ಅಚ್ಚರಿಯ ಸತ್ಯಘಟನೆ: ಮಗುವನ್ನು ಕಾಪಾಡಿದ ಬೀದಿನಾಯಿಗಳು!

ತನ್ನನ್ನು ಪ್ರೀತಿಸಿದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ನಾಯಿಯ ಹತ್ತು ಹಲವಾರು ಕಥೆಗಳು ಪ್ರಚಲಿತವಾಗಿವೆ, ಆದರೆ ಇಲ್ಲಿ ನಾವು ನೀಡಿರುವ ಲೇಖನ ಮೈ ರೋಮಾಂಚನಗೊಳಿಸುತ್ತದೆ

By: manu
Subscribe to Boldsky

ಹುಟ್ಟಿದ ಮಗು ಹೆಣ್ಣಾದರೆ ತ್ಯಜಿಸುವ ಪರಿಪಾಠ ಭಾರತದಲ್ಲಿ ಮಾತ್ರವಲ್ಲ, ನೆರೆಯ ಬಾಂಗ್ಲಾದೇಶದಲ್ಲಿಯೂ ಇದೆ. ಇಂತಹ ಒಂದು ನವಜಾತ ಹೆಣ್ಣುಮಗುವೊಂದನ್ನು ಬೀದಿನಾಯಿಗಳು ರಕ್ಷಿಸಿದ ಅಚ್ಚರಿಯ ಸತ್ಯಘಟನೆ ಬಾಂಗ್ಲಾದೇಶದಿಂದ ವರದಿಯಾಗಿದೆ. ಓಡುವ ವಾಹನಗಳನ್ನು ಕಂಡರೆ ನಾಯಿಗಳೇಕೆ ಅಷ್ಟು ಕೋಪ?

ಮಾನವನ ಅಚ್ಚುಮೆಚ್ಚಿನ ಮಿತ್ರನೆಂದೇ ಖ್ಯಾತಿ ಗಳಿಸಿರುವ ನಾಯಿ ತನ್ನ ಒಡೆಯನ ಮೆಚ್ಚುಗೆ ಗಳಿಸಲು ಏನೆಲ್ಲಾ ಮಾಡುತ್ತದೆ. ನಿಯತ್ತಿನಿಂದ ಮನೆ ಕಾಯುವ ನಾಯಿ ನಿಯತ್ತಿಗೆ ಇನ್ನೊಂದು ಹೆಸರು. ತನ್ನನ್ನು ಪ್ರೀತಿಸಿದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ನಾಯಿಯ ಹತ್ತು ಹಲವಾರು ಕಥೆಗಳು ಪ್ರಚಲಿತವಾಗಿವೆ.... ಆದರೆ ಇಲ್ಲಿ ನೀಡಿರುವ ಕಥೆ, ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ....  


ಬಾಂಗ್ಲಾದೇಶದ ಪುರುಲಿಯಾ

ಬಾಂಗ್ಲಾದೇಶದ ಪುರುಲಿಯಾ ಎಂಬಲ್ಲಿ ಹುಟ್ಟಿ ಕೇವಲ ಏಳು ದಿನಗಳಾಗಿದ್ದ ಹೆಣ್ಣು ಮಗುವೊಂದನ್ನು ದಾರಿಪಕ್ಕದ ಪೊದೆಗಳ ನಡುವೆ ತ್ಯಜಿಸಲಾಗಿತ್ತು.

ಮಗುವಿನ ಅಳು

ಮಗುವಿನ ಅಳು ಕೇಳಿ ಆಗಮಿಸಿದ ಕಾಗೆಗಳು ಇನ್ನೇನು ಮಗುವನ್ನು ಕುಕ್ಕಿ ತಿನ್ನಲು ಅಣಿಯಾಗುತ್ತಿದ್ದಂತೆಯೇ ಆಗಮಿಸಿದ ಬೀದಿ ನಾಯಿಗಳು ಅವುಗಳನ್ನು ಓಡಿಸಿ ಮಗುವನ್ನು ಕಾಪಾಡಿವೆ.

ನಾಯಿಗಳ ಉಪಕಾರ

ದಾರಿಯಲ್ಲಿ ಬರುವ ಯಾರಾದರೂ ಮನುಷ್ಯರನ್ನು ಕಂಡ ಬಳಿಕ ಅವರ ಗಮನವನ್ನು ಸೆಳೆಯಲು ಈ ಬೀದಿನಾಯಿಗಳು ಎಷ್ಟು ಹೊತ್ತಿನಿಂದ ಆ ಮಗುವಿನ ಬಳಿ ಇದ್ದವೋ ಗೊತ್ತಿಲ್ಲ, ಆದರೆ ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಸ್ಥಳೀಯ ಶಿಕ್ಷಕರೊಬ್ಬರ ಗಮನವನ್ನು ಮಗುವಿನತ್ತ ಸೆಳೆದು ಮಗುವಿನ ಪ್ರಾಣ ಕಾಪಾಡಲು ನೆರವಾಗಿವೆ.

ನಾಯಿಗಳ ಉಪಕಾರ

ನಾಯಿಗಳು ತನ್ನನ್ನು ಏಕಾಗಿ ಹೀಗೆ ಬೊಗಳಿ ಪೊದೆಯತ್ತ ಹೋಗುವಂತೆ ಮಾಡುತ್ತಿವೆ ಎಂದು ಅರಿವಾಗದ ಅವರಿಗೆ ಪೊದೆಯತ್ತ ಬರುತ್ತಿದ್ದಂತೆಯೇ ಮಗುವಿನ ಅಳು ಕೇಳಿಸಿದೆ. ತಕ್ಷಣ ಆತ ಈ ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಹೋಗಿ ಹಾಲು ಕುಡಿಸಿದ್ದಾರೆ.

ನಾಯಿಗಳ ಉಪಕಾರ

ಈ ಮಗುವನ್ನು ಹೊತ್ತು ನಡೆಯುತ್ತಿದ್ದ ಶಿಕ್ಷಕರ ಹಿಂದೆ ಅಷ್ಟೂ ಬೀದಿನಾಯಿಗಳು ಮೌನವಾಗಿ ಮೆರವಣಿಗೆ ಎಂಬಂತೆ ಮನೆಯವರೆಗೂ ಹಿಂಬಾಲಿಸಿದ್ದು ಬಳಿಕ ಒಂದೊಂದಾಗಿ ಅಲ್ಲಿಂದ ಜಾಗ ಖಾಲಿ ಮಾಡಿವೆ. ಅಂದರೆ ಮಗು ಈಗ ಸುರಕ್ಷಿತ ಕೈಗಳ ಆರೈಕೆಯಲ್ಲಿವೆ ಎಂದು ಖಚಿತಪಡಿಸಿಕೊಂಡ ಬಳಿಕ ಹಿಂದಿರುಗಿವೆ ಎಂದು ಅರ್ಥೈಸಿಕೊಳ್ಳಬಹುದು.

ಮಾನವೀಯತೆ ಮೆರೆದ ಮೂಕ ಪ್ರಾಣಿಗಳು

ಈ ಪ್ರಕರಣ ಪ್ರಾಣಿಗಳಲ್ಲಿರುವ ಮಾನವೀಯತೆಯನ್ನೂ ಮಾನವರಲ್ಲಿರುವ ಮೃಗೀಯ ಭಾವನೆಗಳನ್ನೂ ಒಟ್ಟಿಗೇ ಹೊರಹೊಮ್ಮಿಸಿದೆ. ಮಗುವಿನ ಪ್ರಾಣ ರಕ್ಷಿಸಿದ ಈ ನಾಯಿಗಳು 'ನೀನಾರಿಗಾದೆಯೋ ಎಲೆ ಮಾನವಾ!' ಎಂದು ಹೇಳುತ್ತಿವೆ.

 

Story first published: Saturday, November 12, 2016, 12:20 [IST]
English summary

Stray Dogs Save Abandoned Newborn Girl

This is a true incident that happened in a part of Bangladesh. A newborn child who was abandoned by her parents was guarded by none other than street dogs! No doubt dogs make us laugh, comfort us when we cry and bring us joy. They also have compassion and unconditional love and this case is a sheer example of it.
Please Wait while comments are loading...
Subscribe Newsletter