For Quick Alerts
ALLOW NOTIFICATIONS  
For Daily Alerts

ಭಾರತದ ರೆಡ್ ಲೈಟ್ ಏರಿಯಾದ ಹಿಂದಿರುವ ಸತ್ಯಾಸತ್ಯತೆ

By Manu
|

ರಾಜರ ಕಾಲದಿಂದಲೂ ವೇಶ್ಯಾವಾಟಿಕೆ ಎನ್ನುವುದು ನಡೆಯುತ್ತಲೇ ಬರುತ್ತಿದೆ. ಹಿಂದಿನ ಕಾಲದಲ್ಲಿ ರಾಜನೇ ವೇಶ್ಯೆಯರು ಇರುವಂತಹ ಸ್ಥಳಗಳಿಗೆ ಹೋಗುವಂತಹ ಕಥೆಗಳನ್ನು ನಾವು ಕೇಳಿದ್ದೇವೆ. ವೇಶ್ಯಾವಾಟಿಕೆಗೆ ತುಂಬಾ ದೀರ್ಘ ಇತಿಹಾಸವಿದೆ. ರಾಜರ ಬಳಿಕ ಬ್ರಿಟಿಷರು ಬಂದರು. ಅವರಿಂದ ಸ್ವಾತಂತ್ರ್ಯ ಸಿಕ್ಕಿದರೂ ವೇಶ್ಯಾವಾಟಿಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಎನ್ನುವುದು ನಿರಂತರವಾಗಿ ಸಾಗುತ್ತಲೇ ಇದೆ. ಇದು ಕೆಲವು ರಾಷ್ಟ್ರಗಳಲ್ಲಿ ಕಾನೂನುಬದ್ಧವಾಗಿ ನಡೆಯುತ್ತದೆ. ಅದಕ್ಕಾಗಿಯೇ ಕೆಲವೊಂದು ಪ್ರದೇಶಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ರೆಡ್ ಲೈಟ್ ಪ್ರದೇಶಗಳೆಂದು ಕರೆಯಲಾಗುತ್ತದೆ. ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ

ಇಂತಹ ಪ್ರದೇಶಗಳು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಹೀಗೀಗ ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮೂಲಕ ಇಂತಹ ಕೃತ್ಯಗಳಿಗೆ ಇಳಿಸಲಾಗುತ್ತದೆ. ಇದರ ಹಿಂದೆ ಬೃಹತ್ ಜಾಲವೇ ಇದೆ. ಆದರೆ ಕಾನೂನು ಮಾತ್ರ ಇಂತವರಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಇದು ಆದಾಯದ ಮೂಲವಾಗಿದೆ. ಭಾರತದಲ್ಲಿರುವ ಇಂತಹ ಪ್ರದೇಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ, ಮುಂದೆ ಓದಿ....

ಶೊನಗಾಚಿ, ಕೊಲ್ಕತ್ತಾ

ಶೊನಗಾಚಿ, ಕೊಲ್ಕತ್ತಾ

ಏಶ್ಯಾದಲ್ಲಿರುವ ಅತ್ಯಂತ ಬೃಹತ್ ರೆಡ್ ಲೈಟ್ ಪ್ರದೇಶವಾಗಿರುವ ಇದು ತುಂಬಾ ಅಪಾಯಕಾರಿ ಮತ್ತು ಕುಖ್ಯಾತಿಯನ್ನು ಪಡೆದಿದೆ. ಇದು ಏಶ್ಯಾದ ಅತ್ಯಂತ ಹಳೆದ ರೆಡ್ ಲೈಟ್ ಏರಿಯಾವಾಗಿದೆ. ಕೊಲ್ಕತ್ತಾದ ಇತರ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಅಪರಾಧ ಕೃತ್ಯಗಳು ಹೆಚ್ಚು.

ಜಿ.ಬಿ. ರೋಡ್, ದೆಹಲಿ

ಜಿ.ಬಿ. ರೋಡ್, ದೆಹಲಿ

ಇದನ್ನು ಗಾರ್ಸ್ಟಿನ್ ಬಾಸ್ಟಿನ್ ರೋಡ್ ಎಂದು ಕರೆಯುತ್ತಾರೆ. ಇಲ್ಲಿ ತುಂಬಾ ಹಳೆಯದಾದ ಒಂದಕ್ಕೊಂದು ಅಂಟಿಕೊಂಡಿರುವಂತಹ ಬಹುಮಹಡಿ ಕಟ್ಟಡಗಳಿವೆ. ಇದರ ನೆಲಮಹಡಿಗಳಲ್ಲಿ ಅಂಗಡಿಗಳಿದ್ದರೆ, ಮೇಲಿನ ಭಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುತ್ತದೆ. ಭಾರತದೆಲ್ಲೆಡೆಯಿಂದ ಅಪಹರಿಸಲ್ಪಟ್ಟ ಹೆಣ್ಣು ಮಕ್ಕಳನ್ನು ಇಲ್ಲಿ ಮಾರಲಾಗುತ್ತದೆಯಂತೆ.

ಕಾಮಾಟಿಪುರ, ಮುಂಬಯಿ

ಕಾಮಾಟಿಪುರ, ಮುಂಬಯಿ

ಇದನ್ನು ಈಗ ಮುಂಬಯಿಯ ಕೆಂಪು ಮಾರ್ಗವೆಂದು ಕರೆಯಲಾಗುತ್ತದೆ. ಹಿಂದೆ ಕಾಮಾಟಿಪುರವೆಂದೂ ಕರೆಯಲಾಗುತ್ತದೆ. ಇದು ಏಶ್ಯಾದ ಎರಡನೇ ಅತೀ ದೊಡ್ಡ ವೇಶ್ಯಾವಾಟಿಕ ಕೇಂದ್ರವಾಗಿದೆ. ಮುಂಬಯಿಯ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಅತೀ ಹೆಚ್ಚಿನ ಅಪರಾಧಿ ಕೃತ್ಯಗಳು ನಡೆಯುತ್ತದೆ.

ಗಂಗಾ ಜಮುನಾ, ನಾಗ್ಪುರ

ಗಂಗಾ ಜಮುನಾ, ನಾಗ್ಪುರ

ಇದು ಮಹಾರಾಷ್ಟ್ರದ ಅತ್ಯಂತ ಕುಖ್ಯಾತ ವೇಶ್ಯಾವಾಟಿಕ ಕೇಂದ್ರವಾಗಿದೆ. ಗಂಗಾಜಮುನಾದಲ್ಲಿರುವ ಅಡ್ಡೆಗಳು ಕೇವಲ ವೇಶ್ಯಾವಾಟಿಕ ಕೇಂದ್ರವಾಗಿರದೆ ಇಲ್ಲಿ ಸ್ಮಗ್ಲಿಂಗ್ ಮತ್ತು ಭೂಗತ ಚಟುವಟಿಕೆಗಳು ನಡೆಯುತ್ತಾ ಇರುತ್ತದೆ.

ಶಿವದಾಸಪುರ, ವಾರಣಾಸಿ

ಶಿವದಾಸಪುರ, ವಾರಣಾಸಿ

ಉತ್ತರಪ್ರದೇಶದಲ್ಲಿರುವ ವಾರಣಾಸಿಯು ಹಿಂದಿನಿಂದಲೂ `ತವೈಫ್' ಸಂಸ್ಕೃತಿಗೆ ತುಂಬಾ ಜನಪ್ರಿಯವಾಗಿದೆ. ಇದು ಉತ್ತರಪ್ರದೇಶದ ಅತೀ ದೊಡ್ಡ ರೆಡ್ ಲೈಟ್ ಪ್ರದೇಶ. `ಗುಡಿಯಾ' ಎನ್ನುವ ಸರಕಾರೇತರ ಸಂಘಟನೆಯು ಈಗ ಇಲ್ಲಿಗೆ ಸಾಗಾಟವಾಗುವಂಹತ ಹುಡುಗಿಯರನ್ನು ರಕ್ಷಿಸುವಂತಹ ಶ್ರೇಷ್ಠ ಕೆಲಸವನ್ನು ಮಾಡುತ್ತಿದೆ.

ಚತುರ್ಬುಜಸ್ಥಾನ್, ಮುಜಾಫರ್ ಪುರ

ಚತುರ್ಬುಜಸ್ಥಾನ್, ಮುಜಾಫರ್ ಪುರ

ಹಲವಾರು ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿರುವ ನಗರವು ವೇಶ್ಯಾವಾಟಿಕೆಯಿಂದ ಸುತ್ತುವರಿದಿದೆ. ಇದು ತುಂಬಾ ಅಸಹ್ಯವೆನಿಸಿದರೆ ಇಲ್ಲಿ ದೇಹವ್ಯಾಪಾರ ನಡೆಯುತ್ತಲೇ ಇರುತ್ತದೆ. ಇಲ್ಲಿನ ಪವಿತ್ರ ಕ್ಷೇತ್ರಗಳಿಗೆ ಆಗಮಿಸುವಂತಹ ಹೊರಗಿನ ಭಕ್ತರಿಗೆ ಸುತ್ತಲಿನ ವೇಶ್ಯಾವಾಟಿಕೆ ಕೇಂದ್ರಗಳ ಬಗ್ಗೆ ಅರಿವು ಇರುವುದಿಲ್ಲ. ಪವಿತ್ರ ಮಂದಿರಗಳ ಸುತ್ತಲೂ ವೇಶ್ಯಾವಾಟಿಕ ಕೇಂದ್ರಗಳು ಇರುವುದು ಸ್ಥಳೀಯ ಭಕ್ತರಿಗೆ ಮುಜುಗರ ತರಿಸುತ್ತದೆ.

ಮೀರಾಗಂಜ್ ಅಲಹಾಬಾದ್

ಮೀರಾಗಂಜ್ ಅಲಹಾಬಾದ್

ರಾಷ್ಟ್ರದ ವಿವಿಧ ಗ್ರಾಮೀಣ ಪ್ರದೇಶಗಳಿಂದ ಅಪಹರಿಸಲ್ಪಟ್ಟ ಹುಡುಗಿಯರನ್ನು ಇಲ್ಲಿಗೆ ತಂದು ವೇಶ್ಯಾವಾಟಿಕೆ ನಡೆಸಲಾಗುತ್ತದೆ ಅಥವಾ ಮಾರಲಾಗುತ್ತದೆ. ಇದು ರಾಷ್ಟ್ರದಲ್ಲಿಯೇ ಅತ್ಯಂತ ಕುಖ್ಯಾತ ವೇಶ್ಯಾವಾಟಿಕೆ ಕೇಂದ್ರ. ಇಲ್ಲಿ ಅತೀ ಹೆಚ್ಚು ಅಪರಾಧಿ ಚಟುವಟಿಕೆಗಳು ನಡೆಯುತ್ತದೆ.

ಬುಧ್ವಾರ ಪೇಟ್, ಪುಣೆ

ಬುಧ್ವಾರ ಪೇಟ್, ಪುಣೆ

ಇದು ನಗರದಲ್ಲಿ ಅತೀ ವ್ಯಸ್ತವಾಗಿರುವಂತಹ ಶಾಪಿಂಗ್ ಪ್ರದೇಶಗಳಲ್ಲಿ ಒಂದಾಗಿದೆ. ಇದೇ ಪ್ರದೇಶದಲ್ಲಿ ದೇಶದ ಅತ್ಯಂತ ಶ್ರೀಮಂತ ಗಣೇಶನ ಮಂದಿರವಿದೆ. ಇಲ್ಲಿ ದೇವರ ಹೆಸರು ಹೇಳಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತದೆ.

English summary

Red Light Districts That Are Popular In India

Every day young girls get abducted, there are hardly any missing complaints filed. Most of these girls are either raped or pushed into prostitution. All over the world, you would find red light areas in every corner. These are the places that come alive only during the night hours. These are the places where sex trade flourishes like a successful ongoing business.
X
Desktop Bottom Promotion