ಪುರುಷರಿಗೆ ಚಿನ್ನದ ಮೇಲೆ ಏಕೆ ಇಷ್ಟೊಂದು ಮೋಹ?

ಹೆಚ್ಚಿನವರು ತಿಳಿದುಕೊಂಡಂತೆ ಚಿನ್ನ ಎಂದರೆ ಮಹಿಳೆಯರ ಸ್ವತ್ತು. ಆದರೆ ಕೆಲವು ಪುರುಷರು ಚಿನ್ನಕ್ಕೆ ಮಹಿಳೆಯರಿಗಿಂತಲೂ ಹೆಚ್ಚಿನ ಒಲವು ತೋರುವುದು ಮಾತ್ರ ವಿಚಿತ್ರ ಎನಿಸುತ್ತದೆ...

By: manu
Subscribe to Boldsky

ನೀನೇ ನನ್ನ ಚಿನ್ನ ಎಂದು ಪತಿಯರು ಪತ್ನಿಯನ್ನು ಎಷ್ಟು ರಮಿಸಿದರೂ ನಿಜವಾದ ಚಿನ್ನದ ಮೇಲಿನ ವ್ಯಾಮೋಹ ಮಹಿಳೆಯರಿಗೆ ಕಡಿಮೆಯಾಗುವುದೇ ಇಲ್ಲ. ಇದಕ್ಕೂ ಬೆಲೆಬಾಳುವ ವಜ್ರವನ್ನು ಮಹಿಳೆಯರು ತಮ್ಮ ಆಪ್ತಮಿತ್ರ ಎಂದೂ ಭಾವಿಸುತ್ತಾರೆ.

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮೊದಲಾದ ದಿನಗಳಲ್ಲಿ ಮಹಿಳೆಯರು ತಮ್ಮ ಆಭರಣಗಳನ್ನು ತೊಟ್ಟುಕೊಂಡು ಸಂಭ್ರಮಿಸುತ್ತಾರೆ. ಉಳ್ಳವರು ತಲೆಯಿಂದ ಪಾದದವರೆಗೆ ಚಿನ್ನದಿಂದ ಶೋಭಿಸಿದರೆ ಇತರರು ತಮ್ಮ ಸಾಮರ್ಥ್ಯಾನುಸಾರ ತೊಡುತ್ತಾರೆ. ಒಟ್ಟಾರೆ ಎಲ್ಲರಿಗೂ ಕೊಂಚವಾದರೂ ಚಿನ್ನ ಬೇಕೇ ಬೇಕು.   ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ವಿಶ್ವದಲ್ಲಿ ಅತಿ ಹೆಚ್ಚಿನ ಚಿನ್ನದ ಆಭರಣಗಳನ್ನು ಕೊಳ್ಳುವ ದೇಶವೆಂದರೆ ಭಾರತ. ಇಲ್ಲಿನ ಎಲ್ಲಾ ಧರ್ಮಗಳಲ್ಲಿಯೂ ಚಿನ್ನಕ್ಕೆ ವಿಶೇಷವಾದ ಮೆರುಗು, ಸಂಪ್ರದಾಯಗಳಿವೆ. ಇದು ಸೌಂದರ್ಯಕ್ಕೂ ಮಿಗಿಲಾಗಿ, ಆ ಕುಟುಂಬದ ಪ್ರತಿಷ್ಠೆ, ಶ್ರೀಮಂತಿಕೆ, ಸಮೃದ್ಧಿಯ ಸಂಕೇತವಾಗಿದೆ. ದೇವರಿಗೆ ತೊಡಿಸುವ ಮೂಲಕ ಈ ಲೋಹಕ್ಕೆ ಧಾರ್ಮಿಕ ಮೌಲ್ಯವೂ ಇದೆ. ಚಿನ್ನದ ಕುಸುರಿ ಕೆಲಸದಲ್ಲಿ ಭಾರತದ ಕುಸುರಿಯನ್ನು ಸರಿಗಟ್ಟುವ ಕಲೆ ಈ ಜಗತ್ತಿನಲ್ಲಿಲ್ಲ.   ಧನ-ಸಂಪತ್ತಿನ ಒಡೆಯರಾಗಲು ಚಿನ್ನಾಭರಣಗಳನ್ನು ಹೀಗೆ ಧರಿಸಿ...

ಹೆಚ್ಚಿನವರು ತಿಳಿದುಕೊಂಡಂತೆ ಚಿನ್ನ ಎಂದರೆ ಮಹಿಳೆಯರ ಸ್ವತ್ತು. ಆದರೆ ಕೆಲವು ಪುರುಷರು ಚಿನ್ನಕ್ಕೆ ಮಹಿಳೆಯರಿಗಿಂತಲೂ ಹೆಚ್ಚಿನ ಒಲವು ತೋರುವುದು ಮಾತ್ರ ವಿಚಿತ್ರ ಎನಿಸುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ...   

ಇವರಿಗೆ ಇದೊಂದು ಬಂಡವಾಳ

ಸಾಮಾನ್ಯವಾಗಿ ಹೆಚ್ಚಿನ ಪುರುಷರು ತಮ್ಮ ವೇತನದ ಒಂದು ಭಾಗವನ್ನು ನಿಯಮಿತವಾಗಿ ಚಿನ್ನ ಕೊಳ್ಳಲು ಮೀಸಲಿಡುತ್ತಾರೆ. ಚಿನ್ನಕ್ಕೆ ಎಂದಿಗೂ ಬೆಲೆ ಇದೆಯಾದುದರಿಂದ ಇದನ್ನು ಯಾವುದೇ ಸಮಯದಲ್ಲಿ ಮಾರಿ ನಗದೀಕರಿಸಬಹುದು.

ಇವರಿಗೆ ಇದೊಂದು ಬಂಡವಾಳ

ಆಪತ್ತಿನ ದಿನದಲ್ಲಿ ಚಿನ್ನಕ್ಕಿಂತ ಬೇರೆ ವಸ್ತು ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಚಿನ್ನದ ನಾಣ್ಯ ಅಥವಾ ಬಿಸ್ಕತ್ತುಗಳನ್ನು ಬಂಡವಾಳದ ರೂಪದಲ್ಲಿ ಸಂಗ್ರಹಿಸುವುದು ಆರ್ಥಿಕ ತಜ್ಞರು ನೀಡುವ ಸಲಹೆಯೂ ಆಗಿದೆ.

ಶ್ರೀಮಂತಿಕೆಯ ಸಂಕೇತ

ಭಾರತದಲ್ಲಿ ಚಿನ್ನದ ಆಭರಣಗಳನ್ನು ತೊಡುವುದು ಶ್ರೀಮಂತಿಕೆಯ ಸಂಕೇತವಾಗಿದ್ದು ಇದನ್ನು ಹೊಂದಿರುವವರು ಭೂಮಿ, ಕಟ್ಟಡಗಳನ್ನು ಹೊಂದಿರುವವರು ಎಂಬುದಾಗಿ ಎದುರಿನವರು ಭಾವಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ಹೆಚ್ಚು ಚಿನ್ನವಿದ್ದಷ್ಟೂ ಹೆಚ್ಚು ಶ್ರೀಮಂತರು ಎಂದರ್ಥ.

ಪ್ರತಿಷ್ಠೆಯ ಪ್ರದರ್ಶನ

ಇಂದು ಪ್ರತಿಷ್ಠೆಯ ಸಂಕೇತ ಪ್ರತಿ ವಸ್ತುವಿನಲ್ಲಿಯೂ ಕಾಣಬಹುದು. ಅಗ್ಗದ ದರದಲ್ಲಿ ನ್ಯಾನೋ ಕಾರನ್ನು ನೀಡುವ ಟಾಟಾರವರ ಹುಮ್ಮಸ್ಸಿಗೆ ಏನಾಯಿತು? ಇತರ ದುಬಾರಿ ಕಾರುಗಳ ಎದುರು ಇದಕ್ಕೆ ಪ್ರತಿಷ್ಠೆ ಇಲ್ಲವೆಂದು ಜನಸಾಮಾನ್ಯರೇ ದೂರ ಮಾಡಿಲ್ಲವೇ? ಹಾಗೇ ಚಿನ್ನವಿದ್ದಷ್ಟೂ ಪ್ರತಿಷ್ಠೆಯೂ ಹೆಚ್ಚು ಎಂದು ನಾವೆಲ್ಲಾ ಭಾವಿಸಿಕೊಂಡಿದ್ದೇವೆ.

ಪ್ರತಿಷ್ಠೆಯ ಪ್ರದರ್ಶನ

ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಎದುರಿನವರಿಗೆ ಸ್ಪಷ್ಟವಾಗಿ ಕಾಣುವಂತೆಯೇ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಇದಕ್ಕೆ ವಿಪರೀತ ಎನ್ನುವಂತೆ ಸಂಗೀತ ನಿರ್ದೇಶಕ ಬಪ್ಪಿ. ಲಾಹಿರಿಯವರು ಕೇಜಿಗಟ್ಟಲೇ ಚಿನ್ನ ತೊಡುತ್ತಾರೆ.

ಚಿನ್ನ ಶುಭಸಂಕೇತ ಎಂಬ ನಂಬಿಕೆ

ಭಾರತದಲ್ಲಿ ಚಿನ್ನ ಎಂದರೆ ಸಮೃದ್ಧಿ, ಶುಭ ಹಾಗೂ ಅನಂತತೆಯ ಸಂಕೇತವಾಗಿದೆ. ಅಕ್ಷಯ ತೃತೀಯ, ಧಾಂತೇರಾಸ್ ಮೊದಲಾದ ಹಬ್ಬಗಳಲ್ಲಿ ಚಿನ್ನವನ್ನು ಕೊಳ್ಳುವುದು ಶುಭ, ಸಮೃದ್ಧಿಯ ಸಂಕೇತ ಎಂಬ ಕಾರಣದಿಂದ ಹೆಚ್ಚಿನವರು ಚಿನ್ನವನ್ನು ಕೊಳ್ಳುತ್ತಾರೆ. ಹೊಸ ವ್ಯಾಪಾರ ಪ್ರಾರಂಭಿಸಲೂ ಈ ದಿನಗಳು ಉತ್ತಮ ಎಂಬ ನಂಬಿಕೆಯೂ ಇದೆ.

ಮಗಳ ಮದುವೆಗೆ ಚಿನ್ನ ಸಂಗ್ರಹ

ಭಾರತದಲ್ಲಿ ಮದುವೆ ಎಂದರೆ ಚಿನ್ನದ ಪ್ರದರ್ಶನ ಎಂಬಷ್ಟು ಮಟ್ಟಿಗೆ ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಅದರಲ್ಲೂ ಮದುಮಗಳಿಗೆ ಚಿನ್ನದ ಭಾರೀ ಭಾರವನ್ನು ಹೊರಬೇಕಾಗಿ ಬರುತ್ತದೆ. ಇವರಿಗೆ ಕಡಿಮೆ ಇಲ್ಲದಂತೆ ವರ ಹಾಗೂ ಮನೆಯವರೂ ಸಾಕಷ್ಟು ಪ್ರಮಾಣದ ಚಿನ್ನ ಧರಿಸುತ್ತಾರೆ.

ಮಗಳ ಮದುವೆಗೆ ಚಿನ್ನ ಸಂಗ್ರಹ

ಮನೆಯಿಂದ ಗಂಡನ ಮನೆಗೆ ಹೋಗುವ ಮಗಳು ಸುಖವಾಗಿರಲಿ ಎಂದು ಹಾರೈಸುವ ತಂದೆ ತಾಯಿಯರು ಮಗಳಿಗೆ ತಮ್ಮ ಸಾಮರ್ಥ್ಯಾನುಸಾರ ಚಿನ್ನವನ್ನು ಕೊಟ್ಟು ಕಳಿಸುತ್ತಾರೆ. ಈ ದಿನಕ್ಕೆಂದೇ ಮಗಳು ಹುಟ್ಟಿದಾಗಿನಿಂದ ಕೊಂಚಕೊಂಚವಾಗಿ ಚಿನ್ನವನ್ನು ಕೊಳ್ಳುತ್ತಾ ಸಂಗ್ರಹಿಡುತ್ತಾರೆ.

ಏರುವ ಚಿನ್ನದ ಬೆಲೆಯ ಲಾಭ ಪಡೆಯಲು

ಚಿನ್ನದ ಬೆಲೆ ಏರುಪೇರಾಗುತ್ತಾ ಇರುತ್ತದೆ. ಶೇರುಪೇಟೆಯಲ್ಲಿ ಹಣ ಹೂಡಿ ಅದೃಷ್ಟ ಪರೀಕ್ಷಿಸುವವರಂತೆಯೇ ಚಿನ್ನವನ್ನು ಬೆಲೆ ಕಡಿಮೆ ಇದ್ದಾಗ ಖರೀದಿಸಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲೂ ಒಂದು ಅವಕಾಶವಿದೆ. ಆದರೆ ಚಿನ್ನದ ಬೆಲೆ ಎಷ್ಟೇ ಹೆಚ್ಚಾಗಲಿ, ಚಿನ್ನದ ಬೇಡಿಕೆ ಮಾತ್ರ ಕಡಿಮೆಯಾಗದೇ ಇರುವುದು ಮಾತ್ರ ಅಚ್ಚರಿಯ ವಿಷಯವಾಗಿದೆ.

 

Story first published: Thursday, October 20, 2016, 12:40 [IST]
English summary

Reasons Why Some Men Like Gold

Diamond is known as a woman's best friend, but gold is her companion too. From birthdays to marriages, women, specifically Indian women, are covered with gold from top to bottom. The work of gold in India is unmatched to any other parts of the world. Here are some of the reasons on why some men also like gold, do check them out and see if they match you in any way.
Please Wait while comments are loading...
Subscribe Newsletter