For Quick Alerts
ALLOW NOTIFICATIONS  
For Daily Alerts

ಯಾರು ಏನೇ ಹೇಳಿ, ನಮ್ಮವರಿಗೆ ಚಹಾ ಎಂದರೆ ಪಂಚ ಪ್ರಾಣ!

By Manu
|

ಭಾರತದ ಯಾವುದೇ ಊರಿನಲ್ಲಿ ಏನು ದೊರಕದೇ ಇದ್ದರೂ ಚಹಾ ಅಥವಾ ಟೀ ಮಾತ್ರ ದೊರೆತೇ ದೊರಕುತ್ತದೆ. ಹೆಚ್ಚಿನ ಭಾರತೀಯರ ನೆಚ್ಚಿನ ಪೇಯವಾಗಿರುವ ಚಹಾ ಅಗ್ಗವೂ ಆಗಿದೆ. ಕರ್ನಾಟಕದಲ್ಲಿ ಕಾಫಿ ಸಹಾ ಜನಪ್ರಿಯವಾಗಿದೆ. ಆದರೆ ಒಟ್ಟು ಜನಸಂಖ್ಯೆಯಲ್ಲಿ ಕಾಫಿ ಕುಡಿಯುವವರಿಗಿಂತ ಹೆಚ್ಚಾಗಿ ಚಹಾ ಪ್ರಿಯರೇ ಹೆಚ್ಚು.

ಹೋಟೆಲಿನಲ್ಲಿ ಕಾಫಿಗಿಂತಲೂ ಹೆಚ್ಚಾಗಿ ಚಹಾ ಮಾರಾಟವಾಗುತ್ತದೆ. ಕಾಫಿ ಕೆಫೆಗಿಂತ ಹೆಚ್ಚು ಜನರು ರಸ್ತೆಬದಿಯ ತಳ್ಳುಗಾಡಿಯಲ್ಲಿ ಮಾರಾಟವಾಗುತ್ತಿರುವ ಚಹಾ ಹೀರಲು ಹೆಚ್ಚು ಜನರು ಕ್ಯೂ ನಿಲ್ಲುತ್ತಾರೆ. ಟೀ ಕಾಫಿ ಸೇವನೆ ಅತಿಯಾದರೆ, ಅಪಾಯ ಬೆನ್ನೇರಿ ಕಾಡಲಿದೆ!

ನೀವೂ ಚಹಾಪ್ರಿಯರಾಗಿದ್ದರೆ ಈ ಜನಪ್ರಿಯತೆಗೆ ಏನು ಕಾರಣ ಎಂದು ಯಾವಾಗಲಾದರೂ ನಿಮ್ಮ ಮನಸ್ಸಿಗೆ ಬಂದಿರಬಹುದು. ಬನ್ನಿ, ಚಹಾವೇಕೆ ನಮ್ಮ ಮನಸ್ಸಿಗೆ ನಾಟಿಬಿಟ್ಟಿದೆ ಎಂದುದನ್ನು ನೋಡೋಣ:

ಟೀ ನಮ್ಮ ರಾಷ್ಟ್ರೀಯ ಪೇಯ

ಟೀ ನಮ್ಮ ರಾಷ್ಟ್ರೀಯ ಪೇಯ

ನಮ್ಮ ರಾಷ್ಟ್ರೀಯ ಪೇಯ ಚಹಾ ಎಂಬುದು ನಿಮಗೆ ಗೊತ್ತಿತ್ತೇ? ಈ ರಾಷ್ಟ್ರೀಯ ಪೇಯವನ್ನು ಎಪ್ಪತ್ತು ಶೇಖಡಕ್ಕೂ ಹೆಚ್ಚು ಜನರು ಕುಡಿಯುತ್ತಾರೆ. ಕಾಫಿ ಕುಡಿಯುವ ಜನರು ಕೇವಲ ಹದಿನೈದು ಶೇಖಡಾ ಮಾತ್ರ. ಅಲ್ಲದೇ ಓರ್ವ ಟೀ ಕುಡಿಯುವ ವ್ಯಕ್ತಿ ವಾರ್ಷಿಕ ಎಂಟುನೂರು ಗ್ರಾಂ ಟೀ ಪುಡಿ ಬಳಸಿದರೆ ಕಾಫಿಯ ಪ್ರಮಾಣ ಕೇವಲ ಎಂಭತ್ತೈದು ಗ್ರಾಂ ಮಾತ್ರ.

ಯಾವುದೇ ಸಮಯಕ್ಕೂ ಸಲ್ಲುವ ಪೇಯ

ಯಾವುದೇ ಸಮಯಕ್ಕೂ ಸಲ್ಲುವ ಪೇಯ

ಟೀ ಕುಡಿಯಲು ಇಂತಹದ್ದೇ ಸಮಯ ಆಗಬೇಕೆಂದಿಲ್ಲ. ಮುಂಜಾನೆಯ ಪ್ರಥಮ ಪೇಯವಾಗಿ ಸೇವಿಸುವುದರಿಂದ ಹಿಡಿದು ತಡರಾತ್ರಿ ನಿದ್ದೆ ಬರದೇ ಇರಲು ಕುಡಿಯುವ ಪೇಯವಾಗಿ ಟೀ ಬಳಸಲ್ಪಡುತ್ತದೆ. ಹೊರಗೆ ಅತಿಯಾದ ಸೆಖೆ ಇರಲಿ, ಥರಗುಟ್ಟುವ ಚಳಿಯೇ ಇರಲಿ, ಟೀ ಕುಡಿಯುವವರು ಬೇರೆ ಪೇಯವನ್ನು ಬಯಸುವುದಿಲ್ಲ.

ಯಾವುದೇ ತಿಂಡಿಯೊಂದಿಗೂ ಸೈ

ಯಾವುದೇ ತಿಂಡಿಯೊಂದಿಗೂ ಸೈ

ಈ ಪೇಯದೊಂದಿಗೆ ಯಾವುದೇ ಕುರುಕಲು ತಿಂಡಿಯನ್ನು ಜೊತೆಯಾಗಿ ಸೇವಿಸಬಹುದು. ಬಿಸಿಬಿಸಿ ಸಮೋಸಾ, ಬಿಸ್ಕತ್ತು, ಸಿಹಿತಿಂಡಿ, ಅವಲಕ್ಕಿ, ಉಪ್ಪಿಟ್ಟು, ಒಟ್ಟಾರೆ ಯಾವುದೇ ತಿಂಡಿಯೊಂದಿಗೂ ಟೀ ಕುಡಿಯುವುದು ಎಲ್ಲರಿಗೂ ಇಷ್ಟ. ಎಷ್ಟೋ ಜನರಿಗೆ ಊಟದ ಬಳಿಕವೂ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಊಟದ ತಕ್ಷಣದ ಬದಲು ಕೊಂಚ ಹೊತ್ತು ಬಿಟ್ಟು ಕುಡಿಯುವ ಮೂಲಕ ಜೀರ್ಣಶಕ್ತಿ ಹೆಚ್ಚಿಸಬಹುದು.

ಬದಲಾವಣೆಗೆ ಹಲವು ಸ್ವಾದಗಳಿವೆ

ಬದಲಾವಣೆಗೆ ಹಲವು ಸ್ವಾದಗಳಿವೆ

ಚಹಾವನ್ನು ಅದರ ಸ್ವಂತ ಸ್ವಾದದ ಜೊತೆಗೇ ಇನ್ನಿತರ ಸ್ವಾದಗಳೊಂದಿಗೂ ಸೇವಿಸುವುದನ್ನು ಚಹಾಪ್ರಿಯರು ಇಷ್ಟಪಡುತ್ತಾರೆ. ಏಲಕ್ಕಿ, ದಾಲ್ಚಿನ್ನಿ, ಹೆಚ್ಚಿನ ಸಕ್ಕರೆ, ಕಡಿಮೆ ಸಕ್ಕರೆ, ಹಾಲು ಸಹಿತ, ಹಾಲು ರಹಿತ, ಲಿಂಬೆರಸ ಸೇರಿಸಿ, ಪುದೀನಾ ಎಲೆ ಸೇರಿಸಿ, ಕ್ಯಾಮೋಮೈಲ್ ಮೊದಲಾದ ಹತ್ತು ಹಲವು ಸ್ವಾದಗಳಲ್ಲಿ ಚಹಾ ಸವಿಯಬಹುದು. ಈಗಂತೂ ಚಹಾ ದೊಡನೆ ಸೇರಿಸುವ ಮಸಾಲೆ ಸಹಾ ಲಭ್ಯವಿದೆ.

ಧೂಮಪಾನಕ್ಕೆ ಸರಿಯಾದ ಜೊತೆ!

ಧೂಮಪಾನಕ್ಕೆ ಸರಿಯಾದ ಜೊತೆ!

ಧೂಮಪಾನಿಗಳಿಗೆ ಧೂಮದೊಂದಿಗೆ ಚಹಾ ಸೇವಿಸುವುದೇ ಅತ್ಯಂತ ಇಷ್ಟವಾದ ಕ್ರಮ. ಒಂದು ದಮ್ ಹೊಗೆ, ಇನ್ನೊಂದು ಗುಟುಕು ಚಹಾ ಸೇವಿಸುವ ಪರಿ ಹೆಚ್ಚಿನ ಧೂಮಪಾನಿಗಳ ನೆಚ್ಚಿನ ಕ್ರಮವಾಗಿದೆ.

ಚಹಾಕೂಟಗಳಲ್ಲಿ ಹೆಚ್ಚಿನ ಆತ್ಮೀಯ ಚರ್ಚೆ ನಡೆಯುತ್ತದೆ

ಚಹಾಕೂಟಗಳಲ್ಲಿ ಹೆಚ್ಚಿನ ಆತ್ಮೀಯ ಚರ್ಚೆ ನಡೆಯುತ್ತದೆ

ಯಾವುದಾದರೂ ಚರ್ಚೆಗೆ ಆತ್ಮೀಯರನ್ನು ಆಹ್ವಾನಿಸಬೇಕಾದರೆ ಚಹಾಕ್ಕೆಂದು ಆಹ್ವಾನಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ಚಹಾ ಸೇವಿಸುತ್ತಾ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲೂ ಚಹಾವೇ ಅತಿ ಸೂಕ್ತವಾದ ಆಯ್ಕೆಯಾಗಿದೆ.

English summary

Reasons Why Indians Are In Love With Tea

Do you know the reason why Indians are in love with tea? Well, if you are one of them, you can share with your reason as to why you are so madly in love with this hot beverage. Though there are coffee day outlets at every nook and corner in the city, you will see a ton of people standing at local chai shops enjoying a flavoured cup of tea in a glass tumbler.
X
Desktop Bottom Promotion