ಮದುವೆಯ ಬಳಿಕ ಪುರುಷರ ಗೋಳು, ಕೇಳುವವರು ಯಾರು?

ಎಲ್ಲರ ಮನೆ ದೋಸೆಯೂ ತೂತೇ ಎಂಬಂತೆ ಪ್ರತಿ ಸಂಸಾರದಲ್ಲಿಯೂ ಪುರುಷರಿಗೆ ಸಂಸಾರದ ತೊಡಕುಗಳು ನಿಧಾನವಾಗಿ ಕಾಣತೊಡಗುತ್ತವೆ,ಇದನ್ನೇ ಸರಿಪಡಿಸಿಕೊಂಡು ಹೋದರೆ ಮಾತ್ರ ಸಂಸಾರ ಹಾಲು ಜೇನಿನಂತೆ ಇರುತ್ತದೆ.....

By: manu
Subscribe to Boldsky

ತನ್ನದೇ ಸಂಸಾರ ಪ್ರಾರಂಭಿಸುವುದು ಪ್ರತಿ ಯುವಕನ ಕನಸಾಗಿದ್ದು ಮನಮೆಚ್ಚಿದ ಮಡದಿಯೊಡನೆ ಪ್ರತ್ಯೇಕವಾದ ಗೂಡು ಹೊಂದುವುದು ಎಲ್ಲರ ಸುಂದರ ಕನಸಾಗಿದೆ. ಆದರೆ ಪ್ರತಿಯೊಂದು ವಿಷಯದಲ್ಲಿರುವಂತೆಯೇ ಇದರಲ್ಲಿಯೂ ಕೆಲವು ಪ್ರಯೋಜನಗಳೂ, ತೊಡಕುಗಳೂ ಇವೆ. ವಿಶೇಷವಾಗಿ ಸ್ವತಂತ್ರರಾಗಿದ್ದ ಯುವಕರು ಸಂಸಾರದ ಬಂಧನದಲ್ಲಿ ಸಿಲುಕಿದೊಡನೆ ತೊಂದರೆ ಹೇಳಿಕೊಳ್ಳಲು ಪ್ರಾರಂಭಿಸುತ್ತಾರೆ.

ಎಲ್ಲರ ಮನೆ ದೋಸೆಯೂ ತೂತೇ ಎಂಬಂತೆ ಪ್ರತಿ ಸಂಸಾರದಲ್ಲಿಯೂ ಪುರುಷರಿಗೆ ಸಂಸಾರದ ತೊಡಕುಗಳು ನಿಧಾನವಾಗಿ ಕಾಣತೊಡಗುತ್ತವೆ. ಏಕೆಂದರೆ ಇದುವರೆಗೆ ಮನೆಗೆ ಬಂದ ಬಳಿಕ ಬಟ್ಟೆಯನ್ನು ಸ್ವಚ್ಛಂದವಾಗಿ ಎಲ್ಲಿ ಬೇಕೋ ಅಲ್ಲಿ ಎಸೆದು ಬೋರಲಾಗಿ ಬಿದ್ದುಕೊಳ್ಳಬಹುದಿತ್ತು. ಈಗ ಹೀಗೆ ಮಾಡಿದರೆ ಬೈಗಳು ತಿನ್ನಬೇಕಾಕುತ್ತದೆ.   ಸೋಮಾರಿ ಗಂಡನೊಂದಿಗೆ ಸಂಸಾರ ನಡೆಸುವುದು ಹೇಗಪ್ಪಾ?

ಇದನ್ನು ನಿರೀಕ್ಷಿಸಿದ್ದು ತನ್ನದು ತಪ್ಪು ಎಂದು ಒಪ್ಪಿಕೊಂಡು ಎಲ್ಲಾ ವಿಷಯದಲ್ಲಿ ಮಹಿಳೆಯರು ಸ್ವಾಭಾವಿಕವಾಗಿ ಹೇಗೆ ಒಪ್ಪ ಓರಣವನ್ನು ಅನುಸರಿಸುತ್ತಾರೋ ಹಾಗೇ ಅನುಸರಿಸಿದರೆ ಸಂಸಾರದ ಸರಿಗಮ ಸರಿಯಾಗುತ್ತದೆ. ಆದರೆ ಹೆಚ್ಚಿನ ಪುರುಷರಿಗೆ ತಮ್ಮ ಅಹಮ್ಮಿಕೆಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾಗದೇ ಮೊದಲ ಪೆಟ್ಟು ಬೀಳುತ್ತದೆ.

ಮದುವೆಯಾಗಿ ಗಂಡನ ಮನೆಗ ಬಂದ ಬಳಿಕ ಸಂಸಾರವನ್ನು ಸುಖವಾಗಿ ಮುಂದುವರೆಸುವ ಇಚ್ಛೆ ಪ್ರತಿ ಯುವತಿಗೂ ಇರುತ್ತದೆ. ಆದರೆ ಪತಿರಾಯ ಮನೆಗೆ ಬಂದಾಗ ಅಥವಾ ಇತರ ಸ್ಥಳಗಳಲ್ಲಿ ಪತಿರಾಯನ ವರ್ತನೆ ಆಕೆಗೆ ಹಿಡಿಸದೇ ಆತನನ್ನು ಬದಲಿಸಲು ಪ್ರಯತ್ನಿಸುತ್ತಾಳೆ. ಈ ಬದಲಿಸುವಿಕೆಯ ಪ್ರಯತ್ನ ಪತಿಯರಿಗೆ ಭಾರೀ ಕಿರಿಕಿರಿ ಎನಿಸುತ್ತದೆ.   ಮಹಿಳೆಯರು ಯಾಕಪ್ಪಾ ಈ ರೀತಿಯಾಗಿ ವರ್ತಿಸುತ್ತಾರೆ?

ವಾಸ್ತವವಾಗಿ ಈ ಕಿರಿಕಿರಿ ಇವರ ಕೆಟ್ಟ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಲು ಇರುವ ಚಿನ್ನದ ಅವಕಾಶವಾಗಿದ್ದು ಇದನ್ನು ಅರ್ಥಮಾಡಿಕೊಳ್ಳದ ಪತಿಯರು ಗೊಣಗುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ತಿರುಗಿ ಜಗಳಕ್ಕೂ ಕಾರಣವಾಗಬಹುದು. ಅಂತೆಯೇ ಪತ್ನಿ ಮನೆಯನ್ನು ಅಲಂಕರಿಸಿದ ಬಳಿಕ ಮನೆಯಲ್ಲಿಯೂ ಕೆಲವಾರು ಬದಲಾವಣೆಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಪುರುಷರಿಗೂ ಕಿರಿಕಿರಿ ಎನಿಸುತ್ತವೆ. ಬನ್ನಿ, ಇಂತಹ ಕೆಲವು ಸಾಮಾನ್ಯ ಸಂಗತಿಗಳನ್ನು ನೋಡೋಣ.....    

ಎಲ್ಲೆಡೆ ಹರಡಿರುವ ಕೂದಲು

ಸಾಮಾನ್ಯವಾಗಿ ನಾವೆಲ್ಲರೂ ನಿತ್ಯವೂ ನೂರು ಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾದರೆ ಕಳೆದುಕೊಂಡ ಈ ಕೂದಲುಗಳು ಎಲ್ಲಿ ಹೋಗುತ್ತವೆ? ಗಾಳಿಗೆ ಹಾರಿ ಕೋಣೆಯ ಮೂಲೆಮೂಲೆಯಲ್ಲಿ ಸಿಲುಕಿರುತ್ತವೆ. ಶೌಚಾಲಯದಲ್ಲಿ, ಆಹಾರದ ಮೇಲೆ, ಕಪಾಟುಗಳಲ್ಲಿ, ಎಲ್ಲೆಲ್ಲಿಯೂ ಕೂದಲುಗಳು ಬಿದ್ದಿರುತ್ತವೆ. ಪುರುಷರ ಕೂದಲಿಗಿಂತಲೂ ಮಹಿಳೆಯರ ಕೂದಲು ಉದ್ದವೂ, ಹೆಚ್ಚು ಗಾಢವೂ ಆಗಿರುವ ಕಾರಣ ಎಲ್ಲಲ್ಲೂ ಕಾಣಬರುವ ಕೂದಲುಗಳು ಪತಿರಾಯನಿಗೆ ಕಿರಿಕಿರಿ ತರಿಸುತ್ತದೆ.

ಕಣ್ಣಿಗೆ ರಾಚುವಂತೆ ಒಳ ಉಡುಪು ಒಣಗಿಸಿರುವುದು

ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಒಳ ಉಡುಪುಗಳನ್ನು ಹೊಂದಿರುತ್ತಾರೆ. ಆದ್ದರಿಂದ ಇದುವರೆಗೆ ನಿಮ್ಮ ಒಳ ಉಡುಪುಗಳನ್ನು ಒಣಗಿಸುತ್ತಿದ್ದ ಸ್ಥಳವೆಲ್ಲಾ ಇವರ ಒಳ ಉಡುಪುಗಳಿಂದ ತುಂಬಿ ಹೋಗಿ ನಿಮ್ಮ ಪಾಪದ ಒಳ ಉಡುಪು ಒಣಗಿಸಲು ಸ್ಥಳವೇ ಸಿಗುವುದಿಲ್ಲ. ಇದೂ ಪತಿರಾಯನಿಗೆ ಕಿರಿಕಿರಿ ತರಿಸುತ್ತದೆ.

ಸಿಗಬಾರದ ಸ್ಥಳದಲ್ಲಿ ಹೇರ್ ಕ್ಲಿಪ್ ಸಿಗುವುದು

ಒಂದು ವೇಳೆ ಟೀವಿ ನೋಡುತ್ತಾ ಸೋಫಾ ಮೇಲೆ ಕುಳಿತಾಗ ಚೂಪಾದ ವಸ್ತುವೊಂದು ಚುಚ್ಚಿದರೆ ಅಚ್ಚರಿಪಡಬೇಕಾಗಿಲ್ಲ. ಏಕೆಂದರೆ ಪತಿಯರು ಎಂದಿಗೂ ಕಲ್ಪಿಸದ ಸ್ಥಳಗಳಲ್ಲೆಲ್ಲಾ ಪತ್ನಿಯರ ವೈಯಕ್ತಿಕ ವಸ್ತುಗಳು ಬಿದ್ದಿರುತ್ತವೆ. ಉದಾಹರಣೆಗೆ ಹೇರ್ ಕ್ಲಿಪ್, ಪಿನ್ನುಗಳು, ಹೇರ್ ಬ್ಯಾಂಡ್ ಇತ್ಯಾದಿಗಳು. ವಾಸ್ತವವಾಗಿ ಈಗ ಇದು ಆಕೆಯ ಮನೆಯಾಗಿದ್ದು ನೀವು ಆಕೆಯ ಸರಹದ್ದು ಪ್ರವೇಶಿಸಿದ್ದೀರಿ. ಆಕೆಯ ಸ್ವಂತ ನಾಡಿನಲ್ಲಿ ಆಕೆ ತನ್ನ ವಸ್ತುಗಳನ್ನು ಹೇಗೆ ಬೇಕಾದರೂ ಹರಡಿಸಿರಬಹುದು, ಇದನ್ನು ನೀವು ಏಕೆಂದು ಕೇಳಬಾರದು ಅಷ್ಟೇ.

ಮನೆಯ ತುಂಬಾ ಸೌಂದರ್ಯ ಸಾಧನಗಳು

ಮಹಿಳೆಯರು ಅಲಂಕಾರಪ್ರಿಯರು. ಇದುವರೆಗೆ ನೀವು ಸಿನೆಮಾದಲ್ಲೋ, ಸ್ನೇಹಿತರ ಮನೆಯಲ್ಲೋ ಕ್ವಚಿತ್ತಾಗಿ ಮೇಕಪ್ ಸಾಮಾನುಗಳನ್ನು ಗಮನಿಸಿದ್ದಿರಬಹುದು. ಆದರೆ ನಿಮ್ಮ ಮನೆಯಲ್ಲಿಯೇ ನಿಮ್ಮ ಪತ್ನಿ ತನ್ನ ಮೇಕಪ್ ಉಪಕರಣಗಳನ್ನು ಒಂದೊಂದಾಗಿ ಜೋಡಿಸುತ್ತಾ ಹೋದಂತೆ 'ಹೀಗೂ ಉಂಟೇ' ಎಂದು ಗಾಬರಿಯಾಗಬಹುದು. ಪತ್ನಿಯರೂ "ಈ ಅಲಂಕಾರವೆಲ್ಲಾ ನಿಮಗಾಗಿಯೇ ಅಲ್ಲವೇ" ಎಂದು ಲಲ್ಲೆಗರೆದರೂ ವಾಸ್ತವವಾಗಿ ಈ ಅಲಂಕಾರ ಅವರ ತೃಪ್ತಿಗೇ ಆಗಿರುತ್ತದೆ.

ತುಂಬಿ ತುಳುಕುವ ಕಪಾಟು

ಮಹಿಳೆಯರಿಗೆ ತಮ್ಮ ಬಟ್ಟೆಗಳ ಸಂಗ್ರಹದ ಬಗ್ಗೆ ಭಾರೀ ಒಲವು ಇರುತ್ತದೆ. ಪ್ರತಿ ಉಡುಗೆಯೂ ಸರಿಯಾದ ಬಣ್ಣಕ್ಕೆ ಮ್ಯಾಚಿಂಗ್ ಆಗಿರಬೇಕು, ತನಗೆ ಒಪ್ಪುವಂತಿರಬೇಕು, ಇತರರ ಬಳಿ ಇರಬಾರದು ಎಂಬೆಲ್ಲಾ ಹತ್ತು ಹಲವು ನಿಯಮಗಳಿಗೆ ಅನುಸಾರವಾಗಿ ಒಂದೊಂದಾಗಿ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಾ ನಿಮ್ಮ ಬಟ್ಟೆಗಳ ಸ್ಥಳವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಾ ಹೋಗುತ್ತದೆ. ಕಡೆಗೂ ಅವರು ಹೇಳುವುದೇ ಇಷ್ಟು. "ನನ್ನ ಬಳಿ ಅಷ್ಟೊಂದು ಬಟ್ಟೆಗಳೇ ಇಲ್ಲ"

ಬಟ್ಟೆಗೆ ಹತ್ತಿಕೊಳ್ಳುವ ಲಿಪ್ ಸ್ಟಿಕ್, ಉಗುರಿನ ಬಣ್ಣ

ತಮ್ಮ ಪತಿಯರನ್ನು ಅಪ್ಪಿ ಮುದ್ದಾಡುವುದೆಂದರೆ ಪ್ರತಿ ಪತ್ನಿಗೂ ಇಷ್ಟವಾದ ಕ್ರಿಯೆ. ಈ ಸಮಯದಲ್ಲಿ ಹಚ್ಚಿಕೊಂಡಿದ್ದ ತುಟಿಯ ಬಣ್ಣ, ಉಗುರಿನ ಬಣ್ಣ, ಮೇಕಪ್, ಉಡುಪಿನ ಗ್ಲಿಟ್ಟರ್, ಕಣ್ಣಿನ ಕಾಡಿಗೆ ಮೊದಲಾದ ಬಣ್ಣಗಳು ಪತಿರಾಯರ ಬಟ್ಟೆಗೆ, ಕೈಗೆ ಮುಖಕ್ಕೆ ಅಂಟಿಕೊಳ್ಳುತ್ತವೆ. ಇದನ್ನು ನೋಡಿ ಸರಿಪಡಿಸಿಕೊಂಡರೆ ಸರಿ, ಇಲ್ಲದಿದ್ದರೆ ಹೊರಗೆ ಹೋದ ಬಳಿಕ ಬೇರೆಯವರು ಇದನ್ನು ಗಮನಿಸಿದರೆ ಮಾತ್ರ ಅತ್ಯಂತ ಮುಜುಗರ ಎದುರಿಸಬೇಕಾಗುತ್ತದೆ.

ಮನೆಯಲ್ಲೊಂದು ಪುಟ್ಟ ಚಪ್ಪಲಿ ಅಂಗಡಿ!

ಯಾವಾಗ ಸಂಸಾರ ಪ್ರಾರಂಭವಾಯಿತೋ ಆಗಲೇ ಪತಿರಾಯರಿಗೆ ತಮ್ಮ ಪತ್ನಿಗೆ ಚಪ್ಪಲಿ ಮತ್ತು ಬಟ್ಟೆಗಳ ಹುಚ್ಚು ಇದೆ ಎಂದು ಗೊತ್ತಾಗುತ್ತದೆ. ಗಾಬರಿ ಬೇಡ, ಇದು ಪ್ರತಿ ಪತಿಯರಿಗೂ ಅನ್ವಯಿಸುತ್ತದೆ. ಬಟ್ಟೆಗಳಿಂದ ಕಪಾಟು ತುಂಬಿ ತುಳುಕಿದರೆ ವಿವಿಧ ಚಪ್ಪಲಿಗಳಿಂದ ಶೂರ್‍ಯಾಕ್ ತುಂಬಿ ತುಳುಕುತ್ತದೆ. ಅಪರೂಪಕ್ಕೆ ತೆಗೆಯುವ ನಿಮ್ಮ ಸ್ಪೋರ್ಟ್ ಶೂ ಈ ಭಾರೀ ಮಹಿಳಾ ಪಾದುಕೆಗಳ ರಾಶಿಯಡಿ ಇದ್ದು ಇದನ್ನು ತೆಗೆಯಲು ಪರಿಪಾಟಲು ಪಡಬೇಕಾಗುತ್ತದೆ.

 

Story first published: Thursday, November 3, 2016, 12:00 [IST]
English summary

Problems A Man Faces When He Lives With A Woman

Find out about the most irritating habits that most of the women do have and about the things that happen when a man starts living with a woman.
Please Wait while comments are loading...
Subscribe Newsletter