ಸಂಪೂರ್ಣ ಆರೋಗ್ಯವಂತರೇ ಇರುವ ಭೂ ಲೋಕದ ಸ್ವರ್ಗ

ಶ್ರೀಮಂತನೇ ಆಗಿದ್ದರೂ ಆತನಿಗೆ ಅನಾರೋಗ್ಯ ಬಂದೇ ಬರುತ್ತದೆ ಎನ್ನುವ ಮಾತಿದೆ. ಇದು ನಿಜ ಕೂಡ. ಆದರೆ ಕೆಲವೊಂದು ದೇಶಗಳಲ್ಲಿ ಜನರು ಅನಾರೋಗ್ಯಕ್ಕೊಳಗಾಗುವುದು ಅಪರೂಪವಂತೆ. ಇದನ್ನು ಕೇಳಿ ನಮಗೆ ಅಚ್ಚರಿಯಾದರೂ ಇದನ್ನು ನಂಬಲೇಬೇಕು. ಮುಂದೆ ಓದಿ...

By: Jaya subramanya
Subscribe to Boldsky

ನಾವು ಆರೋಗ್ಯಕರವಾಗಿರಬೇಕೆಂದೇ ಹೆಚ್ಚು ಆರೋಗ್ಯಕರವಾಗಿರುವ ಆಹಾರಗಳನ್ನು ಸೇವಿಸುತ್ತೇವೆ. ಇದು ನಮಗೆ ಶಕ್ತಿ ಸಾಮರ್ಥ್ಯಗಳನ್ನು ನೀಡುವುದರ ಜೊತೆಗೆ ನಮ್ಮನ್ನು ಸ್ವಾಸ್ಥ್ಯರನ್ನಾಗಿಸುತ್ತದೆ. ಆದರೆ ಸಂಪೂರ್ಣವಾಗಿ ಆರೋಗ್ಯವಂತರೇ ಇರುವ ಆರೋಗ್ಯವಂತ ಊರಿನ ಬಗ್ಗೆ ನಾವು ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ. ನಮ್ಮ ದೇಹದೊಳಗೇ ನಡೆಯುತ್ತಿದೆ ಅಚ್ಚರಿಗಳ ಸರಮಾಲೆ!

ತಮ್ಮ 70 ರ ಇಳಿಹರೆಯದಲ್ಲೂ ಇವರು ಆರೋಗ್ಯವಂತರಾಗಿದ್ದು ಯುವಕರಂತೆ ಚಟುವಟಿಕೆಯಿಂದ ಇದ್ದಾರೆ ಎಂದರೆ ನೀವು ನಂಬಲೇಬೇಕು. ಕ್ಯಾನ್ಸರ್ ಎಂಬ ರೋಗದ ಬಗ್ಗೆ ಅರಿವೇ ಇಲ್ಲದೆ ಇಲ್ಲಿನ ಜನರು ಆರೋಗ್ಯವಂತರಾಗಿ ಬದುಕುತ್ತಿದ್ದಾರೆ ಅದು ಹೇಗೆ ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ. ಈ ದೇಶಗಳ ಜನರು ಮದ್ದೇ ತಿನ್ನಲ್ಲವಂತೆ! ನಂಬುತ್ತೀರಾ..?

ಇವರು ಯಾವ ವಿಧದ ಆಹಾರಗಳನ್ನು ಸೇವಿಸುತ್ತಿದ್ದಾರೆ ಮತ್ತು ಇವರುಗಳ ಆರೋಗ್ಯದ ಗುಟ್ಟೇನು ಎಂಬುದನ್ನೇ ಇಂದಿಲ್ಲಿ ತಿಳಿದುಕೊಳ್ಳಲಿದ್ದೇವೆ..... 

ಈ ಸ್ಥಳ ಎಲ್ಲಿದೆ

ಉತ್ತರ ಪಾಕಿಸ್ಥಾನದಲ್ಲಿ ಈ ಊರು ಇದ್ದು ಹುಂಜಾ ಸಮುದಾಯದ ಜನರು ಇವರುಗಳಾಗಿದ್ದಾರೆ. ಹುಂಜಾ ವಾಲ್ಲಿ ಎಂಬುದಾಗಿ ಈ ಸ್ಥಳವನ್ನು ಕರೆಯಲಾಗಿದೆ.

ಇಲ್ಲಿನ ಜನರು ಯುವತ್ವವನ್ನು ಹೊಂದಿದ್ದಾರೆ

ತಮ್ಮ ಇಳಿವಯಸ್ಸಿನಲ್ಲೂ ಇಲ್ಲಿನ ಜನರು ಆರೋಗ್ಯವಂತರಾಗಿದ್ದಾರೆ. 70ರ ಇಳಿಹರೆಯದಲ್ಲೂ ಇಲ್ಲಿ ವಾಸಿಸುವ ಜನರು ಸಂಪೂರ್ಣ ಆರೋಗ್ಯಂತರೂ ಮತ್ತು ಹೆಚ್ಚು ಚಟುವಟಿಕೆಯಿಂದ ಉಳ್ಳವರಾಗಿದ್ದಾರೆ.

ಇಲ್ಲಿನವರಿಗೆ ಕ್ಯಾನ್ಸರ್ ಬಗ್ಗೆ ಅರಿವೇ ಇಲ್ಲ!

ಇಂತಹ ರೋಗದ ಬಗ್ಗೆ ಭೂಮಿಯ ಮೇಲೆ ಯಾರಿಗೆ ತಿಳಿದಿಲ್ಲ ಹೇಳಿ? ಕ್ಯಾನ್ಸರ್‎ನಂತಹ ಮಾರಕ ರೋಗದ ಬಗ್ಗೆ ಪ್ರತಿಯೊಬ್ಬರೂ ತಿಳಿದಿದ್ದಾರೆ ಮತ್ತು ಇದರೊಂದಿಗೆ ಹೋರಾಡುವುದು ಎಷ್ಟು ಕಷ್ಟ ಎಂಬುದಾಗಿ ಅನುಭವಿಸುವವರಿಗೆ ತಿಳಿದಿದೆ. ಆದರೆ ಈ ಊರಿನ ಜನರಿಗೆ ಕ್ಯಾನ್ಸರ್ ಬಗ್ಗೆ ತಿಳಿದೇ ಇಲ್ಲ ಎಂದರೆ ನಮಗೇ ಆಶ್ಚರ್ಯವಾಗುತ್ತದೆ.

65ರ ಹರೆಯದಲ್ಲೂ ಇವರು ಮಕ್ಕಳಿಗೆ ಜನ್ಮ ನೀಡುತ್ತಾರೆ

ಸಾಮಾನ್ಯವಾಗಿ 40-45 ರ ಹರೆಯದಲ್ಲಿ ಸ್ತ್ರೀಯರು ಗರ್ಭಧರಿಸುವುದನ್ನು ನಿಲ್ಲಿಸುತ್ತಾರೆ. ಇದಕ್ಕೆ ಅವರುಗಳ ವೈದ್ಯಕೀಯ ಅಂಶಗಳು ಕಾರಣವಾಗಿರುತ್ತದೆ. ಆದರೆ ಈ ಊರಿನಲ್ಲಿ ಮಹಿಳೆಯರು ತಮ್ಮ 65 ರ ಹರೆಯದಲ್ಲೂ ಯಾವುದೇ ಸಮಸ್ಯೆಯಿಲ್ಲದೆ ಗರ್ಭಧರಿಸುತ್ತಾರೆ ಮತ್ತು ಮಗುವಿಗೆ ಜನ್ಮನೀಡುತ್ತಾರೆ. ನಿಜಕ್ಕೂ ಇದು ಆಶ್ಚರ್ಯಕರವಾಗಿದೆ ಅಲ್ಲವೇ?

ಈ ಸ್ಥಳದ ಇತಿಹಾಸ

ನಾಲ್ಕನೇ ಶತಮಾನದಲ್ಲಿ ಈ ಹಳ್ಳಿಗೆ ಬಂದ ಅಲೆಕ್ಸಾಂಡರ್ ಗ್ರೇಟ್ ವಂಶಸ್ಥರಾಗಿರುವವರು ಈ ಸಮುದಾಯದ ಜನರಾಗಿದ್ದಾರೆ. ಇಲ್ಲಿನ ಜನಸಂಖ್ಯೆ 87,000 ಆಗಿದ್ದು ಇದು ಸಂಪೂರ್ಣ ಮುಸ್ಲೀಂ ರಾಷ್ಟ್ರವಾಗಿದೆ.

ಇವರಗಳ ಆರೋಗ್ಯದ ಗುಟ್ಟೇನು

ಇವರಗಳ ಆರೋಗ್ಯದ ಗುಟ್ಟೇನು ಎಂಬುದು ತಿಳಿದು ಬಂದಿದ್ದು ಇವರು ಸಂಪೂರ್ಣ ಆರೋಗ್ಯಕರವಾಗಿರುವ ಆಹಾರ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ ಎಂಬುದಾಗಿದೆ. ಪ್ರೋಟೀನ್ ಭರಿತ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಹಾಲು, ಡ್ರೈ ಫ್ರುಟ್ಸ್, ಮೊಟ್ಟೆ ಮೊದಲಾದವುಗಳನ್ನು ಇವರು ಸೇವಿಸುತ್ತಾರೆ. ಕ್ಯಾನ್ಸರ್‎ನಿಂದ ಇವರನ್ನು ಸಂರಕ್ಷಿಸುವುದು ವಾಲ್‎ನಟ್ ಆಗಿದ್ದು ಅದನ್ನು ಇವರುಗಳು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಾರೆ.

 

English summary

REALLY? Nobody Falls Ill In This Place!

Here, in this article, we are sharing information about a place where people hardly fall ill and they tend to stay young even at the age of 70 years! This community is known as Hunza and the weird things that happen here will simply amaze you. Find out more about this interesting place where people are not even aware of some of the most deadliest of diseases that are otherwise killing the rest of them in different parts of the world...
Please Wait while comments are loading...
Subscribe Newsletter