For Quick Alerts
ALLOW NOTIFICATIONS  
For Daily Alerts

ಅಯ್ಯೋ, ಯಾಕಪ್ಪಾ ಬಂತು ಈ ಸೋಮವಾರ!

By Manu
|

ವಾರಾಂತ್ಯ ಬಂತೆಂದರೆ ನಮಗೆ ತುಂಬಾ ಖುಷಿ. ವಾರವಿಡಿ ಕೆಲಸ ಮಾಡಿದ ಬಳಿಕ ಒಂದು ದಿನವಾದರೂ ವಿಶ್ರಾಂತಿ ಪಡೆಯಬಹುದು ಅಥವಾ ಎಲ್ಲಿಗಾದರೂ ಪ್ರಶಾಂತ ಸ್ಥಳಕ್ಕೆ ತಿರುಗಾಡಲು ಹೋಗಿ ಎಲ್ಲಾ ಜಂಜಾಟಗಳನ್ನು ಮರೆಯಬಹುದು ಎಂದು ಮನಸ್ಸಿನಲ್ಲಿರುತ್ತದೆ. ಭಾನುವಾರವನ್ನು ತುಂಬಾ ಮಜಾವಾಗಿ ಕಳೆದ ಬಳಿಕ ಸೋಮವಾರ ಬಂತೆಂದರೆ ಅದು ನಮ್ಮಲ್ಲಿ ಉದಾಸೀನವನ್ನು ಉಂಟು ಮಾಡುವುದು.

ಶಾಲಾ ದಿನಗಳಲ್ಲಿ ಸೋಮವಾರ ಬಂತೆಂದರೆ ನಮಗೆ ಸ್ನೇಹಿತರನ್ನು ಭೇಟಿಯಾಗಿ ಅವರೊಂದಿಗೆ ಆಡುವ ಖುಷಿಯಿತ್ತು. ಆದರೆ ಈಗ ಕೆಲಸದ ಒತ್ತಡದಿಂದಾಗಿ ಯಾಕಪ್ಪಾ ಈ ಸೋಮವಾರ ಬರುತ್ತದೆ ಎಂದನಿಸುತ್ತದೆ. ಸೋಮವಾರವನ್ನು ನಾವು ಯಾಕೆ ಅತಿಯಾಗಿ ದ್ವೇಷಿಸುತ್ತೇವೆ ಎಂದು ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ.

ವಿಶ್ವದೆಲ್ಲೆಡೆ ಸೋಮವಾರವನ್ನು ಅತಿಯಾಗಿ ದ್ವೇಷಿಸಲು ಕಾರಣವೇನೆಂದು ಇಲ್ಲಿ ಕೊಟ್ಟಿರುವ ಕೆಲವೊಂದು ವಿಷಯಗಳನ್ನು ನೀವು ನಿರಾಕರಿಸಲು ಸಾಧ್ಯವಿಲ್ಲ. ನೀವು ಕೂಡ ಸೋಮವಾರ ಶಬ್ದ ಕೇಳಿದರೆ ಉರಿದು ಬೀಳಬಹುದು. ವಾರದ ಆರಂಭವನ್ನು ಯಾಕೆ ದ್ವೇಷಿಸುತ್ತೇವೆ ಮತ್ತು ವಾರಾಂತ್ಯವನ್ನು ಯಾಕೆ ಅಷ್ಟು ಇಷ್ಟಪಡುತ್ತೇವೆ ಎಂದು ತಿಳಿಯಲು ಮುಂದೆ ಓದಿಕೊಳ್ಳಿ.

ಕೆಲಸವನ್ನು ದ್ವೇಷಿಸುವುದು

ಕೆಲಸವನ್ನು ದ್ವೇಷಿಸುವುದು

ನಾವು ದ್ವೇಷಿಸುವ ಜಾಗಕ್ಕೆ ಹೋಗಲು ಬೆಳಗ್ಗೆ ಏಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಕೆಲವೊಂದು ಅಧ್ಯಯನಗಳ ಪ್ರಕಾರ ಕೆಲಸದ ಸ್ಥಳವನ್ನು ಪ್ರೀತಿಸುವ ಮತ್ತು ಅಲ್ಲಿಗೆ ಹೋಗಲು ಇಷ್ಟಪಡುವ ಜನರು ತುಂಬಾ ಕಡಿಮೆ.

ರಜೆ ಮುಗಿಯುವುದು

ರಜೆ ಮುಗಿಯುವುದು

ತುಂಬಾ ಸಂತೋಷದಿಂದ ರಜೆಯನ್ನು ಕಳೆದ ಬಳಿಕ ಕೆಲಸದ ಸ್ಥಳ ಅಥವಾ ಕಾಲೇಜಿಗೆ ಹೋಗುವುದು ತುಂಬಾ ಉದಾಸೀನವನ್ನು ಉಂಟುಮಾಡುವುದು. ಅದರಲ್ಲೂ ಸೋಮವಾರದಂದು.

ವಾರಾಂತ್ಯ ಕೊನೆಗೊಳ್ಳುವುದು

ವಾರಾಂತ್ಯ ಕೊನೆಗೊಳ್ಳುವುದು

ಕಳೆದ ಎರಡು ದಿನಗಳಲ್ಲಿ ನೀವು ಅನುಭವಿಸಿದ ಸ್ವಾತಂತ್ರ್ಯ ಮತ್ತು ಖುಷಿಯು ಸೋಮವಾರವನ್ನು ದ್ವೇಷಿಸುವಂತೆ ಮಾಡುವುದು. ವಾರಾಂತ್ಯದಲ್ಲಿ ಪಾರ್ಟಿ ಮಾಡಲೇಬೇಕೆಂದಿಲ್ಲ. ಆದರೆ ಈ ಸಮಯದಲ್ಲಿ ನೀವು ಹೆಚ್ಚಾಗಿ ವಿಶ್ರಾಂತಿ ಪಡೆಯುತ್ತೀರಿ. ವಾರಾಂತ್ಯ ಮುಗಿಯುವುದನ್ನು ಊಹಿಸುವುದು ಕಷ್ಟ.

ಏಕತಾನತೆ

ಏಕತಾನತೆ

ಕೆಲಸದಲ್ಲಿ ಏಕತಾನತೆ ಇರುವುದರಿಂದ ಮತ್ತು ಯಾವುದೇ ಬದಲಾವಣೆಗಳು ಇಲ್ಲದೆ ಇರುವಾಗ ಜೀವನವೆನ್ನುವುದು ತುಂಬಾ ಬೋರ್ ಎನಿಸುವುದು. ಇದರಿಂದ ಸೋಮವಾರವನ್ನು ಕಂಡರೆ ನಮಗೆ ತುಂಬಾ ಸಿಟ್ಟು ಬರುವುದು.

 ವೈಯಕ್ತಿಕ ಕಾರಣಗಳು

ವೈಯಕ್ತಿಕ ಕಾರಣಗಳು

ನೋವು, ಕಳೆದ ರಾತ್ರಿಯ ನಶೆ ಇಳಿಯದೆ ಇರುವುದು, ನಿಶ್ಯಕ್ತಿ ಇತ್ಯಾದಿಗಳು ಸೋಮವಾರ ಬೆಳಿಗ್ಗೆ ನಿರಾಶೆಯನ್ನು ಉಂಟು ಮಾಡುವುದು. ಧರಿಸಲು ಬಟ್ಟೆ ಸರಿಯಾಗಿ ಇಲ್ಲದಿರುವಾಗ ವ್ಯಕ್ತಿಯಲ್ಲಿ ನಿರಾಶೆ ಉಂಟು ಮಾಡುವುದು. ವಾರದ ಆರಂಭದ ದಿನ ಸೋಮವಾರವನ್ನು ದ್ವೇಷಿಸಲು ಇಷ್ಟೆಲ್ಲಾ ಕಾರಣಗಳಿವೆ.

English summary

Reasons Why Mondays Are The Worst!!

In this article, we are here to share some of most common reasons why we hate Mondays or anything that is associated with us starting the morning. These are the reasons which can only anger you with the very thought of thinking about the word "Monday". We're sure you would agree with some of these points, as there is no denying of the fact that Mondays are hated the most all over the world. Find out more about the different reasons why you would genuinely hate even thinking of this day and crave for weekends instead. Read on to know more.
Story first published: Monday, July 25, 2016, 11:53 [IST]
X
Desktop Bottom Promotion