For Quick Alerts
ALLOW NOTIFICATIONS  
For Daily Alerts

ವಿಶ್ವ ರಕ್ತದಾನ ದಿನ 2021: ರಕ್ತದಾನ ಮಾಡುವುದು ಒಳ್ಳೆಯದೇ?

By Staff
|

ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್‌ 14ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.

ಈ ದಿನದ ವಿಶೇಷ ರಕ್ತದಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.....

ರಕ್ತದಾನ ಮಹಾದಾನ ಎನ್ನುವ ಮಾತಿದೆ. ಯಾರೇ ಆದರೂ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿದರೆ ಅದರಿಂದ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ. ಆದರೆ ರಕ್ತದಾನ ಮಾಡಲು ಹಿಂಜರಿಯುವಂತಹ ಸನ್ನಿವೇಶ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಾ ಇದೆ. ರಕ್ತದಾನ ಮಾಡಲು ಮುಂದೆ ಬರುವವರ ಸಂಖ್ಯೆ ಕೂಡ ಕಡಿಮೆ. ನಮ್ಮ ದೇಹದಿಂದ ರಕ್ತ ತೆಗೆದರೆ ಏನಾದರೂ ಸಮಸ್ಯೆಯಾಗುತ್ತದೆಯಾ ಎನ್ನುವ ಭೀತಿ ಅವರಲ್ಲಿ ಇದ್ದೇ ಇರುತ್ತದೆ. ರಕ್ತದಾನ ಮಾಡುವುದರಿಂದ ಲಾಭಗಳೇನು?

ಆದರೆ ಕೆಲವೊಂದು ಸಂದರ್ಭದಲ್ಲಿ ನಮಗೂ ರಕ್ತ ಬೇಕಾದರೆ ಬೇರೆಯವರು ರಕ್ತದಾನ ಮಾಡಬೇಕಾಗುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ವರ್ಷಕ್ಕೆ ಒಂದು ಸಲ ರಕ್ತದಾನ ಮಾಡಿದರೆ ದೇಹಕ್ಕೂ ಒಳ್ಳೆಯದು. ಆರೋಗ್ಯವಾಗಿರುವಂತ ವ್ಯಕ್ತಿ ರಕ್ತದಾನ ಮಾಡಿದರೆ ಅದರಿಂದ ಯಾವುದೇ ಸಮಸ್ಯೆಯಾಗಲ್ಲ. ರಕ್ತದಾನ ಮಾಡದಿದ್ದರೆ ಆರೋಗ್ಯಕ್ಕೆ ಹಾನಿ!

ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಈಗೀಗ ಅಲ್ಲಲ್ಲಿ ರಕ್ತದಾನ ಶಿಬಿರಗಳು ನಡೆಯುತ್ತಾ ಇರುತ್ತದೆ. ಹಾಗಾದರೆ ರಕ್ತದಾನ ಸರಿಯಾಗಿ ಕೆಲಸ ಮಾಡುತ್ತದೆ ಎಂದು ನಿಮಗನಿಸುತ್ತದೆ? ರಕ್ತದಾನದ ಶಿಬಿರಗಳ ಕೆಲವೊಂದು ಕಾಣದ ಸತ್ಯಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ರಕ್ತದಾನ ಮಾಡುವ ಮುನ್ನ ಮುನ್ನೆಚ್ಚರಿಕೆ ಕ್ರಮ ಅರಿಯಿರಿ

ಇಂತಹ ಶಿಬಿರಗಳು ತುಂಬಾ ಸುರಕ್ಷಿತವಾಗಿದ್ದರೂ ಕೆಲವೊಂದು ಮಂದಿ ತಮಗೆ ಇದರಿಂದ ಎಚ್ ಐವಿ ಅಥವಾ ಇತರ ಸೋಂಕು ಬಂದಿದೆ ಎಂದು ಹೇಳುತ್ತಾ ಇದ್ದಾರೆ. ನಿಮಗೆ ಆಘಾತವನ್ನು ಉಂಟುಮಾಡುವಂತಹ ಕೆಲವೊಂದು ಸತ್ಯಗಳು ಇಲ್ಲಿ ನೀಡಲಾಗಿದೆ. ತಿಳಿದುಕೊಂಡು ಎಚ್ಚರವಹಿಸಿ....

ವಾಸ್ತವಾಂಶ 1

ವಾಸ್ತವಾಂಶ 1

ರಕ್ತದಾನ ಶಿಬಿರಗಳಲ್ಲಿ ಪಡೆಯುವಂತಹ ರಕ್ತದ ಪ್ಲಾಸ್ಮಾ ತೆಗೆದು ಅದನ್ನು ಔಷಧಿ ಕಂಪೆನಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ. ಇದು ಒಂದು ರೀತಿಯ ಕೆಟ್ಟ ವ್ಯಾಪಾರವಲ್ಲವೇ?

ವಾಸ್ತವಾಂಶ 2

ವಾಸ್ತವಾಂಶ 2

ಪ್ರತೀ ತಿಂಗಳಿಗೊಮ್ಮೆ ರಕ್ತದಾನ ಶಿಬಿರಗಳು ಅಲ್ಲಲ್ಲಿ ನಡೆಯುತ್ತಾ ಇದ್ದರೂ ರಕ್ತದ ಅಭಾವ ಇದ್ದೇ ಇದೆ. ರಕ್ತದ ದಂಧೆಕೋರರು ರಕ್ತವನ್ನು ಮಾರುವುದು ಮತ್ತು ಕಳಪೆ ಮಟ್ಟದ ಶೇಖರಣಾ ಸಮಸ್ಯೆ ಇದಕ್ಕೆ ಕಾರಣವಾಗಿದೆ.

ವಾಸ್ತವಾಂಶ 3

ವಾಸ್ತವಾಂಶ 3

ನೀವು ಉಚಿತವಾಗಿ ರಕ್ತವನ್ನು ದಾನ ಮಾಡುತ್ತೀರಿ. ಆದರೆ ಈ ಶಿಬಿರಗಳಲ್ಲಿ ಪಡೆಯುವ ರಕ್ತದಿಂದ ಹೆಚ್ಚಿನ ಲಾಭ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿಗೆ ಹಣ ಪಡೆಯುವಂತಹವರಿಗೆ ರಕ್ತವನ್ನು ಕಾನೂನುಬಾಹಿರವಾಗಿ ಸರಬರಾಜು ಮಾಡಲಾಗುತ್ತದೆ.

ವಾಸ್ತವಾಂಶ 4

ವಾಸ್ತವಾಂಶ 4

ರಕ್ತವನ್ನು ಮಾರುವುದು ಮತ್ತು ರಕ್ತದಾನಕ್ಕೆ ಹಣ ಪಡೆಯುವುದು ಕಾನೂನುಬಾಹಿರ. ರಕ್ತದಾನ ಮಾಡಿದವರಿಗೆ ಹಣ ನೀಡಲಾಗುತ್ತದೆ ಎನ್ನುವ ಗಾಳಿಸುದ್ದಿ ಇದೆ. ಕಾನೂನುಬಾಹಿರವಾಗಿ ರಕ್ತ ಪಡೆದು ಅದರಿಂದ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ.

 ವಾಸ್ತವಾಂಶ 5

ವಾಸ್ತವಾಂಶ 5

ಭಾರತ ಎಷ್ಟೇ ಮುಂದುವರಿದಿದ್ದರೂ ಇಂದು ಮತಭೇದ ಇದ್ದೇ ಇರುತ್ತದೆ. ಕೆಲವು ಮಂದಿ ಈಗಲೂ ಕೆಳಜಾತಿಯ ವರ್ಗದ ಜನರಿಂದ ರಕ್ತ ಪಡೆಯಲು ಹಿಂಜರಿಯುತ್ತಾರೆ. ಇಂತವರ ಬಗ್ಗೆ ಹೇಸಿಗೆ ಮೂಡುವುದು.

ವಾಸ್ತವಾಂಶ 6

ವಾಸ್ತವಾಂಶ 6

ಕಾನೂನು ಬಾಹಿರ ರಕ್ತದಾನ ಶಿಬಿರಗಳಲ್ಲಿ ಬಡಜನರಿಂದ ಒತ್ತಾಯಪೂರ್ವಕವಾಗಿ ರಕ್ತ ಪಡೆದು ಅವರಿಗೆ ಬಿಡಿಗಾಸು ನೀಡಿ ಬಿಡಲಾಗುತ್ತದೆ. ಇಂತಹದ್ದು ನಮ್ಮ ಸುತ್ತಲೂ ನಡೆಯುತ್ತಾ ಇರುತ್ತದೆ. ಆದರೆ ಜನರು ಕಣ್ಣು ಮುಚ್ಚಿ ಕುಳಿತಿರುತ್ತಾರೆ.

ವಾಸ್ತವಾಂಶ 7

ವಾಸ್ತವಾಂಶ 7

ಕಾನೂನುಬಾಹಿರ ರಕ್ತದಾನವು ಸುಮಾರು 300 ಕೋಟಿ ರೂ. ವಹಿವಾಟು ನಡೆಸುತ್ತದೆ. ದಿನ ಉರುಳಿದಂತೆ ಇದು ಹೆಚ್ಚಾಗುತ್ತಾ ಇರುತ್ತದೆ.

ವಾಸ್ತವಾಂಶ 8

ವಾಸ್ತವಾಂಶ 8

ಕೆಲವೊಂದು ಕಡೆಗಳಲ್ಲಿ ನೇರವಾಗಿ ರೋಗಿಯಿಂದ ರೋಗಿಗೆ ರಕ್ತವನ್ನು ನೀಡಲಾಗುತ್ತದೆ. ಆದರೆ ಇದು ತುಂಬಾ ಅಪರೂಪ. ಆದರೆ ಕೆಲವೊಂದು ರಕ್ತದಾನ ಶಿಬಿರಗಳಲ್ಲಿ ಅತ್ಯಾಧುನಿಕ ಸಾಮಗ್ರಿಗಳು ಇರುವುದಿಲ್ಲ. ಇಂತಹ ಜಾಗಗಳಲ್ಲಿ ರಕ್ತದಾನ ಮಾಡುವುದು ಎಷ್ಟು ಸುರಕ್ಷಿತ? ಇಂತಹ ರಕ್ತದಾನ ಶಿಬಿರಗಳಲ್ಲಿ ರಕ್ತವನ್ನು ಪರೀಕ್ಷಿಸದೆ ಮತ್ತೊಬ್ಬರಿಗೆ ನೀಡಲಾಗುತ್ತದೆ.

English summary

Blood donation day: Shocking Facts About Blood Donation In India

Accidents are so common these days that we read about them happening almost every day. Some are minor ones and a few are really severe. These victims may require blood to be transfused by a donor. So, is blood donation really safe? Do you realise how important it is for every person to go in for blood donations at least once in a year? Especially when they are hale and healthy?
X
Desktop Bottom Promotion