For Quick Alerts
ALLOW NOTIFICATIONS  
For Daily Alerts

ಮೋಜು, ಮಸ್ತಿ ಮಾಡಿಕೊಂಡೇ ಮದುವೆಯಾದವರ ಕಥೆ ಇದು!

By Deepak
|

ಮದುವೆ ಎಂಬುದು ಸಾಮಾನ್ಯರ ಬಾಳಿನಲ್ಲಿ ಒಮ್ಮೆ ಮಾತ್ರ ಬರುವ ವಿಶೇಷ. ಕೆಲವು ವಿಶೇಷ ಮತ್ತು ವಿಶಿಷ್ಟ ವ್ಯಕ್ತಿಗಳು ಮಾತ್ರ, ಇದನ್ನು ಹವ್ಯಾಸವಾಗಿಟ್ಟುಕೊಂಡು ಸಂಗಾತಿಗಳನ್ನು ಬದಲಾಯಿಸುತ್ತಲೆ ಇರುತ್ತಾರೆ. ಬನ್ನಿ ಆ 'ಇಂದ್ರ'ಲೋಕದ ವ್ಯಕ್ತಿಗಳನ್ನು ಬಿಟ್ಟು ನಮ್ಮ ಲೋಕದವರ ಕತೆ ಮಾತನಾಡೋಣ. ಮದುವೆ ಎಂದರೆ ಮುಗಿಯಿತು ತಿಂಗಳ ಮೊದಲೇ ನಮ್ಮ ಅಬ್ಬರ ಶುರುವಾಗುತ್ತೆ.

ಮಂಟಪದಿಂದ ಹಿಡಿದು ಮಧುಚಂದ್ರಕ್ಕೆ ಹೋಗಿ ಯಾವ ಕಾರ್ಯಕ್ರಮಗಳನ್ನು, ಸ್ಥಳಗಳನ್ನು ನೋಡಬೇಕು ಎಂಬುದರವರೆಗೆ ಇದರ ಪಟ್ಟಿ ಬೆಳೆಯುತ್ತದೆ. ಹುಡುಗಿ ತಾನು ಹಾಕುವ ಬಟ್ಟೆಗೆ ಹೊಂದಾಣಿಕೆಯಾಗುವ ಸಣ್ಣ ಗುಂಡು ಸೂಜಿಯನ್ನು ಸಹ ಬಿಡುವುದಿಲ್ಲ. ಹುಡುಗ ಹೇರ್ ಕಟ್‌ನಿಂದ ಹಿಡಿದು ಸಾಕ್ಸ್ ಮತ್ತು ಶೂವರೆಗೆ ಸಿದ್ಧನಾಗಿರುತ್ತಾನೆ. ಮದುವೆಯೋ ಅಥವಾ ಶಿಕ್ಷೆಯೋ ಒಂದೂ ಅರ್ಥವಾಗುತ್ತಿಲ್ಲ!

ಇಲ್ಲಿ ನಾವು ಸಿದ್ಧತೆಯ ಬಗ್ಗೆ ಅಲ್ಲ, ಬದಲಿಗೆ ಮದುವೆ ಯಾವ ಯಾವ ಸ್ಥಳದಲ್ಲಿ ಹೇಗೆ ಆಯಿತು ಎಂದು ನಿಮಗೆ ತಿಳಿಸುತ್ತಿದ್ದೇವೆ. ಬನ್ನಿ ಈ ಅಪರೂಪದ ಮದುವೆಗಳನ್ನು ನಾವು ಸಹ ಚಿತ್ರಗಳಲ್ಲಿಯಾದರು ನೋಡಿಕೊಂಡು ಬರೋಣ. ಮದುವೆಯಲ್ಲೂ ಸಹ ಈ ಬಗೆಯ ಸೃಜನಶೀಲತೆ ಮೆರೆದಿದ್ದಾರಲ್ಲ ಅವರಿಗೆ ಒಂದು ಅಭಿನಂದನೆ ಸಲ್ಲಿಸೋಣ. ನೀವು ಒಂದು ವೇಳೆ ಮದುವೆಯಾಗದಿದ್ದಲ್ಲಿ, ಇಂತಹ ಒಂದು ಆಲೋಚನೆಯನ್ನು ನೀವು ಸಹ ಮಾಡಿ... ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

ಈ ಗುಲಾಬಿಯು ನಿನಗಾಗಿ

ಈ ಗುಲಾಬಿಯು ನಿನಗಾಗಿ

ಚೀನಾದಲ್ಲಿ ಒಬ್ಬ ಭೂಪನು ತನ್ನ ಇಡೀ ಒಂದು ವರ್ಷದ ಸಂಬಳವನ್ನು ಖರ್ಚು ಮಾಡಿ 99,999 ಗುಲಾಬಿಗಳನ್ನು ತನ್ನ ಪ್ರೇಯಸಿಗಾಗಿ ಮದುವೆಯ ದಿನ ಉಡುಗೊರೆಯಾಗಿ ನೀಡಿದನು. ಚೀನಾದಲ್ಲಿ 999 ಎಂಬುದು ಅದೃಷ್ಟದ ಸಂಕೇತ. ಈ ಗುಲಾಬಿಗಳು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಇವರಿಗಾಗಿ ಹಾರಿಬಂದವು. ಇದನ್ನು 30 ಕಾರುಗಳಲ್ಲಿ ಸಾಗಿಸಲಾಯಿತು. Image courtesy

ಗುರುತ್ವಾಕರ್ಷಣೆ ರಹಿತ ಮದುವೆ

ಗುರುತ್ವಾಕರ್ಷಣೆ ರಹಿತ ಮದುವೆ

ಎರಿನ್ ಮತ್ತು ನೋಹಾ ಫಲ್ಮರ್ ಎಂಬ ನ್ಯೂಯಾರ್ಕ್‌ನ ಜೋಡಿಯು ಬೋಯಿಂಗ್ 727-200 ವಿಮಾನದಲ್ಲಿ ಹೋಗುವಾಗ ಮದುವೆಯಾದರು. ಇವರ ಮದುವೆಯನ್ನು ಮತ್ತಷ್ಟು ವಿಶೇಷ ಮಾಡಲು ವಿಮಾನ ಸಿಬ್ಬಂದಿ ವಿಮಾನವನ್ನು ಗುರುತ್ವಾಕರ್ಷಣೆ ಮಾಡಿದರು. ಇದನ್ನು ನೀವು ಸಹ ಪ್ರಯತ್ನಿಸಬಹುದು, ಸ್ವಲ್ಪ ಹಣ ಖರ್ಚಾಗುತ್ತದೆಯಷ್ಟೆ. Image courtesy

ಸೈಕಲ್ ಸವಾರಿ

ಸೈಕಲ್ ಸವಾರಿ

ಸೈಕಲ್ ಸವಾರಿ ಮಾಡುವ ಇಷ್ಟವಿರುವ ಈ ಸಂಗಾತಿಗಳು ತಮ್ಮ ಮದುವೆಯನ್ನು ಸೈಕಲ್‌ಗಳ ಮೇಲೆಯೇ ಮಾಡಿಕೊಂಡರು. ಅವರ ಅತಿಥಿಗಳು ಸಹ ನಗರದಾದ್ಯಂತ ಸೈಕಲ್ ಸವಾರಿ ಮಾಡಿ ಇವರಿಗೆ ಅಭಿನಂದನೆ ಸಲ್ಲಿಸಿದರು! Image courtesy

ಶಾರ್ಕ್ ತೊಟ್ಟಿಯಲ್ಲಿ ಮದುವೆ

ಶಾರ್ಕ್ ತೊಟ್ಟಿಯಲ್ಲಿ ಮದುವೆ

ಅಬ್ಬಾ ಇದು ಗುಂಡಿಗೆ ಇರುವವರ ಮದುವೆ. 120000 ಗ್ಯಾಲನ್ ನೀರು ಮತ್ತು ಅದರಲ್ಲಿ ಒಂದು ಶಾರ್ಕ್ ಇದ್ದ ತೊಟ್ಟಿಯಲ್ಲಿ ಈ ಜೋಡಿ ಮದುವೆಯಾದರು. ಬಿಳಿ ಡೈವರ್ ಸೂಟಿನಲ್ಲಿ ವಧು, ಕಪ್ಪು ಡೈವರು ಸೂಟಿನಲ್ಲಿ ವರ, ಇಬ್ಬರೂ ಪರಿಣತ ಡೈವರ್‌ಗಳು ಶಾರ್ಕ್ ಸಾಕ್ಷಿಯಾಗಿ ಮದುವೆಯಾದರು. Image courtesy

ವಿಶ್ವದ ಅತಿ ಉದ್ದದ ಬ್ರೈಡಲ್ ಟ್ರೈನ್

ವಿಶ್ವದ ಅತಿ ಉದ್ದದ ಬ್ರೈಡಲ್ ಟ್ರೈನ್

ಗ್ಯಾಂಗ್‌ಜೌ ಎಂಬ ಚೀನಾದ ನಗರದ ವಧುವೊಬ್ಬಳು ತನ್ನ ಬ್ರೈಡಲ್ ಟ್ರೈನ್ ಮೂಲಕ ವಿಶ್ವದಾಖಲೆಯನ್ನು ಮಾಡಿದಳು. ಇದು ವಿಚಿತ್ರವಾದರು ಸತ್ಯ. ಇದು 100 ಕೆ.ಜಿ ತೂಕ ಮತ್ತು 600 ಅಡಿ ಉದ್ದವಿತ್ತು. ಆಕೆಯ ಹಿಂದೆ ಇದು ಹರಿದು ಬರುವಾಗ ಹೇಗಿತ್ತು ಎಂದು ನೀವೇ ಊಹಿಸಿ! Image courtesy

ಟಿಜೆ ಮ್ಯಾಕ್ಸ್ ಮದುವೆ

ಟಿಜೆ ಮ್ಯಾಕ್ಸ್ ಮದುವೆ

ಲಿಸಾ ಸತಾಯುತ್ ಎಂಬ ಶಾಪಿಂಗ್ ಹುಚ್ಚಿನ ವಧು ತನ್ನ ಮದುವೆಯನ್ನು ಶಾಪಿಂಗ್ ಮಾಡುವ ಸ್ಥಳದಲ್ಲಿ ಮಾಡ್ಕೊಂಡಳು. ಶಾಪಿಂಗ್ ಮಾಡಲು ಬಂದವರು ಈ ಮದುವೆಗೆ ಸಾಕ್ಷಿಯಾದರು. Image courtesy

ಹುಟ್ಟುಡುಗೆಯಲ್ಲಿ ಮದುವೆ

ಹುಟ್ಟುಡುಗೆಯಲ್ಲಿ ಮದುವೆ

ಫಿಲ್ ಹೆಂಡಿಕಟ್ ಮತ್ತು ಎಲ್ಲಿ ಬಾರ್ಟನ್ ಎಂಬ ಆಸ್ಟ್ರೇಲಿಯಾದ ಜೋಡಿ ತಮ್ಮ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿದರು. ಅದಕ್ಕೆ 250 ಅತಿಥಿಗಳು ಸಹ ಬಂದಿದ್ದರು. ಈ ಜೋಡಿ ಅವರ ಮುಂದೆ ಯಾವುದೇ ನಾಚಿಕೆಯಿಲ್ಲದೆ ತಮ್ಮ ಹುಟ್ಟುಡುಗೆಯಲ್ಲಿ ಮದುವೆಯಾದರು!! Image courtesy

ಮದುವೆಯ ನಂತರ ಬಂಗೀ ಜಂಪಿಂಗ್!

ಮದುವೆಯ ನಂತರ ಬಂಗೀ ಜಂಪಿಂಗ್!

ಬ್ರಸೆಲ್ಸ್‌ನ ಈ ಮಿಸ್ಟರ್ ಅಂಡ್ ಮಿಸಸ್ ಕಿಪ್ಪರ್ಸ್ ಒಂದು ಬಿಸಿ ಬಲೂನಿನಲ್ಲಿ ಆಕಾಶದಲ್ಲಿ ಮದುವೆಯಾದರು. ಇವರ ಜೊತೆಗೆ 10 ಜನ ಅತಿಥಿಗಳು ಇದ್ದರು. ನೆಲದಿಂದ 160 ಅಡಿ ಎತ್ತರದಲ್ಲಿ ಇವರು ತಮ್ಮ ಮದುವೆಯನ್ನು ಮಾಡಿಕೊಂಡರು. ಅದಾದ ನಂತರ ಇವರು ಅಲ್ಲಿಂದ ಬಂಗೀ ಜಂಪಿಂಗ್ ಮಾಡಿ ಸಂಭ್ರಮಿಸಿದರು. Image courtesy


English summary

Most Unusual Weddings Ever To Be Noted

Wedding is something that we all look forward to. We start planning months before this beautiful day actually arrives. We plan from the minutest details that go into this "D day". Trying out new things to keep your wedding special is something that has been happening around a lot lately. So, find out more about the most unusual weddings that people have witnessed.
X
Desktop Bottom Promotion