For Quick Alerts
ALLOW NOTIFICATIONS  
For Daily Alerts

ವ್ಯಕ್ತಿಯ ವ್ಯಕ್ತಿತ್ವ ತಿಳಿಯಲು ಮಲಗುವ ಭಂಗಿ ಸಾಕು!

By Manu
|

ರಾತ್ರಿ ಮಲಗುವಾಗ ಒಂದು ಭಂಗಿಯಲ್ಲಿ ಮಲಗಿದ್ದರೂ ಬೆಳಿಗ್ಗೆದ್ದಾಗ ನಮ್ಮ ಶರೀರ ಬೇರೆಯೇ ಭಂಗಿಯಲ್ಲಿರಲು ನಾವು ನಿದ್ದೆಯಲ್ಲಿ ಆಗಾಗ ಪವಡಿಸುವುದೇ ಕಾರಣ. ಕೆಲವರು ಅತಿ ಕಡಿಮೆ ಪವಡಿಸುತ್ತಾರೆ, ಅಂದರೆ ಬೆಳಿಗ್ಗೆದ್ದಾಗ ಸರಿಸುಮಾರು ರಾತ್ರಿ ಮಲಗಿದ್ದ ಭಂಗಿಯಲ್ಲಿಯೇ ಇರುತ್ತಾರೆ. ಕೆಲವರು ಮಾತ್ರ ರಾತ್ರಿ ಇಡಿಯ ಮಲಗುವ ಕೋಣೆಯ ಮೂಲೆ ಮೂಲೆಗೂ ಉರುಳಾಡಿರುತ್ತಾರೆ.

ಆದರೆ ನಿಮ್ಮ ಮಲಗುವ ಶೈಲಿ ಅಥವಾ ಭಂಗಿ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂಬುದು ನಿಮಗೆ ಗೊತ್ತಿತ್ತೇ? ವಿಜ್ಞಾನಿಗಳ ಪ್ರಕಾರ ನೀವು ಸ್ವಾಭಾವಿಕವಾಗಿ ನಿತ್ಯವೂ ಮಲಗುವ ಶೈಲಿ ಅಥವಾ ಭಂಗಿ ವ್ಯಕ್ತಿಯ ಬಗ್ಗೆ ಹಲವು ವಿವರಗಳನ್ನು ತಿಳಿಸುತ್ತದೆ. ಎಡ ಮಗ್ಗುಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ನಮ್ಮ ದೇಹದ ಚಲನೆಗಳ ಮೂಲಕ ನಾವು ಸಂವಹನವನ್ನು ಹೆಚ್ಚು ಪರಿಣಾಮಕಾರಿ ಮಾಡುತ್ತೇವೆ. ಅಂತೆಯೇ ನಮ್ಮ ಸುಪ್ತ ಪ್ರಜ್ಞೆ ನಿದ್ದೆಯಲ್ಲಿದ್ದಾಗ ನಮ್ಮ ದೇಹವನ್ನು ಒಂದು ನಿಯಮಕ್ಕೆ ಅನುಗುಣವಾಗಿಯೇ ಚಲಿಸುವಂತೆ ಮಾಡುತ್ತದೆ. ಈ ಚಲನೆಯ ನಿಯಮವನ್ನು ಕೊಂಚ ಅರಿತರೆ ವ್ಯಕ್ತಿಯ ಬಗ್ಗೆ ಹಲವು ವಿವರಗಳನ್ನು ಪಡೆಯಬಹುದು. ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ... ಯಾವ ರೀತಿ ಮಲಗುವ ಭಂಗಿ ಆರೋಗ್ಯಕ್ಕೆ ಉತ್ತಮವಾದದ್ದು?

ಭ್ರೂಣದ ಭಂಗಿ

ಭ್ರೂಣದ ಭಂಗಿ

ತಾಯಿಯ ಗರ್ಭದಲ್ಲಿ ಮಗು ಮುದುಡಿದಂತೆ ಎಡಬದಿಗೆ ಅಥವಾ ಬಲಬದಿಗೆ ಮುದುರಿಕೊಂಡು ಮಲಗುವ ಭಂಗಿ ಹೊರಗಿನಿಂದ ದೃಢವಾಗಿದ್ದರೂ ಒಳಗಿನಿಂದ ಹೂವಿನಂತಹ ಮನಸ್ಸಿನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ವ್ಯಕ್ತಿಗಳು ಹೊಸಬರೊಂದಿಗೆ ಪರಿಚಯ ಮಾಡಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಮಹಿಳೆಯರೇ ಹೆಚ್ಚಾಗಿ ಈ ಭಂಗಿಯಲ್ಲಿ ಮಲಗುತ್ತಾರೆ.

ಮರದ ಕೊರಡಿನಂತೆ

ಮರದ ಕೊರಡಿನಂತೆ

ಈ ಭಂಗಿಯಲ್ಲಿ ವ್ಯಕ್ತಿ ನೇರವಾಗಿ ಒಂದು ಪಾರ್ಶ್ವದಲ್ಲಿ ಮಲಗಿದ್ದು ಎರಡೂ ಕೈಗಳನ್ನು ಸೊಂಟದ ಪಕ್ಕ ಇರುವಂತೆ ಮಲಗುತ್ತಾರೆ. ಈ ಭಂಗಿಯಲ್ಲಿ ಮಲಗುವವರು ಸದಾ ಗುಂಪಿನಲ್ಲಿರುವುದನ್ನು ಇಷ್ಟಪಡುತ್ತಾರೆ. ಏಕಾಂತವನ್ನು ಇವರು ಸಹಿಸುವುದಿಲ್ಲ. ಇವರು ಯಾರನ್ನೂ ಸುಲಭವಾಗಿ ನಂಬಿಬಿಡುತ್ತಾರೆ ಹಾಗೂ ಕೆಲವೊಮ್ಮೆ ನಯವಂಚಕರೂ ಆಗಿರುತ್ತಾರೆ.

ಒಂದು ಪಾರ್ಶ್ವದಲ್ಲಿ ಮಲಗಿ ಮೊಣಕಾಲು ಮಡಚಿರುವವರು

ಒಂದು ಪಾರ್ಶ್ವದಲ್ಲಿ ಮಲಗಿ ಮೊಣಕಾಲು ಮಡಚಿರುವವರು

ಈ ಭಂಗಿಯಲ್ಲಿ ಮಲಗುವವರು ಸಾಮಾನ್ಯವಾಗಿ ನಿರಾಶಾವಾದಿಗಳಾಗಿದ್ದು ತಮಗೆದುರಾದ ಯಾವುದೇ ವಿಷಯದಲ್ಲಿ ಕೊಂಕು ತೆಗೆಯುವವರಾಗಿರುತ್ತಾರೆ. ಚಿಕ್ಕ ಪುಟ್ಟ ವಿಷಯಕ್ಕೂ ವಿಪರೀತವಾಗಿ ಹೆದರುವುದು ಮತ್ತು ಚಿಕ್ಕ ಚಿಕ್ಕ ವಿಷಯಕ್ಕೂ ಅನಗತ್ಯವಾಗಿ ಅತಿಯಾದ ಸಂಭ್ರಮ ಅಥವಾ ಇತರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇವರು ಮನಸ್ಸನ್ನು ಸದಾ ದುಗುಡದಲ್ಲಿರಿಸಿಕೊಂಡಿದ್ದು ಇವರು ನಿರಾಳರಾಗುವುದು ಆರೋಗ್ಯದ ದೃಷ್ಟಿಯಿಂದ ಅತಿ ಅಗತ್ಯವಾಗಿದೆ.

ದಿಂಬು ತಬ್ಬಿಕೊಂಡಂತೆ ಅಡ್ಡಲಾಗಿ ಮಲಗುವುದು

ದಿಂಬು ತಬ್ಬಿಕೊಂಡಂತೆ ಅಡ್ಡಲಾಗಿ ಮಲಗುವುದು

ಈ ಭಂಗಿಯಲ್ಲಿ ಮಲಗುವವರು ಸಾಮಾನ್ಯವಾಗಿ ಅಡ್ಡಲಾಗಿ ಮಲಗಿ ತಮ್ಮ ಕೈಗಳನ್ನು ಪಕ್ಕದಲ್ಲಿ ಯಾರನ್ನೋ ತಬ್ಬಿ ಹಿಡಿದಂತೆ ಮಲಗಿರುತ್ತಾರೆ. ಅಂದರೆ ಎರಡೂ ಕೈಗಳೂ ಒಂದೇ ಬದಿಯಲ್ಲಿದ್ದು ಒಂದು ಕೈ ಮೇಲೆ ಮೈಭಾರ ಹಾಕಿರುತ್ತಾರೆ.

ದಿಂಬು ತಬ್ಬಿಕೊಂಡಂತೆ ಅಡ್ಡಲಾಗಿ ಮಲಗುವುದು

ದಿಂಬು ತಬ್ಬಿಕೊಂಡಂತೆ ಅಡ್ಡಲಾಗಿ ಮಲಗುವುದು

ಇವರು ಸಾಮಾನ್ಯವಾಗಿ ಅನುಮಾನ ಪ್ರವೃತ್ತಿಯುಳ್ಳವರಾಗಿದ್ದು ಸದಾ ಇತರರ ಬಗ್ಗೆ ಋಣಾತ್ಮಕ ಧೋರಣೆಯನ್ನೇ ಪರಿಗಣಿಸುವವರಾಗಿರುತ್ತಾರೆ. ಆದರೆ ಇನ್ನೊಂದು ಕಡೆಯಲ್ಲಿ ಇವರು ಯಾವುದೇ ನಿರ್ಧಾರವನ್ನು ಅಪಾರವಾದ ಯೋಚನೆಯ ಬಳಿಕವೇ ಕೈಗೊಳ್ಳುವವರಾಗಿದ್ದು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಬದಲಿಸಲು ಇಚ್ಛಿಸುವುದಿಲ್ಲ.

ಎರಡೂ ಕೈಗಳನ್ನು ಕಿವಿಯ ಹತ್ತಿರ ಇಡುವ ಭಂಗಿ

ಎರಡೂ ಕೈಗಳನ್ನು ಕಿವಿಯ ಹತ್ತಿರ ಇಡುವ ಭಂಗಿ

ಇವರು ಹೊಟ್ಟೆಯ ಮೇಲೆ ಮಲಗಿ ಮುಖದ ಒಂದು ಭಾಗವನ್ನು ದಿಂಬಿನ ಮೇಲಿರಿಸಿ ಇನ್ನೊಂದು ಬದಿಯ ಹೊಳ್ಳೆಯಿಂದ ಉಸಿರಾಡುತ್ತಾ ಎರಡೂ ಕೈಗಳನ್ನು ಮಡಚಿ ಹಸ್ತಗಳು ಕಿವಿಯ ಮೇಲೆ ಬರುವಂತೆ ದಿಂಬಿನ ಮೇಲಿಸಿರುವ ಭಂಗಿಯಲ್ಲಿ ಮಲಗುತ್ತಾರೆ.

ಎರಡೂ ಕೈಗಳನ್ನು ಕಿವಿಯ ಹತ್ತಿರ ಇಡುವ ಭಂಗಿ

ಎರಡೂ ಕೈಗಳನ್ನು ಕಿವಿಯ ಹತ್ತಿರ ಇಡುವ ಭಂಗಿ

free faller ಎಂದು ಕರೆಯಲ್ಪಡುವ ಈ ಭಂಗಿಯ ಜನರು ಸಾಮಾನ್ಯವಾಗಿ ಸಂಘಜೀವಿಗಳಾಗಿದ್ದು ದೊಡ್ಡ ಕಾರ್ಯವನ್ನು ಸಂಭವಿಸಲು ತಮ್ಮ ಸಂಪೂರ್ಣ ಸಹಕಾರ ನೀಡುವವರಾಗಿರುತ್ತಾರೆ. ಆದರೆ ಒಂಟಿಯಾಗಿದ್ದಾಗ ಇವರ ವ್ಯಕ್ತಿತ್ವ ಕ್ಷಣಕ್ಷಣಕ್ಕೂ ಬದಲಾಗುತ್ತಾ ಇರುತ್ತದೆ. ಇವರಿಗೆ ತಮ್ಮ ಬೆನ್ನ ಹಿಂದೆ ಯಾರಾದರೂ ವಿರುದ್ಧ ಮಾತನಾಡುವುದು ಸುತಾರಾಂ ಇಷ್ಟವಿಲ್ಲ. ಬದಲಿಗೆ ಇವರು ಜೀವನದಲ್ಲಿ ಸದಾ ಬದಲಾವಣೆಗಳನ್ನು ಸ್ವಾಗತಿಸುವವರಾಗಿದ್ದಾರೆ.

ಸೈನಿಕನ ಭಂಗಿ

ಸೈನಿಕನ ಭಂಗಿ

Soldier ಅಥವಾ ಸೈನಿಕನ ರೂಪದಲ್ಲಿ ಮಲಗುವ ಭಂಗಿಯಲ್ಲಿ ವ್ಯಕ್ತಿ ತನ್ನ ಬೆನ್ನ ಮೇಲೆ ಮಲಗಿ ಕೈಗಳನ್ನು ಎರಡೂ ಪಕ್ಕದಲ್ಲಿ ಕೊಂಚವೇ ಅಗಲಿಸಿ ಇಟ್ಟಿರುತ್ತಾರೆ. ಸರಿಸುಮಾರು ಸೈನಿಕರು ಅಟೆನ್ಷನ್ ಭಂಗಿಯಲ್ಲಿರುವ ಹಾಗೆ. ಈ ವ್ಯಕ್ತಿಗಳು ಸರಳ ವ್ಯಕ್ತಿತ್ವದವರಾಗಿದ್ದು ಜೀವನದಲ್ಲಿ ಅಲ್ಪತೃಪ್ತರಾಗಿರುತ್ತಾರೆ. ಶಾಂತ ಸ್ವಭಾವ ಹಾಗೂ ಹೆಚ್ಚಿನವರೊಂದಿಗೆ ಬೆರೆಯದೇ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಾರೆ.

ಸೈನಿಕನ ಭಂಗಿ

ಸೈನಿಕನ ಭಂಗಿ

ಬೆನ್ನ ಮೇಲೆ ಮಲಗಿದ್ದು ಎರಡೂ ಕೈಗಳನ್ನು ಕತ್ತರಿಯಾಗಿಸಿ ತಲೆಕೆಳಗೆ ದಿಂಬಾಗಿಸುವ ಭಂಗಿ ಈ ಭಂಗಿಯಲ್ಲಿ ಮಲಗುವ ವ್ಯಕ್ತಿಗಳು ಸಾಮಾನ್ಯವಾಗಿ ಚಟುವಟಿಕೆಯವರೂ ಅತೀವ ಬುದ್ಧಿವಂತರೂ ಮತ್ತು ಸದಾ ಹೊಸ ಹೊಸ ವಿಷಯಗಳನ್ನು ಕಲಿಯುವ ಹಂಬಲವುಳ್ಳವರೂ ಆಗಿದ್ದಾರೆ. ಇವರು ತಮ್ಮ ವಿಶ್ವಾಸವಲಯದಲ್ಲಿ ಇರಬಯಸುವ ವ್ಯಕ್ತಿಗಳನ್ನು ಅತೀವ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಾರೆ ಮತ್ತು ಅತೀವ ಹೆಚ್ಚಿನ ಕಾಳಜಿಯನ್ನು ತೋರುತ್ತಾರೆ.

ಸಮುದ್ರಸಕ್ಷತ್ರದ ಭಂಗಿ

ಸಮುದ್ರಸಕ್ಷತ್ರದ ಭಂಗಿ

ಬೆನ್ನ ಮೇಲೆ ಮಲಗಿ ಎರಡೂ ಕಾಲುಗಳನ್ನು ಕೊಂಚ ಅಗಲಿಸಿ ಹಾಗೂ ಕೈಗಳನ್ನೂ ಭುಜದ ಮೇಲೆ ದೂರವಿರುವಂತೆ ಅಗಲಿಸಿ ಮಲಗುವವರು ದೂರದಿಂದ ಒಂದು ಪಂಚಬಾಹು ಸಮುದ್ರನಕ್ಷತ್ರದಂತೆ ಕಾಣುವುದರಿಂದ ಈ ಹೆಸರು ಬಂದಿದೆ. ಇವರು ಸಾಮಾವ್ಯವಾಗಿ ವಿಶಾಲ ಮನಸ್ಸಿನವರಾಗಿದ್ದು ಸುಲಭವಾಗಿ ಎಲ್ಲರೊಂದಿಗೂ ಹೊಂದಿಕೊಳ್ಳುತ್ತಾರೆ.

ಸಮುದ್ರಸಕ್ಷತ್ರದ ಭಂಗಿ

ಸಮುದ್ರಸಕ್ಷತ್ರದ ಭಂಗಿ

ಎಲ್ಲರೊಂದಿಗೂ ಮುಕ್ತವಾಗಿ ಮತ್ತು ಸುಲಲಿತವಾಗಿ ಮಾತನಾಡುವ ಇವರು ಎಂದಿಗೂ ಆಕರ್ಷಣೆಯ ಕೇಂದ್ರವಾಗಲು ಬಯಸುವುದಿಲ್ಲ. ಇವರು ಎದುರಿನವರು ಹೇಳುವುದನ್ನು ಗಮನವಿಟ್ಟು ಕೇಳುವವರಾಗಿದ್ದು ಅಗತ್ಯವಿರುವವರಿಗೆ ತಮ್ಮಿಂದಾಗುವ ಗರಿಷ್ಠ ಸಹಾಯವನ್ನು ಮಾಡುವವರಾಗಿರುತ್ತಾರೆ.

English summary

Sleeping Patterns Which Describe Your Personality

Sleeping patterns describe your personality as the sleeping position gives the gist of your personality. According to scientists, the sleeping position of a person provides the detail of the person. We all know our body language in the conscious level so it is equally important to know yourself even in the subconscious mind.
X
Desktop Bottom Promotion