For Quick Alerts
ALLOW NOTIFICATIONS  
For Daily Alerts

ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

By Super Admin
|

ಚಿನ್ನದ ಬಗ್ಗೆ ನಿಮಗೆಷ್ಟು ಗೊತ್ತು? ಎಂಬ ಪ್ರಶ್ನೆಗೆ ಕೆಲವರು ನನ್ನ ಚಿನ್ನ ನನ್ನ ಜೀವ, ನನ್ನ ಸಂಗಾತಿ, ನನ್ನ ಉಸಿರು ಎಂದೆಲ್ಲಾ ಉತ್ತರ ನೀಡಬಹುದು. ಆದರೆ ನಾವಿಲ್ಲಿ ಪ್ರಸ್ತಾಪಿಸುತ್ತಿರುವುದು ನಿಮ್ಮ ಮನದನ್ನೆಯನ್ನಲ್ಲ, ಬದಲಿಗೆ ಮನದನ್ನೆಯ ನೆಚ್ಚಿನ ಲೋಹವಾದ ಚಿನ್ನ ಅಥವಾ ಬಂಗಾರವನ್ನು. ಚಿನ್ನ ಎಂದಾಕ್ಷಣ ಎಲ್ಲರ ಹುಬ್ಬು ಮೇಲೇರುವುದು ಸಹಜ. ಏಕೆಂದರೆ ಬಹಳ ಹಿಂದಿನ ಕಾಲದಿಂದಲೇ ಇದೊಂದು ಸಂಪತ್ತು ಎಂದು ಪರಿಗಣಿಸಲ್ಪಟ್ಟಿದೆ. ಸ್ವರ್ಣದ ಒಡೆಯರು ಶ್ರೀಮಂತರು ಹಾಗೂ ತಮ್ಮ ವರ್ಚಸ್ಸು, ಘನತೆ, ಗೌರವ ಮತ್ತು ಪ್ರತಿಷ್ಠೆಯನ್ನು ಪ್ರಕಟಿಸಲು ಬಳಸುತ್ತಾ ಬಂದಿದ್ದಾರೆ.

ಮನುಷ್ಯರು ಮಾತ್ರವಲ್ಲ, ದೇವರ ಚಿತ್ರಗಳಲ್ಲೂ ಚಿನ್ನದ ಆಭರಣಗಳನ್ನು ಕಾಣಬಹುದು. ಮಹಿಳೆಯರಿಗಂತೂ ಚಿನ್ನ ಎಂದರೆ ಸೌಂದರ್ಯ ಹೆಚ್ಚಿಸುವ ಒಡವೆಗಿಂತಲೂ ಸಮಾಜದಲ್ಲಿ ತಮ್ಮ ಸ್ಥಾನಮಾನ ಪ್ರಕಟಿಸುವ ಒಂದು ಸಾಧನವೇ ಆಗಿದೆ. ಮಹಿಳೆಯರ ಮನಗೆಲ್ಲಲು ವಿಶ್ವದ ಅಕ್ಕಸಾಲಿಗರು ಪ್ರತಿದಿನ ನೂತನ ವಿನ್ಯಾಸಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.

ಚಿನ್ನವನ್ನು ಆಭರಣಕ್ಕಿಂತಲೂ ಹೆಚ್ಚಾಗಿ ಒಂದು ರೀತಿಯ ಹೂಡಿಕೆ ಎಂದರೇ ಹೆಚ್ಚು ಸಮಂಜಸ. ಏಕೆಂದರೆ ಯಾವುದೇ ವೇಳೆಯಲ್ಲಿ ಚಿನ್ನವನ್ನು ಮಾರಾಟ ಮಾಡಬಹುದು. ಅಷ್ಟೇ ಏಕೆ, ರಾಷ್ಟ್ರದ ಹಣಕಾಸಿನ ಸಾಮರ್ಥ್ಯವನ್ನೂ ಇದು ಹೊಂದಿರುವ ಸ್ವರ್ಣದ ಮೇಲೆಯೇ ಅಳೆಯಲಾಗುತ್ತದೆ. ಮನುಷ್ಯರು ಬಿಡಿ, ದೇವಸ್ಥಾನಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ಚಿನ್ನ ಸಂಗ್ರಹವಾಗಿದೆ. ನಮಗೆ ಚಿನ್ನದ ವಿಚಾರದಲ್ಲಿ ಯಾಕೆ ಇಷ್ಟೊಂದು ವ್ಯಾಮೋಹ?

ಗೋಲ್ಡ್ ಎಂಬ ಆಂಗ್ಲ ಪದ 'geolu' ಅಥವಾ ಹಳದಿ ಎಂಬ ಪದದಿಂದ ಬಂದಿದೆ. ವಿಶ್ವದ ಚಿನ್ನದ ಒಟ್ಟು ಪ್ರಮಾಣದಲ್ಲಿ ಕೇವಲ 20% ಮಾತ್ರವೇ ಇದುವರೆಗೆ ಭೂಮಿಯಿಂದ ಹೊರತೆಗೆಯಲಾಗಿದ್ದು ಇನ್ನೂ 80% ಭೂಮಿಯಡಿಯಲ್ಲಿಯೇ ಇದೆ. ಇದು ಅತ್ಯಂತ ಆಳದಲ್ಲಿರುವ ಕಾರಣ ಇದು ತೆಗೆಯುವುದು ಕಷ್ಟಕರವೂ, ತೆಗೆದರೆ ಇಂದಿನ ಚಿನ್ನದ ಬೆಲೆಗಿಂತಲೂ ಇದರ ಪರಿಷ್ಕರಣೆಯ ವೆಚ್ಚವೇ ಆಗಿರುವ ಕಾರಣ ಈ ಗಣಿಗಾರಿಕೆ ನಿಧಾನಗೊಂಡಿದೆ. ಕೋಲಾರದ ಗಣಿ ಬಂದ್ ಆಗಿರುವುದೂ ಇದೇ ಕಾರಣಕ್ಕೆ. ಇವೆಲ್ಲಾ ಜನಸಾಮಾನ್ಯರೂ ತಿಳಿದುಕೊಂಡಿರುವ ಮಾಹಿತಿಗಳಾಗಿದ್ದರೆ ಚಿನ್ನದ ಬಗ್ಗೆ ಸಾಮಾನ್ಯರು ತಿಳಿದಿರದ ಹಲವು ಸಂಗತಿಗಳಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಎಂಟು ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಲಿದೆ:

ಚಿನ್ನ ಸವೆಯುತ್ತದೆ

ಚಿನ್ನ ಸವೆಯುತ್ತದೆ

ಯಾವುದೇ ಲೋಹವನ್ನು ಬೇರೊಂದು ಮೇಲ್ಮೈ ಮೇಲೆ ಉಜ್ಜಿದರೆ ಸವೆಯುತ್ತದೆ. ಅಂತೆಯೇ ಚಿನ್ನವನ್ನು ಧರಿಸಿಕೊಂಡಾಗ ದೇಹದ ಚಲನೆಯ ಮೂಲಕ ಚಿನ್ನ ಚರ್ಮಕ್ಕೆ ಉಜ್ಜೀ ಉಜ್ಜೀ ಸವೆಯುತ್ತದೆ. ಎಷ್ಟು ಎಂದರೆ ವರ್ಷಕ್ಕೆ ಆರು ಮಿಲಿಗ್ರಾಮಿನಷ್ಟು. ಆದ್ದರಿಂದ ಸದಾ ತೊಟ್ಟಿರುವ ಆಭರಣಗಳನ್ನು ಕೆಲವರ್ಷಗಳ ಬಳಿಕ ತೂಗಿ ನೋಡಿದರೆ ಕೊಂಚ ಕಡಿಮೆಯಾಗಿರುವುದು ಕಂಡುಬರುತ್ತದೆ.

ಚಿನ್ನ ಔಷಧಿಯ ರೂಪದಲ್ಲಿಯೂ ಬಳಸಲ್ಪಡುತ್ತದೆ

ಚಿನ್ನ ಔಷಧಿಯ ರೂಪದಲ್ಲಿಯೂ ಬಳಸಲ್ಪಡುತ್ತದೆ

rheumatoid arthritis ಅಥವಾ ಸಂಧಿವಾತಕ್ಕೆ ಉತ್ತಮವಾದ ಔಷಧಿ ಎಂದರೆ ಚಿನ್ನ. ಚಿನ್ನವನ್ನು ದ್ರವೀಕರಿಸಿ ರೋಗಿಯ ನರಗಳಿಗೆ ಚುಚ್ಚುವ ಮೂಲಕ ಸಂಧಿವಾತ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆ 70%ರಷ್ಟಿದೆ.

ಇದೊಂದು ದುರ್ಲಭ ಲೋಹ

ಇದೊಂದು ದುರ್ಲಭ ಲೋಹ

ಭೂಮಿಯಲ್ಲಿ ಚಿನ್ನದ ಪ್ರಮಾಣ ಅತ್ಯಂತ ಕಡಿಮೆ ಇದೆ. ಅಂದರೆ ಗಣಿಯ ಮಣ್ಣಿನಲ್ಲಿ ಒಂದು ಟನ್ ಚಿನ್ನದ ಅದಿರನ್ನು ಸೋಸಿ ಸಂಸ್ಕರಿಸಿ ಸಿಗುವ ಚಿನ್ನದ ಪ್ರಮಾಣ ಒಂದು ಗ್ರಾಂ. ಇದಕ್ಕೇ ಚಿನ್ನಕ್ಕೆ ಇಷ್ಟೊಂದು ಬೆಲೆ. ವಜ್ರದ ಗಣಿಯಲ್ಲಿ ಐದು ಕ್ಯಾರೆಟ್ ನ ವಜ್ರ ಸಿಗುವುದಕ್ಕಿಂತಲೂ ಒಂದು ಔನ್ಸ್ ಚಿನ್ನ ಒಂದೇ ಕಡೆ ಸಿಗುವ ಸಾಧ್ಯತೆ ಅತ್ಯಂತ ಕಡಿಮೆ.

ಕಬ್ಬಿಣಕ್ಕಿಂತಲೂ ಚಿನ್ನವೇ ಭಾರ!

ಕಬ್ಬಿಣಕ್ಕಿಂತಲೂ ಚಿನ್ನವೇ ಭಾರ!

ಚಿನ್ನದ ಲೋಲಾಕು ಹಾಕಿದ ಬಳಿಕ ಇದು ಜಗ್ಗಿದಂತಾಗುವ ಅನುಭವವನ್ನು ಮಹಿಳೆಯರು ತಿಳಿಸಬಹುದು. ಏಕೆಂದು ಗೊತ್ತೇ? ಏಕೆಂದರೆ ಇದು ಕಬ್ಬಿಣಕ್ಕಿಂತಲೂ ಭಾರವಾದ ಲೋಹ. ಅಂದರೆ ಇದರ ಸಾಂದ್ರತೆ ಕಬ್ಬಿಣಕ್ಕಿಂತಲೂ ಹೆಚ್ಚು.

ಕಬ್ಬಿಣಕ್ಕಿಂತಲೂ ಚಿನ್ನವೇ ಭಾರ!

ಕಬ್ಬಿಣಕ್ಕಿಂತಲೂ ಚಿನ್ನವೇ ಭಾರ!

ಅಂದರೆ ಒಂದು ಘನ ಮೀ (ಅಂದರೆ ಒಂದು ಮೀಟರ್ ಎತ್ತರ, ಒಂದು ಮೀಟರ್ ಅಗಲ ಮತ್ತು ಒಂದು ಮೀಟರ್ ಎತ್ತರ) ಇರುವ ಘನಾಕೃತಿ ಕಬ್ಬಿಣದ್ದಾದರೆ 7,850 ಕೇಜಿ ತೂಗುತ್ತದೆ. ಅದೇ ಬಂಗಾರದ್ದಾದರೆ 19,320 ಕೇಜಿ ತೂಗುತ್ತದೆ. ಅಂದರೆ ಸರಿಸುಮಾರು ಎರಡೂವರೆ ಪಟ್ಟು. ವಿಶ್ವದಲ್ಲಿ ಲಭ್ಯವಿರುವ ಅತಿ ದೊಡ್ಡ ಗಾತ್ರದ ಚಿನ್ನದ ಗಟ್ಟಿ ಎಂದರೆ 250 kg.

ಸಮುದ್ರದಾಳದಲ್ಲಿದೆ ಟನ್ನುಗಟ್ಟಲೇ ಚಿನ್ನ!

ಸಮುದ್ರದಾಳದಲ್ಲಿದೆ ಟನ್ನುಗಟ್ಟಲೇ ಚಿನ್ನ!

ಒಂದು ಸಮೀಕ್ಷೆಯ ಪ್ರಕಾರ ಸಮುದ್ರದ ನೆಲದಲ್ಲಿ ಪ್ರತಿ ಚದರ ಮೈಲಿಯಲ್ಲಿ ಇಪ್ಪತ್ತೈದು ಟನ್ ಚಿನ್ನವಿದೆ. ಎಲ್ಲವನ್ನೂ ಒಟ್ಟುಗೂಡಿಸಿದರೆ ಇದು 10 ಬಿಲಿಯನ್ ಕೇಜಿಗಳಾಗಬಹುದು! ಆದರೆ ಇದನ್ನು ಸಂಗ್ರಹಿಸುವುದು ಬಹಳ ಕಷ್ಟಕರ ಮತ್ತು ಸಂಸ್ಕರಣೆ ಚಿನ್ನಕ್ಕಿಂತಲೂ ದುಬಾರಿ.

ಚಿನ್ನವನ್ನು ತಿನ್ನಲೂಬಹುದು...!!

ಚಿನ್ನವನ್ನು ತಿನ್ನಲೂಬಹುದು...!!

ಇತ್ತೀಚೆಗೆ ಬೆಂಗಳೂರಿನಲ್ಲಿಯೇ ಚಿನ್ನದ ತೆಳು ಹಾಳೆಯನ್ನು ಹೊದಿಸಿದ ಮಸಾಲೆ ದೋಸೆ ಲಭ್ಯವಿದೆ. ಅಂದರೆ ಚಿನ್ನವನ್ನು ತಿನ್ನಬಹುದೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತದೆ. ವಾಸ್ತವವಾಗಿ ಚಿನ್ನವನ್ನು ನಮ್ಮ ಜೀರ್ಣಾಂಗಗಳು ಜೀರ್ಣಿಸಿಕೊಳ್ಳುತ್ತವೆ. (ಇದೇ ಕಾರಣಕ್ಕೆ ಚಿನ್ನದ ಕಳ್ಳಸಾಗಣೆದಾರರು ಚಿನ್ನವನ್ನು ನೇರವಾಗಿ ನುಂಗದೇ ಹೊಟ್ಟೆಯಲ್ಲಿ ಕರಗಲಾರದ ಪ್ಲಾಸ್ಟಿಕ್ಕಿನ ಒಳಗೆ ತುಂಬಿಸಿ ನುಂಗುತ್ತಾರೆ). ಅತಿ ಐಷಾರಾಮಿ ಹೋಟೆಲುಗಳಲ್ಲಿ ಚಿನ್ನದ ಅತಿ ಚಿಕ್ಕ ಫಲಕಗಳಿರುವ ನೀರು ಸಹಾ ವಿಶೇಷ ಅತಿಥಿಗಳಿಗೆ ಲಭ್ಯವಿದೆ.

ಚಿನ್ನ ಜಗತ್ತಿನ ಎಲ್ಲಾ ಕಡೆಗಳಲ್ಲಿ ಸಿಗುತ್ತದೆ

ಚಿನ್ನ ಜಗತ್ತಿನ ಎಲ್ಲಾ ಕಡೆಗಳಲ್ಲಿ ಸಿಗುತ್ತದೆ

ಈ ಜಗತ್ತಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಒಂದೆಡೆ ಇದ್ದಂತೆ ಇನ್ನೊಂದೆಡೆ ಇಲ್ಲ. ಆದರೆ ಚಿನ್ನ ಮಾತ್ರ ಪ್ರತಿ ಖಂಡದಲ್ಲಿಯೂ ಇದೆ. ಅತ್ಯಂತ ಶೀತಲ ಅಂಟಾರ್ಟಿಕದಲ್ಲಿಯೂ ಚಿನ್ನದ ನಿಕ್ಷೇಪವಿದೆ.

ಚಿನ್ನ ಜಗತ್ತಿನ ಎಲ್ಲಾ ಕಡೆಗಳಲ್ಲಿ ಸಿಗುತ್ತದೆ

ಚಿನ್ನ ಜಗತ್ತಿನ ಎಲ್ಲಾ ಕಡೆಗಳಲ್ಲಿ ಸಿಗುತ್ತದೆ

ಅಲ್ಲಿನ ಗುಡ್ಡಗಳಲ್ಲಿ ಕೊಳವೆ ತೂರಿಸಿ ಆಳದಲ್ಲಿದ್ದ ಮಣ್ಣನ್ನು ವಿಶ್ಲೇಷಿಸಿದ ವಿಜ್ಞಾನಿಗಳಿಗೆ ಈ ಮಣ್ಣಿನಲ್ಲಿ ಚಿನ್ನ, ಬೆಳ್ಳಿ, ಕಲ್ಲಿದ್ದಲು ಮತ್ತು ಹಿಂದೆಂದೋ ಇದ್ದ ಪೆಟ್ರೋಲಿಯಂ ಅವಶೇಷಗಳು ಪತ್ತೆಯಾಗಿವೆ.

ಚಿನ್ನ ಭೂಮಿಯ ಸ್ವಂತ ಲೋಹವಲ್ಲ

ಚಿನ್ನ ಭೂಮಿಯ ಸ್ವಂತ ಲೋಹವಲ್ಲ

ಈ ಮಾಹಿತಿ ನಿಮ್ಮನ್ನು ಬೆಕ್ಕಸ ಬೆರಗಾಗಿಸಬಹುದು. ಏನೆಂದರೆ ಚಿನ್ನ ವಾಸ್ತವವಾಗಿ ಭೂಮಿಯ ಲೋಹವೇ ಅಲ್ಲ, ಸುಮಾರು ಇನ್ನೂರು ಮಿಲಿಯನ್ ವರ್ಷಗಳ ಹಿಂದೆ ಭೂಮಿಯನ್ನು ಅಪ್ಪಳಿಸಿದ ಕ್ಷುದ್ರಗ್ರಹ ಮತ್ತು ಉಲ್ಕೆಗಳಲ್ಲಿದ್ದ ಚಿನ್ನವೆಲ್ಲಾ ಭೂಮಿಯಾದ್ಯಂತ ಚೆಲ್ಲಿದೆ. ಇದೇ ಕಾರಣಕ್ಕೆ ಚಿನ್ನ ಅತಿ ಸೂಕ್ಷ್ಮ ಕಣಗಳ ರೂಪದಲ್ಲಿ ಸಿಗುತ್ತದೆ.

ಚಿನ್ನ ಭೂಮಿಯ ಸ್ವಂತ ಲೋಹವಲ್ಲ

ಚಿನ್ನ ಭೂಮಿಯ ಸ್ವಂತ ಲೋಹವಲ್ಲ

ಚಿನ್ನದ ಬಗ್ಗೆ ಕೆದಕಿದಷ್ಟೂ ಹೆಚ್ಚು ಕುತೂಹಲಕಾರಿ ಮಾಹಿತಿಗಳು ಸಿಗುತ್ತಾ ಹೋಗುತ್ತವೆ. ನಿಮ್ಮ ದೇಹದ ರಕ್ತದಲ್ಲಿಯೂ 0.2ಮಿಲಿಗ್ರಾಂ ಚಿನ್ನವಿದೆ ಎಂದು ನಿಮಗೆ ಗೊತ್ತಿತ್ತೇ? (ಈ ಲೆಕ್ಕಾಚಾರದಲ್ಲಿ ಎಂಟು ಗ್ರಾಮಿನ ಒಂದು ನಾಣ್ಯ ತಯಾರಿಸಲು ನಲವತ್ತು ಸಾವಿರ ಜನರ ರಕ್ತ ಬೇಕು)

English summary

Strange And Interesting Facts About Gold

Gold! The word is enough to bring glitter to your eyes, specially if you're a lady. Throughout the world, this metal is widely accepted for making ornaments. It stands for wealth, luxury and glamour. How wonderful you will look with a gorgeous neck-piece! An elegant pendant and earrings can also enhance your beauty more than ever.
X
Desktop Bottom Promotion