For Quick Alerts
ALLOW NOTIFICATIONS  
For Daily Alerts

'ಯಶಸ್ಸು, ಸಮೃದ್ಧಿ, ಏಳಿಗೆಗಾಗಿ'-ಈ ಸಿಂಪಲ್ ಟಿಪ್ಸ್ ಅನುಸರಿಸಿ

By Manu
|

ಜೀವನದಲ್ಲಿ ಹಲವಾರು ಕಷ್ಟಗಳು, ತೊಡಕುಗಳು ಎದುರಾಗುತ್ತಲೇ ಇರುತ್ತವೆ. ನಮ್ಮ ಮಕ್ಕಳಿಗೆ ಈ ತೊಂದರೆಗಳು ಬಾಧಿಸದಿರಲಿ ಎಂದು ಪ್ರತಿ ತಂದೆತಾಯಿಯರೂ ಬಯಸುತ್ತಾರೆ. ಎಲ್ಲೆಡೆಯೂ ಮಕ್ಕಳೊಂದಿಗೆ ಪಾಲಕರಿರುವುದು ಸಾಧ್ಯವಿಲ್ಲವಲ್ಲ, ಹಾಗಾಗಿ ದೇವರ ಮೇಲೆ ಭಾರ ಹಾಕಿ ಮಕ್ಕಳನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

ಅಂತೆಯೇ ಜೀವನದಲ್ಲಿ ಸಮೃದ್ಧಿ ಏಳ್ಗೆ, ಯಶಸ್ಸು, ಉನ್ನತಿ ಮೊದಲಾವುಗಳಿಗೆ ಯಾವುದೇ ತೊಡಕುಗಳು ಉಂಟಾಗದಂತೆ ಮತ್ತು ಎದುರಾದರೆ ಇದನ್ನು ಸಮರ್ಥವಾಗಿ ನಿವಾರಿಸಲು ನಮ್ಮ ಧರ್ಮದಲ್ಲಿ ಹಲವಾರು ಪಟ್ಟುಗಳಿವೆ. ಕನ್ನಡದಲ್ಲಿ ಇದಕ್ಕೆ ತೋಡು ಎಂದು ಕರೆಯುತ್ತಾರೆ. ಬಹಳ ಪುರಾತನವಾದ ಈ ವಿಧಾನಗಳಿಗೆ ವೇದಗಳಲ್ಲಿ ತೋತ್ಕೆ (totke) ಎಂದು ಕರೆಯಲಾಗಿದೆ. ಮನೆಯ ವಾಸ್ತು ಹೀಗಿದ್ದರೆ-ಮನೆಯಲ್ಲಿ 'ಲಕ್ಷ್ಮಿ' ಸದಾ ನೆಲೆಸುವಳು....

ಪರಂಪರಾಗತವಾಗಿ ನಡೆದುಬಂದಿರುವ ಈ ಪದ್ಧತಿಗಳನ್ನು ಇಲ್ಲಿ ಉದಾಹರಿಸಿದ್ದು ಇದನ್ನು ಪೂರ್ಣನಂಬಿಕೆಯಿಂದ ಆಚರಿಸಿದರೆ ಜೀವನದಲ್ಲಿ ಎದುರಾಗುವ ಕಂಟಕಗಳು ಹಾಗೇ ಕರಗಿ ಹೋಗುತ್ತವೆ. ಬನ್ನಿ, ಕೆಲವು ಸಾಮಾನ್ಯವಾದುದನ್ನು ಈಗ ನೋಡೋಣ....

ನಿಮ್ಮ ಮಗಳಿಗಾಗಿ

ನಿಮ್ಮ ಮಗಳಿಗಾಗಿ

ಮದುವೆಯಾಗಿ ತನ್ನ ಗಂಡನ ಮನೆಗೆ ಹೊರಟಿರುವ ಮಗಳಿಗಾಗಿ ಹೀಗೆ ಮಾಡಿ: ಒಂದು ದೊಡ್ಡ ಲೋಟ ಅಥವಾ ಜಗ್‌ನಲ್ಲಿ ತುಂಬಾ ನೀರು ತುಂಬಿಸಿ ಇದರಲ್ಲಿ ಕೊಂಚ ಅರಿಶಿನ ಪುಡಿ ಬೆರೆಸಿ. ಈ ನೀರನ್ನು ನಿಮ್ಮ ಮಗಳ ಸುತ್ತ ಏಳು ಸುತ್ತು ಸುತ್ತಿ ನಿವಾಳಿಸಿ ಈ ನೀರನ್ನು ದೂರ ಎಸೆದು ಬಿಡಿ.

ನಿಮ್ಮ ಮಗಳಿಗಾಗಿ

ನಿಮ್ಮ ಮಗಳಿಗಾಗಿ

ಇದರಿಂದ ಆಕೆಯ ವೈವಾಹಿಕ ಜೀವನದಲ್ಲಿ ಮುಂದೆ ಎದುರಾಗುವ ಎಲ್ಲಾ ಕಂಟಕಗಳು ಇಲ್ಲವಾಗುತ್ತವೆ ಹಾಗೂ ಆಕೆಯ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

ಪರೀಕ್ಷೆ ಎದುರಿಸುವ ಸಮಯದಲ್ಲಿ

ಪರೀಕ್ಷೆ ಎದುರಿಸುವ ಸಮಯದಲ್ಲಿ

ನಿಮ್ಮ ಮನೆಯಲ್ಲಿ ಯಾರೇ ಆಗಲಿ ಪರೀಕ್ಷೆಯನ್ನು ಅಥವಾ ಸಂದರ್ಶನವನ್ನು ಎದುರಿಸಲು ಹೊರಟಾಗ, ಅತನ/ಆಕೆಯ ಮೇಲೆ ಕೆಲವು ಹಸಿರು ಬೇಳೆಯ ಕಾಳುಗಳನ್ನು ಎರಚಿ. ಆತ/ಆಕೆ ಮನೆಯಿಂದ ಹೊರಹೋದ ಬಳಿಕ ಈ ಕಾಳುಗಳನ್ನು ಒಂದೂ ಬಿಡದಂತೆ ಗುಡಿಸಿ ಮನೆಯಿಂದ ಹೊರಗೆಸೆದು ಬಿಡಿ. ಇದರಿಂದ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಯಾವುದೇ ತೊಡಕು ಉಂಟಾಗದೇ ಯಶಸ್ಸು ಪ್ರಾಪ್ತವಾಗುತ್ತದೆ.

ಉತ್ತಮ ಆರೋಗ್ಯಕ್ಕಾಗಿ

ಉತ್ತಮ ಆರೋಗ್ಯಕ್ಕಾಗಿ

ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ತೀವ್ರತರದ ಕಾಯಿಲೆಯಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ ಚಂದನದ ಕೊರಡನ್ನು ಕಲ್ಲಿನ ಮೇಲೆ ನಯವಾಗಿ ತಿಕ್ಕಿ ಲೇಪನವನ್ನು ತಯಾರಿಸಿ. ಈ ಲೇಪನವನ್ನು ರೋಗ ಪೀಡಿತ ವ್ಯಕ್ತಿಯ ಹಣೆಯ ಮೇಲೆ ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಹಚ್ಚಿ. ಈ ಲೇಪನ ಒಣಗಿ ಪಕಳೆಯಂತೆ ಏಳುವವರೆಗೂ ನಿವಾರಿಸದಿರಲು ರೋಗಿಗೆ ತಿಳಿಸಿ. ಇದರಿಂದ ರೋಗಿ ಶೀಘ್ರವಾಗಿ ಗುಣಮುಖರಾಗುತ್ತಾರೆ.

ತೊಡಕುಗಳನ್ನು ತೊಡೆಯಲು

ತೊಡಕುಗಳನ್ನು ತೊಡೆಯಲು

ಕೆಲವೊಮ್ಮೆ ಮುಟ್ಟಿದ್ದೆಲ್ಲಾ ಮಣ್ಣು ಎಂಬ ಸ್ಥಿತಿ ಎದುರಾಗಿರುತ್ತದೆ. ಇದರ ಪರಿಹಾರಕ್ಕಾಗಿ ಮನೆಯಲ್ಲಿರುವ ಗಣೇಶನ ವಿಗ್ರಹದ ಮುಂದೆ ಪ್ರತಿದಿನ ಹಣತೆ ಅಥವಾ ಅಗರಬತ್ತಿಯನ್ನು ಹಚ್ಚಿ. ಇದರೊಂದಿಗೆ ಗಣೇಶನ ಸೊಂಡಿಲನ್ನು ಮುಟ್ಟಿ ಕಂಟಕಗಳನ್ನು ನಿವಾರಿಸಲು ಪ್ರಾರ್ಥಿಸಿ. ವಿಘ್ನನಿವಾರಕನಾದ ಗಣೇಶ ತೊಡಕುಗಳನ್ನು ಖಂಡಿತಾ ನಿವಾರಿಸುತ್ತಾನೆ.

ಕುಟುಂಬದಲ್ಲಿ ಸಂತೋಷ ತುಂಬಿರಲು

ಕುಟುಂಬದಲ್ಲಿ ಸಂತೋಷ ತುಂಬಿರಲು

ಮನೆಯ ಸದಸ್ಯರಲ್ಲಿ ಸಾಮರಸ್ಯ ಹಾಗೂ ಸಂತೋಷ ತುಂಬಿರಲು ಈ ವಿಧಾನ ಅನುಸರಿಸಿ. ಇದು ಕೊಂಚ ಕ್ಲಿಷ್ಟಕರವಾಗಿದೆ. ಆದರೂ ಮನೆಯವರ ಸಾಮರಸ್ಯಕ್ಕಾಗಿ ಅಗತ್ಯವಾಗಿದೆ. ಒಂದು ದಿನ ಭಾನುವಾರ ಮಧ್ಯಮಗಾತ್ರದ ಮಣ್ಣಿನ ಮಡಕೆಯೊಂದನ್ನು ನಡುಮನೆಯ ಮಧ್ಯೆ ಇರಿಸಿ ಇದರಲ್ಲಿ ಕೊಂಚ ಕೆಂಪಗೆ ಬಿಸಿಮಾಡಿರುವ ಕಲ್ಲಿದ್ದಲನ್ನು ಇರಿಸಿ. ಇದರಲ್ಲಿ ಪಾರಿವಾಳದ ಉಚ್ಛಿಷ್ಟಗಳನ್ನು ಹಾಕಿ ಹೊಗೆ ಬರುವಂತೆ ಮಾಡಿ.

ಕುಟುಂಬದಲ್ಲಿ ಸಂತೋಷ ತುಂಬಿರಲು

ಕುಟುಂಬದಲ್ಲಿ ಸಂತೋಷ ತುಂಬಿರಲು

ಈಗ ಮನೆಯ ಹಿರಿಯರಲ್ಲಿ ಒಬ್ಬರು ಈ ಮಡಕೆಯನ್ನು ಮನೆಯ ಎಲ್ಲಾ ಕೋಣೆಗಳಿಗೆ ಕೊಂಡು ಹೋಗಿ ಹೊಗೆ ಆವರಿಸುವಂತೆ ಮಾಡಲಿ. ಮನೆಯ ಅಂಗಳ, ಶೌಚಾಲಯ, ಹಿತ್ತಲು, ಒಟ್ಟಾರೆ ಜನರು ಹೋಗಬಹುದಾದ ಎಲ್ಲಾ ಸ್ಥಳಗಳಲ್ಲಿ ಈ ಹೊಗೆಯನ್ನು ಆವರಿಸುವಂತೆ ಮಾಡಿ. ಹೊಗೆ ಕಿಟಕಿಯಿಂದ ಹೊರಹೋಗುವ ಜೊತೆಗೇ ವೈಮನಸ್ಯಗಳನ್ನೂ ಕೊಂಡುಹೋಗುತ್ತದೆ ಹಾಗೂ ಮನೆಯವರ ನಡುವೆ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ.

ವಾಣಿಜ್ಯ ವಹಿವಾಟು ಉತ್ತಮಗೊಳ್ಳಲು

ವಾಣಿಜ್ಯ ವಹಿವಾಟು ಉತ್ತಮಗೊಳ್ಳಲು

ನಿಮ್ಮ ವ್ಯಾಪಾರದಲ್ಲಿ ವೃದ್ಧಿ ಇಲ್ಲದಿದ್ದರೆ ಹೀಗೆ ಮಾಡಿ. ಒಂದು ಭಾನುವಾರದಂದು (ರಜೆ ಇರುವ ದಿನ) ಐದು ಲಿಂಬೆ ಹಣ್ಣುಗಳನ್ನು ಕತ್ತರಿಸಿ ಇದರ ಜೊತೆಗೆ ಕೆಲವು ಕಾಳುಮೆಣಸು ಮತ್ತು ಹಳದಿ ಸಾಸಿವೆ ಕಾಳುಗಳನ್ನು ಇರಿಸಿ. ಮರುದಿನ ಅಂಗಡಿ ತೆರೆದ ಬಳಿಕ ಈ ವಸ್ತುಗಳನ್ನು ಮೊತ್ತ ಮೊದಲು ಸಂಗ್ರಹಿಸಿ ಯಾರಿಗೂ ತಿಳಿಸದೇ ದೂರದ ಅಜ್ಞಾತ ಸ್ಥಳದಲ್ಲಿ ಹೂತು ಹಾಕಿ, ತಿರುಗಿ ನೋಡದೇ ವಾಪಸ್ಸಾಗಿ. ಇದರಿಂದ ವ್ಯಾಪಾರ ಉತ್ತಮಗೊಳ್ಳುತ್ತದೆ.

ಹೊಸ ಮನೆಯಲ್ಲಿ ಸಮೃದ್ಧಿ ಮೂಡಲು

ಹೊಸ ಮನೆಯಲ್ಲಿ ಸಮೃದ್ಧಿ ಮೂಡಲು

ಹೊಸ ಮನೆಯಲ್ಲಿ ಸದಾ ಶಾಂತಿ, ಸಮೃದ್ದಿ ತುಂಬಿರಲು ನಿಮ್ಮ ಮನೆಯ ಪಶ್ಚಿಮ ಭಾಗದಲ್ಲಿ ಏಳು ತುಂಡು ಇಡಿಯ ಅರಿಶಿನದ ಕೊಂಬುಗಳನ್ನು ಇರಿಸಿ. ಒಂದು ಬಟ್ಟೆಯಲ್ಲಿ ಕಟ್ಟಿ ಕಣ್ಣಿಗೆ ಕಾಣದ ಸ್ಥಳದಲ್ಲಿ ಶಾಶ್ವತವಾಗಿ ಕಟ್ಟಿ ಇಟ್ಟರೂ ಸರಿ. ಇದರಿಂದ ಮನೆಯಲ್ಲಿ ಸದಾ ಸಂತಸ, ಶಾಂತಿ ನೆಮ್ಮದಿ ತುಂಬಿರುತ್ತದೆ.

ಹೊಸ ಉದ್ಯೋಗ ಪಡೆಯಲು

ಹೊಸ ಉದ್ಯೋಗ ಪಡೆಯಲು

ನಿರುದ್ಯೋಗಿಗಳು ಶೀಘ್ರವೇ ಕೆಲಸ ಸಿಗಲು ಹೀಗೆ ಮಾಡಿ: ಒಂದು ಹುಣ್ಣಿಮೆಯ ರಾತ್ರಿ ಎಲ್ಲಾ ದೇವರ ಪಟದ ಎದುರಿಗೂ ಒಂದೊಂದು ಹಣತೆ ಹಚ್ಚಿ ಅಗರಬತ್ತಿಗಳನ್ನು ಉರಿಸಿ ಪ್ರಾರ್ಥಿಸಿ. ಶೀಘ್ರವೇ ಶುಭಸುದ್ದಿ ಸಿಗುತ್ತದೆ.

ಕಾಯಿಲೆಗಳಿಂದ ಪಾರಾಗಲು

ಕಾಯಿಲೆಗಳಿಂದ ಪಾರಾಗಲು

ಒಂದು ವೇಳೆ ನಿಮ್ಮ ಹತ್ತಿರದವರಲ್ಲಿ ಯಾರಿಗಾದರು ಸೋಂಕುಕಾರಕ ರೋಗ ತಗುಲಿದ್ದರೆ ಹೀಗೆ ಮಾಡಿ: ಒಂದ್ ಚಿಕ್ಕ ಮಣ್ಣಿನ ಮಡಕೆಯಲ್ಲಿ ಒಂದು ಮೊಟ್ಟೆ, ಒಂದು ಲಾಡು, ಎರಡು ನಾಣ್ಯಗಳು, ಕೊಂಚ ಕುಂಕುಮ ಹಾಕಿ ಈ ಮಡಕೆಯನ್ನು ರೋಗಿಯ ತಲೆಯ ಮೇಲೆ ಸುತ್ತಿ ನಿವಾಳಿಸಿ. ಈ ಮಡಕೆಯನ್ನು ಬಳಿಕ ಯಾರೂ ಬಾರದ ಸ್ಥಳದಲ್ಲಿ ವಿಸರ್ಜಿಸಿ.

ತಪ್ಪು ತಿಳಿವಳಿಕೆಗಳನ್ನು ಸರಿಪಡಿಸಲು

ತಪ್ಪು ತಿಳಿವಳಿಕೆಗಳನ್ನು ಸರಿಪಡಿಸಲು

ಕೆಲವೊಮ್ಮೆ ಒಂದೇ ವಿಷಯವನ್ನು ಇಬ್ಬರೂ ತಪ್ಪಾಗಿ ಗ್ರಹಿಸಿ ಮನಸ್ತಾಪ ಉಂಟಾಗಿದ್ದರೆ ಈಗೆ ಮಾಡಿ. ಏಳು ಗೋಮತಿ ಚಕ್ರ, ಏಳು ಚಿಕ್ಕ ತೆಂಗಿನ ಕಾಯಿ, ಏಳು ಮೋತಿ ಶಂಖ ಮತ್ತು ಹಳದಿ ಬಟ್ಟೆ. ಇಷ್ಟನ್ನೂ ಮನೆಯ ಎಲ್ಲಾ ಸದಸ್ಯರ ಸುತ್ತು ಸುತ್ತಿಸಿ ನಿವಾಳಿಸಿ ನಿಮ್ಮ ಮನೆಯ ಯಾವುದೇ ಪುಣ್ಯಕಾರ್ಯದ ಪವಿತ್ರ ಅಗ್ನಿಯಲ್ಲಿ ದಹಿಸಿ (ಹವನ ಅಥವಾ ಹೋಲಿಯ ಅಗ್ನಿ). ಇದರಿಂದ ಮನಸ್ತಾಪ ದೂರವಾಗುತ್ತದೆ.

English summary

Simple remedies to solve all your life's problems

Sometimes, inspite of our best efforts, we are unable to deal with the big problems of life. However, even though it is not always possible to control all our problems, we can negate the influence of some. Read on to know more.
X
Desktop Bottom Promotion