯಿತು? ಬನ್ನಿ ಈ ರಹಸ್ಯ ತಿಳಿಯುವ ಪ್ರಯತ್ನವನ್ನು ಮಾಡೋಣ....

ಇದು ಹೇಗೆ ಪ್ರಾರಂಭವಾಯಿತು?

ಈ ಹುಡುಗ ಒಂದು ದಿನ ತನ್ನ ತಂಗಿಯ ಮೇಲೇ ಎರಡು ಬಾರಿ ಬಲಾತ್ಕರಿಸಿದ್ದ. ಇದರಲ್ಲಿ ಒಂದು ಬಾರಿ ಸ್ಖಲನವೂ ಆಗಿತ್ತಂತೆ. ಇದಕ್ಕೇನು ಪ್ರೇರಣೆ ಎಂದು ಇದುವರೆಗೆ ತಿಳಿದುಬಂದಿಲ್ಲ.

ಈ ಹುಡುಗ ಎಲ್ಲಿಯವನು?

ಇಂಗ್ಲೆಂಡಿನ ದೇವೋನ್ ಎಂಬ ರಾಜ್ಯದ ಪ್ಲೈಮೌತ್ ಎಂಬ ಪಟ್ಟಣದ ನಿವಾಸಿಯಾಗಿರುವ ಈ ಹುಡುಗನ ತಂದೆ ತಾಯಿಗಳ ವಿವರಗಳನ್ನು ಗುಪ್ತವಾಗಿರಿಸಲಾಗಿದೆ. ಈಗ ಈ ಹುಡುಗ ಕಾರ್ನ್ ವಾಲ್ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದಾನೆ. ಈ ಹುಡುಗನ ಹೆಸರನ್ನೂ ಬಾಲಕನಾಗಿರುವ ಕಾರಣ ಗುಪ್ತವಾಗಿರಿಸಲಾಗಿದೆ.

ಈತನಿಗೆ ಯಾವ ಶಿಕ್ಷೆ ಸಿಕ್ಕಿತು?

ಬಾಡ್ಮಿನ್ ಮ್ಯಾಜಿಸ್ಟ್ರೇಟರ ನ್ಯಾಯಾಯಲದಲ್ಲಿ ಒಂದು ವರ್ಷ ನಿಗಾ ಇರುವ ಸಾದಾ ಶಿಕ್ಷೆ ಹಾಗೂ ಎರಡೂವರೆ ವರ್ಷಗಳ ಕಾಲ ಅತ್ಯಾಚಾರಿಗಳ ಪಟ್ಟಿಯಲ್ಲಿ ಈತನ ಹೆಸರು ದಾಖಲಾಗಿರುತ್ತದೆ.

ಇದು ಹೇಗೆ ನಡೆಯಿತು?

ಈತನ ತಂಗಿ ಕೇವಲ ಒಂಬತ್ತು ವರ್ಷದವಳಾಗಿದ್ದು ಈ ಪ್ರಕರಣದ ಬಳಿಕ ಜೀವಭಯಕ್ಕೊಳಗಾಗಿದ್ದಾಳೆ. ಇದು ಹೇಗೆ ನಡೆಯಿತು ಎಂಬ ಪ್ರಶ್ನೆಗೆ ಈತನ ತಂದೆ ತಾಯಿಗಳಲ್ಲಿಯೇ ಉತ್ತರವಿಲ್ಲ. ಬಾಲಕನೂ ಮೌನವಾಗಿದ್ದಾನೆ. ಮನಃಶಾಸ್ತ್ರಜ್ಞರು ಈಗ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಸಾಮಾಜಿಕ ಅರಿವು

ಮಕ್ಕಳಿಗೆ ತಮ್ಮನ್ನು ಸ್ಪರ್ಶಿಸುವವರು ಯಾವ ಇರಾದೆಯಿಂದ ಸ್ಪರ್ಶಿಸುತ್ತಿದ್ದಾರೆ ಎಂಬ ಅರಿವನ್ನು ತಿಳಿದಿರುವುದು ಆ ವಯಸ್ಸಿನಲ್ಲಿ ಕೊಂಚ ಅನುಮಾನವೇ. ಒಂದು ವೇಳೆ ಸ್ವಂತ ಜನಗಳೇ ಆಗಲಿ, ಪರಕೀಯರೇ ಆಗಲಿ, ಅವರ ಸ್ಪರ್ಶ ಹಿತಕರವಲ್ಲದಿದ್ದರೆ ತಕ್ಷಣ ತಮ್ಮ ತಂದೆತಾಯಿಗಳಿಗೆ ತಿಳಿಸುವಂತೆ ತಂದೆತಾಯಿಗಳು ಮಕ್ಕಳಿಗೆ ತಿಳಿಸಿಕೊಡಬೇಕು.

ಸಾಮಾಜಿಕ ಅರಿವು

ಅಷ್ಟೇ ಅಲ್ಲ, ಮಕ್ಕಳು ಎಲ್ಲಿದ್ದಾರೋ ಅಲ್ಲಿ ಅವರ ಚಟುವಟಿಕೆಗಳ ಬಗ್ಗೆ ಹಿರಿಯರೊಬ್ಬರು ಸದಾ ಒಂದು ಕಣ್ಣಿಟ್ಟಿರಬೇಕು.

ತಂದೆ ತಾಯಿ ಆಟದಲ್ಲಿಯೂ ಅತ್ಯಾಚಾರ!

ಇನ್ನೊಂದು ಗಾಬರಿಪಡಿಸುವ ಪ್ರಕರಣದಲ್ಲಿ ಆರು ವರ್ಷದ ಬಾಲಕ ಐದು ವರ್ಷದ ತನ್ನ ಚಿಕ್ಕಪ್ಪನ ಮಗಳ ಜೊತೆಗೆ 'ತಂದೆ ತಾಯಿ' ಆಟವಾಡುವ ಭರದಲ್ಲಿ ಅತ್ಯಾಚಾರ ಎಸಗಿದ್ದ. ಅಂದರೆ ಈ ಮಕ್ಕಳು ತಮ್ಮ ತಂದೆ ತಾಯಿಯರನ್ನು ಈ ಆಟ ಆಡುವ ಹೊತ್ತಿನಲ್ಲಿ ನೋಡಿರಬೇಕು. ಇದನ್ನು ಅನುಸರಿಸುವ ನೆಪದಲ್ಲಿ ಅತ್ಯಾಚಾರ ನಡೆದಿದೆ.

ತಂದೆ ತಾಯಿ ಆಟದಲ್ಲಿಯೂ ಅತ್ಯಾಚಾರ!

ಮಕ್ಕಳ ಕಾರ್ಯವನ್ನು ಕ್ಷಮಿಸಿದ ಇವರ ತಂದೆತಾಯಿಯರು ಮಕ್ಕಳಿಬ್ಬರಿಗೂ ಬುದ್ದಿಹೇಳಿ ಯಾವುದೇ ದೂರು ದಾಖಲಿಸದ ಕಾರಣ ಈ ಪ್ರಕರಣದ ಬಾಲಕನಿಗೆ ವಿಶ್ವದ ಅತಿ ಕಿರಿಯನೆಂಬ ಖ್ಯಾತಿ ಬರುತ್ತಿತ್ತೋ ಏನೋ. ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸೂಕ್ತವಾದ ತಿಳಿವಳಿಕೆ ನೀಡಿ ಈ ಕೃತ್ಯಗಳಿಂದ ದೂರವಿರಿಸುವುದು ಅಗತ್ಯ.

 

Story first published: Friday, September 30, 2016, 10:06 [IST]
English summary

The World's Youngest Rapist Is Just 11 Yrs Old

With rape becoming a common thing these days, we're losing hope in humanity itself being alive! When you'll learn about the world's youngest rapist, it would certainly depress you more... Here, in this article, we are about to share the case of a young Britain boy who was just 11 years old when he raped his sibling sister. The only thing that can shock us is how kids are prone to such heinous crimes at this tender age.
Please Wait while comments are loading...
Subscribe Newsletter