ಕಾಲು ಕಳೆದುಕೊಂಡ 'ಫುಟ್ಬಾಲ್' ಆಟಗಾರನ ಕಥೆ ಕೇಳಿ...

ಅಪಘಾತವೊಂದರಲ್ಲಿ ಪಾದವನ್ನು ಕಳೆದುಕೊಂಡ ಬಾಲಕನೊಬ್ಬ ಹೇಗೆ ಈ ವೈಕಲ್ಯವನ್ನು ಮೆಟ್ಟಿ ನಿಂತು ಖ್ಯಾತ ಫುಟ್ಬಾಲ್ ಆಟಗಾರನಾದ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

By: manu
Subscribe to Boldsky

ನಮ್ಮ ಸುತ್ತಮುತ್ತ ಹಲವಾರು ವ್ಯಕ್ತಿಗಳಿದ್ದು ಇವರು ತಮ್ಮ ಜೀವನದಲ್ಲಿ ಏನಾದರೊಂದನ್ನು ಕಳೆದು ಕೂಂಡಿದ್ದರೂ ಇನ್ನಾವುದನ್ನಾದರೊಂದನ್ನು ಗಳಿಸಿರುತ್ತಾರೆ. ತಮ್ಮ ವೃತ್ತಿಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಾಧನೆ ತೋರಿ ಇತರರಿಗೆ ಮಾದರಿಯಾಗುತ್ತಾರೆ. ಈ ಪಟ್ಟಿಯಲ್ಲಿ ಅಂಗವಿಕಲರ ಹೆಸರುಗಳು ಬಹಳಷ್ಟಿವೆ.

ಕರ್ನಾಟಕದ ಮಾಲತಿ ಹೊಳ್ಳರವರನ್ನು ಪ್ರಮುಖವಾಗಿ ಇಲ್ಲಿ ಸ್ಮರಿಸಬಹುದು. ಫುಟ್ಬಾಲ್ ಆಟಕ್ಕೆ ಕಾಲುಗಳೇ ಮುಖ್ಯ. ಆದರೆ ಪಾದಗಳೇ ಇಲ್ಲದ ವ್ಯಕ್ತಿಯೊಬ್ಬ ಫುಟ್ಬಾಲ್ ಆಟದಲ್ಲಿ ಗರಿಮೆ ಸಾಧಿಸಿದನೆಂದರೆ ಅದು ನಿಜವಾಗಿಯೂ ಅಂಗವೈಕಲ್ಯವನ್ನು ಮೆಟ್ಟಿನಿಂದ ಧೀಮಂತಿಕೆಯೇ ಆಗುತ್ತದೆ.    ವಿದ್ಯೆಯ ಶ್ರೀಮಂತಿಕೆ ಪಡೆದ 'ಭಿಕ್ಷುಕ ಹುಡುಗನ' ರಿಯಲ್ ಸ್ಟೋರಿ

ಅಪಘಾತವೊಂದರಲ್ಲಿ ಪಾದವನ್ನು ಕಳೆದುಕೊಂಡ ಬಾಲಕನೊಬ್ಬ ಹೇಗೆ ಈ ವೈಕಲ್ಯವನ್ನು ಮೆಟ್ಟಿ ನಿಂತು ಖ್ಯಾತ ಫುಟ್ಬಾಲ್ ಆಟಗಾರನಾದ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಎಲ್ಲವೂ ಇದ್ದೂ ಏನಾದರೂ ಸಾಧಿಸಲು ನೆವಗಳನ್ನು ಮುಂದೆ ಮಾಡುವ ನಮಗೆಲ್ಲಾ ಈ ಬಾಲಕ ಪ್ರೇರಣೆಯಾಗಿದ್ದು ಜೀವನದಲ್ಲಿ ಏನಾದರೊಂದನ್ನು ಸಾಧಿಸಬೇಕು ಎಂಬ ಇಚ್ಛೆಯುಳ್ಳವರಿಗೆ ದಾರಿದೀಪವಾಗುತ್ತಾನೆ..... 

 

ಈ ಬಾಲಕನಿಗೇನಾಯ್ತು?

ಈತನ ತಾಯಿ ತೀರಿಕೊಂಡ ಬಳಿಕ ಈತನ ತಂದೆ ಮರುಮದುವೆಯಾಗಿದ್ದ. ಆದರೆ ಈತನ ಮಲತಾಯಿ ಇವನನ್ನು ಇಷ್ಟಪಡದೇ ಕಾಟಕೊಡುತ್ತಿದ್ದಳು.

ಮನೆಯನ್ನು ತ್ಯಜಿಸಿ ಎತ್ತಲೋ ನಡೆದ!

ಈ ಸಂಸಾರದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ, ತಾನೇ ಸ್ವತಂತ್ರನಾಗಿ ಬದುಕಬೇಕು ಎಂದುಕೊಂಡ ಈ ಬಾಲಕ ಒಂದು ದಿನ ಮನೆಯನ್ನು ತ್ಯಜಿಸಿ ಎತ್ತಲೋ ನಡೆದ.

ಅಂದು ನಡೆದ ಆ ಘೋರ ದುರ್ಘಟನೆ

ಮನೆ ಬಿಟ್ಟು ಓಡಿ ಬಂದಿದ್ದಾಯ್ತು, ಆದರೆ ಎಲ್ಲಿಗೆ ಹೋಗುವುದು? ಇದೇ ದ್ವಂದ್ವದಲ್ಲಿ ರೈಲಿನಿಂದ ರೈಲು ದಾಟುತ್ತಿದ್ದಾಗ ಅಕಸ್ಮಾತ್ತಾಗಿ ಜಾರಿದ. ಈ ರಭಸಕ್ಕೆ ಎರಡೂ ಕಾಲುಗಳ ಪಾದಗಳು ರೈಲಿನ ಭಾರೀ ಚಕ್ರಗಳ ಅಡಿಗೆ ನೇರವಾಗಿ ಸಿಕ್ಕವು.  ರೈಲು ಹಳಿಗಳ ಕೆಳಗೆ ಒಡೆದ ಜಲ್ಲಿಕಲ್ಲುಗಳನ್ನೇ ಹಾಕುತ್ತಾರೆ ಏಕೆ?

ಮಗ ಎಲ್ಲಿದ್ದಾನೆಂದು ಮನೆಯವರಿಗೆ ಗೊತ್ತಿರಲಿಲ್ಲ

ಮಗ ಕಾಣೆಯಾದ ಬಳಿಕ ಮನೆಯವರು ಹುಡುಕಾಡಲೇನೂ ತೊಂದರೆಯನ್ನೇ ತೆಗೆದುಕೊಳ್ಳಲಿಲ್ಲ. ಬದಲಿಗೆ ಪೀಡೆ ತೊಲಗಿತು ಎಂದು ನಿರಾಳರಾಗಿದ್ದರು.

ಈತ ಅದೂ ಇದೂ ಕೆಲಸ ಮಾಡಿಕೊಂಡಿದ್ದ

ಕಾಲುಗಳು ಹೋದ ಬಳಿಕ ಅಂಗವಿಕಲನಾಗಿ ಜೀವನೋಪಾಯಕ್ಕಾಗಿ ಅದೂ ಇದೂ ಕೆಲಸ ಮಾಡಿಕೊಂಡಿದ್ದ. ಕೂಲಿ ನಾಲಿ, ಕಸ ಮುಸುರೆ ತಿಕ್ಕುವುದು, ಒಟ್ಟಾರೆ ಏನು ಸಿಕ್ಕಿತೋ ಆ ಕೆಲಸ ಮಾಡಿಕೊಂಡಿದ್ದ.

ಫುಟ್ಬಾಲ್ ಮೇಲಿನ ವ್ಯಾಮೋಹ

ಎರಡೂ ಪಾದಗಳನ್ನು ಕಳೆದುಕೊಂಡಿದ್ದರೂ ಬಾಲ್ಯದ ಫುಟ್ಬಾಲ್ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿರಲಿಲ್ಲ. ಅಂಗವೈಕಲ್ಯವಿದ್ದರೂ ದೇವರು ಮಾತ್ರ ಈ ಬಾರಿ ಈತನ ಕೈ ಬಿಡಲಿಲ್ಲ...

ಫುಟ್ಬಾಲ್ ಆಟಗಾರನಾರುವುದೇ ಈತನ ಕನಸಾಗಿತ್ತು

ತನ್ನ ನೆಚ್ಚನ ಆಟಗಾರ ರೊನಾಲ್ಡೋನನ್ನು ಮೀರಿಸುವ ಆಟಗಾರ ತಾನಾಗಬೇಕು ಎಂಬ ದೊಡ್ಡ ಕನಸು ಆತನದ್ದಾಗಿತ್ತು. ಕಾಲೂರಲು ಆಗದೇ ಇದ್ದರೂ ದೊಡ್ಡ ಕನಸು ಕಾಣುವ ಈತನನ್ನು ಮೆಚ್ಚಲೇಬೇಕು.

ಎದೆಗುಂದದೇ ಮುನ್ನಡೆವ ಛಲ

ಇಂದಿಗೂ ಈ ಬಾಲಕ ಪಾದಗಳಿಲ್ಲದ ಮೋಟು ಕಾಲುಗಳೊಂದಿಗೆ ಫುಟ್ಬಾಲ್ ಆಡುತ್ತಿದ್ದಾನೆ. ಈತನ ಶ್ರಮ ಎಷ್ಟು ಫಲಕೊಡುತ್ತದೆ ಎಂಬುದನ್ನು ಕಾಲವೇ ಹೇಳಬೇಕಾಗುತ್ತದೆ. ಆದರೆ ಈತ ಎಲ್ಲರ ಮನಸ್ಸನ್ನು ಗೆದ್ದಿರುವುದು ತನ್ನ ಮೋಟು ಕಾಲುಗಳಿಂದಲ್ಲ,

ಎದೆಗುಂದದೇ ಮುನ್ನಡೆವ ಛಲ

ಬದಲಿಗೆ ಜೀವನವನ್ನು ಎದುರಿಸುವ, ತನ್ನ ಕನಸನ್ನು ನನಸಾಗಿಸುವತ್ತ ನಡೆಸುತ್ತಿರುವ ತನ್ನ ಪ್ರಯತ್ನಗಳಿಂದಾಗಿ. ಈತನ ಪ್ರಯತ್ನಗಳು ಫಲ ಕೊಡಲಿ, ಜೀವನದಲ್ಲಿ ಉನ್ನತವಾದುದನ್ನು ಸಾಧಿಸುವಂತಾಗಲಿ ಎಂದು ಬೋಲ್ಡ್ ಸ್ಕೈ ತಂಡ ಈ ಮೂಲಕ ಹಾರೈಸುತ್ತಿದೆ.

Story first published: Saturday, November 19, 2016, 10:56 [IST]
English summary

The Story Of A Legless Footballer

This story is surely inspiring and it helps us understand that even when there are many hurdles in our lives we should not give up and learn from our mistakes to survive and succeed. Read the story of this young lad who lost his feet and yet played football with his disability... Check it out and get inspired...
Please Wait while comments are loading...
Subscribe Newsletter