ಶ್! ಇದು ಮಹಿಳೆಯರ ಸೀಕ್ರೆಟ್ ವಿಷಯ-ಹೆಚ್ಚಿನ ಕುತೂಹಲ!

ಈ ಗುಟ್ಟಿನ ವಿಷಯಗಳಲ್ಲಿಯೂ ಸಮಾಗಮದ ವಿಷಯಗಳಿಗೆ ಅತಿ ಹೆಚ್ಚಿನ ಕುತೂಹಲ. ಸಮಾಗಮದ ಉತ್ತುಂಗದ ಮಾಹಿತಿಗಳಂತೂ ಅತ್ಯಂತ, ಎಣೆಯೇ ಇಲ್ಲದ ಕುತೂಹಲಕ್ಕೆ ಗ್ರಾಸವಾಗುತ್ತವೆ....ಮುಂದೆ ಓದಿ

By: Arshad
Subscribe to Boldsky

ಜ್ಞಾನ ವೃದ್ಧಿಯಾಗಲು ನಮಗೆ ಅಪಾರವಾದ ಮಾಹಿತಿಗಳು ಬೇಕು. ಇವುಗಳಲ್ಲಿ ಕೆಲವು ಮಾಹಿತಿಗಳು ಎಲ್ಲರ ಕುತೂಹಲ ಕೆರಳಿಸಿದರೆ ಕಲವು ಆಕಳಿಕೆ ತರಿಸುತ್ತವೆ. ಅದರಲ್ಲೂ ಗುಟ್ಟಾಗಿ ಹೇಳಬೇಕಾದ ಮಾಹಿತಿಗಳಿಗೆ ಹೆಚ್ಚಿನ ಕುತೂಹಲ. ಈ ಗುಟ್ಟಿನ ವಿಷಯಗಳಲ್ಲಿಯೂ ಸಮಾಗಮದ ವಿಷಯಗಳಿಗೆ ಅತಿ ಹೆಚ್ಚಿನ ಕುತೂಹಲ. ಸಮಾಗಮದ ಉತ್ತುಂಗದ ಮಾಹಿತಿಗಳಂತೂ ಅತ್ಯಂತ, ಎಣೆಯೇ ಇಲ್ಲದ ಕುತೂಹಲಕ್ಕೆ ಗ್ರಾಸವಾಗುತ್ತವೆ.  ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು

ವಿಶೇಷವಾಗಿ ಕಾಮೋತ್ತೇಜಕ ಮಾಹಿತಿಗಳ ಬಗ್ಗೆ ಎಲ್ಲರೂ ಹೆಚ್ಚಿನ ಕುತೂಹಲ ಪ್ರಕಟಿಸುತ್ತಾರೆ. ಆದರೆ ಈ ಬಗ್ಗೆ ಮುಕ್ತವಾದ ಚರ್ಚೆ ಮಾತ್ರ ನಡೆಯುವುದಿಲ್ಲ. ಆದ್ದರಿಂದ ಈ ಬಗ್ಗೆ ಹರಡಿರುವ ಅಪಾರ್ಥ ಕಲ್ಪನೆಗಳೇ ನಿಜವೆಂದು ಹೆಚ್ಚಿನವರು ನಂಬಿದ್ದಾರೆ. ಸಿನಿಮಾ, ಕಾಮುಕ ಸಾಹಿತ್ಯಗಳ ಮೂಲಕ ವಿಜೃಂಭಿಸಿದ ಸುಳ್ಳುಗಳನ್ನೇ ನಿಜವಾದ ಮಾಹಿತಿ ಎಂದು ನಂಬಿದ್ದಾರೆ. ಈ ಬಗ್ಗೆ ಅತಿ ಹೆಚ್ಚಿನ ಅಪಾರ್ಥವಿರುವ ಮಾಹಿತಿ ಎಂದರೆ ಮಹಿಳೆಯರು ಪಡೆಯುವ ತೀವ್ರೋದ್ರೇಕ ಅಥವಾ ಕಾಮೋತ್ತೇಜತೆಯ ಪರಾಕಾಷ್ಠೆ.    ಸಮಾಗಮಕ್ಕೆ ಮಹಿಳೆಯರಿಂದ ದೊರಕುವ ಗುಪ್ತ ಸಂಜ್ಞೆಗಳು

ಈ ಬಗ್ಗೆ ವೈಜ್ಞಾನಿಕವಾಗಿ ಪಡೆದ ಮಾಹಿತಿಗಳೇ ನಿಜವಾದ ಮಾಹಿತಿಗಳಾಗಿದ್ದು ಇವುಗಳನ್ನು ಹಲವಾರು ತಜ್ಞರು ತಮ್ಮ ಹಲವು ವರ್ಷಗಳ ಅಪಾರವಾದ ಸಂಶೋಧನೆಯ ಮೂಲಕ ಪಡೆದಿರುವಂತಹದ್ದಾಗಿದ್ದು ಇವುಗಳನ್ನೇ ನಂಬುವುದು ಇಂದಿನ ಅಗತ್ಯವಾಗಿದೆ. ಏಕೆಂದರೆ ಈ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಹಲವಾರು ಅಪರಾಧಗಳಿಗೆ ಕಾರಣವಾಗಿವೆ.   ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು

ಅತ್ಯಂತ ನೀಚವಾದ ಒಂದು ಕಲ್ಪನೆ ಎಂದರೆ ಹೊರಗಾಗದವರೊಂದಿಗೆ ಕೂಡಿದರೆ ಮಧುಮೇಹ ವಾಸಿಯಾಗುತ್ತದೆ ಎಂಬ ಯಾವುದೋ ಕಾಲದ ಎಲ್ಲೂ ಪುರಾವೆಯಾಗದ ಕಲ್ಪನೆ. ಇದನ್ನೇ ನಿಜವೆಂದು ನಂಬಿಕೊಂಡು ಬಂದವರಿಂದ ಭಾರತದಲ್ಲಿ, ಅದರಲ್ಲಿಯೂ ಕರ್ನಾಟಕದಲ್ಲಿಯೇ ಎಷ್ಟೋ ಸಾವಿರ ಅತ್ಯಾಚಾರಗಳಾಗಿವೆ. ಆದ್ದರಿಂದ ವೈಜ್ಞಾನಿಕವಾದ ಮಾಹಿತಿಗಳನ್ನು ಪಡೆದಿರುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಬನ್ನಿ, ಈ ಬಗ್ಗೆ ವಿಜ್ಞಾನ ಯಾವ ಮಾಹಿತಿಯನ್ನು ನೀಡುತ್ತಿದೆ ಎಂಬುದನ್ನು ಕಲಿಯೋಣ....  

ಮಾಹಿತಿ #1

ಮಹಿಳೆಯರಿಗೆ ಕಾಮೋತ್ತೇಜಕತೆ ಪಡೆಯಲು ಸಂಗಾತಿಯ ಅಗತ್ಯವಿಲ್ಲದೆಯೂ ಸಾಧ್ಯ. ಒಂದು ಸಂಶೋಧನೆಯ ಮೂಲಕ 37% ಮಹಿಳೆಯರು ತಮ್ಮ ನಿದ್ದೆಯಲ್ಲಿಯೇ, ಅರಿವಿಲ್ಲದೆಯೇ, ಅನೈಚ್ಛಿಕವಾಗಿ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ.

ಮಾಹಿತಿ #2

ಪುರುಷರಿಗೆ ಹೋಲಿಸಿದರೆ ಒಂದೇ ದಿನದಲ್ಲಿ ಮಹಿಳೆಯರು ಹೆಚ್ಚು ಬಾರಿ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ. ಏಕೆಂದರೆ ಪುರುಷರಿಗೆ ಸ್ಖಲನದ ಬಳಿಕ ನಿರುತ್ಸಾಹ ಆವರಿಸುವಂತೆ ಮಹಿಳೆಯರಿಗೆ ಆವರಿಸುವುದಿಲ್ಲ.

ಮಾಹಿತಿ #3

ಮಿಲನದ ಮೂಲಕ ಮಾತ್ರವೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುವುದು ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ಏಕೆಂದರ ಈ ಮೂಲಕ ಕೇವಲ 25% ರಷ್ಟು ಮಾತ್ರ ಮಹಿಳೆಯರು ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ. ಉಳಿದವರು ತಲುಪುವುದೇ ಇಲ್ಲ. ಬದಲಿಗೆ ಮಹಿಳೆಯರು ಪ್ರಾರಂಭದ ಹಂತದಲ್ಲಿರುವಾಗಲೇ ಪುರುಷನ ಪೌರುಷ ಸಮಾಪ್ತಿಯಾಗಿರುತ್ತದೆ.

ಮಾಹಿತಿ#4

ಕೆಲವು ಮಹಿಳೆಯರು ವ್ಯಾಯಾಮ ಮಾಡುತ್ತಿರುವಾಗಲೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ. ಈ ಪರಿಸ್ಥಿತಿಗೆ "coregasms" ಎಂದು ಕರೆಯುತ್ತಾರೆ. ವಿಶೇಷವಾಗಿ ಸೊಂಟ ಬಗ್ಗಿಸುವ ವ್ಯಾಯಾಮಗಳು (core exercises), ಯೋಗಾಭ್ಯಾಸ, ನಿಧಾನಗತಿಯ ಓಟ, ತೀವ್ರಗತಿಯ ಓಟ ಮೊದಲಾದವುಗಳ ಮೂಲಕವೂ ಮಹಿಳೆಯರು ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುವುದು ಸಾಧ್ಯ.

ಮಾಹಿತಿ #5

"Nipplegasms"-ಹೆಸರೇ ಸೂಚಿಸುವಂತೆ ಸ್ತನತೊಟ್ಟಿನ ಸಂವೇದನೆಯಿಂದಲೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪಬಹುದು. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ತಜ್ಞರು ಸ್ತನತೊಟ್ಟಿನ ಸವರುವಿಕೆಯಿಂದ ಮೆದುಳಿಗೆ ತಲುಪುವ ಸಂವೇದನೆಗೂ ಚಂದ್ರನಾಡಿಯ ಸವರುವಿಕೆಯಿಂದ ತಲುಪುವ ಸಂವೇದನೆಗೂ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದನ್ನು ಕಂಡುಕೊಂಡಿದ್ದಾರೆ.

ಮಾಹಿತಿ #5

ಅಂದರೆ ಮಗು ಹಾಲು ಕುಡಿಯುವ ಮೂಲಕವೂ ತಾಯಿ ಅತ್ಯಂತ ಪಾವನ ಭಾವನೆ ಮತ್ತು ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುವುದು ಸಾಧ್ಯ.

ಮಾಹಿತಿ #6

ಪುರುಷರಲ್ಲಿ ಅವಧಿಗೂ ಮುನ್ನ ಸ್ಖಲನವಾಗುವಂತೆ ಮಹಿಳೆಯರೂ ಅವಧಿಗೂ ಮುನ್ನ ಪರಾಕಾಷ್ಠೆಯನ್ನು ತಲುಪಬಹುದು. ಅಂದರೆ ಅವರಿಗೆ ನಿಜವಾಗಿ ಯಾವಾಗ ಬೇಕಾಗಿತ್ತೋ ಅದಕ್ಕೂ ಮುನ್ನವೇ ಪರಾಕಾಷ್ಠೆ ಬಂದುಬಿಡಬಹುದು. ಯಾವಾಗಲೂ ಅಲ್ಲದಿದ್ದರೂ, ಅಪರೂಪವಾಗಿಯಾದರೂ ಆಗಬಹುದು.

 

English summary

Scientific Facts About Female Orgasm

Check out some of the scientific facts about the female orgasm that most of us are not aware of, as this topic is considered a taboo to talk about and most of us are rather shy to discuss what goes on in our body! Now have a look at these interesting facts about female orgasm.
Please Wait while comments are loading...
Subscribe Newsletter