For Quick Alerts
ALLOW NOTIFICATIONS  
For Daily Alerts

ತೂಕವೇ ಇವರ ಪಾಲಿಗೆ ಅದೃಷ್ಟ/ದುರದೃಷ್ಟಕರವಾಗಿತ್ತು..!

By Manu
|

ಅದೃಷ್ಟ ಎನ್ನುವುದು ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮಕ್ಕಳ ಮೂಲಕ ಅದೃಷ್ಟ ಬರುತ್ತದೆ ಎಂಬ ನಂಬಿಕೆಯಿಂದಲೇ ದಾನ ಧರ್ಮಗಳನ್ನು ಮಕ್ಕಳ ಮೂಲಕ ಮಾಡಿಸುತ್ತಾರೆ. ಅಷ್ಟೇ ಅಲ್ಲ, ಅದೃಷ್ಟಚೀಟಿ ಎತ್ತಲು ಮತ್ತು ಲಾಟರಿ ಟಿಕೇಟುಗಳನ್ನು ಕೊಳ್ಳಲೂ ಮಕ್ಕಳ ನೆರವು ಪಡೆಯುವುದನ್ನು, ಲಾಟರಿ ಫಲಿತಾಂಶದ ಚೀಟಿಯನ್ನೂ ಮಕ್ಕಳಿಂದಲೇ ತೆಗೆಸುವುದನ್ನು ವಿಶ್ವದಾದ್ಯಂತ ಕಾಣಬಹುದು. ಆದರೆ ಕೆಲವರಿಗೆ ಅವರ ಅಸಾಧ್ಯತೂಕವೇ ಅದೃಷ್ಟಕರವಾಗಿ ಪರಿಣಮಿಸಿದ್ದು ಮಾತ್ರ ಚಕಿತಗೊಳಿಸುವಂತಿದೆ.

ಸ್ಥೂಲಕಾಯದ ಕಾರಣ ಕೆಲವು ಅಪರಾಧಗಳಲ್ಲಿ ಸಿಕ್ಕಿಕೊಳ್ಳುವ, ಅನಾವಶ್ಯಕ ರಗಳೆಗಳನ್ನು ಪಡೆದುಕೊಳ್ಳುವ ಪ್ರಸಂಗದಿಂದ ತಪ್ಪಿಸಿಕೊಳ್ಳುತ್ತಾರೆ. ಅಷ್ಟೇ ಏಕೆ ದಪ್ಪನಿದ್ದಾನೆ ಎಂಬ ಕಾರಣಕ್ಕೇ ಸ್ಮಶಾನದಲ್ಲಿ ಜಾಗವೂ ಸಿಕ್ಕಿರದ ವರದಿಯಾಗಿದೆ. ಇಂತಹ ಕೆಲವು ಆಶ್ಚರ್ಯಚಕಿತಗೊಳಿಸುವ ಕೆಲವು ಪ್ರಕರಣಗಳನ್ನು ಇಂದು ಸಂಗ್ರಹಿಸಲಾಗಿದ್ದು ಇವೆಲ್ಲವೂ ನಿಜವೆಂದು ಪುರಾವೆಗಳೇ ಸಾಬೀತು ಪಡಿಸುತ್ತದೆ.

ಅದರಲ್ಲೂ ಕೆಲವು ಪ್ರಕರಣಗಳಂತೂ "ಈ ಕೆಲಸ ಮಾಡಲಿಕ್ಕೆ ನನ್ನ ಸ್ಥೂಲಕಾಯ ಅಡ್ಡಿಬರುತ್ತದೆ" ಎಂಬ ಅರ್ಥ ನೀಡುತ್ತವೆ. ಇದೇ ಕಾರಣಕ್ಕೆ ಕೆಲಸ ಮಾಡುವುದರಿಂದ ತಪ್ಪಿದ್ದೇ ಅಲ್ಲದೇ ಕೆಲವು ಸಮಯದ ಹಣಗಳಿಕೆಯ ಸಾಧ್ಯತೆಗಳೂ ಕೈತಪ್ಪಿವೆ. ಬನ್ನಿ, ತಮ್ಮ ಸ್ಥೂಲಕಾಯವನ್ನೇ ನೆಪವಾಗಿಸಿ ಕೆಲಸದಿಂದ ತಪ್ಪಿಸಿಕೊಳ್ಳುವ ಹುನ್ನಾರದ ಕೆಲವು ವ್ಯಕ್ತಿಗಳ ಮನಃಸ್ಥಿತಿಯ ಬಗ್ಗೆ ಅರಿಯೋಣ...

ಮಕ್ಕಳ ಆಧೀನತೆಯನ್ನೇ ಕಳೆದುಕೊಂಡ ಠೊಣಪ

ಮಕ್ಕಳ ಆಧೀನತೆಯನ್ನೇ ಕಳೆದುಕೊಂಡ ಠೊಣಪ

ಕೆನಡಾ ದೇಶದ ಒಟ್ಟಾವಾದ ಈ 38 ವರ್ಷದ ವ್ಯಕ್ತಿ ತನ್ನ ಇಬ್ಬರು ಮಕ್ಕಳ ಆಧೀನತೆಯನ್ನೇ ತನ್ನ ಸ್ಥೂಲಕಾಯದಿಂದಾಗಿ ಕಳೆದುಕೊಳ್ಳಬೇಕಾಯಿತು. ಏಕೆಂದರೆ ಆತನ ಇಬ್ಬರು ಮಕ್ಕಳೂ ಬಹಳ ತಂಟೆಕೋರರಾಗಿದ್ದು ಇವರನ್ನು ಹದ್ದುಬಸ್ತಿನಲ್ಲಿಡಲು ಸ್ಥೂಲಕಾಯದ ಈ ವ್ಯಕ್ತಿಗೆ ಸಾಧ್ಯವಿಲ್ಲ ಎಂದು ನ್ಯಾಯಾಲಯವೇ ಒಪ್ಪಿಕೊಂಡು ಈತನ ಆಧೀನತೆ ಕಸಿದುಕೊಂಡು ಬೇರೆಯವರಿಗೆ ದತ್ತು ನೀಡಲು ಒಪ್ಪಿಗೆ ನೀಡಿತು. Image courtesy

ಸಾವನ್ನೇ ಗೆದ್ದ ತೋರಸರದಾರ

ಸಾವನ್ನೇ ಗೆದ್ದ ತೋರಸರದಾರ

ಈ ವ್ಯಕ್ತಿ ತನಗೆ ನೀಡಿದ್ದ ನೇಣಿನ ಗಡುವನ್ನು ಹೆಚ್ಚಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡಿದ್ದ. ಇದಕ್ಕೆ ನೀಡಿದ್ದ ಕಾರಣವೆಂದರೆ ತಾನು ಅತೀವ ದಪ್ಪನಾಗಿದ್ದು ತನಗೆ ಕೊಂಚ ತೆಳ್ಳಗಾಗಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದ. ಆದರೆ ನ್ಯಾಯಾಲಯದಿಂದ ಸ್ಪಷ್ಟ ಉತ್ತರ ಬರುವ ಮೊದಲೇ ನೈಸರ್ಗಿಕ ಕಾರಣಗಳಿಂದ ಯಾವ ಸಮಯದಲ್ಲಿ ನೇಣು ಹಾಕಬೇಕಾಗಿತ್ತೋ ಆಗಲೇ ಸಾವನ್ನಪ್ಪಿದ. Image courtesy

ಕೆಲಸ ಮಾಡದ, ಕೇವಲ ಟೀವಿ ನೋಡುವ ಟೆಲಿಟಬ್ಬೀಸ್

ಕೆಲಸ ಮಾಡದ, ಕೇವಲ ಟೀವಿ ನೋಡುವ ಟೆಲಿಟಬ್ಬೀಸ್

1997ರಿಂದ 2001ರವರೆಗೆ ಜನಪ್ರಿಯವಾಗಿದ್ದ ಟೆಲಿಟಬ್ಬೀಸ್ ಎಂಬ ಟೀವಿ ಹಾಸ್ಯಧಾರಾವಹಿಯ ಪಾತ್ರಗಳೆಲ್ಲಾ ಸ್ಥೂಲಕಾಯ ಹೊಂದಿರುವ ಒಂದು ಕುಟುಂಬವಾಗಿದೆ. ಸ್ಥೂಲಕಾಯ ಇರುವುದರಿಂದಲೇ ಇವರೆಲ್ಲಾ ಕೆಲಸ ಮಾಡದೇ ಮನೆಯಲ್ಲಿದ್ದು ಕೇವಲ ಟೀವಿ ನೋಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಎಷ್ಟು ದಿನದಿಂದ ಎಂದರೆ ಬರೋಬ್ಬರಿ ಹನ್ನೊಂದು ವರ್ಷಗಳಿಂದ! ಸ್ನೇಹಿತರಿಂದ ಎರವಲು ತಂದ ಟೀವಿ ನೋಡುವುದು, ಇಡಿಯ ದಿನ ತಿನ್ನುತ್ತಾ ಸ್ಥೂಲಕಾಯ ಹೆಚ್ಚಿಸುವುದು ಇದೇ ಇವರ ಕೆಲಸ! Image courtesy

ಅಂತಿಮ ಸಂಸ್ಕಾರದಲ್ಲೂ ಸ್ಥೂಲಕಾಯ ಅಡ್ಡಿ

ಅಂತಿಮ ಸಂಸ್ಕಾರದಲ್ಲೂ ಸ್ಥೂಲಕಾಯ ಅಡ್ಡಿ

ವಿಶ್ವದಲ್ಲಿಯೇ ಒಂದು ವಿಚಿತ್ರ ಪ್ರಕರಣ ಎಂದರೆ ಓರ್ವ ಮಹಿಳೆಯ ವಿಪರೀತ ದಪ್ಪನಾದ ಶರೀರ ಶವಸಂಸ್ಕಾರದ ಕಟ್ಟಡವನ್ನೇ ಬೆಂಕಿಗಾಹುತಿ ಮಾಡಿದ್ದು. ಸುಮಾರು ಇನ್ನೂರು ಕೇಜಿ ತೂಗುತ್ತಿದ್ದ ಆಸ್ಟ್ರಿಯಾ ದೇಶದ ಈ ಮಹಿಳೆಯ ಪಾರ್ಥವ ಶರೀರವನ್ನು ಸ್ವಯಂಚಾಲಿತ ದಹನಮಂಚದೊಳಗೆ ಇಕ್ಕಟ್ಟಾಗಿ ತುರುಕಿಸಿ ಅಂತಿಮ ಸಂಸ್ಕಾರ ಪ್ರಾರಂಭಿಸಿದ ಬಳಿಕ ಒಳಗೆ ಸ್ಥಳ ಸಾಕಾಗದೇ ಏರ್ ಫಿಲ್ಟರ್ ಮುಚ್ಚಿಕೊಂಡು ಬಿಟ್ಟಿತ್ತು. ಇದರಿಂದ ಬೆಂಕಿ ಹೊತ್ತಿಕೊಂಡು ಕೆಲವೇ ನಿಮಿಷಗಳಲ್ಲಿ ಶವಾಗಾರವೇ ಸುಟ್ಟು ಹೋಗಿತ್ತು. ಈ ಪ್ರಕರಣದ ಬಳಿಕ ಆಸ್ಟ್ರಿಯಾದಲ್ಲಿ ದಪ್ಪನೆಯ ವ್ಯಕ್ತಿಗಳಿಗಾಗಿಯೇ ಪ್ರತ್ಯೇಕ ಶವಾಗಾರ ಮತ್ತು ದಹನವ್ಯವಸ್ಥೆಯನ್ನು ಮಾಡಲಾಗಿದೆ. Image courtesy

ನರ್ತನಕ್ಕೆ ಅಡ್ಡಿಯಾದ ಸ್ಥೂಲಕಾಯ

ನರ್ತನಕ್ಕೆ ಅಡ್ಡಿಯಾದ ಸ್ಥೂಲಕಾಯ

ಜೋರ್ಡಾನ್ ರ್‍ಯಾಮೋಸ್ ಎಂಬ ಈ ಯುವತಿಗೆ ಒಂದೇ ಪಬ್ ನಲ್ಲಿ ಎರಡು ಭಿನ್ನ ಸಂದರ್ಭಗಳಲ್ಲಿ ಸ್ಥೂಲಕಾಯದ ಕಾರಣ ನರ್ತನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಪಬ್‌ನ ನಿರೂಪಕರು ಈಕೆಯ

ಸ್ಥೂಲಕಾಯವನ್ನು ಗೇಲಿ ಮಾಡುತ್ತಾ ಈಕೆ ನರ್ತಿಸಲು ಸಾಧ್ಯವಿಲ್ಲವೆಂದೂ, ನರ್ತಿಸಿದರೆ ಅಕ್ಕಪಕ್ಕದವರಿಗೆ ಅಪಾಯವಾಗಬಹುದು ಎಂಬ ರೀತಿಯಲ್ಲಿ ಕುಹಕವಾಡಿದ್ದು ಆಕೆಗೆ ಅತೀವ ನೋವನ್ನುಂಟುಮಾಡಿದ್ದುದು ವರದಿಯಾಗಿದೆ. Image courtesy

ವಿವಾಹದ ಗೌನ್ ತೊಡಲೂ ಸ್ಥೂಲಕಾಯ ಅಡ್ಡಿ

ವಿವಾಹದ ಗೌನ್ ತೊಡಲೂ ಸ್ಥೂಲಕಾಯ ಅಡ್ಡಿ

ಕ್ಲೇರ್ ಡಾನೆಲೀ ಎಂಬ ಯುವತಿ ತನ್ನ ಮದುವೆಯ ಕ್ಷಣಗಳನ್ನು ಎದುರುನೋಡುತ್ತಾ ಮುಂದಿನ ದಿನಗಳ ಸುಂದರ ಕನಸು ಕಾಣುತ್ತಾ ಇದ್ದಾಗಲೇ ಆಕೆಯ ವಸ್ತ್ರ ವಿನ್ಯಾಸಕಿ ಆಘಾತಕಾರಿ ವಿಷಯ ತಿಳಿಸಿದಳು. ಅದೇನೆಂದರೆ ಪ್ರತಿ ವಧುವೂ ತನ್ನ ಮದುವೆಗೆ ಧರಿಸುವ ಗೌನ್ ಅಥವಾ ಬಿಳಿಯ ನಿಲವಸ್ತ್ರವನ್ನು ಆಕೆಯ ಸ್ಥೂಲಕಾಯಕ್ಕೆ ತಕ್ಕಂತೆ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದು. Image courtesy

ವಿಮಾನವೇರಲೂ ಅಡ್ಡಿಯಾದ ಸ್ಥೂಲಕಾಯ

ವಿಮಾನವೇರಲೂ ಅಡ್ಡಿಯಾದ ಸ್ಥೂಲಕಾಯ

ವಿಮಾನದಲ್ಲಿ ವ್ಯಕ್ತಿಯ ತೂಕಕ್ಕೆ ಸರಿಯಾಗಿ ಟಿಕೆಟ್ ಕೊಡುವ ವ್ಯವಸ್ಥೆ ಇನ್ನೂ ಬಂದಿಲ್ಲ. ಇಂದಿಗೂ ವ್ಯಕ್ತಿಗೊಂದು ಟೀಕೇಟ್ ಎಂಬ ನಿಯಮವೇ ಜಾರಿಯಲ್ಲಿದೆ. ಇದೇ ಪ್ರಕಾರ ಒಂದು ಟಿಕೆಟ್ ಕೊಂಡು ಮೇ 2012ರಲ್ಲಿ ಸೌಥ್ ವೆಸ್ಟ್ ಎಂಬ ವಾಯುಯಾನ ಸಂಸ್ಥೆಗೆ ಸೇರಿದ ವಿಮಾನವೇರಲು ಬಂದ ಕೆನ್ಲೀ ಟಿಗ್ಗೆಮನ್ ಎಂಬ ಯುವತಿಗೆ ಆಕೆಯ ಸ್ಥೂಲಕಾಯದ ಕಾರಣ ಪ್ರವೇಶ ನಿರಾಕರಿಸಲಾಯಿತು. ಆದರೆ ಈಕೆ ಇದನ್ನೊಂದು ಅವಮಾನವೆಂದು ಪರಿಗಣಿಸದೇ ತನ್ನ ಆತ್ಮಾಭಿಮಾನಕ್ಕೇ ಧಕ್ಕೆ ಎಂಬ ಕಾರಣ ಒಡ್ಡಿ ನ್ಯಾಯಾಲಯದ ಮೆಟ್ಟಿಲೀರಿ ತನಗೆ ಪ್ರವೇಶ ನಿರಾಕರಿಸಿದ ಸಿಬ್ಬಂದಿಯ ನೀರಿಳಿಸಿದ್ದಳು. Image courtesy

X
Desktop Bottom Promotion