For Quick Alerts
ALLOW NOTIFICATIONS  
For Daily Alerts

ನ್ಯಾಯ ಬೇಕೆಂದರೆ ಕೊನೆಗೆ 'ನಗ್ನ ಪರೀಕ್ಷೆ'ಗೆ ರೆಡಿಯಾಗಬೇಕು!

ಅತ್ಯಾಚಾರಕ್ಕೆ ಒಳಗಾಗಿರುವ ವಿಷಯ ಸತ್ಯವೇ ಎಂದು ತಿಳಿಯಲು ಅನುಸರಿಸುವ ವೈದ್ಯಕೀಯ ವಿಧಾನ ಯಾವುದು ತಿಳಿದರೆ ಕಾನೂನಿನ ಈ ವಿಧಾನದ ಬಗ್ಗೆ ಜುಗುಪ್ಸೆ ಮೂಡುತ್ತದೆ....

By Manu
|

ಅತ್ಯಾಚಾರಕ್ಕೊಳಗಾದ ವ್ಯಕ್ತಿ ಅತ್ಯಾಚಾರದ ನೇರವಾದ ಪ್ರಭಾವಕ್ಕಿಂತ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಮಾನಸಿಕವಾಗಿ ಬಳಲುತ್ತಾರೆ. ಅದರಲ್ಲೂ ತಮ್ಮ ಮೇಲೆ ಅತ್ಯಾಚಾರವಾಗಿದೆ ಎಂದು ತಿಳಿಸಿ ಹೇಳುವುದೇ ಅತ್ಯಂತ ಕಷ್ಟಕರ ಮತ್ತು ಅಸಹನೀಯವಾದ ಅನುಭವವಾಗಿದೆ. ತಂಗಿಯ ಮೇಲೇ ಅತ್ಯಾಚಾರ ಎಸಗಿದ ಹನ್ನೊಂದರ ಪೋರ!

ಏಕೆಂದರೆ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗಳನ್ನು ಪ್ರಶ್ನಿಸುವ ಮತ್ತು ಪರೀಕ್ಷಿಸುವ ಕಾರ್ಯದಲ್ಲಿ ಅನುಸರಿಸಲಾಗುವ ವಿಧಾನವೇ ಅತ್ಯಾಚಾರಕ್ಕೂ ಹೆಚ್ಚಿನ ಮಾನಸಿಕ ವೇದನೆಯನ್ನು ನೀಡುತ್ತದೆ. ಅತ್ಯಾಚಾರಕ್ಕೆ ಒಳಗಾಗಿರುವ ವಿಷಯ ಸತ್ಯವೇ ಎಂದು ತಿಳಿಯಲು ಅನುಸರಿಸುವ ವೈದ್ಯಕೀಯ ವಿಧಾನ ಯಾವುದು ತಿಳಿದರೆ ಕಾನೂನಿನ ಈ ವಿಧಾನದ ಬಗ್ಗೆ ಜುಗುಪ್ಸೆ ಮೂಡುತ್ತದೆ. ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ

ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಲು ಸಮಾಜ ಒಟ್ಟಾಗಿ ಮೇಣದ ಬತ್ತಿಗಳ ಮೆರವಣಿಗೆ, ಪ್ರತಿಭಟನೆ, ಸರ್ಕಾರದ ಮೇಲೆ ಒತ್ತಡ ಎಲ್ಲವೂ ನಡೆಯುತ್ತವೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

ಆದರೆ ಇತ್ತ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ನಿಜ ಹೇಳುತ್ತಿದ್ದರೆಯೇ ಎಂದು ಪ್ರಮಾಣಿಸಲು ಹಲವು ವ್ಯಕ್ತಿಗಳ ಎದುರು ನಗ್ನ ಪರೀಕ್ಷೆ, ಹಲವು ಸಲಕರಣೆಗಳ ಬಳಕೆ, ನಗ್ನವಾಗಿರುವ ಚಿತ್ರ ತೆಗೆಯುವುದು ಮೊದಲಾದ ಕ್ರಮಗಳಿಂದ ಈ ವ್ಯಕ್ತಿ ಅತ್ಯಾಚಾರದ ಆ ಕ್ಷಣಕ್ಕಿಂತಲೂ ಹೆಚ್ಚಿನ ಅವಮಾನ, ಜುಗುಪ್ಸೆ, ಹತಾಶೆಯನ್ನು ಅನುಭವಿಸಬಹುದು. ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ

ಬನ್ನಿ, ಕಾನೂನಿನ ಪ್ರಕಾರ ಬಾಧಿತ ವ್ಯಕ್ತಿಗಳು ಹೇಳುತ್ತಿರುವುದು ಸತ್ಯವೇ ಎಂದು ಪರೀಕ್ಷಿಸುವ ವಿಧಾನದ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದೆ ಓದಿ....

ಈ ವ್ಯಕ್ತಿಯನ್ನು ಮೊದಲು ನಗ್ನಗೊಳಿಸಲಾಗುತ್ತದೆ

ಈ ವ್ಯಕ್ತಿಯನ್ನು ಮೊದಲು ನಗ್ನಗೊಳಿಸಲಾಗುತ್ತದೆ

ಮೊದಲು ಈ ವ್ಯಕ್ತಿ ನೆಲದ ಮೇಲೆ ಕೆಲವು ಬಿಳಿಯ ಹಾಳೆಗಳನ್ನು ಹಾಸಿದ್ದು ಅದರ ಮೇಲೆ ನಿಂತು ಒಂದೊಂದಾಗಿ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ಪರಿಶೀಲಿಸುವ ವೈದ್ಯರ ಎದುರು ನಗ್ನರಾಗಿ ನಿಲ್ಲಬೇಕಾಗುತ್ತದೆ.

ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ

ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ

ವ್ಯಕ್ತಿಯ ದೇಹ, ಬಟ್ಟೆ, ಆಭರಣಗಳ ಮೇಲೆ ಇರುವ ರಕ್ತ, ಜಿಡ್ಡು, ಗ್ರೀಸ್, ವೀರ್ಯ ಮೊದಲಾದ ಯಾವುದೇ ವಸ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸಂಗ್ರಹಿಸಲಾಗುತ್ತದೆ. ಬಟ್ಟೆಗಳು, ವ್ಯಕ್ತಿಯ ವೈಯಕ್ತಿಕ ವಸ್ತುಗಳು, ನೆಲದ ಮೇಲಿನ ಪೇಪರ್ ಮೇಲೆ ಬಿದ್ದ ಕಣ ಎಲ್ಲವನ್ನೂ ಸಂಗ್ರಹಿಸಲಾಗುತ್ತದೆ

ದೇಹವನ್ನು ಕೂಲಂಕುಷವಾಗಿ ಪರೀಕ್ಷಿಸಲಾಗುತ್ತದೆ

ದೇಹವನ್ನು ಕೂಲಂಕುಷವಾಗಿ ಪರೀಕ್ಷಿಸಲಾಗುತ್ತದೆ

ದೇಹದ ಮೇಲೆ ಕಣ್ಣಿಗೆ ಕಾಣದಂತೆ ತೆಳುವಾಗಿ ಇರುವ ವೀರ್ಯದ ಲೇಪನವನ್ನು ಕಂಡುಹಿಡಿಯಲು ಲೇಸರ್ ಕಿರಣದ ಬೆಳನ್ನು ಹಾಯಿಸಲಾಗುತ್ತದೆ. ವಿಶೇಷವಾಗಿ ಬಾಧಿತ ವ್ಯಕ್ತಿಯ ಸೊಂಟಕ್ಕಿಂತ ಕೆಳಭಾಗದ ಪ್ರತಿ ಅಂಗುಲವನ್ನೂ ಈ ಕಿರಣದ ಬೆಳಕಿನಿಂದ ಪರೀಕ್ಷಿಸಲಾಗುತ್ತದೆ.

ಚಿತ್ರಗಳನ್ನು ತೆಗೆಯಲಾಗುತ್ತದೆ

ಚಿತ್ರಗಳನ್ನು ತೆಗೆಯಲಾಗುತ್ತದೆ

ಬಾಧಿತ ವ್ಯಕ್ತಿಯ ದೇಹದ ಅಂಗಾಂಗಗಳ ಚಿತ್ರ ತೆಗೆಯಲಾಗುತ್ತದೆ. ವಿಶೇಷವಾಗಿ ಮೈಮೇಲೆ ಆಗಿರುವ ಗಾಯಗಳು ಮತ್ತು ಸೊಂಟದ ಕೆಳಗಿನ ಮತ್ತು ಗುಪ್ತಾಂಗಗಳ ಚಿತ್ರಗಳನ್ನು ಅತಿ ಸಮೀಪದಿಂದ ತೆಗೆಯಲಾಗುತ್ತದೆ.

ಹಲ್ಲುಗಳ ಗಾಯಗಳಿಗಾಗಿ ಹುಡುಕಾಟ ನಡೆಯುತ್ತದೆ

ಹಲ್ಲುಗಳ ಗಾಯಗಳಿಗಾಗಿ ಹುಡುಕಾಟ ನಡೆಯುತ್ತದೆ

ಬಾಧಿತ ವ್ಯಕ್ತಿಯ ಶರೀರದ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಹಲ್ಲುಗಳಿಂದಾದ ಗಾಯಗಳಿಗಾಗಿ ಹುಡುಕಾಟವನ್ನು ಕೂಲಂಕುಷವಾಗಿ ನಡೆಸಲಾಗುತ್ತದೆ. ವಿಶೇಷವಾಗಿ ಸ್ತನತೊಟ್ಟುಗಳನ್ನು ಅತಿ ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತದೆ. ಎಲ್ಲಾ ವಿವರಗಳನ್ನು ಬರೆದಿಡಲಾಗುತ್ತದೆ.

ಗುಪ್ತಾಂಗದ ಕೂದಲುಗಳನ್ನು ಬಾಚಲಾಗುತ್ತದೆ

ಗುಪ್ತಾಂಗದ ಕೂದಲುಗಳನ್ನು ಬಾಚಲಾಗುತ್ತದೆ

ಗುಪ್ತಾಂಗದ ಕೂದಲನ್ನು ಚಿಕ್ಕ ಹಲ್ಲುಗಳ ಬಾಚಣಿಗೆ ಬಳಸಿ ಬಾಚಲಾಗುತ್ತದೆ. ಇದರ ಮೂಲಕ ಈ ಕೂದಲುಗಳಲ್ಲಿ ಅತ್ಯಾಚಾರಿಯ ಕೂದಲುಗಳು ಅಥವಾ ಇತರ ಪರಕೀಯ ವಸ್ತುಗಳು ಸಿಗುತ್ತವೆಯೇ ಎಂದು ಹುಡುಕಲಾಗುತ್ತದೆ.

ಗುಪ್ತಾಂಗದ ಕೂದಲುಗಳನ್ನು ಬಾಚಲಾಗುತ್ತದೆ

ಗುಪ್ತಾಂಗದ ಕೂದಲುಗಳನ್ನು ಬಾಚಲಾಗುತ್ತದೆ

ಒಂದು ವೇಳೆ ಬಾಧಿಯ ವ್ಯಕ್ತಿ ಸಾವಿಗೀಡಾಗಿದ್ದರೆ ಇಲ್ಲಿನ ಕೂದಲುಗಳನ್ನು ಹೋಲಿಕೆಗಾಗಿ ಬುಡಸಹಿತ ಕಿತ್ತು ತೆಗೆಯಲಾಗುತ್ತದೆ.

ಗುಪ್ತಾಂಗದ ಕೂದಲನ್ನು ಸಂಗ್ರಹಿಸಲಾಗುತ್ತದೆ

ಗುಪ್ತಾಂಗದ ಕೂದಲನ್ನು ಸಂಗ್ರಹಿಸಲಾಗುತ್ತದೆ

ಸೊಂಟದ ತಳದ ಮೂಳೆಯ ಮೇಲಿರುವ ರೋಮಕ್ಕೂ ಯೋನಿಯ ಮೇಲಿರುವ ರೋಮಕ್ಕೂ ಕೊಂಚ ವ್ಯತ್ಯಾಸವಿದೆ. ಈ ರೋಮಗಳನ್ನೂ ವಿಶ್ಲೇಷಣೆಗಾಗಿ ಸಂಗ್ರಹಿಸಲಾಗುತ್ತದೆ.

ವೀರ್ಯವನ್ನು ಸಂಗ್ರಹಿಸಲಾಗುತ್ತದೆ

ವೀರ್ಯವನ್ನು ಸಂಗ್ರಹಿಸಲಾಗುತ್ತದೆ

ಹತ್ತಿಯ ಉಂಡೆ ಇರುವ ಕಡ್ಡಿಗಳನ್ನು ಗುಪ್ತಾಂಗದಲ್ಲಿ ತೂರಿಸಿ ವೀರ್ಯಾಣುಗಳನ್ನು ಸಂಗ್ರಹಿಸಲಾಗುತ್ತದೆ. ಒಂದು ವೇಳೆ ಅತ್ಯಾಚಾರ ಎರಡು ದಿನಕ್ಕೂ ಮುಂಚಿತವಾಗಿ ನಡೆದಿದ್ದರೆ ಈ ಕಾರ್ಯಕ್ಕಾಗಿ ಗಾಜಿನ ದಂಡವನ್ನು ಬಳಸಲಾಗುತ್ತದೆ. ಇದರಿಂದ ಸಾಧ್ಯವಾಗದಿದ್ದರೆ ಚಮಚ, ಅಥವಾ ಇನ್ನೂ ಕೊಂಚ ಆಳಕ್ಕೆ ತೂರಲು ಸಾಧ್ಯವಿರುವ ಸಾಧನದಿಂದ ಕೆರೆದು ತೆಗೆಯಲಾಗುತ್ತದೆ.

ವೀರ್ಯವನ್ನು ಸಂಗ್ರಹಿಸಲಾಗುತ್ತದೆ

ವೀರ್ಯವನ್ನು ಸಂಗ್ರಹಿಸಲಾಗುತ್ತದೆ

ಸಾಮಾನ್ಯವಾಗಿ ಈ ಕ್ರಿಯೆ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ಇನ್ನೂ ಹೆಚ್ಚಿನ ನೋವನ್ನು ನೀಡುತ್ತದೆ. ಅಲ್ಲದೇ ಈ ಕ್ರಿಯೆ ಅತೀವ ಮುಜುಗರವನ್ನೂ ಉಂಟುಮಾಡುತ್ತದೆ.

ಅಂತಿಮ ವರದಿ

ಅಂತಿಮ ವರದಿ

ಇವೆಲ್ಲವೂ ಮುಗಿದ ಬಳಿಕ ವ್ಯಕ್ತಿಯನ್ನು ಹೊಸ ಬಟ್ಟೆ ತೊಡಲು ಆಚೆ ಕಳಿಸಲಾಗುತ್ತದೆ. ವ್ಯಕ್ತಿಯಿಂದ ಸಂಗ್ರಹಿಸಿದ ವಿವರಗಳು ಮತ್ತು ಇತರ ಸಾಕ್ಷಿಗಳ ನೆರವಿನಿಂದ ನಿಜವಾಗಿಯೂ ಅತ್ಯಾಚಾರ ನಡೆದಿದೆ ಎಂಬುದನ್ನು ದೃಢೀಕರಿಸುತ್ತಾರೆ.

ಅಂತಿಮ ವರದಿ

ಅಂತಿಮ ವರದಿ

ಅತ್ಯಾಚಾರದ ಬಗ್ಗೆ ವ್ಯಕ್ತಿ ಹೇಳುತ್ತಿರುವ ಮಾತುಗಳು ಸತ್ಯವೇ ಅಲ್ಲವೇ ಎಂಬುದನ್ನು ಪರಾಮರ್ಶಿಸಿ ಲಿಖಿತವಾಗಿ ಸತ್ಯವಿಷಯವನ್ನು ವರದಿಯ ರೂಪದಲ್ಲಿ ಸಿದ್ಧಪಡಿಸಲಾಗುತ್ತದೆ. ನಿಜವಾಗಿಯೂ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ಮತ್ತೊಮ್ಮೆ ಈ ಪರಿಯಾಗಿ ಪರೀಕ್ಷಿಸುವುದನ್ನು ನಿಲ್ಲಿಸಿ, ಮತ್ತೊಮ್ಮೆ ಅತ್ಯಾಚಾರಕ್ಕೆ ಸಮನಾದ ಹಿಂಸೆಯನ್ನು ತಪ್ಪಿಸಬೇಕಾಗಿದೆ.

English summary

Raped? The Actual Pain Begins After That...

A person who is raped is all weak and shattered and to prove that they are raped is something even more painful. Have you ever wondered how a rape victim is checked? Or how do they investigate rape cases? Read to know what are the procedures or medical tests that a rape victim has to undergo, in order to prove that she has been raped.
X
Desktop Bottom Promotion