ಸದ್ಯ ಇಂತಹ ಅಸಹ್ಯ ಕಾನೂನುಗಳು ನಮ್ಮ ದೇಶದಲ್ಲಿಲ್ಲ ಬಚಾವ್!

ಸೆಕ್ಸ್ ವಿಷಯ ಬಂದಾಗ ವಿಶ್ವದೆಲ್ಲೆಡೆ ಎಲ್ಲರ ಹುಬ್ಬು ಮೇಲೇರುತ್ತದೆ. ಅದರಲ್ಲೂ ಪತಿ ಪತ್ನಿಯರ ಸಂಬಂಧದ ಹೊರತಾದ ಸಂಬಂಧಗಳಿಗೆ ಹತ್ತು ಹಲವು ಪ್ರಶ್ನೆಗಳು, ಕುತೂಹಲ, ಕಾಯ್ದೆ ಕಟ್ಟಳೆ, ಶಿಕ್ಷೆ-ಬಹಿಷ್ಕಾರ ಮೊದಲಾದ ಹಲವು ವಿಷಯಗಳನ್ನು ಕಾಣಬಹುದು....

By: Deepu
Subscribe to Boldsky

ಪ್ರೀತಿ ಒಂದು ಆಕರ್ಷಣೆ ಮತ್ತು ಅದು ಮನಸ್ಸಿನಾಳದಲ್ಲಿ ಮೂಡುವಂತಹ ಭಾವನೆ. ಇದಕ್ಕೆ ಯಾವುದೇ ಗಡಿ ಹಾಗೂ ಕಟ್ಟುಪಾಡುಗಳಿಲ್ಲ. ಪ್ರೀತಿ ಯಾರೊಂದಿಗೂ ಯಾವಾಗ ಬೇಕಿದ್ದರೂ ಮೂಡಬಹುದು. ಆದರೆ ಪ್ರೀತಿಗೆ ಸರಪಳಿ ಹಾಕಿದರೆ ಏನಾಗಬಹುದು. ಹೌದು, ಕೆಲವೊಂದು ದೇಶಗಳಲ್ಲಿ ಪ್ರೀತಿಸುವುದಕ್ಕೂ ಕೆಲವೊಂದು ಕಠಿಣ ಕಾನೂನುಗಳು ಇವೆ. ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!

ಕೆಲವೊಂದು ದೇಶಗಳಲ್ಲಿ ಅಲ್ಲಿನ ಕಾನೂನನ್ನು ಮೀರಿ ನಡೆದರೆ ದೊಡ್ಡ ಮಟ್ಟದ ಶಿಕ್ಷೆ ಎದುರಿಸಬೇಕಾಗುತ್ತದೆ. ವಿಚಿತ್ರವಾಗಿರುವ ಇಂತಹ ಕಾನೂನುಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ನಿಮ್ಮ ಹೋಟೆಲ್ ಕೋಣೆಯಲ್ಲಿ ನಗ್ನವಾಗಿ ತಿರುಗಾಡುವುದು ಕೂಡ ದೊಡ್ಡ ಅಪರಾಧ. ಇಂತಹ ವಿಚಿತ್ರ ಕಾನೂನುಗಳು ಇರುವ ದೇಶಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಮುಂದಕ್ಕೆ ಓದಿ....  


ಕಿಟಕಿ ಬಳಿ ನಗ್ನವಾಗಿ ನಿಲ್ಲುವುದು

ಸ್ನಾನ ಗೃಹದಲ್ಲಿ ನಗ್ನವಾಗುವುದು ತುಂಬಾ ಕಷ್ಟ. ಹೀಗಿರುವಾಗ ಕಿಟಕಿ ಬಳಿ ನಗ್ನವಾಗಿ ಯಾರು ನಿಲ್ಲುತ್ತಾರೆಂದು ನಾವೆಲ್ಲರೂ ಯೋಚಿಸಬಹುದು. ಆದರೆ ಸಿಂಗಾಪುರದಲ್ಲಿ ಇಂತಹ ಕಾನೂನು ಇದೆ. ಇಂತಹ ತಪ್ಪು ಮಾಡಿದರೆ ದೊಡ್ಡ ಶಿಕ್ಷೆ ಎದುರಿಸಬೇಕಾಗುತ್ತದೆ. ದೊಡ್ಡ ಕಿಟಕಿ ಹೊಂದಿರುವ ಹೋಟೆಲ್‌ಗಳಲ್ಲಿ ಉಳಿದುಕೊಂಡಿರುವವರು ತುಂಬಾ ಎಚ್ಚರಿಕೆ ವಹಿಸಬೇಕು.

ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು!

ಇದು ತುಂಬಾ ವಿಚಿತ್ರವೆನಿಸುತ್ತದೆ. ಆದರೆ ಈ ಕಾನೂನು ಪೋಲೆಂಡ್‌ನಲ್ಲಿ ಜಾರಿಯಲ್ಲಿದೆ. ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವಾಗ ಮೂರಕ್ಕಿಂತ ಹೆಚ್ಚು ಸಲ ಸಿಕ್ಕಿಬಿದ್ದರೆ ತಲೆಗೆ ಗುಂಡು ಹಾರಿಸಿ ಕೊಲ್ಲಲಾಗುತ್ತದೆ.

ಖಾರವಾದ ಸಾಸ್ ಬಳಕೆ

ಪೆರುವಿನ ಜೈಲಿನಲ್ಲಿ ಕೈದಿಗಳಿಗೆ ತಯಾರಿಸುವಂತಹ ಅಡುಗೆಯಲ್ಲಿ ಮೆಣಸಿನ ಸಾಸ್ ಅಥವಾ ಖಾರವಾದ ಸಾಸ್ ನ್ನು ಬಳಸುವಂತಿಲ್ಲ. ಸರಕಾರದ ಪ್ರಕಾರ ಖಾರವಾದ ಸಾಸ್ ಅನ್ನು ತಿನ್ನುವುದರಿಂದ ಕಾಮೋತ್ತೇಜಕ ಪರಿಣಾಮ ಬೀರಬಹುದು ಮತ್ತು ಇದರಿಂದ ಲೈಂಗಿಕ ಆಸಕ್ತಿ ಬೆಳೆಯಬಹುದು. ಇದರಿಂದಾಗಿ ಇಲ್ಲಿ ಖಾರ ಸಾಸ್ ಅನ್ನು ಬಳಸುವಂತಿಲ್ಲ.

ಹಸ್ತಮೈಥುನ

ಇದು ವೈಯಕ್ತಿಕ ಹಕ್ಕು ಎಂದು ಭಾವಿಸಿದ್ದರೆ ಖಂಡಿತವಾಗಿಯೂ ತಪ್ಪು. ಯಾಕೆಂದರೆ ಇಂಡೋನೇಶಿಯಾದಲ್ಲಿ ಹಸ್ತುಮೈಥುನ ಮಾಡುವ ಸಿಕ್ಕಿಬಿದ್ದು ತಪ್ಪಿತಸ್ಥರೆಂದು ಸಾಬೀತಾದರೆ ಆಗ ಎರಡು ವರ್ಷ ಹಾಗೂ ಎಂಟು ತಿಂಗಳು ಜೈಲು ಖಚಿತ!!

ಬೈಕ್ ಮೇಲೆ ಪ್ರೀತಿ

ಈ ಕಾನೂನು ಲಂಡನ್‌ನಲ್ಲಿದೆ. ಭಾರತದಲ್ಲಿ ಬೈಕ್ ಸಾಗುತ್ತಿರುವಾಗಲೇ ಕಿಸ್ಸಿಂಗ್ ನಡೆಯುತ್ತದೆ. ಆದರೆ ಲಂಡನ್ ನಲ್ಲಿ ಇಂತಹ ಕ್ರಿಯೆಗೆ ಜಾರುವ ಮುನ್ನ ಬೈಕ್ ಅನ್ನು ನಿಲ್ಲಿಸಿ ಬದಿಯಲ್ಲಿ ಪಾರ್ಕ್ ಮಾಡಬೇಕು. ಇದರಿಂದ ಚಲಿಸುತ್ತಿರುವ ಬೈಕಿನ ಮೇಲೆ ಪ್ರೀತಿಗೆ ಸಂಪೂರ್ಣ ನಿಷಿದ್ಧ.

ಮೊದಲ ರಾತ್ರಿಗೆ ನೀವಿಬ್ಬರು ಮಾತ್ರವಲ್ಲ!

ಇದು ತುಂಬಾ ವಿಲಕ್ಷಣ ಕಾನೂನುಗಳಲ್ಲಿ ಒಂದಾಗಿದೆ. ಹೌದು, ಕೊಲಂಬಿಯಾದಲ್ಲಿ ಮದುವೆಯಾದ ಹುಡುಗ ಹಾಗೂ ಹುಡುಗಿ ಮೊದಲ ರಾತ್ರಿಯಂದು ಏಕಾಂಗಿಯಾಗಿರಬಾರದು. ಅವರಿಬ್ಬರು ಅತ್ತೆ ಅಂದರೆ ವಧುವಿನ ತಾಯಿಯ ಮುಂದೆ ಪ್ರೀತಿಯಲ್ಲಿ ತೊಡಗಬೇಕು. ಈ ಕ್ರಿಯೆಗೆ ಆಕೆ ಸಾಕ್ಷಿಯಾಗಬೇಕಂತೆ! ಸದ್ಯ ಇಂತಹ ಯಾವ ಕಾನೂನು ಕೂಡ ಭಾರತದಲ್ಲಿ ಇಲ್ಲವೆಂದು ನಾವು ಖುಷಿ ಪಡೋಣ.

 

Story first published: Wednesday, November 30, 2016, 23:14 [IST]
English summary

The World's Weirdest Lovemaking Laws

Here, in this article, we are about to share the list of some of the weirdest lovemaking laws followed in few places around the world. These are the laws that will freak you out, as they do not have to be all about the steamy sessions only. Instead, even roaming around nude in your hotel room can be a crime! So, check out these insane laws that people have for lovemaking in different countries!
Please Wait while comments are loading...
Subscribe Newsletter